ತಮ್ಮ ಲಿಂಗ ಮತ್ತು ಹೆಸರು ಬದಲಾವಣೆಯನ್ನು ಮಾಡಿಕೊಳ್ಳುವುದಕ್ಕೆ ಅನುಮತಿ ನೀಡುವಂತೆ ಕೋರಿ ಭಾರತೀಯ ಕಂದಾಯ ಸೇವೆ( ಐಆರ್‌ಎಸ್) ಅಧಿಕಾರಿ ಸಲ್ಲಿಸಿದ್ದ ಮನವಿಗೆ ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ.
ನವದೆಹಲಿ: ತಮ್ಮ ಲಿಂಗ ಮತ್ತು ಹೆಸರು ಬದಲಾವಣೆಯನ್ನು ಮಾಡಿಕೊಳ್ಳುವುದಕ್ಕೆ ಅನುಮತಿ ನೀಡುವಂತೆ ಕೋರಿ ಭಾರತೀಯ ಕಂದಾಯ ಸೇವೆ( ಐಆರ್‌ಎಸ್) ಅಧಿಕಾರಿ ಸಲ್ಲಿಸಿದ್ದ ಮನವಿಗೆ ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ.
ನಾಗರಿಕ ಸೇವೆ ಅಧಿಕಾರಿಯೊಬ್ಬರ ಈ ರೀತಿಯ ಅಪರೂಪದ ಮನವಿಯನ್ನು ಒಪ್ಪಿಕೊಂಡಿರುವುದು ದೇಶದಲ್ಲೇ ಇದು ಮೊದಲು .2013ರ ಬ್ಯಾಚ್‌ನ ಮಹಿಳಾ ಅಧಿಕಾರಿ ಎಂ ಅನುಸೂಯ ಎನ್ನುವವರು ಸರ್ಕಾರಕ್ಕೆ ಈ ರೀತಿಯ ಮನವಿಯೊಂದನ್ನು ಮಾಡಿಕೊಂಡಿದ್ದರು. ತಮ್ಮ ಹೆಸರನ್ನ ಅನುಸೂಯ ಬದಲು ಅನುಕತಿರ್ ಸೂರ್ಯ ಎಂದು ಬದಲಾಯಿಸಲು ಮತ್ತು ಹೆಣ್ಣಿನಿಂದ ಪುರುಷನಾಗಿ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಅನುಸೂಯ ಕೋರಿದ್ದರು. ಇದಕ್ಕೆ ಈಗ ಭಾರತೀಯ ಕಂದಾಯ ಇಲಾಖೆ ಸಮ್ಮತಿ ಸೂಚಿಸಿದೆ.
undefined
ಹಿರಿಯ ಅಧಿಕಾರಿಗಳು ಇದನ್ನು ಪ್ರಗತಿಪರ ನಡೆ ಎಂದು ಶ್ಲಾಘಿಸಿದ್ದಾರೆ. ಅಲ್ಲದೇ ಮನವಿಗೆ ಅನುಮತಿ ನೀಡಿ ಎಲ್ಲ ಅಧಿಕೃತ ದಾಖಲೆಗಳಲ್ಲಿ ಎಂ ಅನುಕತಿರ್ ಸೂರ್ಯ ಎಂದು ಗುರುತಿಸಲಾಗುತ್ತದೆ ಎಂದು ಹಣಕಾಸು ಸಚಿವಾಲಯ ತನ್ನ ಆದೇಶದಲ್ಲಿ ಹೇಳಿದೆ.
ಮದುವೆಯಾಗಿ, ಮಕ್ಕಳಾದ್ಮೇಲೆ ಹೆಂಡತಿಯಾಗಿ ಬದಲಾದ ಗಂಡ! ಅಯ್ಯೋ ಹೆಂಡ್ತಿ ಕಥೆ!