ಹೆಂಗಳೆಯರ ಮನ ಸೆಳೆಯುತ್ತಿದೆ ಟ್ರೆಂಡಿ ಟ್ರೆಂಡಿ ಕುರ್ತಾಗಳು!

By Web DeskFirst Published Sep 19, 2019, 5:06 PM IST
Highlights

ಈ ಫ್ಯಾಶನ್‌ ಗೀಶನ್‌ ಎಲ್ಲ ಕಾಮನ್‌ ಮ್ಯಾನ್‌ಗಲ್ಲ. ಅದೇನಿದ್ರೂ ರ್ಯಾಂಪ್ ಪೇಜ್‌ ತ್ರೀ ಪಾರ್ಟಿಗಳಲ್ಲಿ, ಶ್ರೀಮಂತರ ಅಡ್ಡೆಗಳಲ್ಲಿ ಮಾತ್ರ ಕಾಣಿಸಿಕೊಳ್ಳೋದು ಅನ್ನೋದು ಕಂಪ್ಲೇಂಟು. ಸದ್ಯಕ್ಕೀಗ ಕುರ್ತಾದಲ್ಲಿ ಥರಾವರಿ ಅವತಾರ್‌ಗಳು ತಲೆ ಎತ್ತಿವೆ. ಸೋನಂ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದಾರೆ.

ಕಡುಗೆಂಪು ಅಸಿಮೆಟ್ರಿಕ್‌ ಕುರ್ತಾ. ಮೊಣಕೈವರೆಗೆ ಸ್ಲೀವ್ಸ್ ಅಂಚಿಗೆ ಬಂಗಾರದ ಬಣ್ಣದ ಡಿಸೈನ್‌. ಮುಂಭಾಗ ಗಿಡ್ಡ ಹಿಂಭಾಗ ಉದ್ದ. ಮೇಲುಡುಪಿನ ಒಂದು ಪಾಶ್ರ್ವದಲ್ಲಿ ಕೆಂಪು ಹಾಗೂ ಬಂಗಾರದ ಬಣ್ಣದ ಸ್ಟ್ರೈಪ್ಸ್ ಗಳಿರುವ ಚೀಲ. ಥೇಟ್‌, ನಮ್ಮ ನಿಮ್ಮ ಅಜ್ಜಿ ಕವಳ ಹಾಕ್ಕೊಳ್ತಿದ್ದ ಚೀಲದ ಹಾಗೇ ಇದೆ. ಆದರೆ ಇದಕ್ಕೆ ಈ ಕಾಲದ ಹುಡುಗೀರ ಹಾಗೆ ಚಮಕ್‌ ಜಾಸ್ತಿ. ಇದು ಪೋಲ್ತಿ ಬ್ಯಾಗ್‌ ಅಂತ ಫೇಮಸ್ಸು. ಉತ್ತರ ಭಾರತದಲ್ಲಿ ಬಳಕೆ ಹೆಚ್ಚು. ಈಗ ನಮ್‌ ಕಡೆಗೂ ಬಂದಿದೆ.

ಇಡೀ ಡ್ರೆಸ್‌ನಲ್ಲಿ ಈ ಚೀಲವೇ ಹೈಲೈಟ್‌. ಕೆಳಗೆ ಅದೇ ಬಣ್ಣದ ಪಲಾಝೋ. ಅಲ್ಲಿಗೆ ಹಳಬರಾದರೆ, ‘ಕೆಂಪು ಕೆಂಪು ಕೆಂಗುಲಾಬಿ ನನ್ನ ..’ ಅಂತ ಶಿಳ್ಳೆ ಹೊಡೆಯಲು ಅಡ್ಡಿಯಿಲ್ಲ. ಹೊಸಬ್ರಿಗೆ ಹಾಡು ಗೀಡು ಇಷ್ಟಆಗಲ್ಲ. ಅವರದೇನಿದ್ರೂ ಡೇರಿಂಗ್‌ ಸ್ವಭಾವ. ಇರಲಿ, ಸೋನಂ ಧರಿಸಿದ ರೆಡ್‌ ಕುರ್ತಾ ಮೊದಲ ನೋಟದಲ್ಲೇ ಧರಿಸಲು ಹುಡುಗೀರಿಗೂ, ನೋಡಲು ಹುಡುಗರಿಗೂ ಇಷ್ಟವಾಗುವ ಹಾಗಿತ್ತು. ಹಾಗೆ ಇಷ್ಟವಾದ ಕಾರಣಕ್ಕೇ ಇದು ಟ್ರೆಂಡ್‌ ಕ್ರಿಯೇಟ್‌ ಮಾಡಿತು. ಕುರ್ತಾ ಜೊತೆಗೆ ಅದರಲ್ಲಿದ್ದ ಪೋಲ್ತಿ ಚೀಲಕ್ಕೂ ಶುಕ್ರದೆಸೆ ಬಂತು. ಸದ್ಯಕ್ಕೀಗ ಸೋನಂ ಧರಿಸಿರುವ ಥರದ ಪೋಲ್ತಿ ಚೀಲದ ಡಿಸೈನ್‌ ಇರುವ ಕುರ್ತಿ ಸಖತ್‌ ಫೇಮಸ್‌ ಆಗ್ತಿದೆ.

