ನಮ್ಮ ಪ್ರಕೃತಿ ಹಲವು ವಿಸ್ಮಯಗಳ ಆಗರ. ಮನುಷ್ಯ ಯಾವುದು ಅಸಾಧ್ಯ ಅಂತಾನೋ ಅದನ್ನು ಕೂಡಾ ಸಾಧ್ಯ ಅಂತಾ ತೋರಿಸುತ್ತೆ ಭಗವಂತನ ಈ ಸೃಷ್ಠಿ. ಈ ಒಂದು ಉತ್ತಮ ಉದಾಹರಣೆಯಂದರೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಬೆಳೆದ ಈ ರುದ್ರಾಕ್ಷಿ ಮರ
ವರದಿ: ಭರತ್‌ರಾಜ್ ಕಲ್ಲಡ್ಕ, ಕಾರವಾರ
ಗೋಕರ್ಣ (ಏ.02): ನಮ್ಮ ಪ್ರಕೃತಿ ಹಲವು ವಿಸ್ಮಯಗಳ ಆಗರ. ಮನುಷ್ಯ ಯಾವುದು ಅಸಾಧ್ಯ ಅಂತಾನೋ ಅದನ್ನು ಕೂಡಾ ಸಾಧ್ಯ ಅಂತಾ ತೋರಿಸುತ್ತೆ ಭಗವಂತನ ಈ ಸೃಷ್ಠಿ. ಈ ಒಂದು ಉತ್ತಮ ಉದಾಹರಣೆಯಂದರೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಗೋಕರ್ಣದಲ್ಲಿ (Gokarna) ಬೆಳೆದ ಈ ರುದ್ರಾಕ್ಷಿ ಮರ (Rudraksha Tree). ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ಬೆಳೆಯುವ ಗಿಡ- ಮರಗಳನ್ನು ಉಷ್ಣತೆ ಇರುವ ಕರಾವಳಿ ಪ್ರದೇಶದಲ್ಲಿ ಬೆಳೆಯುವುದು ಕಷ್ಟವೇ ಸರಿ. ಆದರೆ, ಪ್ರಕೃತಿ ಮಾತ್ರ ಸರ್‌ಪ್ರೈಸ್. ಎಂದು ಹೇಳುವ ಮೂಲಕ ಗೋಕರ್ಣದ ಜನರನ್ನು ಅಚ್ಚರಿಗೆ ಒಳಗಾಗುವಂತೆ ಮಾಡಿದೆ. ನೇಪಾಳ, ಹಿಮಾಚಲ ಪ್ರದೇಶ, ಅಸ್ಸಾಂ ಮುಂತಾದ ಶೀತ ಪ್ರದೇಶದಲ್ಲಿ ಬೆಳೆಯುವ ರುದ್ರಾಕ್ಷಿ ಮರ, ಕರಾವಳಿ ಪ್ರದೇಶವಾಗಿರುವ ಗೋಕರ್ಣದಲ್ಲೂ ಬೆಳೆದು ನಿಂತಿದೆ.
undefined
ಗೋಕರ್ಣದ ಕವಳೆ ಮಠದಲ್ಲಿ ಈ ರುದ್ರಾಕ್ಷಿ ಮರ ಬೆಳೆದು ನಿಂತಿದ್ದು, ಶಿವನ (Lord Shiva) ಪವಾಡದಿಂದಲೇ ಈ ಗಿಡ ಬೆಳೆಯಲು ಸಾಧ್ಯವಾಗಿದೆ ಅನ್ನೋದು ಭಕ್ತರ (Devotees) ಅಭಿಪ್ರಾಯ. ಇನ್ನು ಇದೇ ಗಿಡದಲ್ಲಾದ ರುದ್ರಾಕ್ಷಿಯಿಂದ ತಯಾರಿಸಿದ ಹಾರವನ್ನು ಯುಗಾದಿಯ ವಿಶೇಷ ದಿನವಾಗಿರುವ ಇಂದು ಸಾರ್ವಭೌಮ ಗೋಕರ್ಣ ಮಹಾಬಲೇಶ್ವರನ ಉತ್ಸವ ಮೂರ್ತಿಗೆ ಸಮರ್ಪಣೆ ಮಾಡಲಾಗಿದೆ. ಸ್ಥಳೀಯ ಕವಳೆ ಮಠದಲ್ಲಿ ಹುಲುಸಾಗಿ ಬೆಳೆದ ಈ ಗಿಡ ರುದ್ರಾಕ್ಷಿ ಫಲವನ್ನು ನೀಡುತ್ತಿರುವುದು ಶಿವನ ಕೃಪೆಯಿಂದಲೇ ಎನ್ನಲಾಗುತ್ತಿದ್ದು, ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ವಿಶೇಷ ಆಸಕ್ತಿಯಿಂದ ಬೆಳೆಸಿದ ಈ ಗಿಡವು ಸುಮಾರು 10 ವರ್ಷದಲ್ಲಿ ಫಲ ನೀಡಿದೆ.
