ಬಹಳ ದಿನದಿಂದ ಈ ಕಾಯಿಲೆಯಿಂದ ಬಳಲುತ್ತಿದ್ದರು ಧರ್ಮೇಂದ್ರ; 50 ದಾಟುತ್ತಿದ್ದಂತೆ ಈ ಸಮಸ್ಯೆ ಬರುವುದೇಕೆ?

Published : Nov 25, 2025, 12:42 PM IST
Dharmendra films remained incomplete

ಸಾರಾಂಶ

Health problems after 50: ವರದಿಗಳ ಪ್ರಕಾರ, 65 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 93% ಜನರು ಒಂದಲ್ಲ ಒಂದು ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ 79% ಹಿರಿಯ ವಯಸ್ಕರು ಒಂದಕ್ಕಿಂತ ಹೆಚ್ಚು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಗೆ ಆರೈಕೆ ಬಹಳ ಮುಖ್ಯ.

ಹಿರಿಯ ಬಾಲಿವುಡ್ ನಟ, ಹೀ ಮ್ಯಾನ್ ಧರ್ಮೇಂದ್ರ ನಿನ್ನೆ ನಿಧನರಾದರು. ಈ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗ ಮತ್ತು ಅಭಿಮಾನಿಗಳು ದುಃಖತಪ್ತರಾದರು. ಧರ್ಮೇಂದ್ರ ಅವರು ಅಧಿಕ ರಕ್ತದೊತ್ತಡ , ಸಂಧಿವಾತ, ಮಧುಮೇಹ ಮತ್ತು ಹೃದಯ ಸಮಸ್ಯೆಗಳು ಸೇರಿದಂತೆ ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.

ವೈದ್ಯರು ಹೇಳುವ ಹಾಗೆ ವಯಸ್ಸಾದಂತೆ ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದು ವಿವಿಧ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ವರದಿಗಳ ಪ್ರಕಾರ, 65 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 93% ಜನರು ಒಂದಲ್ಲ ಒಂದು ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ 79% ಹಿರಿಯ ವಯಸ್ಕರು ಒಂದಕ್ಕಿಂತ ಹೆಚ್ಚು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಗೆ ಸಕಾಲಿಕ ಚಿಕಿತ್ಸೆ ಮತ್ತು ಆರೈಕೆ ಬಹಳ ಮುಖ್ಯ.

1. ಅಧಿಕ ರಕ್ತದೊತ್ತಡ​
ವಯಸ್ಸಾದಂತೆ ರಕ್ತದೊತ್ತಡದ ಸಮಸ್ಯೆಗಳು ಸಾಮಾನ್ಯ. ಹೃದಯವು ರಕ್ತವನ್ನು ವೇಗವಾಗಿ ಪಂಪ್ ಮಾಡಿದಾಗ ಅಪಧಮನಿಗಳ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು . ಅಂಕಿಅಂಶಗಳ ಪ್ರಕಾರ, 61% ವಯಸ್ಸಾದ ವ್ಯಕ್ತಿಗಳು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಇದನ್ನು ನಿಯಂತ್ರಣದಲ್ಲಿಡಲು ಉಪ್ಪು ಸೇವನೆಯನ್ನು ಮಿತಿಗೊಳಿಸಿ. ಒತ್ತಡವನ್ನು ಕಡಿಮೆ ಮಾಡಿ ಮತ್ತು ಹೃದಯ ಕಾಯಿಲೆಯನ್ನು ತಡೆಗಟ್ಟಲು ನಿಮ್ಮ ಬಿಪಿ ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ಇದರಿಂದ ಸ್ಟ್ರೋಕ್ ಅಥವಾ ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಬಹುದು.