ಪಾಕೆಟ್‌ ಕುರ್ತಾ ಬಗ್ಗೆ ನಿಮ್ಗೊತ್ತಾ?

ಈ ಪೋಲ್ತಿ ಬ್ಯಾಗ್‌ ಕುರ್ತಾದ ಜೊತೆಗೆ ಜೇಬುಗಳಿರುವ ಕುರ್ತಾವೂ ಹೆಣ್ಮಕ್ಕಳ ಫೇವರೆಟ್‌ ಆಗ್ತಿದೆ. ಇದು ಪಾಕೆಟ್‌ ಕುರ್ತಾ ಅಂತಲೇ ಫೇಮಸ್ಸು. ಡೀಸೆಂಟಾಗಿರೋ ಪ್ಲೇನ್‌ ಕಲರ್‌ ಉದ್ದದ ಟಾಪ್‌ಗೆ ಕಾಂಟ್ರಾಸ್ಟ್‌ ಕಲರ್‌ನಲ್ಲಿ ಜೇಬು ಇರೋದು ರೂಢಿ. ಕೆಲವೊಮ್ಮೆ ಫ್ಲೋರಲ್ ಡಿಸೈನ್‌ ಇದ್ದಾಗ ಅಥವಾ ಮೊನೋಕ್ರೋಮ್‌ ಕುರ್ತಾಗಳಿದ್ದಾಗ ಅದೇ ಬಣ್ಣದಲ್ಲಿ ಜೇಬು ವಿನ್ಯಾಸ ಇರುತ್ತೆ. ಇದರಲ್ಲಿ ಭಿನ್ನತೆ ಕಾಣಲ್ಲ. ಆದರೂ ಪಾಕೆಟ್‌ ಸ್ಟೈಲ್‌ ಎದ್ದು ಕಾಣೋದು ಖಾದಿ ಅಥವಾ ಕಾಟನ್‌ ಮೆಟೀರಿಯಲ್‌ನಲ್ಲಿ.

ಅಲ್ಲೊಬ್ಬ ಮಾಡೆಲ್‌ ಕಡು ನೀಲಿ ಮತ್ತು ಸ್ಲೇಟ್‌ ಕಲರ್‌ ಅರ್ಧರ್ಧ ಇರುವ ಅಸಿಮೆಟ್ರಿಕ್‌ ಕುರ್ತಾಗೆ ಹಳದಿ ಬಣ್ಣದಲ್ಲಿ ಜೇಬು ಇಡಿಸಿಕೊಂಡು ತೊಟ್ಟಳು. ಮೊದಲ ನೋಟಕ್ಕೇ ಇಷ್ಟವಾಗುವ ಡಿಸೈನ್‌ ಇದು. ಖಾದಿ, ಲಿನೆನ್‌ ಅಥವಾ ಕಾಟನ್‌ನಲ್ಲಿ ಈ ಬಗೆಯ ಹೊಸತನವನ್ನು ಡಿಸೈನ್‌ ಮಾಡಿದಾಗ ಸಿಗುವ ಫೀಲ್‌ ಬೇರೆ ಮೆಟೀರಿಯಲ್‌ಗಳಲ್ಲಿ ಸಿಗಲ್ಲ ಅಂತಾರೆ ಅನಾಮಿಕಾ ಖನ್ನಾರಂಥಾ ಡಿಸೈನರ್‌ಗಳು.

