ಲಿಂಗಸೂಗೂರು: ಪರಿಸರ ಪ್ರೇಮಿಗಳಿಗೆ ಕೈಬೀಸಿ ಕರೆಯುತ್ತಿದೆ ಟೆರೇಸ್ ಗಾರ್ಡನ್..!

By Girish GoudarFirst Published Jun 5, 2022, 11:17 AM IST
Highlights

*  ಚಿಕ್ಕ ಮನೆಯ ಟೆರೇಸ್ 
*  ಮನೆ ಮೇಲೆ 300 ವಿವಿಧ ಸಸಿಗಳ ಪೋಷಣೆ 
*  ಸುಮಾ ಅವರ ಪರಿಸರ ಕಾಳಜಿ ಕಂಡು ಚಿನ್ನದ ನಾಡಿನ ಜನರು ಬೆರಗು 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಜೂ.05): ಇತ್ತೀಚಿಗೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅಷ್ಟೊಂದು ದುಡ್ಡು ಕೊಟ್ಟು, ಅದನ್ನು ತರುವುದು ಮಾತ್ರವಲ್ಲ, ಅದರ ಜತೆ ರಾಸಾಯನಿಕ ವಸ್ತುಗಳನ್ನೂ ನಾವು ಸೇವಿಸುತ್ತಿದೇವೆ. ರಾಸಾಯನಿಕ ವಸ್ತು ಮುಕ್ತವಾದ ತರಕಾರಿ- ಹಣ್ಣು ನಾವು ಸೇವಿಸಬೇಕೆಂದು ಭಾವಿಸಿ ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದ ಸುಮಾ ಎಂಬುವರು ತಮ್ಮ ಮನೆಯ ಟೆರೇಸ್ ‌ಮೇಲೆ ಕೈತೋಟ ಮಾಡಿ ಈಗ ಎಲ್ಲರ‌ ಗಮನ ಸೆಳೆಯುತ್ತಿದ್ದಾರೆ.

ಮೊದಲಿನಿಂದಲೂ ಕೈತೋಟದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಸುಮಾ ಅವರು ಮೂಲತಃ ರಾಯಚೂರು ಜಿಲ್ಲೆ ಲಿಂಗಸೂಗೂರು ‌ಪಟ್ಟಣದವರು. ಎಂ.ಎ ಮತ್ತು ‌ಎಂ.ಇಡಿ ಪದವಿಯನ್ನು ಪಡೆದಿರುವ ಸುಮಾಗೆ ಕೃಷಿಯ ಬಗ್ಗೆ ಹೆಚ್ಚು ಒಲವು ಜೊತೆಗೆ ಕೃಷಿಯಲ್ಲೇ ಸಾಧನೆ ಮಾಡಬೇಕು ಎಂಬುದು ಇವರ ಕನಸು ಇತ್ತು. ಆದ್ರೆ ಕೃಷಿ ಮಾಡಲು ಜಮೀನು ಇಲ್ಲದೆ ಇರುವುದರಿಂದ ಮನೆ ಮುಂದಿ‌ನ ಜಾಗದಲ್ಲಿ ಸಸಿಗಳು ಹಾಕಿದ್ರು. ರಾತ್ರಿ ವೇಳೆ ದನಗಳು ಹಾಕಿರುವ ಹೂವಿನ ಗಿಡಗಳು ಮತ್ತು ಸಸಿಗಳು ‌ನಾಶ ಮಾಡಿ ಹೋಗಿದ್ದೆವು. ಇದರಿಂದ ಬೇಸರಗೊಂಡ ಸುಮಾ ಏನು ಮಾಡಬೇಕೆಂದು ಆಲೋಚನೆ ಮಾಡಿ ಹೊಸ ನಿರ್ಧಾರಕ್ಕೆ ಬಂದ್ರು. ಅದುವೇ ನೋಡಿ ಟೆರೇಸ್ ಗಾರ್ಡನ್. 

ಮುಂದಿನ ಚುನಾವಣೆಗಾಗಿ ಶಾಸಕ ಶಿವನಗೌಡ ‌ನಾಯಕ ಭರ್ಜರಿ ತಯಾರಿ!

ಟೆರೇಸ್ ಗಾರ್ಡನ್‌ಗೆ ಸಾಥ್ ನೀಡಿದ ಕೊರೋನಾ! 

