ಗುಮ್ಮಟನಗರಿಯಲ್ಲಿ ಸ್ಪೆಷಲ್ ಅಂಬಲಿ ಜಾತ್ರೆ, ಎಷ್ಟೇ ಜನರು ಉಂಡ್ರೂ ಖಾಲಿಯಾಗಲ್ವಂತೆ ಅಡುಗೆ!

By Suvarna News  |  First Published Mar 17, 2022, 4:44 PM IST

* ಗುಮ್ಮಟನಗರಿಯಲ್ಲಿ ನಡೆಯುತ್ತೆ ಸ್ಪೆಷಲ್ ಅಂಬಲಿ ಜಾತ್ರೆ
* ರಂಬಾಪುರದಲ್ಲಿ ನಡೆಯೋ ಈ ಜಾತ್ರೆಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು..!
* ರೈತರ ಮನೆಗಳಲ್ಲಿ ಬೆಳೆದ ಬೆಳೆಯೇ ಜಾತ್ರೆಯಲ್ಲಿ ಅನ್ನಪ್ರಸಾದ..!
* ಎಷ್ಟೇ ಜನರು ಉಂಡ್ರು ಖಾಲಿಯಾಗಲ್ವಂತೆ ಅಡುಗೆ..!


ವರದಿ: ಷಡಕ್ಷರಿ, ಏಷ್ಯಾನೆಟ್ ಸುವರ್ಣ ನ್ಯೂಸ್ , ವಿಜಯಪುರ


ವಿಜಯಪುರ, (ಮಾ. 17):
ಉತ್ತರ ಕರ್ನಾಟಕದಲ್ಲಿ  ನಡೆಯೋ ಜಾತ್ರೆಗಳು (North karnataka Fairs) ಒಂದಕ್ಕಿಂತ ಒಂದು ಫೇಮಸ್..‌ ಈ ಭಾಗದಲ್ಲಿ ನಡೆಯೋ ಕೆಲ ಜಾತ್ರೆಗಳು ತುಂಬಾನೇ ಸ್ಪೇಶಲ್.‌ ಅದ್ರಲ್ಲು ಗುಮ್ಮಟನಗರಿ ವಿಜಯಪುರ(Vijayapura) ನಗರದಿಂದ ಕೂಗಳತೆ ದೂರದಲ್ಲಿರೋ ರಂಭಾಪೂರ ಗ್ರಾಮದಲ್ಲಿ ನಡೆಯುವ ಅಂಬಲಿ ಜಾತ್ರೆ ಬಲು ವಿಶಿಷ್ಟ..

ವರ್ಷದ ಮೊದಲ ಹಬ್ಬ ಇದಾಗಿದ್ದರಿಂದ ರಂಬಾಪೂರ ಗ್ರಾಮದ ಸುತ್ತಮುತ್ತಲಿನ ರೈತರು ತಾವು ಬೆಳೆದ ದವಸ, ಧಾನ್ಯಗಳಿಂದ ಮೊದಲು ಊರ ದೇವರು ಆಂಜನೇಯನಿಗೆ ನೈವೇದ್ಯ ಅರ್ಪಿಸುವ ಮೂಲಕ ಜಾತ್ರೆ ಆಚರಿಸುತ್ತಾರೆ..

