IPS ಅಧಿಕಾರಿಗಳ ದಿಢೀರ್ ವರ್ಗಾವಣೆ, ಇದು ಸಿಎಂ ಮಾಸ್ಟರ್ ಸ್ಟ್ರೋಕ್

By Web DeskFirst Published Sep 15, 2018, 4:22 PM IST
Highlights

ದೋಸ್ತಿ ಸರ್ಕಾರ ಉರುಳಿಸುವ ಮಟ್ಟಕ್ಕೆ ಬೆಳೆದಿರುವ ವ್ಯಕ್ತಿಗಳನ್ನ ಮಟ್ಟ ಹಾಕಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಬೆಂಗಳೂರು, (ಸೆ.15): ದೋಸ್ತಿ ಸರ್ಕಾರ ಉರುಳಿಸುವ ಮಟ್ಟಕ್ಕೆ ಬೆಳೆದಿರುವ ವ್ಯಕ್ತಿಗಳನ್ನ ಮಟ್ಟ ಹಾಕಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಮೈತ್ರಿ ಸರ್ಕಾರ ಉರುಳಿಸಲು ಕ್ರಿಮಿನಲ್ ಸಂಚು ಬಹಿರಂಗ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಸಿಎಂ ಕುಮಾರಸ್ವಾಮಿ ನಿರ್ಧಾರಿಸಿದ್ದಾರೆ. ಇಂದು ಸಂಜೆಯೊಳಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಇದನ್ನು ಓದಿ: ಆಪರೇಷನ್ ಕಮಲ, ಹೊಸ ಬಾಂಬ್ ಹಾಕಿದ ಸಿಎಂ

ಖಡಕ್ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಆಗುವ ಸಾಧ್ಯತೆಗಳಿದ್ದರೆ, ಮತ್ತೋರ್ವ ಐಪಿಎಸ್​ ಅಧಿಕಾರಿ ಗಿರೀಶ್ ಸಿಸಿಬಿಯ ಡಿಸಿಪಿ-2 ಆಗಿ ನೇಮಕ ಸಾಧ್ಯತೆಗಳಿವೆ.  ಐಪಿಎಸ್ ಅಧಿಕಾರಿಗಳ ವರ್ಗಾವಣೆ  ಮೂಲಕ ಸಮ್ಮಿಶ್ರ ಸರ್ಕಾರವನ್ನ ಉರುಳಿಸಲು ಸ್ಕೆಚ್ ಹಾಕಿದ್ದ ಕಿಂಗ್‌ಪಿನ್‌ಗಳನ್ನ ಮಟ್ಟ ಹಾಕಲು ಕುಮಾರಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. 

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರೇ ಸರ್ಕಾರವನ್ನ ಉರುಳಿಸುವ ಪ್ರಯತ್ನ ನಡೆಸಿದ್ದಾರೆ. ಅವರು ಯಾರು, ಅವರ ಹಿನ್ನಲೆ ಏನು ಎನ್ನುವುದು ಗೊತ್ತಿದ್ದು, ನಾನೇನು ಸುಮ್ಮನೆ ಕೂತಿಲ್ಲ.  ಅವರನ್ನ ಹೇಗೆ ಮಟ್ಟ ಹಾಕಬೇಕು ಅನ್ನೋದು ಕೂಡ ಗೊತ್ತಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕವೇ ಈ ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ.

click me!