ಮದ್ವೆಯಾಗಿ ವರ್ಷದಲ್ಲೇ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿಗೆ ಇಷ್ಟು ದೊಡ್ಡ ಮಗನಾ? ಫೋಟೋಗೆ ಫ್ಯಾನ್ಸ್ ಶಾಕ್!
ಬಾಲಿವುಡ್ನ ಕ್ಯೂಟ್ ಜೋಡಿಗಳಲ್ಲಿ ಒಂದು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ ಅವರದ್ದು. 2023ರ ಫೆಬ್ರವರಿ 7ರಂದು ಈ ಜೋಡಿ ಹಸೆಮಣೆ ಏರಿದೆ. ಕಿಯಾರಾ ಮತ್ತು ಸಿದ್ಧಾರ್ಥ್ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸಿದರೂ ಆಗಾಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಕೆಲವು ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಈ ಜೋಡಿ, ಒಂದು ಮುದ್ದಾದ ಬಾಲಕನ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳನ್ನು ದಂಗುಬಡಿಸಿದ್ದಾರೆ! ಮದುವೆಯಾಗಿ ಒಂದೂವರೆ ವರ್ಷಕ್ಕೆ ಸದ್ದಿಲ್ಲದೇ ಇಷ್ಟು ದೊಡ್ಡ ಮಗ ಎಲ್ಲಿಂದ ಬಂದ ಎಂದು ಪ್ರಶ್ನೆಗಳ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಈ ಬಾಲಕ ಯಾರು, ಏನು, ಎತ್ತ ಎನ್ನುವ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಆದರೆ ತಮ್ಮದೇ ಮಗುವಿನಂತೆ ಈ ದಂಪತಿ ಫೋಟೋ ಶೇರ್ ಮಾಡಿಕೊಂಡಿದ್ದು ಮಾತ್ರ ಸಕತ್ ಚರ್ಚೆಗೆ ಗ್ರಾಸವಾಗುತ್ತಿದೆ.
ಕೆಲ ತಿಂಗಳ ಹಿಂದಷ್ಟೇ, ಕಿಯಾರಾ ಅವರ ಒಂದು ಫೋಟೋ ಸಕತ್ ವೈರಲ್ ಆಗಿತ್ತು. ವೈರಲ್ ಮಾತ್ರವಲ್ಲದೇ ಸುದ್ದಿಯನ್ನೂ ಮಾಡಿತ್ತು. ಸತ್ಯಪ್ರೇಮ್ ಕಿ ಕಥಾ ಸಿನಿಮಾ ಪ್ರಚಾರಕ್ಕಾಗಿ ಕಿಯಾರಾ ಅಡ್ವಾಣಿ ರಾಜಸ್ಥಾನಕ್ಕೆ ಭೇಟಿ ನೀಡಿದ್ದಾಗ ತೆಗೆದ ಫೋಟೋ ಇದು. ಅರಮನೆ ನಗರಿಗೆ ಬಂದ ಕಿಯಾರಾ ಅಡ್ವಾಣಿ ಜೈಪುರದಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋ ನೋಡಿದವರು ಕಿಯಾರಾ ಗರ್ಭಿಣಿ ಎಂದು ಹೇಳಲು ಶುರು ಮಾಡಿದ್ದರು. ಬೇಬಿ ಬಂಪ್ ಕಾಣಿಸುತ್ತಿದೆ ಎಂದು ಕಮೆಂಟ್ ಹಾಕಿದ್ದರು. ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದ್ದು, ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆಯೇ ಕಿಯಾರಾ ಅಡ್ವಾಣಿ ಅವರಿಗೆ ಚಪ್ಪಲಿ ಹಾಕಿಕೊಳ್ಳಲು ಕಾರ್ತಿಕ್ ಆರ್ಯನ್ ಸಹಾಯ ಮಾಡಿದ್ದರು. ಅದರ ವಿಡಿಯೋ ವೈರಲ್ ಆಗಿತ್ತು. ಆಗ ನೆಟ್ಟಿಗರು ಬಹಳ ಶ್ಲಾಘನೆ ವ್ಯಕ್ತಪಡಿಸಿದ್ದರು. ಈಗ ಪತ್ನಿ ಗರ್ಭಿಣಿ ಎನ್ನುವ ಕಾರಣಕ್ಕೆ ಹೀಗೆ ಮಾಡಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದರು.
