ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌.ಆರ್ ನಾರಾಯಣಮೂರ್ತಿ-ಪತ್ನಿ ಸುಧಾ ಮೂರ್ತಿ ಫಸ್ಟ್ ಮೀಟ್ ಹೇಗಿತ್ತು?

By Vinutha PerlaFirst Published May 11, 2023, 1:35 PM IST
Highlights

ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌.ಆರ್ ನಾರಾಯಣಮೂರ್ತಿಯವರ ಪತ್ನಿ ಸುಧಾ ಮೂರ್ತಿ ತಮ್ಮ ಸರಳ ಜೀವನಶೈಲಿಯಿಂದಲೇ ಹೆಸರುವಾಸಿಯಾದವರು. ಅವರು ನಡೆದು ಬಂದ ಹಾದಿ, ಜೀವಾನುಭವ ಕೇಳುವುದೇ ಆಸಕ್ತಿದಾಯಕ ವಿಷಯ. ಸದ್ಯ ಸುಧಾಮೂರ್ತಿಯವರು ತಮ್ಮ ಪತಿ ನಾರಾಯಣ ಮೂರ್ತಿಯವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಉದ್ಯಮಿ, ಸಮಾಜಸೇವಕಿಯಾಗಿರುವ ಸುಧಾ ಮೂರ್ತಿ ತಮ್ಮ ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ.  ಸುಧಾಮೂರ್ತಿಯವರ ಜೀವನ ಕಥೆ, ಜೀವಾನುಭವ ಜೀವನದೆಡೆಗಿನ ದೃಷ್ಟಿಕೋನವನ್ನು ಬದಲಾಯಿಸುತ್ತದೆ. 1950ರಲ್ಲಿ ಜನಿಸಿದ ಸುಧಾಮೂರ್ತಿಯವರು, ಇನ್ಫೋಸಿಸ್‌ನ ಸಹ ಸಂಸ್ಥಾಪಕರಾದ ಎನ್.ಆರ್ ನಾರಾಯಣ ಮೂರ್ತಿಯವರ ಪತ್ನಿ. ಇಂಜಿನಿಯರ್, ಸಮಾಜ ಸೇವಕರು, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಯನ್ನು ಪಡೆದಿದ್ದಾರೆ. ಹೀಗಿರುವ ಸರಳ ಸಂಪನ್ನ ಸುಧಾಮೂರ್ತಿ, ತಮ್ಮ ಪತಿ ನಾರಾಯಣ ಮೂರ್ತಿಯವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. 

ಹಿಂದಿ ಎಂಟರ್‌ಟೈನ್ ಮೆಂಟ್ ಚಾನೆಲ್ ಸೋನಿ ನಡೆಸಿಕೊಡುವ 'ದಿ ಕಪಿಲ್ ಶರ್ಮಾ' ಶೋದಲ್ಲಿ ಅವರು ಅತಿಥಿಯಾಗಿ (Guest) ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪತಿ ನಾರಾಯಣ ಮೂರ್ತಿ ಅವರೊಂದಿಗಿನ ಮೊದಲ ಭೇಟಿಯನ್ನು (Meet) ಸುಧಾ ಮೂರ್ತಿ ನೆನಪಿಸಿಕೊಂಡರು, ಅವರು ಹೀರೋನಂತೆ ಕಾಣುತ್ತಾರೆ ಎಂದು ನಿರೀಕ್ಷಿಸಿದ್ದೆ, ಅವರನ್ನು ನೋಡಿದ ತಕ್ಷಣ, ಈ ಹುಡುಗ ಯಾರೆಂದು ಅಚ್ಚರಿಪಟ್ಟೆ' ಎಂದು ಹೇಳಿದ್ದಾರೆ.

Latest Videos

ಸರಳ ಉಡುಪಿನ ಕಾರಣಕ್ಕೆ ಸುಧಾಮೂರ್ತಿಗೆ ಹೀಗಂದ್ರಾ ಏರ್‌ಪೋರ್ಟ್ ಅಧಿಕಾರಿಗಳು!

ದಿ ಕಪಿಲ್ ಶರ್ಮಾ ಶೋನ ಸೆಟ್‌ಗಳಲ್ಲಿ ನಟ ರವೀನಾ ಟಂಡನ್ ಮತ್ತು ಆಸ್ಕರ್ ವಿಜೇತ ನಿರ್ಮಾಪಕ ಗುನೀತ್ ಮೊಂಗಾ ಅವರೊಂದಿಗೆ ಸುಧಾಮೂರ್ತಿ ಕಾಣಿಸಿಕೊಂಡರು. ಕಾರ್ಯಕ್ರಮದ ತಯಾರಕರು ಹಂಚಿಕೊಂಡ ಪ್ರೋಮೋದಲ್ಲಿ, ಸುಧಾ ಮೂರ್ತಿ ಅವರು ತಮ್ಮ ಹಲವು ದಶಕಗಳ ಪಾಲುದಾರ (Partner) ನಾರಾಯಣ ಮೂರ್ತಿ ಅವರೊಂದಿಗಿನ ಮೊದಲ ಮುಖಾಮುಖಿಯನ್ನು ನೆನಪಿಸಿಕೊಳ್ಳುತ್ತಾರೆ.  ಸ್ನೇಹಿತನ ಮೂಲಕ ನಾರಾಯಣಮೂರ್ತಿಯವರ ಪರಿಚಯವಾಗಿತ್ತು ಎಂಬುದನ್ನು ಅವರು ಈ ಸುಧಾಮೂರ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

