ಎಂದೋ ಬರುವ ಸಾವಿಗೆ ಇಂದ್ಯಾಕೆ ಹೆದರ್ಬೇಕು..? ಈ ಮಾತನ್ನು ಸುಲಭವಾಗಿ ಹೇಳ್ಬಹುದೇ ವಿನಃ ಅದನ್ನು ಸುಲಭವಾಗಿ ಸ್ವೀಕರಿಸೋದು ಎಲ್ಲರಿಗೂ ಸಾಧ್ಯವಿಲ್ಲ. ಸಾವು ಎಂದ ತಕ್ಷಣ ಹೆದರುವ ಜನರಿಗೆ ಇಲ್ಲೊಂದಿಷ್ಟು ಕಿವಿಮಾತಿದೆ.
ಜೀವನದ ಪಯಣಕ್ಕೊಂದು ಫುಲ್ ಸ್ಟಾಪ್ ಸಿಗೋದು ಸಾವಿನಿಂದ. ಹುಟ್ಟಿದ ವ್ಯಕ್ತಿಯನ್ನು ಸಾವು ಹಿಂಬಾಲಿಸೋದು ಸಹಜ. ಸಾವಿಲ್ಲದ ಮನೆಯಿರಲು ಸಾಧ್ಯವೇ ಇಲ್ಲ. ನಮ್ಮೆಲ್ಲ ಆಪ್ತರು ಸದಾ ನಮ್ಮ ಜೊತೆಗೆ ಇದ್ದಿದ್ರೆ ಈ ಜಗತ್ತು ತುಂಬಿ ತುಳುಕುತ್ತಿತ್ತು. ಸಾವು ಪ್ರಕೃತಿ ನಿಯಮವಾಗಿರೋದ್ರಿಂದ್ಲೇ ಎಲ್ಲರೂ ಆರಾಮವಾಗಿ ಜೀವನ ನಡೆಸೋದು. ಭೂಮಿ ಮೇಲೆ ಅಲ್ಪಸ್ವಲ್ಪ ಜಾಗ ಉಳಿದಿರೋದು. ಹತ್ತರಲ್ಲೋ, ಮೂವತ್ತರಲ್ಲೋ, ತೊಂಭತ್ತರಲ್ಲೋ ಸಾವು ಬರಲೇಬೇಕು. ಒಬ್ಬರಿಗೆ ಬೇಗ ಬಂದ್ರೆ ಮತ್ತೊಬ್ಬರಿಗೆ ಲೇಟಾಗಿ ಬರುತ್ತೆ. ಆದ್ರೆ ಸಾವಂತೂ ಬಂದೇ ಬರುತ್ತೆ ಅಲ್ವಾ? ಇದು ನಮಗೆ – ನಿಮಗೆ ತಿಳಿದಿದ್ರೂ ಅನೇಕರು ಸಾವೆಂದ್ರೆ ಬೆಚ್ಚಿ ಬೀಳ್ತಾರೆ. ಎಲ್ಲೋ, ಅದ್ಯಾವುದೋ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮನಸ್ಸು ವಿಲವಿಲ ಒದ್ದಾಡುತ್ತೆ. ನನ್ನ ಸರದಿ ಯಾವಾಗ, ಈಗ್ಲೇ ಬಂದ್ರೆ ಏನು ಮಾಡೋದು, ನನ್ನ ಕುಟುಂಬಸ್ಥರ ಸ್ಥಿತಿ ಏನು, ನಾನಿಲ್ಲದೆ ನಮ್ಮವರು ಹೇಗೆ ದಿನ ಕಳೆದಾರು, ಅಲ್ಲಿಗೆ ಹೋದ್ರೆ ನಾನು ಸಾಯ್ಬಹುದು, ಇಲ್ಲಿಗೆ ಹೋದ್ರೆ ನನಗೆ ಅಪಘಾತವಾಗ್ಬಹುದು ಎಂಬೆಲ್ಲ ಭಯ ಶುರುವಾಗುತ್ತದೆ. ಗೊತ್ತಿಲ್ಲದೆ ಮೈ ಬೆವರುತ್ತದೆ. ಅನೇಕರು ನರ್ವಸ್ ಗೆ ಒಳಗಾಗ್ತಾರೆ. ಉಸಿರುಗಟ್ಟಿದ ಅನುಭವಕ್ಕೊಳಗಾಗ್ತಾರೆ. ಏನು ಮಾಡೋದು ಎನ್ನುವ ಚಡಪಡಿಕೆ ಶುರುವಾಗುತ್ತದೆ. ಈ ಸಾವು ಅವರ ಮನೆಯಲ್ಲೇ ಆಗಿದ್ದು, ಆಪ್ತರನ್ನು ಕಳೆದುಕೊಂಡಿದ್ದರೆ ಭಯ ಡಬಲ್ ಆಗುತ್ತೆ.
