Instagram Post: ರಾಜೀನಾಮೆ ಪತ್ರದಲ್ಲಿ ಪರ್ಕ್, ಲಿಟಲ್ ಹಾರ್ಟ್, ಜೇಮ್ಸ್! ಇದು ಬೆಸ್ಟ್ ಎಂದ್ರು ನೆಟ್ಟಿಗರು

By Suvarna News  |  First Published Jul 25, 2023, 4:36 PM IST

ರೆಸ್ಯೂಮ್‌ನಂತೆ ರಾಜೀನಾಮೆ ಪತ್ರ ಕೂಡ ಆಕರ್ಷಕವಾಗಿರಬೇಕು. ಅದನ್ನು ಹೇಗೆ ಬರಿತೇವೆ ಅನ್ನೋದು ನಮ್ಮ ಟ್ಯಾಲೆಂಟ್ ಮೇಲೆ ನಿಂತಿದೆ. ಕೆಲ ಅತೀ ಬುದ್ಧಿವಂತರು ಬರೆಯುವ ರಾಜೀನಾಮೆ ಪತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತವೆ.
 


ಜನರು ಈಗ ಪ್ರತಿಯೊಂದು ವಿಷ್ಯದಲ್ಲೂ ಸೃಜನಶೀಲತೆಯನ್ನು ಇಷ್ಟಪಡ್ತಾರೆ. ವಾಟ್ಸ್ ಅಪ್, ಫೇಸ್ಬುಕ್ ನಂತಹ ಮದುವೆ ಕರೆಯೋಲೆ, ಹೊಸ ಹೊಸ ರೀತಿಯ ಫೋಟೋ ಶೂಟ್, ಮದುವೆ ಮೊದಲು ಸಿನಿಮಾ ಶೈಲಿಯಲ್ಲಿ ವಿಡಿಯೋ ಶೂಟ್ ಹೀಗೆ ಎಲ್ಲದರಲ್ಲೂ ಭಿನ್ನತೆಯನ್ನು ಜನರು ಹುಡುಕ್ತಿದ್ದಾರೆ. ಹಾಗೆ ನಿತ್ಯ ನಡೆಯುವ ಘಟನೆಗಳನ್ನು ತಮಾಷೆಯಾಗಿ ತೋರಿಸುವ ಜನರು ಅನೇಕರಿದ್ದಾರೆ. 

ಯಾವುದೇ ಕೆಲಸ (Work) ಕ್ಕೆ ಸೇರುವ ಮೊದಲು ನಾವು ನೀಡುವ ರೆಸ್ಯೂಮ್ (Resume) ಹೆಚ್ಚು ಮಹತ್ವ ಪಡೆಯುತ್ತದೆ. ಹಾಗಾಗಿ ಜನರು ಆಕರ್ಷಕ ರೆಸ್ಯೂಮ್ ಸಿದ್ಧಪಡಿಸ್ತಾರೆ. ಅದೇ ಕೆಲಸ ಬಿಡುವಾಗ, ಯಾವಾಗ ಕೆಲಸ ಬಿಡುತ್ತೇವಪ್ಪ ಎನ್ನುವ ಮೂಡ್ ನಲ್ಲಿ ಇರ್ತಾರೆ. ಹಾಗಾಗಿ ಏನೋ ಒಂದನ್ನು ಗೀಚಿ ಇಲ್ಲವೆ ಕಂಪನಿ ನೀಡುವ ಫಾರ್ಮ್ ಭರ್ತಿ ಮಾಡಿ, ಕೆಲಸಕ್ಕೆ ವಿದಾಯ ಹೇಳ್ತಾರೆ. ಆದರೆ ಕೆಲವರು ಈ ರೆಸಿಗ್ನೇಷನ್ ಲೆಟರ್ ನಲ್ಲೂ ಭಿನ್ನತೆ ತರುವ ಪ್ರಯತ್ನ ಮಾಡ್ತಾರೆ.ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಒಂದು ವೈರಲ್ ಆಗಿದೆ. ಆ ಫೋಟೋದಲ್ಲಿ ರೆಸಿಗ್ನೇಷನ್ ಲೆಟರ್ ಇದೆ. ಕೆಲಸ ಬಿಡ್ತಿದ್ದೇನೆ ಎನ್ನುವ ವಿಷ್ಯವನ್ನು ಭಿನ್ನವಾಗಿ ಹೇಳಲಾಗಿದೆ. ರಾಜೀನಾಮೆ ಪತ್ರದ ಮಧ್ಯ ಮಧ್ಯೆ ಕೆಲ್ಲಾಗ್ಸ್, ಲಿಟಲ್ ಹಾರ್ಟ್, ಪರ್ಕ್, ಗುಡ್ ಡೇ, 5 ಸ್ಟಾರ್, ಎವ್ರಿ ಡೇ, ಜೇಮ್ಸ್ ಎಲ್ಲದರ ರ್ಯಾಪರ್ ಅಂಟಿಸಲಾಗಿದೆ. 

