ಬ್ಲಾಕ್'ಮೇಲ್ ಮಾಡಿ ಪೊಲೀಸ್ ಪತ್ನಿಯ ರೇಪ್: 8 ಪೇದೆಗಳ ವಜಾ ಸಿಂಧು

By Suvarna Web DeskFirst Published Aug 19, 2017, 9:45 AM IST
Highlights

ಕೇಂದ್ರ ಕೈಗಾರಿಕೆ ಭದ್ರತಾ ಪಡೆಯ (ಸಿಐಎಸ್'ಎಫ್) ಪೇದೆಯ ಪತ್ನಿಯನ್ನು ಬ್ಲಾಕ್‌'ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಅದೇ ಪಡೆಯ ಎಂಟು ಮಂದಿ ಪೇದೆಗಳನ್ನು ಸೇವೆಯಿಂದ ವಜಾಗೊಳಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಸೇವೆಯಿಂದ ವಜಾಗೊಳಿಸಿದ್ದ ಸಿಐಎಸ್‌ಎಫ್'ನ ಹಿರಿಯ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಪೇದೆಗಳಾಗಿದ್ದ ವಿಕಾಸ್ ವರ್ಮಾ, ಅನುಕರ್ ಪುನಿಯಾ, ಪಿಂಕು ಕುಮಾರ್, ಜಿತೇಂದ್ರ ಸಿಂಗ್, ಯೋಗೇಂದ್ರ, ವಿಕಾಸ್ ಕೆ.ತಿವಾರಿ, ಚಂದನ್ ಕುಮಾರ್ ಮತ್ತು ರಾಹುಲ್ ದಿವಾಕರ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ಏಕಸದಸ್ಯ ಪೀಠ ಸಾರಾಸಗಟಾಗಿ ತಿರಸ್ಕರಿಸಿದೆ. ಆ ಮೂಲಕ ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ಮಾನ್ಯ ಮಾಡಿದ್ದಾರೆ.

ಬೆಂಗಳೂರು(ಆ.19): ಕೇಂದ್ರ ಕೈಗಾರಿಕೆ ಭದ್ರತಾ ಪಡೆಯ (ಸಿಐಎಸ್'ಎಫ್) ಪೇದೆಯ ಪತ್ನಿಯನ್ನು ಬ್ಲಾಕ್‌'ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಅದೇ ಪಡೆಯ ಎಂಟು ಮಂದಿ ಪೇದೆಗಳನ್ನು ಸೇವೆಯಿಂದ ವಜಾಗೊಳಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಸೇವೆಯಿಂದ ವಜಾಗೊಳಿಸಿದ್ದ ಸಿಐಎಸ್‌ಎಫ್'ನ ಹಿರಿಯ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಪೇದೆಗಳಾಗಿದ್ದ ವಿಕಾಸ್ ವರ್ಮಾ, ಅನುಕರ್ ಪುನಿಯಾ, ಪಿಂಕು ಕುಮಾರ್, ಜಿತೇಂದ್ರ ಸಿಂಗ್, ಯೋಗೇಂದ್ರ, ವಿಕಾಸ್ ಕೆ.ತಿವಾರಿ, ಚಂದನ್ ಕುಮಾರ್ ಮತ್ತು ರಾಹುಲ್ ದಿವಾಕರ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ಏಕಸದಸ್ಯ ಪೀಠ ಸಾರಾಸಗಟಾಗಿ ತಿರಸ್ಕರಿಸಿದೆ. ಆ ಮೂಲಕ ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ಮಾನ್ಯ ಮಾಡಿದ್ದಾರೆ.

ಪೇದೆಯ ಪತ್ನಿಯನ್ನು ಒಬ್ಬರಾದ ಮೇಲೆ ಮತ್ತೊಬ್ಬರು ಬ್ಲಾಕ್‌'ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ನಡೆಸಿರುವುದು ಅಮಾನವೀಯ. ಸಿಐಎಸ್‌ಎಫ್ ಘಟಕದ ಸಿಬ್ಬಂದಿ ತಮ್ಮ ಕುಟುಂಬಸ್ಥರೊಂದಿಗೆ ಒಂದೇ ಆವರಣದಲ್ಲಿರುವ ವಸತಿ ಗೃಹಗಳ ಮನೆಗಳಲ್ಲಿ ನೆಲೆಸಿರುತ್ತಾರೆ. ಈ ಹೀನ ಕೃತ್ಯದ ಸುದ್ದಿ ಹರಡಿದರೆ, ಇದೇ ಸ್ಥಳದಲ್ಲಿ ವಾಸಿಸುವ ಇತರೆ ಸಿಬ್ಬಂದಿಯ ಹಾಗೂ ಅವರ ಕುಟುಂಬಸ್ಥರ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಿಬ್ಬಂದಿಗೆ ಮಾನಸಿಕ ಭದ್ರತೆ ಕಾಡುತ್ತದೆ. ಪಡೆಯ ಕಾರ್ಯದಕ್ಷತೆ ಮತ್ತು ಶಿಸ್ತು ಹಾಳು ಮಾಡುತ್ತದೆ. ಮೇಲಾಗಿ ರಾತ್ರಿ ಪಾಳಿಯ ಕರ್ತವ್ಯ ಸಿಬ್ಬಂದಿಯನ್ನು ನಿಯೋಜಿಸುವುದಕ್ಕೆ ಕಷ್ಟವಾಗುತ್ತದೆ. ಹೀಗಾಗಿ, ಇಲಾಖಾ ತನಿಖೆ ನಡೆಸದೆ ಪ್ರಾಥಮಿಕ ತನಿಖೆ ಆ‘ರಿಸಿ ಆರೋಪಿ ಪೇದೆಗಳನ್ನು ಸೇವೆಯಿಂದ ವಜಾಗೊಳಿಸಿರುವುದರಲ್ಲಿ ತಪ್ಪಿಲ್ಲ ಎಂದು ಪೀಠ ಹೇಳಿದೆ.

