ಬೆಂಗಳೂರು (ಮೇ.26): ಈ ವಾರ ಕನ್ನಡದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಿದೆ. ಸಂಜು ವೆಡ್ಸ್ ಗೀತಾ 2 ಸಿನಿಮಾ ರೀ ರಿಲೀಸ್ ಆಗಿದ್ದರೆ, ವಿನೋದ್‌ಪ್ರಭಾಕರ್ ನಟನೆಯ ಒಂದು ಹ್ಯಾಂಗಿಂಗ್ ಸ್ಟೋರಿ ಕೂಡ ತೆರೆ ಮೇಲೆ ಬಂದಿದೆ. ಈ ಸಿನಿಮಾಗಳು ಹೇಗಿವೆ? ಅದರೊಂದಿಗೆ ಕನ್ನಡ ಕಿರುತೆರೆ, ಹಿರಿತೆರೆ, ಒಟಿಟಿ ವೇದಿಕೆಯ ಅಪ್‌ಡೇಟ್, ಸೀರಿಯಲ್‌ಗಳ ಮಾಹಿತಿ ಇಲ್ಲಿದೆ.

10:49 PM (IST) Jun 07
ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸುತ್ತಿರುವ 'OG' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದೆ.
10:25 PM (IST) Jun 07
ಜೂನ್ 27 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 'ಕಣ್ಣಪ್ಪ' ಚಿತ್ರದ ಪ್ರಚಾರ ಕಾರ್ಯಕ್ರಮಗಳು ಭರದಿಂದ ಸಾಗುತ್ತಿವೆ. ಇತ್ತೀಚೆಗೆ ಗುಂಟೂರಿನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
09:08 PM (IST) Jun 07
ಸಾಮಾನ್ಯವಾಗಿ, ಲಾಭದಲ್ಲಿ ಪಾಲು ಕೇಳುವ ಪದ್ಧತಿ ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ನಟರಿಗೆ ಇದೆ. ಆದರೆ, ನಾಯಕಿಯೊಬ್ಬರು ಇಷ್ಟು ದೊಡ್ಡ ಮೊತ್ತದ ಸಂಭಾವನೆಯ ಜೊತೆಗೆ ಲಾಭಾಂಶಕ್ಕೂ ಬೇಡಿಕೆಯಿಟ್ಟಿರುವುದು ಚಿತ್ರತಂಡಕ್ಕೆ ಆರ್ಥಿಕವಾಗಿ ದೊಡ್ಡ ಹೊರೆಯಾಗಬಹುದು ಎಂದು
08:48 PM (IST) Jun 07
ಈ ಖ್ಯಾತ ರಾಜಕಾರಣಿ ಈ ಹಿಂದೆ ಅತಿ ಹೆಚ್ಚು ಸಂಭಾವನೆ ಪಡೆದು ಸುದ್ದಿಯಾಗಿದ್ದರು.
08:30 PM (IST) Jun 07
ಟಾಲಿವುಡ್‌ನಲ್ಲಿ ಹಿಟ್ ಸಿನಿಮಾಗಳನ್ನು ಮಾಡಿದ ನಾಯಕಿ ಒಬ್ಬರು ಸಿನಿಮಾಗಳನ್ನ ಬಿಟ್ಟು, ಮದುವೆ ಪ್ರೇಮವನ್ನೆಲ್ಲ ಬದಿಗೊತ್ತಿ ಬ್ರಹ್ಮಕುಮಾರಿಯಾಗಿದ್ದಾರೆ. ಯಾರು ಅಂತ ಗೊತ್ತಾ?
08:26 PM (IST) Jun 07
ಕಿಚ್ಚ ಸುದೀಪ್ ಅವರು ಸರಿಗಮಮಪ ಅಂತಿಮ ಸ್ಪರ್ಧಿಗಳಿಗೆ ಆಶೀರ್ವಾದ ನೀಡುತ್ತಲೇ ಮನೆಯ ದರ್ಶನ ಮಾಡಿಸಿದ್ದಾರೆ. ಇದೇ ವೇಳೆ ಉಡುಗೊರೆಯಾಗಿ ಬಂದ ಅಮ್ಮನ ಮೂರ್ತಿಯನ್ನೂ ತೋರಿಸಿದ್ದಾರೆ.
