ಏಕಬೆಳೆ ಅಡಕೆ ಬೆಳೆದಲ್ಲಿ ಶೇ.60 ಸೂರ್ಯರಶ್ಮಿ ಭೂಮಿಗೆ

By suvarna Web DeskFirst Published Nov 25, 2017, 9:07 AM IST
Highlights

ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚೈತನ್ಯ ರೂರಲ್ ಡೆವೆಲಪ್'ಮೆಂಟ್ ಸೊಸೈಟಿ ಆಶ್ರಯದಲ್ಲಿ ನವಿಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕೃಷಿ ತಂತ್ರಜ್ಞಾನ ಸಪ್ತಾಹ- 2017 ರಲ್ಲಿ ‘ಅಡಕೆ ಕೃಷಿಯಲ್ಲಿ ಬಹುಬೆಳೆ ಪದ್ಧತಿಗಳು’ ಕುರಿತು ಮಾಹಿತಿ ನೀಡಲಾಯಿತು.

ಶಿವಮೊಗ್ಗ (ನ.25): ಏಕ ಬೆಳೆಯಾಗಿ ಅಡಕೆ ಬೆಳೆದಾಗ ಶೇ.60ರಷ್ಟು ಸೂರ್ಯರಶ್ಮಿ ಸುಲಭವಾಗಿ ಭೂಮಿಗೆ ಬೀಳುತ್ತದೆ ಎಂದು ನಿವೃತ್ತ ಸಹ ಪ್ರಾಧ್ಯಾಪಕ ಡಾ. ಕೆ.ಎಸ್. ಶೇಷಗಿರಿ ಹೇಳಿದರು. ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ವಿಸ್ತರಣಾ ನಿರ್ದೇಶನಾಲಯ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚೈತನ್ಯ ರೂರಲ್ ಡೆವೆಲಪ್'ಮೆಂಟ್ ಸೊಸೈಟಿ ಆಶ್ರಯದಲ್ಲಿ ನವಿಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕೃಷಿ ತಂತ್ರಜ್ಞಾನ ಸಪ್ತಾಹ- 2017 ರಲ್ಲಿ ‘ಅಡಕೆ ಕೃಷಿಯಲ್ಲಿ ಬಹುಬೆಳೆ ಪದ್ಧತಿಗಳು’ ಕುರಿತು ಅವರು ಮಾಹಿತಿ ನೀಡಿದರು.

ಭಾಗಶಃ ನೆರಳು ಹೊಂದಿರುವ ಈ ವಾತಾವರಣ ನೆರಳು ಬೇಡುವ ಬೆಳೆಗಳ ಬೆಳವಣಿಗೆಗೆ ಸೂಕ್ತ. ಅಡಕೆಯ ಬೇರುಗಳು ಶೇ.30ರಷ್ಟು ಭೂ ಪ್ರದೇಶವನ್ನು ಮಾತ್ರ ತನ್ನ ಬೆಳವಣಿಗೆಗೆ ಬಳಸಿಕೊಳ್ಳುತ್ತದೆ. ನಷ್ಟ ಆಗುತ್ತಿರುವ ಸೂರ್ಯರಶ್ಮಿ, ಭೂಪ್ರದೇಶವನ್ನು ಲಾಭ ದಾಯಕವಾಗಿ ಬಳಸಿಕೊಳ್ಳಬಹುದು ಎಂದು ಬಹು ಬೆಳೆ ಪದ್ಧತಿಗೆ ಅಡಕೆ ಬೆಳೆಯ ಸೂಕ್ತತೆ ಕುರಿತು ಮಾಹಿತಿ ನೀಡಿ ದರು. ಬಹುಬೆಳೆ ಪದ್ಧತಿಯಲ್ಲಿ ಗಮನಿಸಬೇಕಾದ ಅಂಶಗಳು, ಬಹುಬೆಳೆ ಪದ್ಧತಿ ಯಿಂದ ಆಗುವ ಲಾಭಗಳು, ದ್ವಿದಳ ಧಾನ್ಯಗಳನ್ನು ಅಂತರ ಬೆಳೆಯಾಗಿ ಅಡಕೆ ಯಲ್ಲಿ ಅಳವಡಿಸಿಕೊಂಡಾಗ ಮಣ್ಣಿನಲ್ಲಿ ದೊರೆಯುವ ಸಾರಜನಕ ಹೆಚ್ಚುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೃಷಿ ಮಹಾವಿದ್ಯಾಲಯದ ಸಸ್ಯರೋಗ ಶಾಸ್ತ್ರ ಪ್ರಾಧ್ಯಾಪಕ ಡಾ. ಬಿ.ಗಂಗಾಧರ ನಾಯ್ಕ ಮಾತನಾಡಿ, ಅಡಕೆಯಲ್ಲಿ ಕಂಡುಬರುವ ಹಿಡಿಮುಂಡಿಗೆ, ಕೊಳೆ ರೋಗ, ಇತರೆ ರೋಗಗಳ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದರು. ಅಡಕೆಯಲ್ಲಿ ಬಸಿ ಗಾಲುವೆಯ ಮಹತ್ವವನ್ನು ತಿಳಿಸಿದರು. ಅತ್ಯುತ್ತಮ ಕೃಷಿಕ ಪ್ರಶಸ್ತಿ ವಿಜೇತ ರೈತರಾದ ದುರ್ಗಪ್ಪ ಅಂಗಡಿ, ಸಾಸರವಳ್ಳಿ ಗ್ರಾಮ, ಶಿಕಾರಿಪುರ ತಾಲೂಕಿನ ಜಿ.ಎನ್. ಮದನ್, ತನಿಕಲ್ ಗ್ರಾಮ, ತೀರ್ಥಹಳ್ಳಿ ತಾಲೂಕು, ವೆಂಕಟೇಶ್, ಶೆಟ್ಟಿಹಳ್ಳಿ ಗ್ರಾಮ, ಶಿವಮೊಗ್ಗ ತಾಲೂಕು ಇವರು ಬೆಳೆದ ವಿವಿಧ ಬೆಳೆಗಳ ಪ್ರದರ್ಶನವನ್ನು, ಜೇನು ಸಾಕಾಣಿಕೆಗೆ ಬೇಕಾದ ಸಲಕರಣೆಗಳು, ತೆಂಗಿನ ಮರ ಹತ್ತುವ ಸಾಧನ, ವಿವಿಧ ಬೀಜಗಳ ಪ್ರದರ್ಶವನ್ನು ಕೂಡ ಆಯೋಜಿಸಲಾಗಿತ್ತು.

click me!