Origin of Kissing: ಜಗತ್ತಿನಲ್ಲಿ ಮೊತ್ತಮೊದಲ ಬಾರಿಗೆ ಚುಂಬಿಸಿಕೊಂಡವರು ಯಾರು ನಿಮಗೆ ಗೊತ್ತೆ?

Published : Nov 23, 2025, 06:21 PM IST
kissing

ಸಾರಾಂಶ

ಚುಂಬನವನ್ನು (kissing) ಮನುಷ್ಯರು ಕಂಡುಹಿಡಿದಿಲ್ಲ, ಬದಲಿಗೆ ಸುಮಾರು 2.1 ಕೋಟಿ ವರ್ಷಗಳ ಹಿಂದೆಯೇ ನಮ್ಮ ವಾನರ ಪೂರ್ವಜರಲ್ಲಿಯೇ ಇದು ಹುಟ್ಟಿಕೊಂಡಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

ಭೂಮಿಯ ಮೇಲೆ ಮೊತ್ತಮೊದಲ ಬಾರಿಗೆ ಮುತ್ತು ಕೊಟ್ಟವರು ಯಾರು? ಪುರಾಣಗಳ ಮಾತು ಬಿಡಿ. ನಿಜಕ್ಕೂ ನೀವು ವೈಜ್ಞಾನಿಕ ಮನೋಭಾವದವರಾದರೆ, ಡಾರ್ವಿನ್‌ನ ಜೀವವಿಕಾಸ ವಾದವನ್ನು ಒಪ್ಪುವುದಾದರೆ, ಮಾನವ ಜೀವವಿಕಾಸದ ಯಾವ ಹಂತದಲ್ಲಿ ಕಿಸ್ಸಿಂಗ್‌ ಅಥವಾ ಚುಂಬನ ಶುರುವಾಯಿತು ಎಂಬ ಬಗ್ಗೆ ಕುತೂಹಲ ಮೂಡಿರಬಹುದು. ನಿಮಗೆ ಗೊತ್ತಿರಲಿ, ಚುಂಬನವನ್ನು ಕಂಡುಹಿಡಿದವರು ಮನುಷ್ಯರಲ್ಲ, ಮಂಗಗಳು.

ಇದು ಹೊಸ ಅಧ್ಯಯನವೊಂದು ಕಂಡುಹಿಡಿದ ವಿಷಯ. ಸುಮಾರು 21 ಮಿಲಿಯ (2.1 ಕೋಟಿ) ವರ್ಷಗಳ ಹಿಂದೆ, ಮಾನವರ ಸಾಮಾನ್ಯ ಪೂರ್ವಜರಾದ ನಿಯಾಂಡರ್ತಲ್‌ಗಳು ಮತ್ತು ಇತರ ದೊಡ್ಡ ಮಂಗಗಳು ಈಗ ಚುಂಬನ ಎಂದು ಕರೆಯಲ್ಪಡುವ ಮೂಲಕ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ಕಲಿತವು. ʼಎವಲ್ಯೂಷನ್ ಅಂಡ್ ಹ್ಯೂಮನ್ ಬಿಹೇವಿಯರ್ ಜರ್ನಲ್‌ʼನಲ್ಲಿ ಪ್ರಕಟವಾದ ಒಂದು ಅಧ್ಯಯನ, ಚುಂಬನದ ಈ ಇತಿಹಾಸವನ್ನು ಪರಿಶೀಲಿಸಿದೆ.

ಹೇಗೆ ಶುರುವಾಯಿತು?

ಕುತೂಹಲಕಾರಿ ವಿಷಯ ಅಂದರೆ, ಇತರ ಪ್ರಾಣಿಜಾತಿಗಳಲ್ಲಿ ಚುಂಬನ ಇಲ್ಲ. ನಾಯಿಗಳೋ ಹುಲಿಗಳೋ ಚುಂಬಿಸುವುದಿಲ್ಲ. ಯಾಕೆಂದರೆ ಮನುಷ್ಯರಂತೆ ಮುಖಾಮುಖಿಯಾಗಿ ಇವು ಯಾವ ಜೀವಿಗಳೂ ಮಿಲನದಲ್ಲಿ ತೊಡಗುವುದಿಲ್ಲ. ಮನುಷ್ಯರು ಮುಖಾಮುಖಿಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಆಗ ಸಂಗಾತಿಗಳ ಮುಖಕ್ಕೆ ಮುಖ ಎದುರಾಗುತ್ತದೆ. ವಿಜ್ಞಾನಿಗಳು ಹೇಳುವ ಪ್ರಕಾರ, ಮಂಗಗಳು ಮೊದಲು ಹೆಣ್ಣಿನ ಹಿಂದಿನಿಂದ ಗಂಡು ಬಂದು ಲೈಂಗಿಕ ಕ್ರಿಯೆ ನಡೆಸುತ್ತಿದ್ದವು. ಈಗಲೂ ಹಾಗೇ ನಡೆಸುತ್ತದೆ.