ಯಾವ ಕುರ್ತಾಗೆ ಜೀನ್ಸ್‌ ಬಾಟಮ್‌ ಬೆಸ್ಟ್‌?

ಕುರ್ತಾಗೆ ಪಲಾಝೋ ಅಥವಾ ಲೆಗ್ಗಿಂಗ್ಸ್‌ ಹಾಕೋ ಸ್ಟೈಲ್‌ ಹೊಸತಲ್ಲ. ಜೀನ್ಸ್‌ ಬಾಟಮ್‌ ಕಾಂಬಿನೇಶನ್ನೂ ತೀರಾ ಈಗಷ್ಟೇ ಬಂದ ಟ್ರೆಂಡ್‌ ಅಲ್ಲ. ಆದರೆ ಕುರ್ತಾಗೆ ಕಾಂಬಿನೇಶನ್‌ ಆಗಿ ಜೀನ್ಸ್‌ ಬಾಟಮ್‌ ತೊಟ್ಟುಕೊಳ್ಳೋ ಟ್ರೆಂಡ್‌ ಈಗಲೂ ಚಾಲ್ತಿಯಲ್ಲಿದೆ. ಹಾಗಾಗಿ ಇದನ್ನು ಟ್ರೈ ಮಾಡಿದ್ರೆ ಅಭಾಸ ಆಗಲ್ಲ. ಅಷ್ಟಕ್ಕೂ ಡಿಸೈನರ್ಸ್‌ ಹೇಳೋ ಪ್ರಕಾರ ಇಂಥ ಟ್ರೆಂಡ್‌ಗಳಲ್ಲಿ ಬದಲಾವಣೆ ಆಗುತ್ತಷ್ಟೇ ಹೊರತು ಟ್ರೆಂಡ್‌ ಬದಲಾಗಲ್ಲ. ಫ್ರಂಟ್‌ ಸ್ಲಿಟ್‌ ಇರುವ ಕುರ್ತಾಗೆ ಜೀನ್ಸ್‌ ಪ್ಯಾಂಟ್‌ ಹಾಕಿದ್ರೆ ಸ್ಟೈಲಿಶ್‌ ಲುಕ್‌. ಜೀನ್ಸ್‌ ತ್ರೀಫೋರ್ತ್ ಇದ್ರೆ ಇನ್ನೂ ಚೆಂದ.

ಫ್ರಂಟ್‌ ಸ್ಲಿಟ್‌ ಇರುವ ಉದ್ದದ ಕುರ್ತಾಗೆ ಡೆನಿಮ್‌ ಚೆಡ್ಡಿ ಹಾಕ್ಕೊಂಡು ಓಡಾಡೋ ಹುಡುಗೀರೂ ಸಿಕ್ತಾರೆ. ಬೋಲ್ಡ್‌ ಇರೋರಿಗೆ ಇದು ಬೆಸ್ಟ್‌. ಫ್ರಂಟ್‌ ಕಟ್‌ ಇಲ್ಲದೇ ಇರುವ ಕುರ್ತಾಗೂ ತ್ರೀಫೋತ್‌ರ್‍ ಜೀನ್ಸ್‌ ಹಾಕ್ಕೊಳ್ಳಬಹುದು. ಇನ್ನೂ ಡಿಫರೆಂಟಾಗಿ ಸ್ವಲ್ಪ ಸೈಡ್‌ನಲ್ಲಿ ನಾಭಿಯಿಂದ ಕೆಳಗಿಳಿಯುವ ಫ್ರಂಟ್‌ ಸ್ಲಿಟ್‌ ವಿನ್ಯಾಸವೂ ಸಖತ್‌ ಚಾರ್ಮಿಂಗ್‌.