Latest Videos

undefined

Bengaluru : ಫ್ರೀ ಐಸ್‌ ಕ್ರೀಮ್‌ಗಾಗಿ ಭರ್ಜರಿ ಡ್ಯಾನ್ಸ್‌, ನೀವು ಫಿದಾ ಆಗೋದು ಗ್ಯಾರಂಟಿ

Thescribbledstories ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ರಾಜೀನಾಮೆ ಪತ್ರದ ಫೋಟೋವನ್ನು ಹಂಚಿಕೊಳ್ಳಲಾಗಿದೆ. Instamart ಬಳಸಿಕೊಂಡು ನಿಮ್ಮ ಕೆಲಸವನ್ನು ಹೇಗೆ ತೊರೆಯುವುದು @swiggy_instamart ಎಂದು ಶೀರ್ಷಿಕೆ ಕೂಡ ಹಾಕಲಾಗಿದೆ.  ನಾನು ಈ ಸಂಸ್ಥೆಯಲ್ಲಿ ಒಳ್ಳೆ ದಿನವನ್ನು ಕಳೆದಿಲ್ಲ. ಈ ಕಂಪನಿಗೆ ರೇಟ್ ನೀಡ್ಬೇಕು ಅಂದ್ರೆ 10ರಲ್ಲಿ ಐದು ಕೊಡ್ತೇನೆ. ಇಲ್ಲಿ ಕೆಲಸ ಮಾಡೋದು ಪ್ರತಿ ಕ್ಷಣ ಕಷ್ಟವಾಗಿತ್ತು. ನಿಮ್ಮ ನಷ್ಟಕ್ಕೆ ಕ್ಷಮಿಸಿ. ನೀವು ರತ್ನವನ್ನು ಕಳೆದುಕೊಳ್ತಿದ್ದೀರಿ ಎಂದು ರಾಜೀನಾಮೆ ಪತ್ರದಲ್ಲಿ ಬರೆಯಲಾಗಿದೆ.ಸಮಾಜ ಎಂದು ಬಂದಾಗ ಸೊಸೈಟಿ ರ್ಯಾಪರ್ ಬಳಸಲಾಗಿದೆ. ಕೆಲ್ಲಾಗ್ಸ್ ಎಂದು ಬರೆಯುವ ಸಮಯದಲ್ಲಿ ಕೆಲ್ಲಾಗ್ಸ್ ರ್ಯಾಪರ್ ಅಂಟಿಸಲಾಗಿದೆ. ನಂತ್ರ ಲಿಟಲ್ ಹಾರ್ಟ್, ಪರ್ಕ್, ಗುಡ್ ಡೇ, 5 ಸ್ಟಾರ್, ಎವರಿ ಡೇ, ಜೇಮ್ಸ್ ರ್ಯಾಪರ್ ನೀವು ನೋಡ್ಬಹುದು. 

ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಈ ಫೋಟೋಕ್ಕೆ ಈವರೆಗೆ 1 ಲಕ್ಷದ 73 ಸಾವಿರಕ್ಕಿಂತಲೂ ಹೆಚ್ಚು ಲೈಕ್ಸ್ ಬಂದಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಸ್ವಿಗ್ಗಿ ಇನ್ಸ್ಟಾಮಾರ್ಟ್ ಕೂಡ ಕಮೆಂಟ್ ಮಾಡಿದೆ.
ಈ ರಾಜೀನಾಮೆ ಪತ್ರ ಓದಿದ ಎಚ್ ಆರ್, ಇವನೊಬ್ಬ ಚೈಲ್ಡಿಶ್. ಪುಣ್ಯ, ಕೆಲಸ ಬಿಟ್ಟು ಹೋದ ಎನ್ನುತ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ಲೆಟರ್ ಕೊನೆಯಲ್ಲಿ ಇಫ್ ಯುಎನ್ ಒ ಯುಎನ್ ಒ ಅಂತಾ ಸ್ಟಿಕ್ಕರ್ ಅಂಟಿಸಲಾಗಿದ್ದು, ಇದು ನಮಗೆ ಇಷ್ಟವಾಯ್ತು ಎಂದು ಅನೇಕ ಬಳಕೆದಾರರು ಬರೆದಿದ್ದಾರೆ. ಇದನ್ನು ಬರೆದ ವ್ಯಕ್ತಿ ತುಂಬಾ ಬುದ್ದಿವಂತ ಅಂತಾ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

ಬೆಂಗಳೂರು ಆಟೋ ಚಾಲಕರ ಹಗಲು ದರೋಡೆ, ಮುಂಬೈ ಮೂಲದ ಕಂಪನಿ ಸಿಇಒ ಟ್ವೀಟ್ ವೈರಲ್‌

ಹಿಂದಿನ ವರ್ಷ ಟ್ವಿಟರ್ ನಲ್ಲಿ ವ್ಯಕ್ತಿಯೊಬ್ಬರ ರಾಜೀನಾಮೆ ಪತ್ರ ಸುದ್ದಿಯಾಗಿತ್ತು. ಆತ ಕಂಪನಿಗೆ ಅಥವಾ ಬಾಸ್ ಗೆ ಧನ್ಯವಾದ ಕೂಡ ಹೇಳಿರಲಿಲ್ಲ. ನೇರವಾಗಿ ರಾಜೀನಾಮೆ ಪತ್ರ ಬರೆದಿದ್ದ. ಮಜಾ ಬರ್ತಿಲ್ಲ ಎಂದಷ್ಟೇ ಬರೆದು ರಾಜೀನಾಮೆ ಪತ್ರ ಸಲ್ಲಿಸಿದ್ದ. ಅದನ್ನು ನೋಡಿದ ಜನರು ಸಾಕಷ್ಟು ಕಮೆಂಟ್ ಮಾಡಿದ್ದರು. ಅತಿ ಸಿಂಪಲ್ ಆಗಿ ಬೈ ಬೈ ಅಂತಾ ಬರೆದು ರಾಜೀನಾಮೆ ಪತ್ರ ಮುಗಿಸಬಹುದು ಅಂತಾ ಕೆಲವರು ಕಮೆಂಟ್ ಮಾಡಿದ್ದರು. 
 

click me!