ಕ್ಲಾಸ್ ಬಂಕ್ ಮಾಡಿ ಸ್ನೇಹಿತರ ಜೊತೆ ತಿರುಗಾಡ್ತಿದ್ದ ಮಗಳಿಗೆ ಅಪ್ಪ ಕೊಟ್ಟ ಶಿಕ್ಷೆಯೇನು ನೋಡಿ?

Published : Oct 02, 2024, 06:08 PM ISTUpdated : Oct 02, 2024, 06:09 PM IST
ಕ್ಲಾಸ್ ಬಂಕ್ ಮಾಡಿ ಸ್ನೇಹಿತರ ಜೊತೆ ತಿರುಗಾಡ್ತಿದ್ದ ಮಗಳಿಗೆ ಅಪ್ಪ ಕೊಟ್ಟ ಶಿಕ್ಷೆಯೇನು ನೋಡಿ?

ಸಾರಾಂಶ

ಕ್ಲಾಸ್ ಬಂಕ್ ಮಾಡಿ ಊರು ಸುತ್ತಿದ್ದ ಮಗಳಿಗೆ ಅಪ್ಪನೋರ್ವ ವಿಚಿತ್ರ ಶಿಕ್ಷೆ ನೀಡಿದ್ದಾರೆ. 

ಕ್ಲಾಸ್‌ಮೇಟ್‌ಗಳ ಜೊತೆ ಸೇರಿ ತರಗತಿ ಬಂಕ್ ಮಾಡಿ ಮಕ್ಕಳು ಊರು ಸುತ್ತುವುದು ಸಾಮಾನ್ಯ ಹೀಗೆ ಕ್ಲಾಸ್ ಬಂಕ್ ಮಾಡ್ತಿದ್ದ ಮಗಳಿಗೆ ಅಪ್ಪನೋರ್ವ ವಿಚಿತ್ರ ಶಿಕ್ಷೆ ನೀಡಿದ್ದಾನೆ.  ಹರೆಯದ ಮಕ್ಕಳು ಸಾಮಾನ್ಯವಾಗಿ ಪಠ್ಯದಲ್ಲಿ ಗಮನ ಕೊಡದೇ ಬೇರೇನಾದ್ರೂ ಮಾಡ್ತಾ ಕಾಲಹರಣ ಮಾಡುತ್ತಾ ಪೋಷಕರ ದುಡ್ಡು ಹಾಗೂ ತಮ್ಮ ಅಮೂಲ್ಯ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳುವುದು ಹೊಸತೇನಲ್ಲ, ಇದೇ ಕಾರಣಕ್ಕೆ ಪೋಷಕರು ಮಕ್ಕಳಿಗೆ ನೀಡಿದ್ದ ಹಲವು ಸೌಲಭ್ಯಗಳಿಗೆ ಕಡಿವಾಣ ಹಾಕುತ್ತಾರೆ. ಅವರಿಗೆ ಕೊಟ್ಟ ಸ್ಮಾರ್ಟ್‌ಫೋನ್‌ಗಳನ್ನು ಕಿತ್ತುಕೊಳ್ಳುತ್ತಾರೆ. ಹಣ ನೀಡುವುದನ್ನು ಕಡಿಮೆ ಮಾಡುತ್ತಾರೆ. ಅವರ ಸ್ನೇಹಿತರ ಮೇಲೂ ಒಂದು ಕಣ್ಣಿಡುತ್ತಾರೆ. ಆದರೆ ಅಮೆರಿಕಾದಲ್ಲಿ ಮಾತ್ರ ಒಬ್ಬ ಅಪ್ಪ ಹೀಗೆ ತರಗತಿ ಮಿಸ್ ಮಾಡಿ ಜಾಲಿ ಮಾಡ್ತಿದ್ದ ಮಗಳಿಗೆ ವಿಚಿತ್ರ ಶಿಕ್ಷೆ ನೀಡಿದ್ದಾನೆ. ಅದೇನು ಮುಂದೆ ಓದಿ..

ಕ್ಲಾಸ್ ಮಿಸ್ ಮಾಡಿದ ಮಗಳಿಗೆ ಅಪ್ಪ ನೀಡಿದ ಶಿಕ್ಷೆ ಏನು?