ಒಂದಲ್ಲ ಒಂದು ಕಾರಣಕ್ಕೆ ಭಯಪಡುವ, ದುರ್ಬಲ ಮನಸ್ಸಿನ, ನಕಾರಾತ್ಮಕ ಆಲೋಚನೆ ಮಾಡುವ ಜನರಲ್ಲಿ ಈ ಹೆದರಿಕೆ ಹೆಚ್ಚು. ಅದ್ರಿಂದ ದೂರ ಬರದೆ ಹೋದ್ರೆ ನಿಮ್ಮ ಜೀವನ ಮತ್ತಷ್ಟು ದುಸ್ತರವಾಗುತ್ತೆ. ಈ ಒಂದೇ ಒಂದು ಭಯ ನಿಮ್ಮ ಇಡೀ ಜೀವನವನ್ನು ಹಾಳು ಮಾಡುತ್ತೆ. ಇರುವ ಒಂದು ಜೀವನವನ್ನು ಸುಂದರವಾಗಿ ಕಳೆಯಬೇಕೆಂದ್ರೆ ಕೆಲವೊಂದು ಸತ್ಯಗಳನ್ನು ನೀವು ಒಪ್ಪಿಕೊಳ್ಳಬೇಕು. ಭಯವನ್ನು ದೂರ ಮಾಡಬೇಕು.
ಗಂಡ-ಹೆಂಡ್ತಿಯರಿಗೆ ಪರಸ್ಪರ ಲವ್ ಜಾಸ್ತಿಯಾದಾಗ ಹೀಗೆಲ್ಲಾ ಹೇಳ್ತಾರಂತೆ ನೋಡಿ... ನೀವೇನ್ ಕರಿತೀರಾ?
ಸಾವಿನ (Death) ಭಯ ದೂರ ಮಾಡೋದು ಹೇಗೆ? : ಸಾವಿನ ಮೇಲೆ ಯಾರಿಗೂ ನಿಯಂತ್ರಣವಿಲ್ಲ ಎಂಬುದನ್ನು ಒಪ್ಪಿಕೊಳ್ಳಿ. ಜಗತ್ತಿನ ಯಾವುದೇ ಶಕ್ತಿಯು ನಿಯಂತ್ರಿಸಲಾಗದ ವಿಷ್ಯದ ಬಗ್ಗೆ ನೀವು ಭಯಪಟ್ಟು ಪ್ರಯೋಜನವಿಲ್ಲ. ನೀವು ಎಲ್ಲೇ ಅಡಗಿ ಕುಳಿತಿದ್ದರೂ ಸಾವು ಬರುವ ಟೈಂನಲ್ಲಿ ಬಂದೇ ಬರುತ್ತೆ. ಈ ಸತ್ಯ (Truth) ವನ್ನು ನೀವು ಒಪ್ಪಿಕೊಳ್ಳಬೇಕು. ಸಾವಿನ ಬಗ್ಗೆ ಆಲೋಚನೆ ಮಾಡುವ ಪ್ರಯತ್ನಕ್ಕೆ ಹೋಗ್ಬೇಡಿ. ಸಾವಿನ ಬಗ್ಗೆ ನಿಮ್ಮ ಮನಸ್ಸು ಆಲೋಚನೆ ಮಾಡ್ತಿದ್ದರೆ ಅದನ್ನು ಎಳೆದು ತನ್ನಿ.
