ಹಾಸ್ಟೆಲ್‌ ಉಪಾಹಾರ ಸೇವಿಸಿ 30 ವಿದ್ಯಾರ್ಥಿಗಳು ಅಸ್ವಸ್ಥ

By Web DeskFirst Published Dec 17, 2018, 10:59 AM IST
Highlights

ಉಪಾಹಾರ ಸೇವಿಸಿ 8 ವಿದ್ಯಾರ್ಥಿನಿಯರು ಸೇರಿದಂತೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೊನೇಹಳ್ಳಿ ಸರ್ಕಾರಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ನಡೆದಿದೆ.
 

ತಿಪಟೂರು: ಬೆಳಗಿನ ಉಪಾಹಾರ ಸೇವಿಸಿ 8 ವಿದ್ಯಾರ್ಥಿನಿಯರು ಸೇರಿದಂತೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೊನೇಹಳ್ಳಿ ಸರ್ಕಾರಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಭಾನುವಾರ ನಡೆದಿದೆ.

ಈ ಕಾಲೇಜಿನಲ್ಲಿ ಒಟ್ಟು 83 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ. ಭಾನುವಾರ ಇಡ್ಲಿ, ಚಟ್ನಿ, ಸಾಂಬಾರ್‌ ಸೇವನೆ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ವಿದ್ಯಾರ್ಥಿಗಳಿಗೆ ವಾಂತಿ, ಭೇದಿ ಶುರುವಾಗಿದೆ.

ಕೂಡಲೇ ವಿದ್ಯಾರ್ಥಿಗಳನ್ನು ಕಾಲೇಜಿನ ಬಸ್‌ನಲ್ಲಿಯೇ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ವಿದ್ಯಾರ್ಥಿಗಳೆಲ್ಲರೂ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕಾಲೇಜಿನ ಪ್ರಾಂಶುಪಾಲರೇ ಇಲ್ಲಿನ ಹಾಸ್ಟೆಲ್‌ ವಾರ್ಡನ್‌ ಸಹ ಆಗಿದ್ದು, ಅವರು ಪ್ರತಿದಿನ ತುಮಕೂರಿನಿಂದ ಬಂದುಹೋಗುತ್ತಾರೆ. ಭಾನುವಾರವಾಗಿದ್ದರಿಂದ ಅವರು ಹಾಸ್ಟೆಲ್‌ಗೆ ಬಂದಿರಲಿಲ್ಲ.

ಬಹುತೇಕ ವಿದ್ಯಾರ್ಥಿಗಳು ಬಾಗಲಕೋಟೆ, ಹುಬ್ಬಳ್ಳಿ, ದೊಡ್ಡಬಳ್ಳಾಪುರ ಕಡೆಯವರಾಗಿದ್ದಾರೆ. ಹೊನ್ನವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

click me!