Latest Videos

undefined

Uttara Kannada: ಶಿರಸಿಯಲ್ಲಿ ಸಂಭ್ರಮದ ಮಾರಿಕಾಂಬೆ ಜಾತ್ರಾ ಮಹೋತ್ಸವ

ಈ ಜಾತ್ರೆಯಲ್ಲಿ ಮಡಿಕೆಯಲ್ಲಿ ರೆಡಿಯಾದ ಅಂಬಲಿಯೇ ಶ್ರೇಷ್ಠ..!
ಈ ಜಾತ್ರೆಗೆ ಅಂಬಲಿ ಜಾತ್ರೆ ಬರೋದಕ್ಕೆ ಕಾರಣವೇ ಗ್ರಾಮದ ಮೆಂಡೆಗಾರ ಕುಟುಂಬಸ್ಥರ ಮನೆಯಲ್ಲಿ ತಯಾರಾಗುವ ಜೋಳದ ಅಂಬಲಿ.. ಜಾತ್ರೆಯ ದಿನ ರಂಬಾಪೂರದ ಮೆಂಡೆಗಾರ ಕುಟುಂಬದಲ್ಲಿ ಗ್ರಾಮದ ಆಂಜನೇಯ ದೇವರಿಗಾಗಿಯೇ ವಿಶೇಷದ ಜೋಳದ ಅಂಬಲಿ ತಯಾರಿಸಲಾಗುತ್ತೆ. ಈ ಅಂಬಲಿಯನ್ನ ಗ್ರಾಮಸ್ಥರು ಮೆರವಣಿಗೆ ಮೂಲಕ ಆಂಜನೇಯ ದೇವರ ಗುಡಿಗೆ ತರ್ತಾರೆ. ಇನ್ನು ಈ ಅಂಬಲಿ ಜಾತ್ರೆಗೆಂದು ಮಹಿಳೆಯರಲ್ಲ ಸೇರಿ ಅಂಬಲಿ ತಯಾರಿಸಿದ ಮಡಿಕೆಯನ್ನ ತಲೆಯ ಮೇಲೆ ಹೊತ್ತು ಊರ ತುಂಬ ಮೆರವಣಿಗೆ ಮೂಲಕ ಬರುವುದು ಅನಾದಿ ಕಾಲದಿಂದಲು ನಡೆದುಕೊಂಡ ಬಂದ ಪದ್ದತಿಯು ಆಗಿದೆ.

ಇನ್ನೊಂದು ವಿಶೇಷ ಅಂದ್ರೆ ದೇವರಿಗೆ ಈ ವಿಶೇಷ ಜೋಳದ ಅಂಬಲಿ ಸಮರ್ಪನೆಯಾದ ಬಳಿಕವೇ ಊರ ಜನರಿಗೆ ಪ್ರಸಾದ ಸ್ವೀಕರಿಸೋದು ವಾಡಿಕೆ..  ಈ ಜಾತ್ರೆಯಲ್ಲಿ ಅಂಬಲಿ ನೈವೇದ್ಯಕ್ಕು ಒಂದು ವಿಶೇಷ ಹಿನ್ನೆಲೆ ಇದೆ. ಶಿವರಾತ್ರಿಯ ಬಳಿಕ ಹೋಳಿ ಹುಣ್ಣಿಮೆ ಸಮೀಪಿಸುವಾಗಲೇ ಬೇಸಿಗೆ ಬಿಸಿಲು ಹೆಚ್ಚಾಗಿರುತ್ತೆ. ಬೇಸಿಗೆಯಲ್ಲಿ ತಂಪನ್ನು ನೀಡುವ ಜೋಳದ ಅಂಬಲಿಯನ್ನ ಹುಳಿ ಹಾಕಿ ಮಣ್ಣಿನ ಮಡಿಕೆಯಲ್ಲಿ ತಯಾರಿಸಿ ತರುತ್ತಾರೆ. ಒಂದರ್ಥದಲ್ಲಿ ಆಂಜನೇಯ ದೇವರಿಗೆ ಸಮರ್ಪನೆಯಾಗುವ ಅಂಬಲಿಗು ಬೇಸಿಗೆ ಆರಂಭವಾಗೋದಕ್ಕು ಒಂದು ಲಿಂಕ್‌ ಇದ್ದೆ ಇದೆ..!

ರೈತ ಹೊಲಗಳಲ್ಲಿ ಬೆಳೆದ ಬೆಳೆಯೇ ಇಲ್ಲಿ ಭಕ್ತರಿಗೆ ಪ್ರಸಾದ..!

