ಪ್ರತಿ ಮಹಿಳೆಯೂ ಬದುಕಿನ ಒಂದಿಲ್ಲೊಂದು ಘಟ್ಟದಲ್ಲಿ ವೆಜೈನಲ್ ಡಿಸ್ಚಾರ್ಜ್ ಅನುಭವ ಎದುರಿಸಿಯೇ ಇರುತ್ತಾಳೆ. ಈ ಡಿಸ್ಚಾರ್ಜ್‌ಗೆ ಬಹಳ ಸಾಮಾನ್ಯ ಕಾರಣವೆಂದರೆ ಪೀರಿಯಡ್ಸ್ ಸೈಕಲ್‌ನ ಬೇರೆ ಬೇರೆ ಹಂತಗಳಲ್ಲಿ ದೇಹದಲ್ಲಾಗುವ ಹಾರ್ಮೋನಲ್ ಬದಲಾವಣೆಗಳು. ಇದೇನು ಚಿಂತಿಸಬೇಕಾದುದಲ್ಲ. ಆದರೆ, ಪ್ರಗ್ನೆನ್ಸಿ ಸಂದರ್ಭದಲ್ಲಿ ಹಸಿರು ಅಥವಾ ಹಳದಿ ಬಣ್ಣದ ಡಿಸ್ಚಾರ್ಜ್ ಆದರೆ, ಬ್ಲೀಡಿಂಗ್ ಆದರೆ ಮಾತ್ರ ವೈದ್ಯರ ಬಲಿ ಹೋಗಲೇಬೇಕು.
ಪ್ರಗ್ನೆನ್ಸಿ ಎಂಬುದು ಎಷ್ಟು ಸಂತೋಷದ ವಿಷಯವೋ ಅಷ್ಟೇ ಗೊಂದಲ ಹುಟ್ಟಿಸುವ ಫೇಸ್. ಈ ಸಂದರ್ಭದಲ್ಲಿ ದೇಹದಲ್ಲಾಗುವ ಹಲವಾರು ಬದಲಾವಣೆಗಳಲ್ಲಿ ಯಾವುದು ನಾರ್ಮಲ್, ಯಾವುದು ಕಾಳಜಿ ವಹಿಸಬೇಕಾದುದು ಎಂಬುದನ್ನು ಕಂಡುಕೊಳ್ಳುವುದು ಕಷ್ಟ. ಈ ಸಮಯದಲ್ಲಿ ಮೊದಲಿಗೆ ಕಾಣಿಸಿಕೊಳ್ಳುವ ಬದಲಾವಣೆಗಳಲ್ಲೊಂದು ವೆಜೈನಲ್ ಡಿಸ್ಚಾರ್ಜ್. ಈ ಡಿಸ್ಚಾರ್ಜ್ ಗರ್ಭಿಣಿಯರಲ್ಲಿ ಸಾಮಾನ್ಯವಾದರೂ ಕೆಲವೊಮ್ಮೆ ಇನ್ಪೆಕ್ಷನ್ ಇರಬಹುದು. ಮತ್ತೆ ಕೆಲವೊಮ್ಮೆ ಒಳಗೇನೋ ಸರಿಯಿಲ್ಲ ಎಂದು ಹೇಳುತ್ತಿರಬಹುದು.
ಗರ್ಭಿಣಿಯರಲ್ಲಿ ಮೂತ್ರನಾಳ ಸೋಂಕು; ಏನು, ಹೇಗೆ, ಪರಿಹಾರವೇನು?
ಯಾವುದು ನಾರ್ಮಲ್?
ತೆಳುವಾದ, ಬಣ್ಣರಹಿತವಾದ ಸ್ವಲ್ಪ ಕಡಿಮೆ ವಾಸನೆ ಇರುವ ಹಾಲಿನಂಥ ಡಿಸ್ಚಾರ್ಜ್ ಆಗುವುದು ಗರ್ಭಿಣಿಯರಲ್ಲಿ ಸಾಮಾನ್ಯ. ಇದಕ್ಕೆ ಲುಕೋರಿಯಾ ಎನ್ನುತ್ತಾರೆ. ಇದಕ್ಕಾಗಿ ಯಾವುದೇ ಭಯ ಬೀಳುವ ಅಗತ್ಯವಿಲ್ಲ. ಇದು ಗರ್ಭಚೀಲದಿಂದಲೇ ಬಿಡುಗಡೆಯಾಗುತ್ತದೆ. ಯಾವಾಗಲೂ ಹಾರ್ಮೋನಲ್ ಬದಲಾವಣೆಯಿಂದಲೇ ಡಿಸ್ಚಾರ್ಜ್ ಆಗುವುದು.