ಇದಲ್ಲದೇ ಮುಂಭಾಗದಲ್ಲಿ ಅರ್ಧಚಂದ್ರಾಕೃತಿಯ ಡಿಸೈನ್‌ನಲ್ಲಿರುವ ಕುರ್ತಾ, ಓವರ್‌ಕೋಟ್‌ ಬಂದಿರುವ ಕುರ್ತಾ, ಫ್ರಾಕ್‌ ಲುಕ್‌ನ ಕುರ್ತಾ, ಸಿಂಪಲ್‌ ಲಾಂಗ್‌ ಲೆನ್‌್ತ ಕುರ್ತಾಗಳೂ ಟ್ರೆಂಡಿಂಗ್‌ನಲ್ಲಿವೆ. ಇವನ್ನೂ ನಿಮ್ಮ ಬಕೆಟ್‌ ಲೀಸ್ಟ್‌ನಲ್ಲಿ ಇಟ್ಟುಕೊಳ್ಳಬಹುದು.

ಕುರ್ತಾದ ಆಯ್ಕೆ ಮಾಡಿಕೊಳ್ಳುವಾಗ ಗಮನಿಸಿ

1. ಸದ್ಯದ ಟ್ರೆಂಡ್‌ ಏನಿದೆ ಅಂತ ಗಮನಿಸಿ ಖರೀದಿಸಿ. ಪೋಲ್ತಿ ಬ್ಯಾಗ್‌ ಇರುವ ಕುರ್ತಾ ಇನ್ನಷ್ಟೇ ಮಾರ್ಕೆಟ್‌ಗೆ ಬರಬೇಕಿದೆ. ಇದಕ್ಕೆ ಹತ್ತಿರದ ಸಾಮ್ಯತೆ ಇರುವ ಕುರ್ತಾ ಆರಿಸಿಕೊಳ್ಳಿ.

2. ಪಾಕೆಟ್‌ ಕುರ್ತಾ ಆಯ್ಕೆ ಮಾಡುವಾಗ ಬಣ್ಣ, ಮೆಟೀರಿಯಲ್‌ ಕಡೆ ಗಮನಕೊಡಿ. ಇದರಲ್ಲಿ ಫೆä್ಲೕರಲ್‌ಗಿಂತಲೂ ಸ್ಟೈಪ್‌ ಇರುವ ಅಥವಾ ಪ್ಲೇನ್‌ ಬಣ್ಣದ ಕುರ್ತಾ ಚೆಂದ.

3. ಕುರ್ತಾಗೆ ಜೀನ್ಸ್‌ ಕಾಂಬಿನೇಶನ್‌ ಇದ್ದಾಗ ಅದು ತುಂಬ ಉದ್ದವಾಗಿದ್ದರೆ ಅಭಾಸ ಅನಿಸುತ್ತೆ, ಗಮನಿಸಿ.

4. ಓವರ್‌ ಕೋಟ್‌ ಇರುವ ಕುರ್ತಾಗಳೂ ಟ್ರೆಂಡಿಯಾಗಿರುತ್ತವೆ. ಅವನ್ನೂ ಟ್ರೈ ಮಾಡಬಹುದು.

5. ಫ್ರಂಟ್‌ ಸ್ಲಿಟ್‌ ಇರುವ ಕುರ್ತಾಗಳು ಹೆಚ್ಚು ಸ್ಟೈಲಿಶ್‌ ಆಗಿರುತ್ತವೆ. ಪಲಾಝೋಗೂ ಬೆಸ್ಟ್‌, ಜೀನ್ಸ್‌ಗೂ ಬೆಸ್ಟ್‌, ಲೆಗ್ಗಿಂಗ್ಸ್‌ ಚೆನ್ನಾಗಿರಲ್ಲ.

ಇತರೆ ವಿಚಾರಗಳು

- ನಾರ್ಮಲ್‌ ಮೇಕಪ್‌ ಇರಲಿ.

- ಎದ್ದು ಕಾಣುವಂಥ ದೊಡ್ಡ ಇಯರ್‌ರಿಂಗ್‌ ಚೆಂದ.

- ಹೈ ಹೀಲ್ಸ್‌ ಚಪ್ಪಲಿಗಳು ಅಂದವಾಗಿರುತ್ತವೆ. ಶೂಸ್‌ ಧರಿಸಬಹುದು.

click me!