Viral Video: ಎಲ್ಲರ ಕಣ್ಣಲ್ಲಿ ನೀರು ತರಿಸಿದ ಕಾಟನ್ ಕ್ಯಾಂಡಿ ಮಾರಾಟಗಾರ

By Suvarna NewsFirst Published Mar 3, 2023, 4:40 PM IST
Highlights

ನಗುವಿನ ಹಿಂದೊಂದು ಅಳು ಇರುತ್ತೆ. ದಾರಿಯಲ್ಲಿ ಆಹಾರ, ಬಟ್ಟೆ ಮಾರಾಟ ಮಾಡುವವರ ಮನೆಯಲ್ಲಿ ಅದೆಷ್ಟೋ ಕಷ್ಟಗಳಿರುತ್ವೆ. ಹೊಟ್ಟೆಗೆ ಹಿಟ್ಟುಬೇಕು ಎನ್ನುವ ಕಾರಣಕ್ಕೆ ಬಿಸಿಲು ಮಳೆಯೆನ್ನದೆ ಕೆಲಸ ಮಾಡ್ತಾರೆ. ಅವರನ್ನು ನೋಡಿ ನಾವು ಕಲಿಯೋದು ಸಾಕಷ್ಟಿದೆ.
 

ಮನುಷ್ಯ ತನಗಿಂತ ಕೆಟ್ಟ ಸ್ಥಿತಿಯಲ್ಲಿರುವ ಜನರನ್ನು ನೋಡಿ ತನ್ನ ಜೀವನದ ಬಗ್ಗೆ ತೃಪ್ತಿ ಪಟ್ಟುಕೊಳ್ಳಬೇಕಂತೆ. ಹೀಗಂತ ಹಿರಿಯರು ಹೇಳ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಈ ಮಾತಿಗೆ ಹತ್ತಿರವಾಗಿದೆ. ಮನುಷ್ಯದ ಬಳಿ ಎಷ್ಟಿದ್ರೂ ಸಾಲೋದಿಲ್ಲ. ಕಾರು, ಬಂಗಲೆ, ಐಷಾರಾಮಿ ಜೀವನದಲ್ಲಿರುವ ಜನರು ಇನ್ನಷ್ಟು ಬೇಕು ಅಂತಾ ಕೊರಗ್ತಾರೆ. ಉಳಿದುಕೊಳ್ಳಲು ಮನೆ, ಮೂರು ಹೊತ್ತಿನ ಊಟ ತಿನ್ನುತ್ತಿರೋರು ಅವರಿಗಿಂತ ಶ್ರೀಮಂತರನ್ನು ನೋಡಿ ಮರಗ್ತಾರೆ. ಆದ್ರೆ ನಮಗಿಂತ ಕಷ್ಟಪಡ್ತಿರುವವರನ್ನು ಒಮ್ಮೆಯೂ ನೋಡೋದಿಲ್ಲ. ಅವರಿಗಿಂತ ನಾವು ಒಳ್ಳೆಯ ಸ್ಥಾನದಲ್ಲಿದ್ದೇವೆ ಎಂದು ತೃಪ್ತಿ ಇರೋದಿಲ್ಲ.  

ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ (Social Network) ಗಳಲ್ಲಿ ಅನೇಕ ವಿಡಿಯೋ (Video) ಗಳು ವೈರಲ್ ಆಗ್ತಿದೆ. ಕೆಲ ವಿಡಿಯೋಗಳು ಮನರಂಜನೆ ನೀಡಿದ್ರೆ ಮತ್ತೆ ಕೆಲ ವಿಡಿಯೋಗಳು ನಮಗೆ ಸ್ಫೂರ್ತಿ (Inspiration) ನೀಡುತ್ತವೆ. ಇನ್ನು ಕೆಲ ವಿಡಿಯೋ ಮುಂದೆ ನಡೆಯುವ ದಾರಿಗೆ ದೀಪವಾಗಿರ್ತವೆ. ಈಗ ಭಾವುಕ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಯಾವುದೇ ವ್ಯಕ್ತಿಯನ್ನು ಮೇಲಿಂದ ನೋಡಿದ್ರೆ ಆತನ ಭಾವನೆ ಅರ್ಥ ಮಾಡಿಕೊಳ್ಳೋದು ಕಷ್ಟ. ಆತನ ಮನಸ್ಸು ಹೊಕ್ಕಾಗ್ಲೇ ಆತನ ಕಷ್ಟ ತಿಳಿಯುತ್ತೆ. ಪ್ರತಿಯೊಬ್ಬ ವ್ಯಕ್ತಿ ಹಿಂದೆ ಒಂದಲ್ಲ ಒಂದು ನೋವು ಮನೆ ಮಾಡಿರುತ್ತದೆ. ಎಲ್ಲರ ಮುಂದೆ ಆತ ಎಷ್ಟೇ ನಗ್ತಿದ್ದರು, ನಗಿಸುತ್ತಿದ್ದರೂ ಒಳಗಿನ ನೋವು ಆತನನ್ನು ಬಾಧಿಸುತ್ತದೆ. ಇದಕ್ಕೆ ಕಾಟನ್ ಕ್ಯಾಂಡಿ ಮಾರ್ತಿದ್ದ ಈ ವ್ಯಕ್ತಿ ಉತ್ತಮ ನಿದರ್ಶನ.
 

Latest Videos

 

ಮದ್ವೆಯಾದ್ರೂ ಮಾಜಿ ಗೆಳತೀನಾ ಮರೆಯೋಕಾಗ್ತಿಲ್ಲ, ಮಗುವಿಗೆ ಅವಳದ್ದೇ ಹೆಸರಿಡಲು ಪತಿಯ ಹಠ!

