ಕೆಲಸ ಮಾಡೋ ಮೂಡಿಲ್ವಾ? ಕೆಲಸಕ್ಕೆ ಬರ್ಬೇಡಿ ಎನ್ನುತ್ತಿದೆ ಕಂಪನಿ!

By Suvarna NewsFirst Published Apr 13, 2024, 4:09 PM IST
Highlights

ಇವತ್ತು ರಜೆ ಸಿಕ್ಕಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಎನ್ನುತ್ಲೇ ಕೆಲಸಕ್ಕೆ ಹೋಗ್ತೇವೆ ನಾವು. ಆದ್ರೆ ಆ ಕಂಪನಿಯಲ್ಲಿ ಹಾಗಲ್ಲ. ನಿಮಗೆ ಮೂಡ್ ಇಲ್ಲ ಅಂದ್ರೆ ಮುಲಾಜಿಲ್ಲದೆ ನೀವು ರಜೆ ಪಡೆಯಬಹುದು. ಮೂಡ್ ಸರಿ ಆದ್ಮೇಲೆ ಕೆಲಸಕ್ಕೆ ಬಂದ್ರೆ ಸಾಕು. 

ಅಯ್ಯೋ ಇವತ್ತು ಕೆಲಸ ಮಾಡೋಕೆ ಮೂಡ್ ಇಲ್ಲ.. ಯಾರು ಆಫೀಸ್ ಗೆ ಹೋಗ್ತಾರೆ ಅಂತ ಅನೇಕರು ಮನಸ್ಸಿನಲ್ಲೇ ಅಂದುಕೊಳ್ತಿರುತ್ತಾರೆ. ಮನೆ ಸಮಸ್ಯೆ, ಆರೋಗ್ಯ ಸಮಸ್ಯೆ ಇಲ್ಲವೆ ಸಂಬಂಧದಲ್ಲಿ ಬಿರುಕು, ಆಪ್ತರ ಸಾವು ಇದೆಲ್ಲವೂ ನೋವು ನೀಡ್ತಿದ್ದರೂ ಕೆಲಸಕ್ಕೆ ಹೋಗೋದು ಅನಿವಾರ್ಯವಾಗುತ್ತೆ. ನೋವು, ಬೇಸರದಲ್ಲಿ ಕೆಲಸ ಮಾಡುವಾಗ ಫಲಿತಾಂಶ ಚೆನ್ನಾಗಿ ಬರಲು ಸಾಧ್ಯವಿಲ್ಲ. ಕೆಲಸದಲ್ಲಿ ನಾನಾ ತಪ್ಪುಗಳಾಗ್ತಿರುತ್ತವೆ. ಅದು ಮೂಡ್ ಮತ್ತಷ್ಟು ಹಾಳು ಮಾಡುತ್ತದೆ. ಕೆಲವೊಮ್ಮೆ ಎಲ್ಲ ಕಿತ್ತೆಸೆದು ಓಡಿ ಹೋಗೋಣ ಎನ್ನುವಷ್ಟು ಕಿರಿಕಿರಿ ಕೋಪ ಕಾಡೋದಿದೆ. ಅಂಥವರಿಗೆ ಇಲ್ಲೊಂದು ಕಂಪನಿ ಖುಷಿ ಸುದ್ದಿ ನೀಡಿದೆ. ನಿಮಗೆ ಮೂಡ್ ಇಲ್ಲ ಅಂದ್ರೆ ಕೆಲಸಕ್ಕೆ ಬರಬೇಡಿ ಅಂತ ಹೇಳಿದ್ದಲ್ಲದೆ ಅಸಂತೋಷದ ರಜೆ ನೀಡಲು ಮುಂದಾಗಿದೆ. ಅರೇ ಹಿಂಗೂ ಇದ್ಯಾ ಅಂದ್ರಾ? ಯಸ್. ಅದ್ಯಾವ ಕಂಪನಿ, ಅದ್ರ ರೂಲ್ಸ್ ಏನು ಹಾಗೆ ಸಾಮಾಜಿಕ ಜಾಲತಾಣ ಬಳಕೆದಾರರು ಅದ್ರ ಬಗ್ಗೆ ಏನೆಲ್ಲ ಕಮೆಂಟ್ ಮಾಡಿದ್ದಾರೆ ಎನ್ನುವ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.