undefined
ನಿಮ್ಮ ಜೀವನದಲ್ಲಿ ಹಿಂದೆ ನಡೆದಿದ್ದನ್ನು ತಿದ್ದಲು ಸಾಧ್ಯವಿಲ್ಲ. ಮುಂದೆ ನಡೆಯೋದು ನಿಮಗೆ ಗೊತ್ತಿಲ್ಲ. ಅಂದ್ಮೇಲೆ ನಿಮ್ಮ ಕೈನಲ್ಲಿರೋದು ಈ ಕ್ಷಣ. ಇದೇ ನಿಮ್ಮ ಕೊನೆ ಕ್ಷಣ ಎನ್ನುವಂತೆ ಅದನ್ನು ಆನಂದಿಸಿ. ನಿಮ್ಮಿಷ್ಟದ ಕೆಲಸ ಮಾಡಿ. ಪ್ರೀತಿ ಪಾತ್ರರ ಜೊತೆ ಸಮಯ ಕಳೆಯಿರಿ. ಎಲ್ಲ ಕೆಲಸವನ್ನು ಎಂಜಾಯ್ ಮಾಡ್ತಾ ಮಾಡಿ. ಅದು ಮುಂದೆ ನಿಮಗೊಂದು ಸುಂದರ ನೆನಪಾಗಿರುತ್ತದೆ.
ಸಣ್ಣ ಕೆಲಸ, ವಿಷ್ಯಕ್ಕೂ ನೀವು ಪ್ರಾಮುಖ್ಯತೆಯನ್ನು ನೀಡ್ತಾ ಬಂದಾಗ ಸಾವು ಎಂಬ ಭಯ ನಿಮ್ಮಿಂದ ದೂರವಾಗುತ್ತದೆ. ನಿಮ್ಮ ಸಂಪೂರ್ಣ ಗಮನ ಕೆಲಸದ ಮೇಲಿರುವ ಕಾರಣ ನೀವು ಅದ್ರಲ್ಲಿ ಬ್ಯುಸಿಯಾಗ್ತಿರಿ. ನಿಮ್ಮ ಮನಸ್ಸು ಅನವಶ್ಯಕ ಆಲೋಚನೆ ಮಾಡಲು ಸಮಯವಿರೋದಿಲ್ಲ.
ಆರೋಗ್ಯಕರವಾಗಿ ತೂಕ ಹೆಚ್ಚಿಸ್ಬೇಕಾ? ಈ 8 ಹಣ್ಣುಗಳನ್ನು ಪ್ರತಿ ದಿನ ಸೇವಿಸಿ
ಸಾವಿನ ಸುದ್ದಿ ಕೇಳಿದ ತಕ್ಷಣ ನಿಮ್ಮ ಮನಸ್ಸು ದುರ್ಬಲವಾಗ್ತಿದೆ ಎಂದ್ರೆ ಅಲ್ಲಿಂದ ಹೊರಗೆ ನಡೆಯಿರಿ. ಮನಸ್ಸು ಬದಲಿಸುವ ಹಾಡು, ದೃಶ್ಯಗಳನ್ನು ವೀಕ್ಷಿಸಿ. ನಿಮ್ಮಿಷ್ಟದ ಕೆಲಸ ಮಾಡಿ ಇಲ್ಲವೆ ಪುಸ್ತಕ ಓದಿ. ವ್ಯಕ್ತಿಯ ಸಾವಿನ ಸತ್ಯವನ್ನು ನೀವು ಕೆಣಕ್ತಾ ಹೋದಂತೆ ಟೆನ್ಷನ್ ಜಾಸ್ತಿಯಾಗುತ್ತದೆ. ಆತ ಸತ್ತ ಅಷ್ಟೆ. ಆತ ಹೇಗೆ ಸತ್ತ, ಯಾಕೆ ಸತ್ತ, ಏನಾಗಿತ್ತಂತೆ ಎಂಬೆಲ್ಲ ವಿವರ ಕೇಳ್ತಾ ಹೋದ್ರೆ ನಿಮ್ಮ ಮನಸ್ಸು ಮತ್ತಷ್ಟು ದುರ್ಬಲವಾಗುತ್ತದೆ. ಇದ್ರಿಂದ ಹೊರಗೆ ಬರಲು ನೀವು ಧ್ಯಾನ, ಯೋಗ, ವ್ಯಾಯಾಮ, ವಾಕಿಂಗ್ ಸಹಾಯ ಪಡೆಯಬಹುದು. ಸಾವಿನ ಭಯ ಅತಿರೇಕದಲ್ಲಿದೆ ಎಂದಾಗ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.