ಈ ಆರೋಗ್ಯ ಸಮಸ್ಯೆ ಇದ್ದರೆ ಬೆಂಡೆಕಾಯಿ ತಿನ್ನಲೇಬೇಡಿ: ವಿಷವಾಗಬಲ್ಲದು ಈ ಹಸಿರು ತರಕಾರಿ

By Anusha Kb  |  First Published Sep 23, 2024, 10:29 PM IST

ಲೇಡಿ ಫಿಂಗರ್ ಅಥವಾ ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಆರೋಗ್ಯಕರ ತರಕಾರಿ ಎಂದೇ ಪರಿಗಣಿಸಲಾಗಿದೆ. ಆದರೆ ಕೆಲವರಿಗೆ ಇದನ್ನು ಕಂಡರೆ ಅಲರ್ಜಿ ಆದರೆ ಮತ್ತೆ ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಇದು ನಿಜವಾಗಿಯೂ ವಿಷಕಾರಿ ಎಂಬ ವಿಚಾರ ನಿಮಗೆ ಗೊತ್ತಾ?


ಲೇಡಿ ಫಿಂಗರ್ ಅಥವಾ ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಆರೋಗ್ಯಕರ ತರಕಾರಿ ಎಂದೇ ಪರಿಗಣಿಸಲಾಗಿದೆ. ಆದರೆ ಕೆಲವರಿಗೆ ಇದನ್ನು ಕಂಡರೆ ಅಲರ್ಜಿ ಆದರೆ ಮತ್ತೆ ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಇದು ನಿಜವಾಗಿಯೂ ವಿಷಕಾರಿ ಎಂಬ ವಿಚಾರ ನಿಮಗೆ ಗೊತ್ತಾ?

ಬೆಂಡೆಕಾಯಿ ಆರೋಗ್ಯಕಾರಿ ತರಕಾರಿ ಇದು ಹಲವು ಹೇರಳವಾದ ನ್ಯೂಟ್ರಿಯೆಂಟ್ಸ್‌ಗಳನ್ನು ಹೊಂದಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತೂಕ ಇಳಿಕೆಗೂ ಸಹಕಾರಿ, ಹಾಗೆಯೇ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವುದರಲ್ಲೂ ಇದು ಮಹತ್ವದ ಪಾತ್ರವಹಿಸಿದೆ. ಇಷ್ಟೆಲ್ಲಾ ಉಪಯುಕ್ತವಾದ ಈ ಬೆಂಡೆಕಾಯಿ  ಕೆಲವು ವಿಶೇಷ ವ್ಯಕ್ತಿಗಳಿಗೆ ವಿಷಕಾರಿಯಾಗಬಲ್ಲದು ಎಂಬ ವಿಚಾರ ನಿಮಗೆ ಗೊತ್ತಾ? ಹಾಗಿದ್ರೆ ನಾವೀಗ ಯಾರಿಗೆ ಈ ಬೆಂಡೆಕಾಯಿ ಒಳ್ಳೆಯದಲ್ಲ ಎಂಬ ವಿಚಾರವನ್ನು ಇಲ್ಲಿ ತಿಳಿಸುತ್ತಿದ್ದೇವೆ. 

Latest Videos

undefined

ಒಕ್ರಾ ಲೆಕ್ಟಿನ್ ಎಂಬ ಪ್ರೊಟೀನ್ ಅನ್ನು ಹೊಂದಿದೆ. ಇದು ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು.  ಹಾಗೆಯೇ ಈ ಬೆಂಡೆಕಾಯಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶವನ್ನು ಹೊಂದಿದೆ. ಇದು ಕೆಲವರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪಾದನೆ ಹಾಗೂ ಹೊಟ್ಟೆಯುಬ್ಬುವಿಕೆಗೆ ಕಾರಣವಾಗಬಹುದು. 

ಬೆಂಡೆಕಾಯಿ ನೀರು ಸೇವನೆ diabetic ರೋಗಿಗಳಿಗೆ ರಾಮಬಾಣ

ಯಾರು ಬೆಂಡೆಕಾಯಿ ತಿನ್ನಬಾರದು?