undefined
ಗರ್ಭಿಣಿಯಾದಾಗ ದೇಹದ ಹಾರ್ಮೋನ್‌ಗಳಲ್ಲಿ ಬಹಳಷ್ಟೇ ಬದಲಾವಣೆಗಳಾಗುತ್ತವೆ. ಹೀಗಾಗಿ, ಪ್ರಗ್ನೆನ್ಸಿಯ 9 ತಿಂಗಳು ಕೂಡಾ ಅಲ್ಪ ಸ್ವಲ್ಪ ವೈಟ್ ಡಿಸ್ಚಾರ್ಜ್ ಇರಬಹುದು. ಸಾಮಾನ್ಯವಾಗಿ ನಾಲ್ಕನೇ ತಿಂಗಳಿನ ಆರಂಭದಿಂದ ಈ ಡಿಸ್ಚಾರ್ಜ್ ಕಾಣಿಸಿಕೊಳ್ಳುತ್ತದೆ. 9ನೇ ತಿಂಗಳಿನವರೆಗೆ ಇದು ಹೆಚ್ಚುತ್ತಲೇ ಹೋಗಗುತ್ತದೆ. 9ನೇ ತಿಂಗಳಿನಲ್ಲಿ ಈ ಡಿಸ್ಚಾರ್ಜ್ ದಪ್ಪಗಾಗಿ ಸ್ವಲ್ಪ ರಕ್ತದೊಂದಿಗೆ ಕಾಣಿಸಿಕೊಳ್ಳಬಹುದು. ಇದು ಬೇಗ ಹೆರಿಗೆಯಾಗುವ ಸೂಚನೆ. ಇದಕ್ಕಾಗಿ ಭಯ ಬೀಳುವ ಅಗತ್ಯವಿಲ್ಲ.
ಯಾಕಾಗುತ್ತದೆ?
ಗರ್ಭಿಣಿಯರಲ್ಲಿ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಾಗಿ ಬಿಡುಗಡೆಯಾಗುತ್ತದೆ. ಇದು ಪೆಲ್ವಿಕ್ ಭಾಗದಲ್ಲಿ ಫ್ಲೋ ಹೆಚ್ಚಿಸುತ್ತದೆ. ಇದರಿಂದ ಉತ್ತೇಜನಗೊಳ್ಳುವ ಮ್ಯೂಕಸ್ ಮೆಂಬ್ರೇನ್ ಬಿಳಿಯಾದ ದ್ರವ ಡಿಸ್ಚಾರ್ಜ್ ಮಾಡುತ್ತದೆ. ನಿಮ್ಮ ಸರ್ವಿಕ್ಸ್ ಆರೋಗ್ಯಯುತವಾಗಿ, ಒದ್ದೆಯಾಗಿರಲೆಂದು ವೆಜೈನಾ ಓವರ್‌ಟೈಂ ಡ್ಯೂಟಿ ಮಾಡುತ್ತದೆ. ಇದರಿಂದ ವೈಟ್ ಡಿಸ್ಚಾರ್ಜ್ ಹೆಚ್ಚುತ್ತದೆ. ಮಗು ಹುಟ್ಟುವ ದೇಹದ ಈ ಭಾಗದಲ್ಲಿ ಯಾವುದೇ ಇನ್ಫೆಕ್ಷನ್ ಆಗದಿರಲಿ ಎಂದು ನೋಡಿಕೊಳ್ಳುವ ಉದ್ದೇಶವಿದು.
ಗರ್ಭಿಣಿಯರ ಕಾಡೋ ಹೊಟ್ಟೆ ನೋವು, ಮಗುವಿನ ಮೇಲಾಗೋ ಎಫೆಕ್ಟ್...
ಹಾಗಾದರೆ, ಪ್ರಗ್ನೆನ್ಸಿಯಲ್ಲಾಗುವ ಯಾವ ರೀತಿಯ ಡಿಸ್ಚಾರ್ಜ್ ಸಾಮಾನ್ಯವಲ್ಲ? ಯಾವುದಕ್ಕೆ ನಾವು ಗಮನ ಕೊಡಬೇಕು?