ಎಂ.ಎ ಸಮಾಜಶಾಸ್ತ್ರ ಪದವಿ ಪಡೆದ ಸುಮಾ ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕೊರೋನಾ ಬಂದಿದ್ದರಿಂದ ಶಾಲೆಗಳಿಗೆ ರಜೆ ನೀಡಿದ್ರು. ಹೀಗಾಗಿ ಸುಮಾ ಅವರು ಮನೆಯಲ್ಲಿ ಇದ್ದ ಎಲ್ಲಾ ಸಮಯವನ್ನು ‌ಟೆರೇಸ್ ಗಾರ್ಡನ್ ಗಾಗಿ‌ ಮೀಸಲು ಇಟ್ಟು ಈಗ ನಿತ್ಯವೂ ಹಣ್ಣು ಮತ್ತು ತರಕಾರಿ ತಮ್ಮ ಟೆರೇಸ್ ಗಾರ್ಡನ್ ನಲ್ಲಿಯೇ ಬೆಳೆಯುತ್ತಿದ್ದಾರೆ.

ಟೆರೇಸ್ ಗಾರ್ಡನ್‌‌ನ ಹೂನಿಂದಲ್ಲೇ ನಿತ್ಯ ದೇವರಿಗೆ ಪೂಜೆ: 

ಕೊರೋನಾ ಸಮಯದಲ್ಲಿ ಹೂ ಮತ್ತು ತರಕಾರಿ ತರಲು ಹೊರಗಡೆ ಹೋಗಲು ಸಹ ಅವಕಾಶ ಇರಲಿಲ್ಲ. ಹೀಗಾಗಿ ಸುಮಾ ತರಕಾರಿ ಮತ್ತು ಹೂವಿನ ಸಸಿಗಳು ‌ನಾಟಿ ಮಾಡಿ ಗಿಡಗಳು ಬೆಳೆಸಿದ್ದಾರೆ. ಈಗ ಆ ಎಲ್ಲಾ ಗಿಡಗಳು ನಿತ್ಯವೂ ಬಣ್ಣ- ಬಣ್ಣದ ಹೂಗಳು ನೀಡುತ್ತಿವೆ.

3 ವರ್ಷದಲ್ಲಿ 300 ಸಸಿಗಳ ಪೋಷಣೆ: 

ಸುಮಾ ಶಿಕ್ಷಕಿಯಾಗಿದ್ರೂ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಪರಿಸರ ಉಳಿದರೇ ನಾವು - ನೀವೂ ಅಂತ ಮಕ್ಕಳಿಗೆ ಪಾಠ ಮಾಡುವಾಗ ಹತ್ತಾರು ‌ಬಾರೀ ಹೇಳುವುದು ಆಗಿತ್ತು. ಪ್ರತಿ ದಿನವೂ ನಾನು ಸಸಿ- ಗಿಡಗಳು ಬೆಳೆಸಬೇಕು ಅಂತ ಆಲೋಚನೆ ಮಾಡುತ್ತಿದ್ರು. ಅದರ ಆಗಿರಲಿಲ್ಲ. ಕೊರೊನಾ ಬಂದಾಗ ಶಾಲೆಗಳಿಗೆ ರಜೆ ಸಿಕ್ಕಿತು. ಇದೇ ಒಳ್ಳೆಯ ಸಮಯವೆಂದು ಭಾವಿಸಿ 3 ವರ್ಷದಲ್ಲಿ 300 ಸಸಿಗಳು ಬೆಳೆಸಿದ್ದಾರೆ.

ಟೆರೇಸ್ ಗಾರ್ಡನ್ ‌ನಲ್ಲಿಯೇ ಸಿಗುತ್ತಿದೆ ಮನೆಗೆ ಬೇಕಾದಷ್ಟು ತರಕಾರಿ: 

ಪರಿಸರ ಬಗ್ಗೆ ಅಪಾರ ‌ಕಾಳಜಿ ಹೊಂದಿರುವ ಸುಮಾ ಮನೆಯ ‌30X40 ಜಾಗದಲ್ಲಿ 30 ಗಿಡಗಳ ಪೋಷಣೆ ‌ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಮನೆಗೆ ಬೇಕಾದ ಟೊಮ್ಯಾಟೊ, ಮೆಣಸಿನಕಾಯಿ, ಸೊಪ್ಪುಗಳು ಹಾಗೂ ನಿಂಬೆಹಣ್ಣು ಸೇರಿದಂತೆ ‌ಹತ್ತಾರು ಬಗ್ಗೆ ತರಕಾರಿ ‌ಕಾಲಕ್ಕೆ ತಕ್ಕಂತೆ ‌ಬೆಳೆಸಲು ಮುಂದಾಗಿದ್ದಾರೆ.