'ನನಗೆ ಪ್ರಸನ್ನ ಎಂಬ ಸ್ನೇಹಿತನಿದ್ದನು. ಅವನು ಪ್ರತಿದಿನ ನನಗೆ ವಿವಿಧ ಸ್ಥಳಗಳ ಹೆಸರುಗಳೊಂದಿಗೆ ಮೊದಲ ಪುಟದಲ್ಲಿ ನಾರಾಯಣಮೂರ್ತಿ ಅವರ ಹೆಸರನ್ನು ಬರೆದ ಪುಸ್ತಕವನ್ನು ತರುತ್ತಿದ್ದನು. ಹೆಸರಿನ ಜೊತೆಗೆ ಬೇರೆ ಬೇರೆ ಸ್ಥಳದ ಹೆಸರು ಇರುತ್ತಿತ್ತು. ಈ ನಾರಾಯಣ ಮೂರ್ತಿ ಯಾರೋ ಇಂಟರ್‌ನ್ಯಾಷನಲ್‌ ಬಸ್ ಕಂಡಕ್ಟರ್ ಎಂದು ನಾನು ಭಾವಿಸಿದೆ. ನಾನು ಅವರನ್ನು ಮೊದಲು ಭೇಟಿಯಾಗಲು ಹೊರಟಾಗ ಅವರು ಚಲನಚಿತ್ರದ ನಾಯಕನಂತೆ, ಚುರುಕಾದ ಮತ್ತು ಸುಂದರವಾಗಿ ಕಾಣಿಸುತ್ತಾರೆ ಎಂದು ನಾನು ಭಾವಿಸಿದೆ, ಆದರೆ ಅವರನ್ನು ನೋಡಿ ಈ ಸಣ್ಣ ಹುಡುಗ ಯಾರು ಎಂದು ಅಚ್ಚರಿಪಟ್ಟೆ' ಎಂದು ಸುಧಾಮೂರ್ತಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರವೀನಾ ಟಂಡನ್ ಮತ್ತು ಕಪಿಲ್ ಶರ್ಮಾ ಸುಧಾಮೂರ್ತಿ ಮಾತನ್ನು ಕೇಳಿ ಬಿದ್ದೂ ಬಿದ್ದೂ ನಕ್ಕರು Laughing).

ನಾನು ನನ್ನ ಗಂಡನ ಉದ್ಯಮಿ ಮಾಡಿದೆ, ನನ್ನ ಮಗಳು ಆಕೆ ಗಂಡನ ಪ್ರಧಾನಿ ಮಾಡಿದ್ಲು: ಸುಧಾಮೂರ್ತಿ

ಕಪಿಲ್ ಶರ್ಮಾದ ಈ ಶೋಗೆ ನೆಟ್ಟಿಗರು ಸಹ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ಒಬ್ಬ ಬಳಕೆದಾರರು 'ಓಹ್ ನಾನು ಖಂಡಿತವಾಗಿಯೂ ಸಂಚಿಕೆಯನ್ನು ನೋಡುತ್ತೇನೆ. ನನ್ನ ನೆಚ್ಚಿನ ಸುಧಾ ಮೂರ್ತಿ ಜೀ ಅವರು ಎಲ್ಲಾ ಭಾರತೀಯರಿಗೆ ಸ್ಫೂರ್ತಿಯಾಗಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಸುಧಾ ಮೂರ್ತಿಯವರು ಇಂಥಾ ಹಾಸ್ಯಪ್ರಜ್ಞೆ ಹೊಂದಿದ್ದಾರೆಂದು ನನಗೆ ತಿಳಿದಿಲ್ಲ. ಅವರ ಪುಸ್ತಕಗಳು ತುಂಬಾ ಹಾಸ್ಯಮಯವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ನಾನು ಅವರ ಅಭಿಮಾನಿಯಾಗಿದ್ದಾನೆ' ಎಂದಿದ್ದಾರೆ. ಇನ್ನೊಬ್ಬರು 'ಸುಧಾ ಮೂರ್ತಿ ಜೀ ಅವರನ್ನು ನೋಡಲು ಅದ್ಭುತವಾಗಿದೆ' ಎಂದು ಬರೆದಿದ್ದಾರೆ.

ಈ ಹಿಂದಿನ ಸಂದರ್ಶನದಲ್ಲಿಯೂ ಸುಧಾಮೂರ್ತಿ ತಮ್ಮ ವೈವಾಹಿಕ ಜೀವನದ ಕುರಿತಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಇಬ್ಬರೂ ಕೂಡಾ ಪರಸ್ಪರ ಅಭಿರುಚಿಯನ್ನು ಗೌರವಿಸುವುದಾಗಿ ಹೇಳಿದ್ದರು. ಕುಟುಂಬ ಮತ್ತು ಮಕ್ಕಳ ಕುರಿತಾಗಿ ಇಬ್ಬರೂ ಪರಸ್ಪರ ಕಾಳಜಿ ವಹಿಸುತ್ತೇವೆ ಎಂದು ತಿಳಿಸಿದ್ದರು. 

click me!