ಕೆಲವು ಕಾಯಿಲೆಗಳಾದ ಮೂತ್ರನಾಳದ ಸೋಂಕು, ರಕ್ತದ ಸೋಂಕು, ನ್ಯುಮೋನಿಯಾ ಟೈಫಾಯಿಡ್ ಮುಂತಾದ ಕಾಯಿಲೆಗಳಿಗೆ ನೀಡುವ ಪ್ರತಿರೋಧಕ ರೋಗ ನಿರೋಧಕಗಳು (antibiotics) ಮೊದಲಿನಂತೆ ಸರಿಯಾಗಿ ಕೆಲಸ ಮಾಡುವುದೇ ಇಲ್ಲ. ಈ ರೋಗಗಳನ್ನು ಉಂಟು ಮಾಡುತ್ತಿರುವ ಬ್ಯಾಕ್ಟಿರೀಯಾಗಳು ಈ ಆಂಟಿಬಯೋಟಿಕ್‌ಗೆ ಸ್ಪಂದಿಸುವುದೇ ಇಲ್ಲ ಹೀಗಾಗಿ ಈ ರೋಗಗಳಿಗೆ ಚಿಕಿತ್ಸೆ ನೀಡುವುದು ಕೂಡ ಈಗ ವೈದ್ಯರಿಗೆ ಸವಾಲಾಗಿದೆ.
ನವದೆಹಲಿ: ಕಫ, ಕೆಮ್ಮು, ಜ್ವರ ಎಂದೆಲ್ಲಾ ನಾವು ಅಲೋಪತಿ ವೈದ್ಯರ ಬಳಿ ಹೋದಾಗ ಬಹುತೇಕರು ತಪಾಸಣೆ ಮಾಡಿ ಔಷಧದ ಜೊತೆ ರೋಗ ಹಬ್ಬದಂತೆ ಆಂಟಿ ಬಯೋಟಿಕ್ ಮಾತ್ರೆಗಳನ್ನು ಕೂಡ ನೀಡುವುದನ್ನು ನೀವೆಲ್ಲಾ ಗಮನಿಸಿರ್ತಿರಾ, ಆದರೆ ಕೆಲವೊಂದು ರೋಗಗಳಿಗೆ ಈ ಆಂಟಿ ಬಯೋಟಿಲ್ ಮಾತ್ರೆಗಳು ಕೆಲಸವೇ ಮಾಡೋದಿಲ್ಲ ಎಂಬ ಆಘಾತಕಾರಿ ಅಂಶವೊಂದನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR)ನ ಸಮಿತಿಯೊಂದು ಬಹಿರಂಗಪಡಿಸಿದೆ.
ಕೆಲವು ಕಾಯಿಲೆಗಳಾದ ಮೂತ್ರನಾಳದ ಸೋಂಕು(urinary tract infections)ರಕ್ತದ ಸೋಂಕು, ನ್ಯುಮೋನಿಯಾ ಟೈಫಾಯಿಡ್ ಮುಂತಾದ ಕಾಯಿಲೆಗಳಿಗೆ ನೀಡುವ ಪ್ರತಿರೋಧಕ ರೋಗ ನಿರೋಧಕಗಳು (antibiotics) ಮೊದಲಿನಂತೆ ಸರಿಯಾಗಿ ಕೆಲಸ ಮಾಡುವುದೇ ಇಲ್ಲ, ಹೀಗಾಗಿ ಈ ರೋಗಗಳಿಗೆ ಚಿಕಿತ್ಸೆ ನೀಡುವುದು ಕಷ್ಟಕರವಾಗುತ್ತಿದೆ ಎಂದು ವೈದ್ಯರ ಸಮಿತಿಯೊಂದು ಹೇಳಿದೆ. ಈ ರೋಗಗಳನ್ನು ಉಂಟು ಮಾಡುತ್ತಿರುವ ಬ್ಯಾಕ್ಟಿರೀಯಾಗಳು ಈ ಆಂಟಿಬಯೋಟಿಕ್‌ಗೆ ಸ್ಪಂದಿಸುವುದೇ ಇಲ್ಲ ಹೀಗಾಗಿ ಈ ರೋಗಗಳಿಗೆ ಚಿಕಿತ್ಸೆ ನೀಡುವುದು ಕೂಡ ಈಗ ವೈದ್ಯರಿಗೆ ಸವಾಲಾಗಿದೆ.