08:22 PM (IST) Jun 07
08:17 PM (IST) Jun 07
ನಟ ವಿಷ್ಣುವರ್ಧನ್, ಭಾರತಿ ಅವರಿಗೆ ಸ್ವಂತ ಮಕ್ಕಳಿಲ್ಲ, ದತ್ತು ಪುತ್ರಿಯರಿದ್ದಾರೆ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ವಿಷ್ಣುವರ್ಧನ್ ಅವರು ಮೊದಲ ಮಗಳು ಕೀರ್ತಿಯನ್ನು ಹೇಗೆ ದತ್ತು ತಗೊಂಡರು ಎನ್ನೋದು ಅನೇಕರಿಗೆ ಗೊತ್ತಿಲ್ಲ ಎನ್ನಬಹುದು.
08:09 PM (IST) Jun 07
ಬಾಲಿವುಡ್ ನಟಿ ಸೋನಾಲಿ ಬೆಂದ್ರೆ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರದ ರಾಜಕಾರಣಿ ರಾಜ್ ಠಾಕ್ರೆ ಜೊತೆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ, ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗಾಳಿಸುದ್ದಿ ಹಬ್ಬಿದೆ.
08:08 PM (IST) Jun 07
07:45 PM (IST) Jun 07
ಭಾಗ್ಯಲಕ್ಷ್ಮಿ ಭಾಗ್ಯ ಮತ್ತು ತಾಂಡವ್ ಒಂದಾಗಿಬಿಟ್ಟಿದ್ದಾರೆ, ಇವರ ಗೆಲುವು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಏನಿದು?
07:36 PM (IST) Jun 07
07:30 PM (IST) Jun 07
‘ಓಜಿ’ ಚಿತ್ರದಲ್ಲಿ ಅರ್ಜುನ್ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಓಜಿ ಸೆಟ್‌ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್, ಅರ್ಜುನ್ ದಾಸ್ ಒಟ್ಟಿಗೆ ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
07:14 PM (IST) Jun 07
ಕೆಲವು ದೊಡ್ಡ ಸ್ಟಾರ್‌ಗಳು ತಮ್ಮ ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಅವರು ಕೇವಲ ನಾಲ್ಕೈದು ಗಂಟೆಗಳ ಕಾಲ ಸೆಟ್‌ನಲ್ಲಿರುತ್ತಾರೆ. ಆದರೆ, ಆ ಸಮಯದಲ್ಲಿ ಅತ್ಯಂತ ವೃತ್ತಿಪರವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮುಗಿಸಿಕೊಡುತ್ತಾರೆ. ಇದು ಅವರ ವೃತ್ತಿಪರತೆಯ ಭಾಗ," ಎಂದು ರಾಣಾ
07:02 PM (IST) Jun 07
ಷೇಕ್ ಷೇಕ್ ಎನ್ನುತ್ತಾ ಸಕತ್ ರೀಲ್ಸ್ ಮಾಡಿರೋ ಬಿಗ್ಬಾಸ್ ಖ್ಯಾತಿಯ ಹಂಸಾ ನಾರಾಯಣಸ್ವಾಮಿ ಅವರು ಕಮೆಂಟ್ ಬಾಕ್ಸ್ ಆಫ್ ಮಾಡಿ ಸದ್ದು ಮಾಡ್ತಿದ್ದಾರೆ! ಆಗಿದ್ದೇನು?
07:02 PM (IST) Jun 07
ಅನಸೂಯಾ ಭಾರದ್ವಾಜ್ ಹೊಸ ಫೋಟೋಗಳು ವೈರಲ್ ಆಗಿವೆ. ತಮ್ಮ ತೂಕದ ಬಗ್ಗೆ ಅನಸೂಯಾ ತಮಾಷೆಯಾಗಿ ಮಾತನಾಡಿದ್ದಾರೆ.
06:57 PM (IST) Jun 07
ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ಮದುವೆಯಾಗುವ ಮುನ್ನ ಕೊಹ್ಲಿ ಜೀವನದಲ್ಲಿ ಐವರು ನಟಿಮಣಿಗಳು ಎಂಟ್ರಿ ಕೊಟ್ಟಿದ್ರು! ಅವರು ಯಾರು ಗೊತ್ತಾ?