ಅಲ್ಲದೆ, ಲೈಂಗಿಕ ಶೋಷಣೆ ಮಹಿಳೆಯ ವೈಯಕ್ತಿಕ ಘನತೆ, ವೈವಾಹಿಕ ಸಂಬಂಧ ಮತ್ತು ಸಮಾಜದ ಮುಂದೆ ನಿಲ್ಲುವ ಸಾಮರ್ಥ್ಯವನ್ನು ಹಾಳು ಮಾಡುತ್ತದೆ. ಸಾಮಾನ್ಯವಾಗಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಲು ಮಹಿಳೆ ಇಷ್ಟಡುವುದಿಲ್ಲ. ಇದರಿಂದಲೇ ದೂರು ದಾಖಲಿಸುವಲ್ಲಿ ವಿಳಂಬವಾಗಿರಬಹುದು. ಇದರಿಂದ ದೂರು ದುರ್ಬಲವಾಗದು. ವೈದ್ಯಕೀಯ ಪುರಾವೆಗಳು ಕೊರತೆಯಿದ್ದರೂ ಸಂತ್ರಸ್ತೆಯ ಹೇಳಿಕೆಯಲ್ಲಿನ ಸತ್ಯಾಂಶವನ್ನು ಶಂಕಿಸುವಂತಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಎಲ್ಲರೂ ಒಂದೇ ಐಡಿಯಾ ಬಳಕೆ: ತದನಂತರ 2015೫ರ ಜೂನ್ 6ರಂದು ರಾತ್ರಿ ಪೇದೆಗಳಾದ ಅನುಷ್ ಪುನಿಯಾ ಹಾಗೂ ವಿ.ಕೆ.ತಿವಾರಿ ಸಂತ್ರಸ್ತೆಗೆ ಕರೆ ಮಾಡಿ, ‘ನಿನ್ನ ಹಾಗೂ ವಿಕಾಸ್ ವರ್ಮಾ ಅನೈತಿಕ ಸಂಬಂಧ ನಮಗೆ ತಿಳಿದಿದ್ದು, ನಮ್ಮೊಂದಿಗೂ ಲೈಂಗಿಕ ಕ್ರಿಯೆ ಸಹಕರಿಸಬೇಕು. ಇಲ್ಲವಾದರೆ ವಿಕಾಸ್ ವರ್ಮಾ ಜೊತೆಗಿನ ವ್ಯವಹಾರವನ್ನು ಪತಿಗೆ ತಿಳಿಸಲಾಗುವುದು’ ಎಂದು ಬ್ಲಾಕ್‌ಮೇಲ್ ಮಾಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ತದನಂತರ ಇದೇ ರೀತಿ ಐಡಿಯಾ ಬಳಸಿದ್ದ ಪೇದೆಗಳಾದ ಚಂದನ್ ಕುಮಾರ್, ಪಿಂಕು ಕುಮಾರ, ರಾಹುಲ್ ದಿವಾಕರ್, ಜಿತೇಂದ್ರ, ಯೋಗೇಂದ್ರ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು.

2015ರ ಜುಲೈ ೨೬ರಂದು ಪತಿ ಮನೆಗೆ ಹಿಂದಿರುಗಿದ್ದರು. ಜುಲೈ 28ರಂದು ವಿಕಾಸ್ ವರ್ಮಾ ರಾತ್ರಿ 11.30ಕ್ಕೆ ಸಂತ್ರಸ್ತೆಗೆ ಕರೆ ಮಾಡಿದ್ದ. ಆಗ ಪತಿ ಮೊಬೈಲ್ ಕಸಿದು ಪೋನು ಆಲಿಸಿದಾಗ ಪುರುಷ ಧ್ವನಿ ಕೇಳಿತ್ತು. ಆಗ ವಿಚಾರಿಸಿದ ವೇಳೆ ಸಂತ್ರಸ್ತೆಯ ಎಲ್ಲ ಸಂಗತಿ ವಿವರಿಸಿದರು. ನಂತರ ಸಂತ್ರಸ್ತೆಯು ಸಿಐಎಸ್‌ಎಫ್ ಹಿರಿಯ ಅಧಿಕಾರಿಗಳಿಗೆ ದೂರಿತ್ತಿದ್ದರು. ಪ್ರಾಥಮಿಕ ವಿಚಾರಣೆ ನಡೆಸಿದ್ದ ಹಿರಿಯ ಅಧಿಕಾರಿಗಳು, 8 ಪೇದೆಗಳನ್ನು 2015ರ ಆ.2ರಂದು ಸೇವೆಯಿಂದ ವಜಾಗೊಳಿಸಿದ್ದರು. ಈ ಆದೇಶ ಪ್ರಶ್ನಿಸಿ 8 ಪೇದೆಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

 

click me!