undefined
ಔಷಧಿ ಪ್ಯಾಕೆಟ್‌ಗಳ ಮೇಲಿನ ಕೆಂಪು ಪಟ್ಟಿ ಅರ್ಥ ವಿವರಿಸಿದ ಆರೋಗ್ಯ ಸಚಿವಾಲಯ
ಭಾರತೀಯ ವೈದ್ಯಕೀಯ ಸಂಶೋಧನೆಯ ಕೌನ್ಸಿಲ್‌ನ ಆಂಟಿಮೈಕ್ರೊಬಿಯಲ್ ರೆಸಿಸ್ಟೇನ್ಸ್ ಸರ್ವೈಲೆನ್ಸ್ ನೆಟ್ವರ್ಕ್ ಇತ್ತೀಚೆಗೆ ತನ್ನ ವಾರ್ಷಿಕ ವರದಿಯೊಂದನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನ್ಯುಮೋನಿಯ, ಉಸಿರಾಟದ ಸೋಂಕು, ಭೇದಿ, ಸೆಪ್ಸಿಸ್ ಮುಂತಾದ ಅನಾರೋಗ್ಯ ಸಮಸ್ಯೆಗಳಲ್ಲಿ ಸೋಂಕು ಆಗದಂತೆ ತಡೆಯಲು ಬಳಸುವ ಸಾಮಾನ್ಯ ಆಂಟಿಬಯೋಟಿಕ್‌ಗಳ ಬಗ್ಗೆ ಗಮನ ಹರಿಸಲಾಗಿತ್ತು. ಭಾರತದೆಲ್ಲೆಡೆಯ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿದ ವರದಿ ಇದಾಗಿದ್ದು 2023ರಿಂದ ಜನವರಿ 1 ಯಿಂದ 2023ರ ಡಿಸೆಂಬರ್ 31ರವರೆಗಿನ ಹೊರರೋಗಿಗಳು ಹಾಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಚಿಕಿತ್ಸೆ ಮಾಹಿತಿಯನ್ನಾಧರಿಸಿ ಈ ವರದಿ ಬಿಡುಗಡೆ ಮಾಡಲಾಗಿದೆ.
ದೇಹದ ರಕ್ತ ಮೂತ್ರ, ಉಸಿರಾಟದ ನಾಳದ ಸೋಂಕುಗಳಲ್ಲಿ ಇರಬಹುದಾದ ಇ ಕೋಲಿ, ಕ್ಲೆಬ್ಸಿಯೆಲ್ಲಾ ನ್ಯುಮೋನಿಯಾ, ಸ್ಯೂಡೋಮೊನಸ್ ಎರುಗಿನೋಸಾ ಮತ್ತು ಸ್ಟ್ಯಾಫಿಲೋಕೊಕಸ್ ಔರೆಸ್ ಮುಂತಾದ ಬ್ಯಾಕ್ಟಿರಿಯಾಗಳ ವಿರುದ್ಧ ಬಳಸುವ ಆಂಟಿಬಯೋಟಿಕ್ಸ್‌ಗಳನ್ನು ಪರೀಕ್ಷಿಸಲಾಗಿದೆ. ಈ ವೇಳೆ ಕೆಲವು ಬ್ಯಾಕ್ಟಿರಿಯಾಗಳು ಈ ಸಾಮಾನ್ಯ ಆಂಟಿ ಬಯೋಟಿಕ್‌ಗಳಿಗೆ ಸ್ಪಂದಿಸುವುದೇ ಇಲ್ಲ ಎಂಬುವುದು ಬಹಿರಂಗವಾಗಿದೆ. ಒಟ್ಟು 99,492 ಸಂಗ್ರಹಿತ ಮಾದರಿಗಳನ್ನು ಖಾಸಗಿ ಹಾಗೂ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಪರಿಶೀಲಿಸಲಾಗಿದೆ.
ರೋಗಿಗೆ ಆ್ಯಂಟಿಬಯೋಟಿಕ್ ಏಕೆ ಅನಿವಾರ್ಯ ಎಂಬುದನ್ನು ವೈದ್ಯರು ಬರೆಯಬೇಕು
ಈ ಪರಿಶೀಲನೆಯಲ್ಲಿ ತಿಳಿದ ಮತ್ತೊಂದು ಅಂಶವೆಂದರೆ ಇ ಕೋಲಿ ಬ್ಯಾಕ್ಟಿರಿಯಾದ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು, ಹಲವು ಆಂಟಿ ಬಯೋಟಿಕ್‌ಗಳಾದ ಸೆಪೊಟೆಕ್ಸಿಮ್(cefotaxime), ಸೆಪ್ಟಜಿಡಿಮ್ (ceftazidime) ಸಿಪ್ರೊಪ್ಲೊಕ್ಸಾಸಿನ್ (ciprofloxacin) ಹಾಗೂ ಲೆವೊಪ್ಲೊಕ್ಸಾಸಿನ್ (levofloxacin) ಮುಂತಾದವು ಈ ಬ್ಯಾಕ್ಟಿರಿಯಾದ ವಿರುದ್ಧ ಶೇಕಡಾ 20ರಷ್ಟು ಕೂಡ ಕೆಲಸ ಮಾಡಲ್ಲ ಎಂಬುದು ವಿಚಾರಣೆಯಿಂದ ಬಯಲಾಗಿದೆ. ಇದರ ಜೊತೆಗೆ ಇತರ ಬ್ಯಾಕ್ಟಿರಿಯಾಗಳಾದ ಕ್ಲೆಬ್ಸಿಲ್ಲಾ ನ್ಯುಮೊನಿಯಾ, ಸ್ಯುಡೊಮೊನಸ್ ಎರುಜಿನೊಸ ಮುಂತಾದ ಬ್ಯಾಕ್ಟಿರಿಯಾಗಳು ಕೂಡ ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಿವೆ ಎಂಬುದು ಸಾಬೀತಾಗಿದೆ.