ಚೀನಾ (China) ದಲ್ಲಿ ಅಸಂತೋಷದ ರಜೆ ಪ್ರಯೋಗ ನಡೆಯುತ್ತಿದೆ. ಚಿಲ್ಲರೆ ಉದ್ಯಮಿಯೊಬ್ಬರು ಉದ್ಯೋಗಿ (Employee) ಗಳನ್ನು ಉತ್ತಮ ಕೆಲಸ (Work) ದ ಜೀವನಕ್ಕೆ ಪರಿಚಯಿಸಲು ಈ ರಜೆ (Leave) ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಚೀನಾ ಸೂಪರ್ಮಾರ್ಕೆಟ್ ವೀಕ್ ಸಮಯದಲ್ಲಿ, ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಚಿಲ್ಲರೆ ಸರಪಳಿಯಾದ ಪ್ಯಾಂಗ್ ಡಾಂಗ್ ಲೈನ ಸಂಸ್ಥಾಪಕ ಮತ್ತು ಅಧ್ಯಕ್ಷ ಯು ಡಾಂಗ್ಲೈ ಈ ಘೋಷಣೆ ಮಾಡಿದ್ದಾರೆ. ಮೂಡ್ ಸರಿ ಇಲ್ಲದ ಉದ್ಯೋಗಿಗಳಿಗೆ ಹತ್ತು ದಿನಗಳ ರಜೆ ಘೋಷಣೆ ಮಾಡೋದಾಗಿ ಅವರು ಹೇಳಿದ್ದಾರೆ. 

ಮೇಕಪ್ ಮಾಡ್ದೆ ಸಂದರ್ಶನಕ್ಕೆ ಹೋಗ್ತೀರಾ? ಕೆಲಸ ಕಳ್ಕೋಬಹುದು ಅಂತಿದ್ದಾರೆ ಈ ಮಹಿಳೆ

ಪ್ರತಿಯೊಬ್ಬ ಸಿಬ್ಬಂದಿಗೂ ಸ್ವಾತಂತ್ರ್ಯ ಸಿಗಬೇಕೆಂದು ನಾನು ಬಯಸುತ್ತೇನೆ. ಪ್ರತಿಯೊಬ್ಬ ಸಿಬ್ಬಂದಿಯೂ ಖುಷಿಯಾಗಿರದ ಸಮಯ ಬಂದೇ ಬರುತ್ತದೆ. ನೀವು ಖುಷಿಯಾಗಿಲ್ಲ ಎಂದಾದ್ರೆ ಕೆಲಸಕ್ಕೆ ಬರಬೇಡಿ, ಉದ್ಯೋಗಿಗಳು ತಮ್ಮ ವಿಶ್ರಾಂತಿ ಸಮಯವನ್ನು ಮುಕ್ತವಾಗಿ ನಿರ್ಧರಿಸಬೇಕೆಂದು ನಾನು ಬಯಸುತ್ತೇನೆ. ಅವರೆಲ್ಲರೂ ಕಚೇರಿಯಿಂದ ಹೊರಗೆ ಸಾಕಷ್ಟು ವಿಶ್ರಾಂತಿ ಸಿಗಬೇಕು. ಈ ರಜೆಯನ್ನು ಆಡಳಿತ ಮಂಡಳಿ ನಿರಾಕರಿಸುವಂತಿಲ್ಲ ಎಂದು ಡಾಂಗ್ಲೈ ಹೇಳಿದ್ದಾರೆ. 