2. ಅಧಿಕ ಕೊಲೆಸ್ಟ್ರಾಲ್
ವಯಸ್ಸಾದಂತೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ( LDL) ಮಟ್ಟ ಹೆಚ್ಚಾಗುವುದರಿಂದ ಅಪಧಮನಿಗಳಲ್ಲಿ ಕೊಬ್ಬು ಶೇಖರಣೆಯಾಗುತ್ತದೆ . ಇದು ಹೃದಯಕ್ಕೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೃದಯ ಕಾಯಿಲೆಗಳು ಸಂಭವಿಸಬಹುದು ಅಥವಾ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಕಡಿಮೆ ಎಣ್ಣೆಯುಕ್ತ ಆಹಾರವನ್ನು ಸೇವಿಸಿ. ಜಿಡ್ಡಿನ ಆಹಾರವನ್ನು ತಪ್ಪಿಸಿ ಮತ್ತು ದೈನಂದಿನ ಆಹಾರವನ್ನು ಸೇವಿಸಿ. ಬೆಳಗ್ಗೆ ನಡೆಯುವ ಅಭ್ಯಾಸ ಮಾಡಿಕೊಳ್ಳಿ .

3. ಸಂಧಿವಾತ ಮತ್ತು ಕೀಲು ನೋವು

ಭಾರತದಲ್ಲಿ ಸುಮಾರು 51% ಹಿರಿಯ ನಾಗರಿಕರು ಸಂಧಿವಾತ ಅಥವಾ ಕೀಲು ನೋವಿನಿಂದ ಬಳಲುತ್ತಿದ್ದಾರೆ. ವಯಸ್ಸಾದಂತೆ ಮೂಳೆ ಸಾಂದ್ರತೆ (Bone density) ಕಡಿಮೆಯಾಗುತ್ತದೆ. ಓಡಾಡುವುದು ಕಷ್ಟವಾಗುತ್ತದೆ. ಇದು ಬರಬಾರದೆಂದರೆ ಲಘು ವ್ಯಾಯಾಮ ಮಾಡುತ್ತಿರಿ. ತೂಕ ನಿಯಂತ್ರಣವನ್ನು ಕಾಪಾಡಿಕೊಳ್ಳಿ ಮತ್ತು ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್‌ ಮಾತ್ರೆ ತೆಗೆದುಕೊಳ್ಳಿ. ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

4. ಮಧುಮೇಹ
ವಯಸ್ಸಾದಂತೆ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದು ಸಕ್ಕರೆ ಏರಿಕೆಗೆ ಕಾರಣವಾಗುತ್ತದೆ. ಕೊನೆಗೆ ಮಧುಮೇಹವು ಮೂತ್ರಪಿಂಡಗಳು, ಕಣ್ಣುಗಳು ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆ ಬರಬಾರದೆಂದರೆ ಕಡಿಮೆ ಸಕ್ಕರೆ ಸೇವಿಸಿ. ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ ಮತ್ತು ನಿಮ್ಮ ವೈದ್ಯರು ಸೂಚಿಸಿದಂತೆ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಮರೆಯದಿರಿ.

5. ಹೃದಯ ಕಾಯಿಲೆ

ವರದಿಗಳ ಪ್ರಕಾರ, ಶೇ. 16 ರಷ್ಟು ಹಿರಿಯ ವಯಸ್ಕರಿಗೆ ಹೃದ್ರೋಗದ ಅಪಾಯವನ್ನು ಹೊಂದಿರುತ್ತಾರೆ. ಹೃದಯಕ್ಕೆ ಸಾಕಷ್ಟು ರಕ್ತ ಮತ್ತು ಆಮ್ಲಜನಕ ಪೂರೈಕೆಯ ಕೊರತೆಯ ಪರಿಣಾಮ ಆಯಾಸ, ತಲೆತಿರುಗುವಿಕೆ ಮತ್ತು ಹಸಿವಿನ ಕೊರತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಅಗತ್ಯವಾಗಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಿನ ಈ 7 ಅಭ್ಯಾಸಗಳು ವಯಸ್ಸಾಗೋದನ್ನ ನಿಧಾನಗೊಳಿಸುತ್ತೆ!
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