ಭಾರತದ ಈ ಹಳ್ಳಿಯಲ್ಲಿ ಮದುವೆಯಾದ ಒಂದು ವಾರದವರೆಗೆ ಬಟ್ಟೆಯನ್ನೇ ಧರಿಸುವಂತಿಲ್ಲ ವಧು

By Anusha Kb  |  First Published Sep 23, 2024, 4:55 PM IST

ಭಾರತದಲ್ಲಿನ ಕೆಲವು ಸಮುದಾಯಗಳಲ್ಲಿ ವಿಭಿನ್ನವಾದ ಮದುವೆ ಸಂಪ್ರದಾಯಗಳಿವೆ. ಒಂದು ಸಮುದಾಯದಲ್ಲಿ ವರನ ಬಟ್ಟೆ ಹರಿದು ಹಾಕಿದರೆ, ಇನ್ನೊಂದೆಡೆ ವಧು ಮದುವೆಯ ನಂತರ ವಾರಗಳ ಕಾಲ ಬಟ್ಟೆಯನ್ನೇ ಧರಿಸುವಂತಿಲ್ಲ. 


ಭಾರತ ವೈವಿಧ್ಯಮಯ ದೇಶ, ಇಲ್ಲಿನ ಸಂಸ್ಖೃತಿ  ಸಂಪ್ರದಾಯಗಳು ಆಚಾರ ವಿಚಾರಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಒಂದು ಜನಾಂಗದಿಂದ ಮತ್ತೊಂದು ಜನಾಂಗಕ್ಕೆ ಒಂದು ಸಮುದಾಯದಿಂದ ಮತ್ತೊಂದು ಸಮುದಾಯಕ್ಕೆ ತೀರಾ ವಿಭಿನ್ನ. ಹೀಗಿರುವಾಗ ಭಾರತದಲ್ಲೂ ನಾಗರಿಕ ಸಮಾಜದ ಕಣ್ಣಿಗೆ ವಿಚಿತ್ರ ವಿಲಕ್ಷಣ ಎನಿಸುವ ಮದುವೆ ಸಂಪ್ರದಾಯಗಳನ್ನು ಪಾಲಿಸುವ ಕೆಲ ಸಮುದಾಯಗಳಿವೆ. ಆ ಬಗ್ಗೆ ಒಂದು ವರದಿ ಇಲ್ಲಿದೆ.

ಮೊದಲೇ ಹೇಳಿದಂತೆ ಭಾರತದಲ್ಲಿ ಮದುವೆ ಸಂಪ್ರದಾಯಗಳು ಆಯಾಯ ಸಮುದಾಯದ ಸಂಸ್ಕೃತಿ ಸಂಪ್ರದಾಯಕ್ಕೆ ತಕ್ಕಂತೆ ತೀರಾ ವಿಭಿನ್ನ. ಕೆಲವು ಸಮುದಾಯಗಳಲ್ಲಿ ಮದುವೆಯಾದ ನಂತರ ಬಟ್ಟೆಗಳನ್ನು ಹರಿದು ಹಾಕಲಾಗುತ್ತದೆ. ಇನ್ನು ಕೆಲವು ಸಮುದಾಯಗಳಲ್ಲಿ ವಧು ಹಾಗೂ ವರನನ್ನು ರೂಮ್‌ನಲ್ಲಿ ಲಾಕ್ ಮಾಡಲಾಗುತ್ತದೆ. ಅದೇ ರೀತಿ ನಾವಿಂದು ತುಂಬಾ ವಿಭಿನ್ನವಾದ ಮದುವೆ ಸಂಪ್ರದಾಯವೊಂದರ ಬಗ್ಗೆ ನಿಮಗೆ ತಿಳಿಸುತ್ತೇವೆ. 

Latest Videos

undefined

ವಾರಕ್ಕೊಬ್ಬ ಸಂಗಾತಿಯ ಜೊತೆಗೆ ಲಿವ್‌ ಇನ್‌ ರಿಲೇಷನ್‌ಶಿಪ್!‌ ಭಾರತದಲ್ಲೇ ಇದೆ ಈ ವಿಚಿತ್ರ ಸಂಪ್ರದಾಯ!