06:29 PM (IST) Jun 07
ನಾನು ಪ್ರಭಾಸ್ ಅವರಷ್ಟೇ ಸಂಭಾವನೆ ನಿರೀಕ್ಷಿಸುತ್ತೇನೆ. ಸ್ಪಿರಿಟ್ ಸಿನಿಮಾ ತಂಡ ಇದಕ್ಕೊಪ್ಪದಿದ್ದಾಗ ಆ ಟೀಮ್‌ನಿಂದ ಹೊರನಡೆದೆ ಎಂಬರ್ಥದಲ್ಲಿ ದೀಪಿಕಾ ಮಾತನಾಡಿದ್ದರು.
05:46 PM (IST) Jun 07
ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಮೂಲಕ ಕನ್ನಡ ಕಿರುತೆರೆ ಪ್ರಿಯರಿಗೆ ಹತ್ತಿರ ಆಗಿರೋ ಚೈತ್ರಾ ಕುಂದಾಪುರ ಈಗ ಶ್ರೀಕಾಂತ್ ಕಶ್ಯಪ್ ಅವರನ್ನು ಮದುವೆ ಆಗಿದ್ದಾರೆ.
05:44 PM (IST) Jun 07
ರಕ್ಷಿತ್ ಶೆಟ್ಟಿ ಯೋಗಿಯಾಗಿದ್ದಾರಾ ಅಥವಾ ನಿವೃತ್ತರಾಗಿದ್ದಾರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಹುಟ್ಟುಹಬ್ಬದ ದಿನವೂ ಅವರ ಫೋನ್ ಸ್ವಿಚಾಫ್ ಆಗಿದೆ.
05:28 PM (IST) Jun 07
ಮರಣದಂಡಣೆ ಶಿಕ್ಷೆಗೆ ಒಳಗಾಗಿರುವ ಕೈದಿಗಳನ್ನು ನೇಣುಗೇರಿಸುವ ಕೆಲಸ ಮಾಡಿಕೊಂಡಿರುವ ನಾಯಕ ಮಾದೇವನ ಜೀವಕ್ಕೆ ನಾಯಕಿ ಪಾರ್ವತಿ ಪ್ರವೇಶಿಸುತ್ತಾಳೆ.
05:16 PM (IST) Jun 07
ಈಗಾಗಲೇ ಈ ಸಿನಿಮಾ ನೋಡಿದವರು ಈ ಅಪ್‌ಡೇಟೆಡ್ ವರ್ಶನ್ ನೋಡಿದರೆ ವಿಷಾದ ಪ್ರೇಮಕಥೆಯನ್ನು ಗಾಢವಾಗಿಸಲು ಹೊರಟ ನಿರ್ದೇಶಕನ ಪ್ರಯತ್ನ ಕಾಣಬಹುದು.
05:12 PM (IST) Jun 07
ಭಾರ್ಗವಿ ಎಲ್ಎಲ್ಬಿ ಸೀರಿಯಲ್ ನಟಿ ರಾಧಾ ಭಗವತಿ ಅವರು ಸೀರೆಯಲ್ಲಿ ಕ್ಯಾಟ್ವಾಕ್ ಮಾಡುತ್ತಾ ಬಂದಿರುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
04:53 PM (IST) Jun 07
ಲವ್ ಮಾಡಿ ನಾಲ್ಕು ವರ್ಷಗಳ ಬಳಿಕ ಮದ್ವೆಯಾಗಲು ಜಾತಕ ತೋರಿಸಿ ಪೇಚಿಗೆ ಸಿಲುಕಿದ ಕಾಲಿವುಡ್ ಜೋಡಿ ಮಧುಮಿತಾ ಮತ್ತು ಶಿವ ಬಾಲಾಜಿ ಅವರ ಸ್ಟೋರಿ ಕೇಳಿ...
04:43 PM (IST) Jun 07
04:34 PM (IST) Jun 07
ಇದು ಯಾವುದೇ ಅಬ್ಬರವಿಲ್ಲದೆ, ಹವಾಮಾನ ಬದಲಾವಣೆ ಎಂಬುದು ಕೇವಲ ಚರ್ಚೆಯ ವಿಷಯವಲ್ಲ, ಅದು ಲಕ್ಷಾಂತರ ಜನರ ಬದುಕನ್ನು ನರಕವಾಗಿಸುತ್ತಿರುವ ವಾಸ್ತವ ಎಂಬುದನ್ನು ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡುತ್ತದೆ.
04:21 PM (IST) Jun 07
ನಟಿ ಅಸ್ಮಿತಾ ಅವರ ಪತಿ ವಿಷ್ಣು ಅವರು ಕೆಲ ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಫೋಟೋಗಳನ್ನು ಕೂಡ ಕೇಳಿದ್ದಾರೆ.