ಅಲರ್ಜಿ ಹೊಂದಿರುವವರು: ಬೆಂಡೆಕಾಯಿ ತಿನ್ನಬಾರದು, ಬೆಂಡೆಕಾಯಿ ತಿನ್ನುವುದರಿಂದ ನಿಮಗೆ ಅಲರ್ಜಿಯಾಗಿದೆ ಅನಿಸಿದರೆ ಬೆಂಡೆಕಾಯಿ ತಿನ್ನಲೇಬೇಡಿ. ಒಂದು ವೇಳೆ ನೀವು ತಿಂದಿದ್ದೇ ಆದಲ್ಲಿ, ತುರಿಕೆ,ದದ್ದು,  ಬಾವು, ಉಸಿರಾಟಕ್ಕೆ ಕಷ್ಟವಾಗುವುದು, ಹೊಟ್ಟೆನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಜೀರ್ಣಕ್ರಿಯೆಯ ಸಮಸ್ಯೆ ಹೊಂದಿರುವವರು: ನಿಮಗೆ ಈಗಾಗಲೇ ಜೀರ್ಣಿಕ್ರಿಯೆಯ ಸಮಸ್ಯೆಯನ್ನು ಹೊಂದಿದ್ದರೆ, ಮಲಬದ್ಧತೆ ಅಥವಾ ಬೇಧಿ ಅಥವಾ ಕಿರಿಕಿರಿಯುಂಟು ಮಾಡುವ ಹೊಟ್ಟೆ ಉಬ್ಬುವ ಲಕ್ಷಣಗಳನ್ನು ಹೊಂದಿದ್ದರೆ, ನೀವು ಬೆಂಡೆಕಾಯಿ ತಿನ್ನುವುದರಿಂದ ನಿಮ್ಮ ಸಮಸ್ಯೆ ಇನ್ನಷ್ಟು ಹೆಚ್ಚಾಗುವುದು.

ಡಯಾಬಿಟಿಕ್ ರೋಗಿಗಳು: ಬೆಂಡೆಕಾಯಿ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ನೀವು ಸಕ್ಕರೆ ಕಾಯಿಲೆ ಹೊಂದಿದ್ದು, ಅದಕ್ಕಾಗಿ ಮಾತ್ರೆ ತೆಗೆದುಕೊಳ್ಳುವವರಾಗಿದ್ದರೆ, ದಯವಿಟ್ಟು  ಬೆಂಡೆಕಾಯಿ ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. 

ಗರ್ಭಿಣಿಯರು ಹಾಗೂ ಸ್ತನ್ಯಪಾನ ಮಾಡಿಸುವವರು: ಗರ್ಭಿಣಿಯರು ಹಾಗೂ ಮಗುವಿಗೆ ಎದೆಹಾಲು ಕುಡಿಸುವವರು ಕೂಡ ಬೆಂಡೆಕಾಯಿ ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದೊಳಿತು. 

ನಾವು ಬೆಂಡೆಕಾಯಿಯನ್ನು ಹಸಿರು ತರಕಾರಿ ಎಂದು ಭಾವಿಸುತ್ತೇವೆ. ಆದರೆ ಯಾರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೋ ಹಾಗೂ ಯಾರು ಕಫದ ಸಮಸ್ಯೆಯಿಂದ ಬಳಲುತ್ತಿದ್ದಾರೋ ಅವರರು ತಪ್ಪಿಯೂ ಬೆಂಡೆಕಾಯಿಯನ್ನು ತಿನ್ನಬಾರದು. ಈ ಬೆಂಡೆಕಾಯಿಯ ಒಳಗಿರುವ ಕಾಳಿನಂತಹ ಅಂಶಗಳು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಹೊಂದಿರುವವರ ಕಷ್ಟವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಹಾಗೆಯೇ  ಈ ಬೆಂಡೆಕಾಯಿಯಲ್ಲಿರುವ ಲೋಳೆಯಂತಹ ಅಂಶವೂ ಕಫದ ಸಮಸ್ಯೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. 

Tips to manage Ladyfingers: ಅಂಟಿಲ್ಲದಂತೆ ಟೇಸ್ಟಿಯಾಗಿ ಬೆಂಡೆಕಾಯಿ ಬಳಸಿ

ಬೆಂಡೆಕಾಯಿ ತಿನ್ನುವುದರಿಂದ ಆಗುವ ಲಾಭಗಳು
ಬೆಂಡೆಕಾಯಿ ಕೆಲವರಿಗೆ ಮಾರಕವಾಗಿರಬಹುದು. ಆದರೆ ಕೆಲವರಿಗೆ ಅದು ಸಂಪೂರ್ಣವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಟಾಮಿನ್‌ ಸಿ, ಪೊಲೇಟ್, ಮ್ಯಾಗ್ನೇಷಿಯಮ್, ಪೊಟಾಷಿಯಮ್ ಮುಂತಾದ ಅಂಶಗಳನ್ನು ಪೋಷಕಾಂಶಗಳನ್ನು ಇದು ಹೊಂದಿದ್ದು ಇದು ತೂಕ ಇಳಿಕೆಗೆ ರಕ್ತದ ಸಕ್ಕರೆ ಪ್ರಮಾಣ ಇಳಿಕೆಗೆ ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
 

click me!