ಒಂದು ವೇಳೆ ಈ ಸ್ರಾವವು ಹಳದಿ ಅಥವಾ ಹಸಿರು ಬಣ್ಣದಲ್ಲಿದ್ದರೆ, ಅತಿಯಾದ ವಾಸನೆ ಹೊಂದಿದ್ದರೆ ಹಾಗೂ ತುರಿಕೆ, ಕೆಂಪಾದ ಚರ್ಮ ಕಂಡುಬಂದರೆ ಆಗ ನಿಮಗೆ ವೆಜೈನಲ್ ಇನ್ಫೆಕ್ಷನ್ ಆಗಿರಬಹುದು. ಪ್ರಗ್ನೆನ್ಸಿಯಲ್ಲಿ ಸಾಮಾನ್ಯವಾಗಿ ಆಗುವ ವೆಜೈನಲ್ ಇನ್ಫೆಕ್ಷನ್ ಎಂದರೆ ಕ್ಯಾಂಡಿಡಿಯಾಸಿಸ್. ಅಂದರೆ ಫಂಗಲ್ ಇನ್ಫೆಕ್ಷನ್. ಈ ಸಂದರ್ಭದಲ್ಲಿ ವೆಜೈನಾವನ್ನು ಡ್ರೈ ಆಗಿಟ್ಟುಕೊಳ್ಳಲು ಪ್ರಯತ್ನಿಸಿ. ಜೊತೆಗೆ ಸಕ್ಕರೆ ಕಡಿಮೆ ಸೇವಿಸಿ. ವೈದ್ಯರ ಶಿಫಾರಸಿನ ಮೇರೆಗೆ ಮೆಡಿಸಿನ್ ಕೂಡಾ ತೆಗೆದುಕೊಳ್ಳಬಹುದು.
ಇನ್ನು ವೆಜೈನಾದಲ್ಲಿ ಸಿಕ್ಕಾಪಟ್ಟೆ ತುರಿಕೆ, ಸುಡುವಂಥ ಸೆನ್ಸೇಶನ್ ಇದ್ದು, ದಪ್ಪಗಿನ, ವಾಸನೆಯುಕ್ತ ಡಿಸ್ಚಾರ್ಜ್ ಆಗುತ್ತಿದ್ದರೆ ಅದು ಅಲರ್ಜಿಯೂ ಆಗಿರಬಹುದು. ಬಟ್ಟೆ ಅಥವಾ ಸೋಪ್ ಅಲರ್ಜಿಯಿಂದ ಹೀಗಾಗಬಹುದು. ಇದಕ್ಕೆ ಕಾರಣ ಕಂಡುಕೊಳ್ಳುವ ಅಗತ್ಯವಿದೆ. ಯಾವುದು ಅಲರ್ಜಿಯೋ ಅದನ್ನು ದೂರವಿಡಲೇಬೇಕು.
ಕೆಲ ಅಪರೂಪದ ಕೇಸ್‌ಗಳಲ್ಲಿ ದಪ್ಪಗಿನ ಹಳದಿ ಬಣ್ಣದ ಡಿಸ್ಚಾರ್ಜ್ ಇದ್ದು ಅತಿಯಾದ ತುರಿಕೆ, ಉರಿ ಹಾಗೂ ಗುಳ್ಳೆಗಳೆದ್ದಿದ್ದರೆ ಹೀಗೆ ಸ್ರವಿಸುವ ವಾಸನೆಯ ದ್ರವ ಲೈಂಗಿಕವಾಗಿ ಹರಡುವ ಕಾಯಿಲೆಯನ್ನೂ ಸೂಚಿಸುತ್ತದೆ.
ಇನ್ನು ಕೆಲ ಬಾರಿ ನೀವು ತೆಗೆದುಕೊಂಡ ಔಷಧಿಗಳು, ಗರ್ಭ ನಿರೋಧಕಗಳು ಅಲ್ಲಿನ ಬ್ಯಾಲೆನ್ಸ್ ತಪ್ಪಿಸಿ ಕಿರಿಕಿರಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ಕೂಡಾ ದಪ್ಪಿಗನ ವಾಸನೆಯುಕ್ತ ದ್ರವ ಸ್ರವಿಸುತ್ತದೆ.
ಯಾವಾಗ ವೈದ್ಯರನ್ನು ಕಾಣಬೇಕು?
ಈ ಡಿಸ್ಚಾರ್ಜ್ ನಾರ್ಮಲ್ ಅಲ್ಲ ಎಂದು ನಿಮಗೆ ಅನುಮಾನ ಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು. ನಿಮಗೆ ನೀವೇ ವೈದ್ಯರಾಗಿ ಗುಣಪಡಿಸಿಕೊಳ್ಳುತ್ತೇನೆಂದು ಏನೇನೋ ಅಡಿಗೆಮನೆ ಔಷಧಿಗಳನ್ನು ಹಚ್ಚಿಕೊಳ್ಳಬೇಡಿ. ಏಕೆಂದರೆ, ಗರ್ಭಿಣಿಯರು ಇಂಥ ಅಸಡ್ಡೆತನ ತೋರುವುದು ಖಂಡಿತಾ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಸ್ಪಾಟಿಂಗ್ ನಾರ್ಮಲ್ ಆಗಿದ್ದಾಗ ಕೂಡಾ ವೈದ್ಯರನ್ನು ಭೇಟಿಯಾದಾಗ ವಿಷಯ ತಿಳಿಸಬೇಕು. ಏಕೆಂದರೆ ಕೆಲ ಡಿಸ್ಚಾರ್ಜ್‌ಗಲು ಅಬಾರ್ಶನ್ ಅಥವಾ ಅವಧಿಪೂರ್ವ ಪ್ರಸವದ ಸೂಚನೆಯಾಗಿರುತ್ತವೆ.
