5 ಲಕ್ಷ ಫಾಲೋವರ್ಸ್ ಇದ್ದ ಸ್ಫುರದ್ರೂಪಿ ಟಿಕ್ ಟಾಕ್ ಸ್ಟಾರ್ ಹತ್ಯೆ

By Web DeskFirst Published May 22, 2019, 5:17 PM IST
Highlights

ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದ ಹವಾ ಎಬ್ಬಿಸಿರುವ ಟಿಕ್ ಟಾಕ್ ಸದ್ಯದ ಮಟ್ಟಿಗೆ ಯುವಜನತೆಯ ಹಾಟ್ ಫೆವರೇಟ್.  ಆದರೆ ಈ ಟಿಕ್ ಟಾಕ್ ನಲ್ಲಿ ಮಿಂಚುತ್ತಿದ್ದ ವ್ಯಕ್ತಿಯೊಬ್ಬ ಹತ್ಯೆಯಾಗಿದ್ದಾನೆ.

ನವದೆಹಲಿ(ಮೇ.22)  ಟಿಕ್ ಟಾಕ್ ಸೆಲಿಬ್ರಿಟಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ಮೋಹಿತ್ ಬಹದ್ದೂರ್‌ಗಢದ ನಿವಾಸಿಯಾಗಿದ್ದು ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು.

ಮಂಗಳವಾರ ಸಂಜೆ ಸ್ನೇಹಿತನನ್ನು ಭೇಟಿಯಾಗಲು  ಮೋಹಿತ್ ತೆರಳಿದ್ದರು.  ಆ ವೇಳೆ ಸ್ಕೂಟಿಯಲ್ಲಿ ಬಂದ ಮೂವರು ಯುವಕರು ಆತನ ಮೇಲೆ ಗುಂಡಿನ ದಾಳಿ ಮಾಡಿದ ಪರಿಣಾಮ ಮೋಹಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಟಿಕ್ ಟಾಕ್ ನಲ್ಲಿ ಸಖತ್ ಟ್ರೋಲ್ ಆದ ನಿಖಿಲ್ ಎಲ್ಲಿದ್ದಿಯಪ್ಪ

ಪೊಲೀಸರು ಪ್ರಾಥಮಿಕ ತನಿಖೆ ಮಾಡಿದ್ದು ವೈಯಕ್ತಿಕ ದ್ವೇಷವೇ ಹತ್ಯೆಗೆ ಕಾರಣ ಎನ್ನಲಾಗುಗಿದೆ. ಹತ್ಯೆಯಾದವನ ಫೋನ್ ಕಾಲ್ ವಿವರವನ್ನು ಪೊಲೀಸರು ಪರಿಶೀಲಿಸಿದ್ದಾರೆ. ದಾಳಿಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.

 

He is Mohit Mor, a gym trainer & a tik tok sensation. Had more than 5 lakh followers. Now replace 'is' with was. This young man ws gunned down in Delhi's Najafgarh on Tuesday evening. He died on the spot. Reasons unknown. What's known is Delhi is becoming a free Shooting range ! pic.twitter.com/LrKaU3WEKb

— Zafar Abbas (@zafarabbaszaidi)
click me!