03:29 PM (IST) Jun 07
ನಾಗ ಚೈತನ್ಯ ಜೊತೆ ವಿಚ್ಛೇದನ ಆದ ನಾಲ್ಕು ವರ್ಷಗಳ ನಂತರ ಸಮಂತಾ ರುತ್ ಪ್ರಭು ಅವರ YMC ಟ್ಯಾಟೂ ತೆಗೆದು ಹಾಕಿದ್ದಾರೆ. ಹಳೆಯ ನೆನಪುಗಳನ್ನು ಬಿಟ್ಟು ಸಮಂತಾ ಮುಂದೆ ಸಾಗುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ನಿಶ್ಚಿತಾರ್ಥದ ಉಂಗುರ ಮತ್ತು ಮದುವೆಯ ಉಡುಪಿನಲ್ಲೂ ಬದಲಾವಣೆಗಳನ್ನು ಮಾಡಿದ್ದಾರೆ.
02:54 PM (IST) Jun 07
ದೀಪಿಕಾ ಕಕ್ಕರ್ ಅವರ 14 ಗಂಟೆಗಳ ಲಿವರ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ನಂತರ, ಪತಿ ಶೋಯೆಬ್ ಇಬ್ರಾಹಿಂ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
02:19 PM (IST) Jun 07
'ನನ್ನ ವಿರುದ್ಧ ಪ್ರತಿ ಹಂತದಲ್ಲಿಯು ಷಡ್ಯಂತ್ರ ನಡೆಯಿತು. ಸಿನಿಮಾ ರಿಲೀಸ್ ಗು ಮೊದಲು ಕುಣಿಗಲ್ ಬಳಿ ಮೊಟ್ಟೆ ಹೊಡೆದ್ರು. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಯಲ್ಲಿದ್ದವರೇ ಕೇಸ್ ಮಾಡಿಸಿದ್ರು. ಅದಕ್ಕು ಮೊದಲು ರೇಪ್ ಕೇಸ್ ನಲ್ಲಿ..
01:51 PM (IST) Jun 07
ಈ ಎಲ್ಲಾ ಗೊಂದಲಗಳ ನಡುವೆಯೇ, ಇದೀಗ ಅಟ್ಲಿ ಅವರ ಚಿತ್ರದಲ್ಲಿ ದೀಪಿಕಾ ಅವರಿಗೆ ಒಂದು ಅತ್ಯಂತ ಶಕ್ತಿಶಾಲಿ ಪಾತ್ರ ಸಿಕ್ಕಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದು ಅವರ ಅಭಿಮಾನಿಗಳಿಗೆ ದೊಡ್ಡ ಸಮಾಧಾನ ಮತ್ತು ಸಂತೋಷವನ್ನು ತಂದಿದೆ.
01:32 PM (IST) Jun 07
ಸೀತಾರಾಮ ಸೀತಾ ಉರ್ಫ್ ವೈಷ್ಣವಿ ಗೌಡ ಅವರು ತಮ್ಮ ಎಂಗೇಜ್ಮೆಂಟ್ ಗುಟ್ಟಾಗಿ ಮಾಡಿಕೊಂಡದ್ದೂ ಅಲ್ಲದೇ ಮದುವೆಯ ದಿನವನ್ನೂ ಮೊದಲೇ ಪ್ರಕಟಿಸಲಿಲ್ಲ. ಇದಕ್ಕೆ ಕಾರಣ ಇದೇ ನೋಡಿ!
01:32 PM (IST) Jun 07
ನನ್ನ ಹೃದಯದಾಳದಿಂದ ನಾನು ಪವನ್ ಕಲ್ಯಾಣ್ ಸರ್ ಅವರಿಗೆ ಧನ್ಯವಾದ ಹೇಳಲೇಬೇಕು. ಅವರೊಂದಿಗೆ ತೆರೆ ಹಂಚಿಕೊಳ್ಳುವುದು ನನ್ನ ಬಹುದಿನಗಳ ಕನಸಾಗಿತ್ತು, ಆ ಕನಸು ಇಂದು ನನಸಾಗಿದೆ," ಎಂದು ಅರ್ಜುನ್ ದಾಸ್ ತಮ್ಮ ಪತ್ರವನ್ನು ಆರಂಭಿಸಿದ್ದಾರೆ.