ಅಸಂತೋಷದ ರಜೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ. ಬಹುತೇಕರು ಈ ರಜೆಯನ್ನು ಸ್ವಾಗತಿಸಿದ್ದಾರೆ. ಇಂಥ ಬಾಸ್ ಹಾಗೂ ಕಚೇರಿ ಸಂಸ್ಕೃತಿಯನ್ನು ದೇಶದಾದ್ಯಂತ ಎಲ್ಲ ಕಚೇರಿ ಅಳವಡಿಸಿಕೊಳ್ಳಬೇಕು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ಕಂಪನಿಯಲ್ಲಿ ಕೆಲಸ ಮಾಡಲು ನಾನು ಬಯಸ್ತೇನೆ, ನನಗೆ ಈ ಕಂಪನಿಯಲ್ಲಿ ಖುಷಿ ಹಾಗೂ ಗೌರವ ಸಿಗಬಹುದು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.   

ಚೀನಾದಲ್ಲಿ ಉದ್ಯೋಗಿಗಳ ಮೇಲೆ ಅಧ್ಯಯನವೊಂದು ನಡೆದಿದೆ. 2021ರಲ್ಲಿ ನಡೆದ ಅಧ್ಯಯನದ ಪ್ರಕಾರ ಕೆಲಸ ಮಾಡುವ ಶೇಕಡಾ 65ರಷ್ಟು ಜನರು ಸುಸ್ತು ಹಾಗೂ ದುಃಖವನ್ನು ಅನುಭವಿಸುತ್ತಾರೆ. 

ಇದಕ್ಕೂ ಮೊದಲು 2023ರಲ್ಲಿ ಕೂಡ ಯು ಡಾಂಗ್ಲೈ, ಉದ್ಯೋಗಿಗಳ ಪರ ಮಾತನಾಡಿದ್ದರು. ಕೆಲಸಗಾರರು ದೀರ್ಘ ಸಮಯ ಕೆಲಸ ಮಾಡಬೇಕು ಎಂಬ ಕಂಪನಿ ಮಾಲೀಕರ ಕ್ರಮವನ್ನು ಖಂಡಿಸಿದ್ದರು. ಇದು ಅನೈತಿಕತೆ ಎಂದಿದ್ದರು. ನಮ್ಮ ಕಂಪನಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂದೇನಿಲ್ಲ. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂತೋಷ ಹಾಗೂ ಆರೋಗ್ಯ ಮುಖ್ಯ ಎನ್ನುವ ಮೂಲಕ ಯು ಎಲ್ಲರ ಮನಸ್ಸು ಗೆದ್ದಿದ್ದರು. 

ಲೋಕಲ್‌ ಶಾಪ್‌ನಲ್ಲಿ 25 ಸಾವಿರ ವೇತನ, 'ಟಿಸಿಎಸ್‌ ಕೆಲ್ಸಕ್ಕೆ ರಿಸೈನ್‌ ಮಾಡೋದೇ ಬೆಸ್ಟ್‌' ಎಂದ ನೆಟ್ಟಿಗರು!

ಯುಕೆ ಉದ್ಯೋಗ ನೀತಿ ಕೂಡ ಇದನ್ನೇ ಹೇಳುತ್ತದೆ. ನೌಕರರು ದಿನಕ್ಕೆ ಏಳು ಗಂಟೆ ಮಾತ್ರ ಕೆಲಸ ಮಾಡಬೇಕು. ವಾರಾಂತ್ಯದಲ್ಲಿ ರಜೆ ತೆಗೆದುಕೊಳ್ಳಬೇಕು. 30 ರಿಂದ 40 ದಿನಗಳ ವಾರ್ಷಿಕ ರಜೆಯನ್ನು ನೀಡಬೇಕು. ಹೊಸ ವರ್ಷದ ಸಂದರ್ಭದಲ್ಲಿ ಅವರಿಗೆ ಐದು ದಿನಗಳ ರಜೆ ನೀಡಬೇಕು ಎಂಬ ನಿಯಮವಿದೆ. 

click me!