ಕಲ್ಕಡ್ಕ ಭಟ್ ಜೊತೆ ಕೇಸರಿ ಶಾಲು ಧರಿಸಿಯೇ ವಿದ್ಯಾರ್ಥಿಗಳು ಭಾಗಿ: ಸಿಎಫ್ಐ ಪ್ರತಿಭಟನೆ
ಪ್ರತೀ ವರ್ಷ ಯುಗಾದಿಯಂದು ಶ್ರೀ ಮಹಾಬಲೇಶ್ವರ ದೇವರ ಸವಾರಿಯು ಕಳವೇ ಮಠಕ್ಕೆ ಆಗಮಿಸುತ್ತಿದ್ದು, ಈ ವರ್ಷದಲ್ಲಿ ವಿಶೇಷವಾಗಿ ಮಠದಲ್ಲಿ ಬೆಳೆಸಲಾದ ರುದ್ರಾಕ್ಷಿಯನ್ನು ಶ್ರೀ ಮಹಾಬಲೇಶ್ವರನಿಗೆ ಅರ್ಪಿಸಲಾಗಿದೆ. ಇಲ್ಲಿನ ಮತ್ತೊಂದು ಅಚ್ಚರಿಯೆಂದರೆ, ಈಗಾಗಲೇ ಕೆಲವರು ಗಿಡ ನೆಟ್ಟು ರುದ್ರಾಕ್ಷಿ ಬೆಳೆಯಲು ಪ್ರಯತ್ನಿಸಿ ವಿಫಲವಾಗಿದ್ದು, ಕವಳೇ ಮಠದಲ್ಲಿ ಮಾತ್ರ ಸೊಂಪಾಗಿ ಬೆಳೆದಿದೆ. ಕರಾವಳಿ ಭಾಗದಲ್ಲಿ ವರ್ಷದ 6ರಿಂದ 8 ತಿಂಗಳು ವಿಪರೀತ ಸೆಖೆ ಇರುವ ಕಾರಣ ಇಲ್ಲಿ ರುದ್ರಾಕ್ಷಿ ಬೆಳೆಯದು ಎಂದು ತೀರ್ಮಾನಿಸಲಾಗಿತ್ತು. ಆದರೆ, ಗೋಕರ್ಣ ಕ್ಷೇತ್ರದಲ್ಲಿ ಶಿವನ ಸಂಕೇತವಾದ ರುದ್ರಾಕ್ಷಿ ಬೆಳೆದಿದೆ ಅನ್ನೋದು ಭಕ್ತರ ವಿಶ್ಲೇಷಣೆ.
Mangaluru: ಮುಸ್ಲಿಮರಿಗೆ ನಿರ್ಬಂಧವಿದ್ದರೂ ಬಪ್ಪ ಬ್ಯಾರಿ ಮನೆಗೆ ಹಿಂದೂ ದೇವರ ಪ್ರಸಾದ..!
ಮಹಾಬಲೇಶ್ವರನಿಗೆ ಬೆಳ್ಳಿಯಲ್ಲಿ ಕಟ್ಟಿಸಿದ ರುದ್ರಾಕ್ಷಿ ಅರ್ಪಣೆ: ಹೌದು! ಶಿವರಾತ್ರಿಯಂದು ಮರದಿಂದ ತೆಗೆದ ರುದ್ರಾಕ್ಷಿಯನ್ನು ಮಠದ ಶ್ರೀಗಳು ಆತ್ಮಲಿಂಗಕ್ಕೆ ಪೂಜಾ ಸಮಯದಲ್ಲಿ ಸಮರ್ಪಣೆ ಮಾಡಿದ್ದರು. ನಂತರ ಶ್ರೀಗಳು ಬೆಳ್ಳಿಯಲ್ಲಿ ಕಟ್ಟಿ ರುದ್ರಾಕ್ಷಿ ಮಾಲೆಯನ್ನು ನಿರ್ಮಿಸಿದ್ದಾರೆ. ಈ ಹಾರದಲ್ಲಿ ಪಂಚಮುಖಿಯ 54 ರುದ್ರಾಕ್ಷಿಗಳಿದ್ದು, ಸುಂದರ ಹಾರ ನಿರ್ಮಿಸಲಾಗಿದೆ. ಇಂದು ಯುಗಾದಿ ಆಗಿರೋದ್ರಿಂದ ಶ್ರೀ ಮಹಾಬಲೇಶ್ವರನ ಉತ್ಸವ ಮೂರ್ತಿಗೆ ಸಮರ್ಪಿಸಲಾಗಿದೆ. ಇನ್ನು ಶ್ರೀ ಮಠದ ವತಿಯಿಂದ ಶ್ರೀ ಮಹಾಬಲೇಶ್ವರ ದೇವಾಲಯದ ಆವರಣದಲ್ಲಿ ರುದ್ರಾಕ್ಷಿ ಗಿಡಗಳನ್ನು ಬೆಳೆಸಲು ಸಂಕಲ್ಪಿಸಲಾಗಿದೆ. ಈ ಬಾರೀ ಸೆಖೆಯ ನಡುವೆಯೂ ಶ್ರೀ ಮಹಾಬಲೇಶ್ವರನ ಸನ್ನಿಧಿಯಲ್ಲಿ ರುದ್ರಾಕ್ಷಿ ಬೆಳೆದಿರುವುದು ಭಕ್ತರಲ್ಲಂತೂ ಹರ್ಷ ಇಮ್ಮಡಿಗೊಳಿಸಿದೆ.