ರಾಜ್ಯ ಶೇಂಗಾ ಬೆಳೆಗೆ ಬೆಂಬಲ ಬೆಲೆಯನ್ನು ಪ್ರಕಟಿಸುವುದರ ಜೊತೆಗೆ ರೈತರಿಗೆ ವಿಶೇಷ ಪ್ಯಾಕೇಜ್ ಸರ್ಕಾರ ಘೋಷಣೆ ಮಾಡುವುದಾಗಿ ಮಾಜಿ ಶಾಸಕ ಡಾ. ಸಿ.ಎಂ.ರಾಜೇಶ್ ಗೌಡ ಒತ್ತಾಯಿಸಿದ್ದಾರೆ.
ಶಿರಾ: ರಾಜ್ಯ ಶೇಂಗಾ ಬೆಳೆಗೆ ಬೆಂಬಲ ಬೆಲೆಯನ್ನು ಪ್ರಕಟಿಸುವುದರ ಜೊತೆಗೆ ರೈತರಿಗೆ ವಿಶೇಷ ಪ್ಯಾಕೇಜ್ ಸರ್ಕಾರ ಘೋಷಣೆ ಮಾಡುವುದಾಗಿ ಮಾಜಿ ಶಾಸಕ ಡಾ. ಸಿ.ಎಂ.ರಾಜೇಶ್ ಗೌಡ ಒತ್ತಾಯಿಸಿದ್ದಾರೆ.
ಈ ಬಗ್ಗೆ ಅವರು ತಾಲೂಕಿನ ಹಲವು ಗ್ರಾಮಗಳ ರೈತರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಬಾರಿ ಶಿರಾ ತಾಲೂಕಿನಲ್ಲಿ 19000 ಹೆಕ್ಟರ್ ಪ್ರದೇಶಗಳಲ್ಲಿ ಶೇಂಗಾ ಬೆಳೆ ನಾಶವಾಗಿದೆ. ರೈತರು ಈ ಬಾರಿ ಶೇಂಗಾ ಬೀಜವನ್ನು ಪ್ರತಿ ಕ್ವಿಂಟಲ್ಗೆ 10 ರಿಂದ 12 ಸಾವಿರ ರು. ಖರೀದಿಸಿದ್ದಾರೆ.
undefined
ಶೇಂಗಾ ಬೆಳೆಯನ್ನು ಕ್ವಿಂಟಾಲ್‌ಗೆ 55000 ರಿಂದ 6,000 ರು. ಕೊಂಡುಕೊಳ್ಳುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಸರ್ಕಾರ ಕೂಡಲೇ ಶೇಂಗಾ ಬೆಳೆಗೆ ಬೆಂಬಲವಾಗಿ ಕನಿಷ್ಠ 9,000 ರು. ಬೆಲೆ ಸರ್ಕಾರ ಹೊಂದಿದೆ. ಪ್ರತಿವರ್ಷ ಶೇಂಗಾ ಮತ್ತು ತೊಗರಿ ಬೆಳೆಗಳು ವೈಫಲ್ಯ ಕಂಡಾಗ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿದೆ. ಆದರೆ, ಪ್ರಸಕ್ತ ಸಾಲಿನ ವರ್ಷದ ಇಳುವರಿ ಮಳೆಯ ಸರಾಸರಿ ಹಾಗೂ ಬೇಡಿಕೆಗಳ ಅಂದಾಜು ಇಟ್ಟುಕೊಂಡು ವರದಿ ಸಲ್ಲಿಸಿದರೆ ಉತ್ತಮ. ಇಲಾಖೆಯು ಮೂರು ವರ್ಷದ ಸರಾಸರಿ ಪಡೆದ ಪರಿಹಾರ ಘೋಷಿಸಿದಾಗ ರೈತರಿಗೆ ಸಿಗುವ ಪರಿಹಾರ ಧನ ಪ್ರೋತ್ಸಾಹದಾಯಕವಾಗಿದೆ, ಆದ್ದರಿಂದ ಪ್ರಸಕ್ತ ಸಾಲಿನ ಸರಾಸರಿ ಅಂದಾಜು ಮೂಲಕ ಪರಿಹಾರ ನೀಡಬೇಕೆಂದು ಕೃಷಿ ಒತ್ತಾಯಿಸಿದೆ, ಇದರ ಬಗ್ಗೆ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಗಮನಕ್ಕೂ ತರಲಾಗುವುದು ಎಂದು ಡಾ. ಸಿ.ಎಂ. ರಾಜೇಶ್ ಗೌಡ ಅವರು.
ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ಶೇಂಗಾ ಚಿಕ್ಕಿ
ಕೆ.ಎಂ.ಮಂಜುನಾಥ್
ಬಳ್ಳಾರಿ: ದಮನಿತ ಮಹಿಳೆಯರ ಬದುಕಿಗೆ ಆಶ್ರಯ ಕಲ್ಪಿಸಬೇಕು ಎಂಬ ಉದ್ದೇಶದಿಂದ ಆರಂಭವಾದ ಸಣ್ಣದೊಂದು ಉದ್ಯಮ ಇದೀಗ ಹತ್ತಾರು ಜನರಿಗೆ ಕೆಲಸ ಕೊಡುವಷ್ಟು ಬೆಳೆದು ನಿಂತಿದೆ. ಕೋವಿಡ್‌ನಲ್ಲಿ ಸಂಕಷ್ಟ ಎದುರಿಸುತ್ತಿದ್ದ ದಮನಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಬೇಕು ಎಂಬ ಆಶಯದಿಂದ ಅಂದಿನ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ
ಜೊತೆ ಚರ್ಚಿಸಿದ್ದರು. ಅಲ್ಲದೇ, ದಮನಿತ ಮಹಿಳೆಯರಿಗೆ ಏನಾದರೂ ಕೆಲಸ ನೀಡಬೇಕು. ಅದರಿಂದ ಅವರ ಆರ್ಥಿಕ ಬದುಕು ಸುಸ್ಥಿರಗೊಳ್ಳಬೇಕೆಂದು ಯೋಚಿಸಿ, ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಅಂತೆಯೇ ದಮನಿತ ಮಹಿಳೆಯರಿಗೆ 'ಶೇಂಗಾ ಚಿಕ್ಕಿ' ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ನಿರ್ಧರಿಸಲಾಗುತ್ತದೆ. ಮಹಿಳೆಯರು ತಯಾರಿಸಿದ ಶೇಂಗಾ ಚಿಕ್ಕಿಯನ್ನು ಮಾರುಕಟ್ಟೆ ಮಾಡುವುದು ಹೇಗೆ? ಎಂಬ
ಪ್ರಶ್ನೆ ಎದುರಾಗುತ್ತದೆ. ಆಗ ಹೊಳೆದಿದ್ದೇ ಅಂಗನವಾಡಿ ಕೇಂದ್ರಗಳಿಗೆ ಶೇಂಗಾ ಚಿಕ್ಕಿಯನ್ನು ಪೂರೈಸುವ ನಿರ್ಧಾರ. ಕೊನೆಗೆ ದಮನಿತ ಮಹಿಳೆಯರಿಗೆ ಶೇಂಗಾಚಿಕ್ಕಿ ತಯಾರಿಕೆ ಕುರಿತು, ತರಬೇತಿ ನೀಡಲಾಗುತ್ತದೆ.
ಆನ್‌ಲೈನ್ ಮಾರ್ಕೆಟಿಂಗ್ ಮೂಲಕವೇ ಬದುಕು ಕಟ್ಟಿಕೊಂಡ ಯುವ ಕೃಷಿಕರು
ಮಹಿಳೆಯರು ತಯಾರಿಸಿದ ಶೇಂಗಾ ಚಿಕ್ಕಿಯು ಬಳ್ಳಾರಿ ನಗರ ಹಾಗೂ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳಿಗೆ ಪೂರೈಸಲಾಗುತ್ತದೆ. 20 ಮಹಿಳೆಯರು ಶೇಂಗಾಚಿಕ್ಕಿ ತಯಾರಿಕೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ ತಲಾ 8 ರಿಂದ 10 ಸಾವಿರ ರು.ವರೆಗೆ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಶೇಗಾಚಿಕ್ಕಿ ತಯಾರಿಕೆಗೆ ಬೇಕಾದ ಶೇಂಗಾ, ಬೆಲ್ಲವನ್ನು ಮಹಿಳೆಯರೇ ಖರೀದಿಸಿ ಚಿಕ್ಕಿ ತಯಾರಿಸುತ್ತಾರೆ. ಬಳ್ಳಾರಿ ನಗರ ಹಾಗೂ ಬಳ್ಳಾರಿ ತಾಲೂಕಿನ ಗ್ರಾಮೀಣ ಪ್ರದೇಶ ಸೇರಿ ಒಟ್ಟು ಪ್ರತಿ ತಿಂಗಳಿಗೆ 12 ರಿಂದ 14 ಲಕ್ಷ ಪೀಸ್ ಶೇಂಗಾಚಿಕ್ಕಿಯನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಸಲಾಗುತ್ತಿದೆ. ಆರಂಭದಲ್ಲಿ ಕೈಯಿಂದಲೇ ಈ ತಯಾರಿಸುತ್ತಿದ್ದ ಮಹಿಳೆಯರಿಗೆ ಇಲಾಖೆ ನೆರವಾಗಿದ್ದು, ಆಧುನಿಕ ಉಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಿದೆ. ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೆ ಒದ್ದಾಡುವ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ ನಕುಲ್ ಅವರ ಕಾಳಜಿಯಿಂದ 20ಕ್ಕೂ ಹೆಚ್ಚು ದಮನಿತ ಮಹಿಳೆಯರು ಈ ಚಿಕ್ಕಿ ತಯಾರಿಕೆ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ.