Lower Berth Ticket Booking Rules ಅದೆಷ್ಟೇ ಪ್ರಯತ್ನ ಮಾಡಿದರೂ ಟ್ರೇನ್‌ನ ಲೋವರ್ ಬರ್ತ್‌ನಲ್ಲಿ ತಂದೆ-ತಾಯಿಗೆ ಟಿಕೆಟ್ ಸಿಗೋದೇ ಇಲ್ಲ ಅಂತಾ ನಿಮಗೇನಾದ್ರೂ ಅನ್ನಿಸ್ತಿದ್ಯಾ? ಹಾಗಿದ್ದರೆ, ನೀವು ಟಿಕೆಟ್ ಬುಕ್ ಮಾಡೋ ವೇಳೆ ಈ ತಪ್ಪು ಮಾಡುತ್ತಿದ್ದೀರಿ ಎಂದರ್ಥ.
ಬೆಂಗಳೂರು (ಸೆ.23): ದೇಶದ ಅತ್ಯಂತ ಅನುಕೂಲಕರ ಮತ್ತು ಪ್ರಮುಖ ಸಾರಿಗೆ ಸಾಧನಗಳಲ್ಲಿ ರೈಲ್ವೆಗೆ ಅತ್ಯಂತ ಮಹತ್ವದ ಪಾತ್ರವಿದೆ. ಪ್ರತಿದಿನ ಕೋಟಿಗಟ್ಟಲೆ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ, ಆದರೆ ಹಬ್ಬದ ಸಮಯದಲ್ಲಿ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಸಮಯದಲ್ಲಿ, ನಿಮ್ಮೊಂದಿಗೆ ಹಿರಿಯ ನಾಗರಿಕರನ್ನು ಕರೆದೊಯ್ಯಲು ನೀವು ಯೋಚಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ನಿಮ್ಮೊಂದಿಗೆ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ನೀವು ಕನ್ಫರ್ಮ್ ಆಗಿರುವ ಲೋವರ್ ಸೀಟನ್ನು ಹೇಗೆ ಪಡೆಯಬಹುದು ಎನ್ನುವ ವಿವರ ಇಲ್ಲಿದೆ.
ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಹೇಗೆ ಸಿಗುತ್ತದೆ: ಹಬ್ಬ ಹರಿದಿನಗಳಲ್ಲಿ ರೈಲುಗಳಲ್ಲಿ ಕನ್ಫರ್ಮ್ ಟಿಕೆಟ್ ಪಡೆಯುವುದೇ ಕಷ್ಟದ ಕೆಲಸ. ಅಂತಹ ಪರಿಸ್ಥಿತಿಯಲ್ಲಿ, ಲೋವರ್ ಬರ್ತ್ ಪಡೆಯುವುದು ಇನ್ನೂ ಕಷ್ಟ. ಆದರೆ ನೀವು ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಕೆಲವು ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಪ್ರತಿ ಬಾರಿಯೂ ಲೋವರ್ ಬರ್ತ್ ಪಡೆಯುವ ಸಾಧ್ಯತೆಗಳು ಎಂದಿಗಿಂತಲೂ ಹೆಚ್ಚಾಗುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ, ರೈಲ್ವೇ ಈ ಮಾಹಿತಿಯನ್ನು ಕಾಲಕಾಲಕ್ಕೆ ಹಂಚಿಕೊಳ್ಳುತ್ತಿರುತ್ತದೆ, ಇದರಿಂದ ಜನರು ಪ್ರತಿ ರೈಲಿನಲ್ಲಿ ಕನ್ಫರ್ಮ್ ಸೀಟುಗಳನ್ನು ಪಡೆಯಬಹುದು.
ಹಿರಿಯ ನಾಗರಿಕರಿಗೆ ಮೀಸಲಾದ ಲೋವರ್ ಬರ್ತ್‌ಗಳ ಕೋಟಾವು 60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಭಾರತೀಯ ರೈಲ್ವೆ ನಿಯಮ ತಿಳಿಸುತ್ತದೆ. ಹಾಗಿದ್ದರೂ, ಈ ಮೀಸಲಾತಿಯು ಅವರು ಏಕಾಂಗಿಯಾಗಿ ಅಥವಾ ಗರಿಷ್ಠ ಇಬ್ಬರು ಜನರೊಂದಿಗೆ ಪ್ರಯಾಣಿಸುವ ಷರತ್ತಿನ ಮೇಲೆ ಮಾತ್ರ ಅನ್ವಯಿಸುತ್ತದೆ.
ರಾಜ್ಯದ ಕರಾವಳಿಗೆ ಶುಭ ಸುದ್ದಿ, ಶೀಘ್ರದಲ್ಲೇ ಭಾರತೀಯ ರೈಲ್ವೆಯಲ್ಲಿ ಕೊಂಕಣ್ ರೈಲ್ವೆ ವಿಲೀನ!
ಇಬ್ಬರಿಗಿಂತ ಹೆಚ್ಚು ಹಿರಿಯ ನಾಗರಿಕರು ಒಟ್ಟಿಗೆ ಪ್ರಯಾಣಿಸುತ್ತಿದ್ದರೆ ಅಥವಾ ಹಿರಿಯ ನಾಗರಿಕರಲ್ಲದ ಇತರ ಪ್ರಯಾಣಿಕರೊಂದಿಗೆ ಹಿರಿಯ ನಾಗರಿಕರು ಪ್ರಯಾಣಿಸುತ್ತಿದ್ದರೆ, ಅವರಿಗೆ ಲೋವರ್ ಬರ್ತ್ ಮೀಸಲಾತಿ ಸಿಗುವುದಿಲ್ಲ. ಆದಾಗ್ಯೂ, ಟಿಕೆಟ್ ತಪಾಸಣೆ ಮಾಡುವ ಅಧಿಕಾರಿ ಸ್ಥಳಾವಕಾಶವಿದ್ದರೆ ಬುಕಿಂಗ್ ಸಮಯದಲ್ಲಿ ಮೇಲಿನ ಅಥವಾ ಮಧ್ಯದ ಬರ್ತ್‌ಗಳನ್ನು ನಿಗದಿಪಡಿಸಿದ ಹಿರಿಯ ನಾಗರಿಕರಿಗೆ ಕೆಳಗಿನ ಬರ್ತ್‌ಗಳನ್ನು ನೀಡಬಹುದು.
ಭಾರತೀಯ ರೈಲ್ವೆಯಲ್ಲೂ ಇದೆ ಕ್ಯಾಶ್ ಲಿಮಿಟ್, ಟ್ರೇನ್‌ನಲ್ಲಿ ನೀವು ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಸಾಗಿಸುವಂತಿಲ್ಲ!