ಇನ್ನು ಇದೆ ರಂಬಾಪುರ ಗ್ರಾಮದ ಮೆಂಡೆಗಾರ ಕುಟುಂಬಗಳೆಲ್ಲ ಅಂಬಲಿ ಜೊತೆ ಜೊತೆಗೆ ತಾವು ಬೆಳೆದ ಬೆಳೆಗಳಿಂದ ಮನೆಯಲ್ಲಿ ತರಹೇವಾರಿ ಅಡುಗೆ ತಯಾರಿಸುತ್ತಾರೆ. ಉತ್ತರ ಕರ್ನಾಟಕದ ಸ್ಪೇಷಲ್ ಎಂದೇ ಹೇಳಲಾಗುವ ಜೋಳದ ಖಡಕ್ ರೊಟ್ಟಿ, ಶೇಂಗಾ ಚಟ್ನಿ, ಸಜ್ಜಕ(ಪಾಯಸ), ಬದನೇಕಾಯಿ ಪಲ್ಯೆ, ಕಾಳುಗಳ ಪಲ್ಯೆ ಸೇರಿದಂತೆ ನಾನಾ ಥರಹದ ಅಡುಗೆಯನ್ನು ಮಣ್ಣಿನ ಗಡಿಗೆಯಲ್ಲೇ ತಯಾರಿಸಿ ಹನುಮಾನ ದೇವರಿಗೆ ಅರ್ಪಿಸುತ್ತಾರೆ. ಬಳಿಕ ಅದೇ ದೇವಸ್ಥಾನದ ಆವರಣದಲ್ಲಿ ಇಡಿ ಊರಿನ ಜನ್ರಿಗೆಲ್ಲ ಊಟಕ್ಕೆ ಬಡಿಸಿ, ತಾವೂ ಊಟದ ರುಚಿ ಸವಿಯುತ್ತಾರೆ.

ಈ ಜಾತ್ರೆಯಲ್ಲಿ ಎಷ್ಟೆ ಜನರು ಊಟ ಮಾಡಿದ್ರು ಖಾಲಿಯಾಗಿಲ್ಲ ಅಡುಗೆ..!

ಇನ್ನೊಂದು ವಿಚಿತ್ರ ಸಂಗತಿ ಅಂದ್ರೆ ರಂಬಾಪೂರ ಗ್ರಾಮದ ಕೆಲವೇ ಕುಟುಂಬಸ್ಥರು ಮಾತ್ರ ಮನೆಯಲ್ಲಿ ಅಡುಗೆ ಮಾಡಿ ತಂದು ಊರಿಗೆ ಬಡಿಸಿದ್ರು, ಇಲ್ಲಿ ಅಡುಗೆ ಖಾಲಿಯಾಗೋದೆ ಇಲ್ವಂತೆ.. ಊರ ಜನರು ಊಟ ಮಾಡಿದ್ರು ಕೊನೆಯಲ್ಲಿ ಅಡುಗೆ ಉಳಿಯುತ್ತಂತೆ.. ಇಲ್ಲಿಯವರೆಗೆ ಎಂದು ಕೂಡ ಇಲ್ಲಿ ತಂದ ಅಡುಗೆ ಖಾಲಿಯಾಗಿರುವ ಉದಾಹರಣೆ ಇಲ್ವಂತೆ.. ಮಿಕ್ಕಿದ ಎಲ್ಲ ಅಡುಗೆಯನ್ನ ಜಾತ್ರೆಗೆ ಬಂದ ಜನರು ಮನೆಗೆ ಕೊಂಡೊಯ್ದು ರಾತ್ರಿ ಊಟ ಮಾಡ್ತಾರೆ.. ಇದೆಲ್ಲವು ರಂಬಾಪೂರ ಆಂಜನೇಯನ ಪವಾಡ ಎನ್ತಾರೆ ರಂಬಾಪೂರ ಗ್ರಾಮಸ್ಥರು..

click me!