ಆದರೆ ನಿಯಾಂಡರ್ತಲ್‌ಗಳ ಕಾಲದಲ್ಲಿ ಇದು ಸ್ವಲ್ಪ ಬದಲಾಯಿತು. ಗಂಡು- ಹೆಣ್ಣು ಮೊದಲ ಬಾರಿಗೆ ಮುಖಾಮುಖಿಯಾಗಿ ಪ್ರೇಮಿಸಿದವು. ಅದರಲ್ಲಿರುವ ಸೊಗಸನ್ನು ಕಂಡುಕೊಂಡವು. ಆಗ ಚುಂಬನ ಹುಟ್ಟಿಕೊಂಡಿತು. ನಂತರ ಅದರಲ್ಲಿ ವೈವಿಧ್ಯಮಯತೆ ಬೆಳೆಯುತ್ತಾ ಬಂತು. ಪ್ರಣಯಕೇಳಿಯ ಸಂದರ್ಭದಲ್ಲಿ ಕಾಮಾತುರತೆಯನ್ನು ಹೆಚ್ಚಿಸಲು ಇದು ಸಹಕಾರಿಯಾಯಿತು. ಮುಂದೆ ಮನುಷ್ಯರಲ್ಲಿ ಲೈಂಗಿಕ ಕ್ರಿಯೆ ಇಲ್ಲದಾಗಲೂ, ಪ್ರೀತಿಯನ್ನು ವ್ಯಕ್ತಪಡಿಸಲೂ ಇದು ನೆರವಾಯಿತು.

ಕೇವಲ ಮಾನವರಲ್ಲಿನ ಪ್ರಣಯದ ಗುಣಲಕ್ಷಣವನ್ನು ಅಧ್ಯಯನ ಮಾಡುವ ಬದಲು, ಎಲ್ಲಾ ವಾನರ ಜಾತಿಗಳಲ್ಲಿನ ನಡವಳಿಕೆಯನ್ನು ವಿಶ್ಲೇಷಿಸಲು ಸಂಶೋಧಕರು ಅಡ್ಡ- ಜಾತಿ ವಿಧಾನವನ್ನು ಬಳಸಿದರು. ಅವರು ಆಶ್ಚರ್ಯಪಡುವಂತೆ, ಚುಂಬನವು 21.5 ರಿಂದ 16.9 ಮಿಲಿಯನ್ ವರ್ಷಗಳ ಹಿಂದೆ ದೊಡ್ಡ ಮಂಗಗಳ ಪೂರ್ವಜರಲ್ಲಿ ಹುಟ್ಟಿಕೊಂಡಿದೆ ಎಂದು ಕಂಡುಕೊಂಡರು.

ಲಕ್ಷಾಂತರ ವರ್ಷಗಳ ವಿಕಾಸದ ನಂತರವೂ ಚುಂಬನವನ್ನು ಹೋಮೋ ಸೇಪಿಯನ್ಸ್ ಎಂದು ಕರೆಯಲಾಗುವ ಮನುಷ್ಯರು ಉಳಿಸಿಕೊಂಡಿದ್ದಾರೆ. ಈ ಪ್ರಬಂಧದ ಪ್ರಮುಖ ಲೇಖಕಿ ಡಾ. ಮಟಿಲ್ಡಾ ಬ್ರಿಂಡಲ್ ಪ್ರಕಾರ ಮಾನವರ ಸೋದರಸಂಬಂಧಿಗಳಾದ ವಾನರರಲ್ಲಿ ವೈವಿಧ್ಯಮಯ ಲೈಂಗಿಕ ನಡವಳಿಕೆಗಳಿವೆ. ನಿಯಾಂಡರ್ತಲ್‌ಗಳು ಬಹುಶಃ ಪರಸ್ಪರ ಚುಂಬಿಸಿದ್ದಾರೆ. ಹಿಂದಿನ ಅಧ್ಯಯನಗಳು ಹೇಳುವಂತೆ, ನಿಯಾಂಡರ್ತಲ್‌ಗಳು ಅನುಕ್ರಮವಾಗಿ ಆನುವಂಶಿಕ ವಸ್ತು ಮತ್ತು ಮೌಖಿಕ ಸೂಕ್ಷ್ಮಜೀವಿಗಳನ್ನು ಹಂಚಿಕೊಂಡಿದ್ದಾರೆ. ಅಂದರೆ ಲಾಲಾರಸ ವರ್ಗಾವಣೆ.

ಚುಂಬನ ಅಂದರೇನು? ಆಹಾರ ವರ್ಗಾವಣೆಯಲ್ಲ. ಆಕ್ರಮಣಕಾರಿ ನಡವಳಿಕೆಯಲ್ಲ. ಆದರೆ ಬಾಯಿ- ಬಾಯಿ ಸಂಪರ್ಕ. ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಲ್ಲಿ ವಿಕಸನಗೊಂಡ ಚಿಂಪಾಂಜಿಗಳು, ಬೊನೊಬೊಗಳು, ಒರಾಂಗುಟನ್‌ಗಳು ಮತ್ತು ಇತರ ಆಧುನಿಕ ಮಂಗಗಳ ಮೇಲೆ ಸಹ ಅಧ್ಯಯನಗೂ ನಡೆದಿದ್ದು, ಅವು ಸಹ ಚುಂಬಿಸುವುದಕ್ಕೆ ಪ್ರಾಯೋಗಿಕ ಪುರಾವೆಗಳಿವೆ. ಅಂದರೆ ಈ ವಾನರಗಳಿಗೂ ಯಾವುದೋ ಒಂದು ರೀತಿಯಲ್ಲಿ ಲಾಲಾರಸದ ವರ್ಗಾವಣೆಯ ಮೂಲಕ ಸೂಕ್ಷ್ಮಜೀವಿಗಳು ವರ್ಗಾವಣೆ ಆಗಬೇಕಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!