01:03 PM (IST) Jun 07
ಚಿತ್ರದಲ್ಲಿ ನೆನಪು ಕಳೆದುಕೊಂಡ ನಾಯಕನಾಗಿ 'ಉಗ್ರಂ' ಖ್ಯಾತಿಯ ಮಂಜು ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಸವಾಲಿನ ಪಾತ್ರವಾಗಿದ್ದು, ಮಂಜು ಅವರು ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ ಎಂದು ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
12:18 PM (IST) Jun 07
ಭಾಷೆಯ ಸೂಕ್ಷ್ಮ ವಿಷಯದಲ್ಲಿ ಎದುರಾದ ಈ ವಿವಾದಕ್ಕೆ ಸ್ಪಷ್ಟನೆ ನೀಡುವ ಮೂಲಕ ಕಮಲ್ ಹಾಸನ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಅವರ ಪತ್ರಿಕಾಗೋಷ್ಠಿಯ ನಂತರವಷ್ಟೇ ಈ ವಿವಾದಕ್ಕೆ ಪೂರ್ಣವಿರಾಮ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
12:01 PM (IST) Jun 07
ಇಂಡಸ್ಟ್ರಿಗೆ ಬಂದ ಆರಂಭದ ದಿನಗಳಲ್ಲಿ ಥೂ ಇವಳನ್ಯಾಕೆ ಕರ್ಕೊಂಡು ಬಂದ್ರಿ ಎಂದು ಆ ವ್ಯಕ್ತಿ ಹೇಳಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ ನಟಿ ಸೋನಲ್ ಮೊಂಥೆರೋ. ಅವರು ಹೇಳಿದ್ದೇನು ಕೇಳಿ...
11:48 AM (IST) Jun 07
‘ಥಗ್ ಲೈಫ್’ ಸಿನಿಮಾ ಕನ್ನಡ ಭಾಷಾ ವಿವಾದದಿಂದಾಗಿ ಕರ್ನಾಟಕದಲ್ಲಿ ಬಿಡುಗಡೆಯಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಮಲ್ ಹಾಸನ್ ಸಿನಿಮಾ ವಿವಾದಕ್ಕೆ ಸಿಲುಕಿದ್ದು ಇದೇ ಮೊದಲಲ್ಲ. ಹಾಗಾದ್ರೆ ಯಾವೆಲ್ಲಾ ಸಿನಿಮಾಗಳು ವಿವಾದಕ್ಕೆ ಸಿಲುಕಿದ್ವು ಅನ್ನೋದನ್ನ ಈ ಪೋಸ್ಟ್‌ನಲ್ಲಿ ನೋಡೋಣ.
10:35 AM (IST) Jun 07
ಶೈನ್ ಅವರ ತಂದೆ ಚಾಕೋ ಅವರ ಅಂತ್ಯಕ್ರಿಯೆ ಸೋಮವಾರ. ಭಾನುವಾರ ಸಂಜೆ ಐದು ಗಂಟೆಯಿಂದ ಮುಂಡೂರಿನಲ್ಲಿರುವ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನ ಇರುತ್ತದೆ ಎಂದು ಬಂಧುಗಳು ತಿಳಿಸಿದ್ದಾರೆ.
08:40 AM (IST) Jun 07
ಅಖಿಲ್ ಅಕ್ಕಿನೇನಿ ವ್ಯಾಪಾರ ಕುಟುಂಬದ ಜೈನಬ್ ರವ್‌ಡ್ಜೀ ಅವರನ್ನ ಮದುವೆಯಾಗಿದ್ದು ಎಲ್ಲರಿಗೂ ಗೊತ್ತು. ಆದ್ರೆ ಸಾವಿರಾರು ಕೋಟಿ ಬಿಸಿನೆಸ್ ಇದ್ರೂ, ಜೈನಬ್ ಅದನ್ನ ಬಿಟ್ಟು ಏನ್ ಮಾಡ್ತಿದ್ದಾರೆ ಅಂತ ಗೊತ್ತಾದ್ರೆ ಶಾಕ್ ಆಗ್ತೀರ.
08:32 AM (IST) Jun 07
ಒಂದು ಕಾಲದಲ್ಲಿ ಹೆಚ್ಚು ತೂಕ ಹೊಂದಿದ್ದ ಗಾಯಕ ಅದ್ನಾನ್ ಸಾಮಿ, 6 ತಿಂಗಳಲ್ಲಿ 120 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.