ಸಿಹಿ ಸುದ್ದಿ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಡ್ಲೆ ಮಿಠಾಯಿ ವಿತರಣೆಗೆ ಚಿಂತನೆ

ಪ್ಲಾಸ್ಟಿಕ್ ವೆಸ್ಟ್ ‌ಡಬ್ಬದಲ್ಲಿಯೇ ಸಸಿಗಳ ಪೋಷಣೆ: 

30X40 ಅಡಿ ಜಾಗದಲ್ಲಿ ಟೆರೇಸ್ ಗಾರ್ಡನ್ ಮಾಡಿ  ಪ್ಲಾಸ್ಟಿಕ್ ವೆಸ್ಟ್  ಪದಾರ್ಥಗಳನ್ನು ಬಳಕೆ ಮಾಡಿ ಸಸಿಗಳನ್ನು ‌ಬೆಳೆಸಲು ಮುಂದಾಗಿದ್ದಾರೆ. ನೀರಿನ ವೆಸ್ಟ್ ಡಬ್ಬ. ಹಳೆಯ ಬಕೆಟ್ ಇತರೆ ವೆಸ್ಟ್ ವಸ್ತುಗಳನ್ನು ಉಪಯೋಗಿಸಿ ಸಸಿಗಳನ್ನು ಬೆಳೆಸಿದ್ದಾರೆ. ಮನೆಯಿಂದ ಬಿಸಾಕಬೇಕಾಗಿರುವ ವಸ್ತುಗಳನ್ನು ಬಳಕೆ ಮಾಡಿಕೊಂಡು 300ಸಸಿಗಳನ್ನ ಬೆಳೆಸುತ್ತಿದ್ದಾರೆ.

ಸಸಿಗಳಿಗೆ ಮನೆಯಲ್ಲಿನ ವೆಸ್ಟ್ ಪದಾರ್ಥಗಳೇ ಗೊಬ್ಬರ: 

ರಾಸಾಯನಿಕ ‌ಮುಕ್ತ ಸಸಿಗಳನ್ನು ‌ಬೆಳೆಸಲು ಪಣತೊಟ್ಟಿರುವ ಸುಮಾ. ಮನೆಯಲ್ಲಿ ಅಡುವೆ ವೇಳೆಯಲ್ಲಿ ವೆಸ್ಟ್ ಆಗುವ ತರಕಾರಿ, ಹಣ್ಣು ಮತ್ತು ಅಡುಗೆ ಪದಾರ್ಥಗಳನ್ನು ಗೊಬ್ಬರವಾಗಿ ಮಾಡಿ ಸಸಿಗಳಿಗೆ ಹಾಕಿ ಪೋಷಣೆ ಮಾಡುತ್ತಿದ್ದಾರೆ. 
ಸುಮಾ ಅವರು ಮಾಡಿದ ಟೆರೇಸ್ ಗಾರ್ಡನ್ ನೋಡಿದ ಪ್ರತಿಯೊಬ್ಬರೂ ಸೂಪರ್ ಎಂದು ಹೇಳುವ ರೀತಿಯಲ್ಲಿ ಟೆರೇಸ್ ಗಾರ್ಡನ್ ‌ನಿರ್ವಹಣೆ ಮಾಡುತ್ತಿದ್ದಾರೆ. ತಮಗೂ ಕೂಡ ಸಮಯ ಸಿಕ್ಕರೆ ಇಂತಹ ಟೆರೇಸ್ ಗಾರ್ಡನ್ ಒಮ್ಮೆ ನೋಡಿ ನೀವೂ ನಿಮ್ಮ ಮನೆಯ ಟೆರೇಸ್ ಮೇಲೆ ಗಾರ್ಡನ್ ಮಾಡಿ ಪರಿಸರ ಸ್ನೇಹಿ ಆಗಿ. 
 

click me!