ಒಂದು ವೇಳೆ ಒಂದೆರಡು ಡ್ರಾಪ್ಗಿಂತ ಹೆಚ್ಚು ಬ್ಲೀಡಿಂಗ್ ಆಗಿದ್ದರೆ, ತಡ ಮಾಡದೆ ವೈದ್ಯರ ಬಳಿ ಓಡಬೇಕು. ಅಲ್ಲದೆ, ಡಿಸ್ಚಾರ್ಜ್ ಇದ್ದಕ್ಕಿದ್ದಂತೆ ಜೋರಾಗಿ ನೀರುನೀರಾಗಿ ಹೋಗುತ್ತಿದ್ದರೆ ಅದು ಆ್ಯಮ್ನಿಯೋಟಿಕ್ ಫ್ಲೂಯಿಡ್ ಲೀಕ್ ಆಗುತ್ತಿರುವ ಸೂಚನೆ ಇರಬಹುದು. ಇದು ಕೂಡಾ ಅವಧಿಪೂರ್ವ ಹೆರಿಗೆಗೆ ಕಾರಣವಾಗುತ್ತದೆ. ಹೀಗಾಗಿ, ಇಂಥ ಸಂದರ್ಭದಲ್ಲಿಯೂ ತಡ ಮಾಡದೆ ಸ್ತ್ರೀ ರೋಗ ತಜ್ಞರನ್ನು ಕಾಣಿರಿ.
ಮಾನಸಿಕವಾಗಿ, ದೈಹಿಕವಾಗಿ ಹೆಣ್ಣನ್ನು ಹೈರಾಣಿಗಿಸೋ ಗರ್ಭಪಾತ!
ಪ್ರಗ್ನೆನ್ಸಿಯಲ್ಲಿ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳು:
- ಟ್ಯಾಂಪಾನ್ಸ್ ಬಳಸಲೇಬೇಡಿ. ಅವು ನಿಮ್ಮ ಗುಪ್ತಾಂಗಕ್ಕೆ ಹೊಸ ಜರ್ಮ್ಸ್‌ಗಳನ್ನು ತಗುಲಿಸಿ ಇನ್ಫೆಕ್ಷನ್‌ಗೆ ಕಾರಣವಾಗಬಹುದು.
- ಗುಪ್ತಾಂಗಕ್ಕೆ ನೀರನ್ನು ಸ್ಪ್ರೇ ಮಾಡಿಕೊಳ್ಳಬೇಡಿ. ಇದರಿಂದ ವೆಜೈನಾದ ಆರೋಗ್ಯಕರ ಬ್ಯಾಕ್ಟೀರಿಯಾದ ಪಿಎಚ್ ಮಟ್ಟ ಕಡಿಮೆಯಾಗುತ್ತದೆ. ಆಗ ಸುಲಭವಾಗಿ ಇನ್ಫೆಕ್ಷನ್ ತಗುಲಬಹುದು.
- ಕೆಳಗಿನ ಭಾಗವನ್ನು ಸಾಧ್ಯವಾದಷ್ಟು ಸ್ವಚ್ಛ ಹಾಗೂ ಒಣವಾಗಿಟ್ಟುಕೊಳ್ಳಿ.
- ಚರ್ಮಕ್ಕೆ ಉಸಿರಾಡಲು ಅವಕಾಶ ನೀಡುವ ಕಾಟನ್ ಒಳಬಟ್ಟೆಗಳನ್ನೇ ಧರಿಸಿ.
ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ; ಮನೆಯಲ್ಲೇ ಇದೆ ಮದ್ದು
- ಡಿಸ್ಚಾರ್ಜ್ ಹೆಚ್ಚಿದ್ದರೆ ದಿನಕ್ಕೆ 2 ಬಾರಿ ಅಂಡರ್‌ವೇರ್ ಬದಲಿಸಿ.
- ವೆಜೈನಲ್ ವೈಪ್ಸ್ ಬಳಸಬೇಡಿ
- ಸಣ್ಣ ಪುಟ್ಟ ಅನುಮಾನಕ್ಕೂ ವೈದ್ಯರನ್ನು ಕಾಣುವುದರಲ್ಲಿ ಏನೂ ತಪ್ಪಿಲ್ಲ.