ನಟಿ ಸುಮಲತಾ ಅಂಬರೀಶ್‌ಗೆ ಬ್ಯೂಟಿ ಕ್ವೀನ್ ಕಿರೀಟ: ಕುತೂಹಲದ ಮಾಹಿತಿ ಶೇರ್ ಮಾಡಿದ ಸಂಸದೆ
ಆಗ ಸೈಲೆಂಟ್ ಇದ್ದ ಕಿಯಾರಾ (Kiara Advani) ಕೊನೆಗೆ, ತಮ್ಮ ಗರ್ಭಧಾರಣೆ ಕುರಿತು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಕಾರಣ, ಅವರು ಪ್ರೆಗ್ನೆಂಟ್ ಇರುವ ಬಗ್ಗೆ ಮತ್ತೆ ಸುದ್ದಿಯಾಗಿದ್ದರಿಂದ. ಮದುವೆಯ ನಂತರ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದಾರೆ. ಮದುವೆಯ ನಂತರವೂ ಸಿನಿಮಾ ಮಾಡುವುದರಲ್ಲಿ ಸಕ್ರಿಯರಾಗಿರುವ ಈ ಜೋಡಿ ಇದುವರೆಗೂ ಮಕ್ಕಳ ಬಗ್ಗೆ ಯೋಚನೆ ಮಾಡಿಲ್ಲ. ಆದರೆ ಫ್ಯಾನ್ಸ್ ಸುಮ್ಮನೆ ಬಿಡಬೇಕಲ್ಲ, ಅವರಿಗೆ ಮಗುವಿನದ್ದೇ ಚಿಂತೆ. ಬಹುಶಃ ಈ ಮಾತನ್ನು ಕೇಳಿ ಕೇಳಿ ಖುದ್ದು ಕಿಯಾರಾ ಅವರಿಗೂ ಸುಸ್ತಾಗಿ, ತಮ್ಮ ಗರ್ಭಧಾರಣೆ ಕುರಿತು ಮಾಹಿತಿ ನೀಡಿದ್ದರು. ಆದರೆ ಫನ್ನಿಯಾಗಿ ರಿಪ್ಲೈ ಕೊಟ್ಟಿದ್ದರು.
undefined
ಕೆಲ ವರ್ಷಗಳಿಂದಲೂ ಗರ್ಭಧಾರಣೆಯ ಬಗ್ಗೆ ಯೋಚಿಸುತ್ತಿದ್ದೆ. ಗರ್ಭಿಣಿಯಾಗಲು (Pregnant) ಬಹಳ ದಿನಗಳಿಂದ ಬಯಸಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಅವರು ಕೊಟ್ಟಿರೋ ಕಾರಣ ಮಾತ್ರ ಸಕತ್ ಫನ್ನಿಯಾಗಿದೆ. ನನಗೆ ಗರ್ಭಿಣಿಯಾಗಲು ಇಷ್ಟ ಏಕೆಂದರೆ... ಆ ಸಮಯದಲ್ಲಿ ಏನು ಬೇಕಾದರೂ ತಿನ್ನಬಹುದು, ಅದೂ ತಿನ್ನಬೇಡ, ಇದು ತಿನ್ನಬೇಡ ಎಂದು ತಡೆಯುವವರು ಯಾರೂ ಇರುವುದಿಲ್ಲ. ಏಕೆಂದರೆ ಗರ್ಭಿಣಿಗೆ ಬಯಕೆ ಇರುತ್ತದೆ ಎಂದು ಸುಮ್ಮನಾಗ್ತಾರೆ. ಅದಕ್ಕೇ ನನಗೆ ಗರ್ಭ ಧರಿಸಲು ಇಷ್ಟವಿದೆ ಎಂದು ನಕ್ಕಿರುವ ನಟಿ, ಹುಟ್ಟುವ ಮಗು ಗಂಡು ಅಥವಾ ಹೆಣ್ಣು ಯಾವುದು ಆದರೂ ಪರವಾಗಿಲ್ಲ. ಆರೋಗ್ಯವಾಗಿದ್ರೆ ಸಾಕು ಎಂದಿದ್ದರು. ಆದರೆ ಇದೀಗ ಬಾಲಕನ ಜೊತೆ ಅವರ ಫೋಟೋ ವೈರಲ್ ಆಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮಗುವಿಗಾಗಿ ಬಾಲ್ಕನಿಗೆ ಸೇಫ್ಟಿ ಮಾಡಿದ ವೈಷ್ಣವಿ ಗೌಡ! ಮನೆಯಲ್ಲಿ ಏನೇನಿವೆ? ಹೋಮ್ ಟೂರ್ ವಿಡಿಯೋ ವೈರಲ್