ಮಗಳೊಬ್ಬಳು ಮ್ಯಾಥ್ಸ್ ಕ್ಲಾಸ್‌ ಬಂಕ್ ಮಾಡಿ ಸ್ನೇಹಿತರ ಜೊತೆ ತಿರುಗಾಡಲು ಹೋಗುತ್ತಿದ್ದಳು. ಇದರಿಂದ ಸಿಟ್ಟಾದ ಅಪ್ಪ ಮಗಳಿಗೆ ಬುದ್ಧಿ ಕಲಿಸುವುದಕ್ಕಾಗಿ ಮನೆಯಲ್ಲಿ ಮಗಳ ಕೋಣೆಯನ್ನೇ ಜೈಲಾಗಿ ಪರಿವರ್ತಿಸಿದ್ದಾನೆ. ಅಲ್ಲದೇ ತನ್ನ ಈ ಕೆಲಸವನ್ನು ವೀಡಿಯೋ ಮಾಡಿ ಸಬ್‌ಟೈಟಲ್ ಜೊತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ವೀಡಿಯೋದಲ್ಲಿ ಅಪ್ಪ ಮಗಳ ಕೋಣೆಯನ್ನು ಸಂಪೂರ್ಣವಾಗಿ ಖಾಲಿ ಮಾಡುವುದನ್ನು ನೋಡಬಹುದು. @WizMonifaaa ಎಂಬುವವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ತಂದೆ, ಮಗಳ ಕೋಣೆಯಲ್ಲಿದ್ದ ಕಪಾಟುಗಳಲ್ಲಿ ಇರುವ ವಸ್ತುಗಳನ್ನು ಸಂಪೂರ್ಣವಾಗಿ ಕಾಲಿ ಮಾಡುತ್ತಾರೆ. ಅಲ್ಲಿದ್ದ ಆಕೆಯ ಬೆಡ್‌ ಶಿಟ್‌, ಮ್ಯಾಟ್ರೆಸ್‌ ಸೇರಿದಂತೆ ಸಂಪೂರ್ಣ ಹಾಸಿಗೆಯನ್ನು  ರೂಮ್‌ನಿಂದ ತೆಗೆದು ಬಿಡುತ್ತಾರೆ. ಅಲ್ಲದೇ ಆಕೆಯ ರೂಮ್‌ನಲ್ಲಿದ್ದ ಟಿವಿ ಹಾಗೂ ಆಕೆಯ ಶೂಗಳನ್ನು ತೆಗೆದು ಹೊರ ಹಾಕುತ್ತಾರೆ. 

ನನ್ನ ಮಗಳು ತರಗತಿ ಬಂಕ್ ಮಾಡಿದಳು, ಹೀಗಾಗಿ ಅವಳಿಗೆ ಶಿಕ್ಷೆ ನೀಡಲು ಮುಂದಾದೆ, ಅದಕ್ಕೆ ಅವಳ ಸ್ವಂತ ರೂಮನ್ನು ಆಕೆಯ ವೈಯಕ್ತಿಕ ಜೈಲ್ ಆಗಿ ಮಾರ್ಪಡಿಸಿದೆ ಎಂದು ಹೇಳುತ್ತಿರುವ ವೀಡಿಯೋದಲ್ಲಿ ಆ ಕೋಣೆಯ ಕಪಾಟಿನಲ್ಲಿದ್ದ ಮಗಳ ಬಟ್ಟೆಗಳನ್ನೆಲ್ಲಾ ತೆಗೆದು ಹೊರಗೆ ಹಾಕುತ್ತಾರೆ.  "ಅವಳು ನನ್ನನ್ನು ಪರೀಕ್ಷಿಸಲು ಪ್ರಯತ್ನಿಸುತ್ತಿರುವುದು ಹುಚ್ಚುತನವಾಗಿದೆ, ಏಕೆಂದರೆ ನಾನು ಪ್ರಯತ್ನಿಸುತ್ತೇನೆ ಎಂದು ಭಗವಂತನಿಗೆ ತಿಳಿದಿದೆ ಆದರೆ ಈಗ ನಾನು ಕ್ರೋಧನಾಗಿದ್ದೇನೆ ಎಂದು ಹೇಳುತ್ತಿರುವ ತಂದೆ, ಆಕೆಯ  ಪುಸ್ತಕಗಳು ಮತ್ತು ಸ್ಕಿನ್ಕೇರ್ ವಸ್ತುಗಳನ್ನು ಕಪಾಟಿನಿಂದ ಎಳೆದು ಹೊರಗೆ ಹಾಕಿ ಕೋಣೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದಾರೆ.  ನಾನೊಬ್ಬ ತುಂಬಾ ಶಾಂತನಾದ ಅಪ್ಪ, ಆದರೆ ಕೆರಳಿದರೆ ಹುಚ್ಚನೂ ಆಗಬಹುದು, ನಾನು ಆಕೆಯ ಬಳಿ ಇದ್ದ ಎಲ್ಲವನ್ನು ಕಿತ್ತುಕೊಂಡೆ ಎಂದು ತಂದೆ ಹತಾಶೆಯಿಂದ ಹೇಳಿದ್ದಾರೆ. ಅಲ್ಲದೇ ಬಿಳಿ ಟೀ ಶರ್ಟನ್ನು ತೆಗೆದು ಅದರ ಮೇಲೆ ನಾನು ಮ್ಯಾಥ್ಸ್ ಕ್ಲಾಸ್ ಬಂಕ್ ಮಾಡಿದ್ದೇನೆ ಎಂದು ಬರೆದಿದ್ದಾರೆ.

ಮಗಳು ದಾರಿ ತಪ್ಪುತ್ತಿದ್ದಾಳೆ ಎಂದು ಸಿಟ್ಟಿಗೆದ್ದು ಹತಾಶನಾಗಿ ಈ ರೀತಿ ಕ್ರಮ ಕೈಗೊಳ್ಳಲು ಮುಂದಾದ ಅಪ್ಪನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 34 ಮಿಲಿಯನ್ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!