ವೈರಲ್ (Viral) ಆಗಿದೆ ಈ ವಿಡಿಯೋ : ಛಾಯಾಗ್ರಾಹಕ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಸಿಫ್ ಖಾನ್ (Asif Khan) ಅವರು ಇಂಟರ್ನೆಟ್‌ನಲ್ಲಿ ಹೃದಯಸ್ಪರ್ಶಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅವರು ಹಂಚಿಕೊಂಡ ವಿಡಿಯೋ ಪ್ರತಿ ವೀಕ್ಷಕರ ಕಣ್ಣಲ್ಲಿ ನೀರು ತರಿಸಿದೆ. ಆ ವೀಡಿಯೋದಲ್ಲಿ ಕಾಟನ್ ಕ್ಯಾಂಡಿ ಮಾರುತ್ತಿದ್ದ ವ್ಯಕ್ತಿ ರಸ್ತೆ ಮಧ್ಯೆ ಇದ್ದಕ್ಕಿದ್ದಂತೆ ಅಳಲು ಶುರು ಮಾಡ್ತಾನೆ. ಈ ವೀಡಿಯೊವನ್ನು ಮೇ ತಿಂಗಳಲ್ಲಿ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಪ್ರಸ್ತುತ 6 ಮಿಲಿಯನ್ ವೀಕ್ಷಣೆಯನ್ನು ಇದು ಹೊಂದಿದೆ. 

ಆ ವ್ಯಕ್ತಿ ರಸ್ತೆ ಮಧ್ಯದಲ್ಲಿ ನಿಂತು ಕಣ್ಣೀರು ಒರೆಸುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಜೀವನೋಪಾಯಕ್ಕಾಗಿ ಕಾಟನ್ ಕ್ಯಾಂಡಿ ಮಾರುತ್ತಿರುವುದು ಸ್ಪಷ್ಟವಾಗುತ್ತದೆ. ಆಕೆಯ ಕಣ್ಣಲ್ಲಿ ನೀರು ತುಂಬಿರುವುದರ ಹಿಂದಿನ ನಿಜವಾದ ಕಾರಣ ಇನ್ನೂ ಸ್ಪಷ್ಟಪಡಿಸಲಾಗಿಲ್ಲ. ಈ ವೀಡಿಯೊ ಮಾತ್ರ ವೀಕ್ಷಕರ ಕಣ್ಣಲ್ಲಿ ನೀರು ತರಿಸಿದೆ. ವ್ಯಕ್ತಿಯ ನೋವು ಹೊರಗೆ ಕಾಣಿಸಲಿಲ್ಲವೆಂದ್ರೆ ಆತನಿಗೆ ನೋವಿಲ್ಲ ಎಂದರ್ಥವಲ್ಲ ಎನ್ನುವ ಶೀರ್ಷಿಕೆಯ ಜೊತೆಗೆ ಛಾಯಾಗ್ರಾಹಕ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಸಿಫ್ ಖಾನ್ ವಿಡಿಯೋ ಹಂಚಿಕೊಂಡಿದ್ದಾರೆ. 

ಮೇಕಪ್‌ ಎಡವಟ್ಟು: ವಿಕಾರವಾಯ್ತು ಮದುಮಗಳ ಮುಖ, ಮದುವೆ ಕ್ಯಾನ್ಸಲ್ ಮಾಡಿದ ವರ!

ವಿಡಿಯೋಕ್ಕೆ ಸಿಕ್ಕಿದೆ ಸಾಕಷ್ಟು ಕಮೆಂಟ್ : ಮೇನಲ್ಲಿ ವಿಡಿಯೋ ಪೋಸ್ಟ್ ಆಗಿದ್ದರೂ ಈಗ್ಲೂ ಜನ ಇದನ್ನು ವೀಕ್ಷಣೆ ಮಾಡ್ತಿದ್ದಾರೆ. ಇದಕ್ಕೆ ಜನರು ಕಮೆಂಟ್ ಕೂಡ ಮಾಡ್ತಿದ್ದಾರೆ. ಆ ವ್ಯಕ್ತಿ ಜೊತೆ ನಾವಿದ್ದೇವೆ ಎಂಬ ಸಂದೇಶ ನೀಡ್ತಿದ್ದಾರೆ. ಜೀವನಕ್ಕಾಗಿ ಏನು ಬೇಕಾದರೂ ಮಾಡು ಸಹೋದರ, ನಾನು ಈ ಮನುಷ್ಯನನ್ನು ಬೆಂಬಲಿಸುತ್ತೇನೆ ಎಂದು ವ್ಯಕ್ತಿಯೊಬ್ಬ ಬರೆದಿದ್ದಾನೆ. ಅನೇಕರು ಈ ಕಾಟನ್ ಕ್ಯಾಂಡಿ ಮಾರಾಟಗಾರನನ್ನು ತಲುಪೋದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಆತನಿಗೆ ಆರ್ಥಿಕ ಸಹಾಯ ಮಾಡಲು ಕೆಲವರು ಮುಂದೆ ಬಂದಿದ್ದಾರೆ.  ವ್ಯಕ್ತಿ ಯಾಕೆ ಅಳ್ತಿದ್ದಾನೆ ಎನ್ನುವುದಕ್ಕೆ ಕಾರಣ ತಿಳಿದಿಲ್ಲವಾದ್ರೂ ಆತನ ಕಣ್ಣಲ್ಲಿ ಬಂದ ನೀರು ನೋವನ್ನು ಹೇಳ್ತಿರೋದು ಸ್ಪಷ್ಟ. 
 

click me!