ಭಾರತದ ಹಲವು ಭಾಗಗಳಲ್ಲಿ ಮದುವೆ ಒಂದು ಅದ್ದೂರಿಯಾದ ಸಂಭ್ರಮ, ಸಂತಸದಿಂದ ಕೂಡಿದ, ಬಂಧು ಬಳಗವೆಲ್ಲಾ ಒಟ್ಟು ಸೇರುವ ಸುಂದರ ಸಂಭ್ರಮ. ಆದರೆ ಕೆಲವೆಡೆ ನಡೆಯುವ ಮದುವೆ ಸಂಪ್ರದಾಯಗಳು ನಿಮ್ಮನ್ನು ಅಚ್ಚರಿಗೆ ದೂಡುತ್ತವೆ. ಇದು ಭಾರತದಲ್ಲಿಯೇ ನಡೆಯುತ್ತಿರುವ ಸಂಪ್ರದಾಯ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಇಲ್ಲಿ ಒಂದು ಸಮುದಾಯದಲ್ಲಿ ಇಡೀ ಕುಟುಂಬದವರೆಲ್ಲಾ ಕುಳಿತು ವರನ ಬಟ್ಟೆಯನ್ನು ಹರಿಯುವ ಸಂಪ್ರದಾಯವಿದ್ದರೆ, ಇನ್ನೊಂದು ಸಮುದಾಯದಲ್ಲಿ  ಮದುವೆಯಾದ ನಂತರ ವಧು ಬಟ್ಟೆಯನ್ನೇ ಧರಿಸುವುದಿಲ್ಲ, ಮತ್ತೊಂದು ಕಡೆ ವಧುವರರಿಗೆ ಟೊಮೆಟೋ ಎಸೆದು ಸ್ವಾಗತಿಸುವ ವಿಚಿತ್ರ ಸಂಪ್ರದಾಯವಿದೆ. 

ಅದೇ ರೀತಿ ಭಾರತದ ಈ ಹಳ್ಳಿಯೊಂದರಲ್ಲಿನ ಸಮುದಾಯದಲ್ಲಿ ಮದುವೆಯಾದ ಒಂದು ವಾರದವರೆಗೆ ವಧು ಬಟ್ಟೆಯನ್ನೇ ಧರಿಸುವಂತಿಲ್ಲ, ಅಲ್ಲದೇ ಈ ಸಮಯದಲ್ಲಿ ಗಂಡ ಹಾಗೂ ಹೆಂಡತಿ ಪರಸ್ಪರ ಮಾತನ್ನು ಆಡಲ್ಲ, ಅಲ್ಲದೇ ಇಬ್ಬರನ್ನು ಪ್ರತ್ಯೇಕವಾಗಿ  ಪರಸ್ಪರ ದೂರ ಇಟ್ಟಿರುತ್ತಾರೆ.  ಹಿಮಾಚಲ ಪ್ರದೇಶದ ಮಣಿಕರನ್‌ ಕಣಿವೆಯಲ್ಲಿ ಇರುವ ಪಿನಿ ಎಂಬ ಗ್ರಾಮದಲ್ಲಿ ಈ ವಿಚಿತ್ರ ಸಂಪ್ರದಾಯವಿದೆ. ಮದುವೆಯ ನಂತರ ವಧು ಒಂದು ವಾರಗಳ ಕಾಲ ಇಲ್ಲಿ  ಸಂಪೂರ್ಣ ಬೆತ್ತಲಾಗಿರಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ಆಕೆಗೆ ಋತ್ರುಸ್ರಾವವಾದಲ್ಲಿ ಉಣ್ಣೆಯಿಂದ ಮಾಡಿದ್ದ ಬೆಲ್ಟೊಂದನ್ನು ಮಾತ್ರ ಈಕೆ ಧರಿಸಬಹುದಾಗಿದೆ. 

ಒಂದೇ ಹುಡುಗಿಯನ್ನ ಮದುವೆ ಆಗ್ತಾರೆ ಕುಟುಂಬದ ಎಲ್ಲಾ ಸೋದರರು : ಹೀಗೆ ನಿರ್ಧಾರವಾಗುತ್ತೆ ಏಕಾಂತದ ಸಮಯ!

ಇದು ಶ್ರಾವಣ ಮಾಸದ ಐದು ದಿನಗಳ ಕಾಲ ಬಟ್ಟೆ ಧರಿಸದೇ ಸಂಪೂರ್ಣ ಬೆತ್ತಲಾಗಿರುವ ಪಿಣಿ ಗ್ರಾಮದ ಕೆಲ ಸಮುದಾಯದ ಮಹಿಳೆಯರ ಸಂಪ್ರದಾಯವನ್ನೇ ಹೋಲುವಂತಿದೆ. ಇಲ್ಲಿ ಶ್ರಾವಣ ಮಾಸದಲ್ಲಿ ಮಹಿಳೆ  ಬಟ್ಟೆ ಧರಿಸುವುದಿಲ್ಲ, ಇತ್ತ ಪುರುಷನಿಗೂ ಕೆಲ ನಿಯಮಗಳಿದ್ದು, ಪುರುಷ ಈ ಐದು ದಿನಗಳ ಕಾಲ ಯಾವುದೇ ಮದ್ಯಪಾನ ಮಾಡುವಂತಿಲ್ಲ, ಅಲ್ಲದೇ ಮಾಂಸವನ್ನು ಕೂಡ ಸೇವಿಸುವಂತಿಲ್ಲ, ಸ್ತ್ರೀ ಹಾಗೂ ಪುರುಷ ಇಬ್ಬರೂ ಈ ಸಂಪ್ರದಾಯವನ್ನು ಅನುಸರಿಸಿದರೆ ಅವರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

click me!