Latest Videos

ರೇಣುಕಾಸ್ವಾಮಿ ಹತ್ಯೆ: ದರ್ಶನ್ ನಂಬಿ ಜೈಲುಪಾಲು, ಬೆಂಗ್ಳೂರಿಗೆ ಬರಲು ನಂದೀಶ್ ಕುಟುಂಬ ಬಳಿ ಹಣವಿಲ್ಲ..!

By Kannadaprabha NewsFirst Published Jun 23, 2024, 12:35 PM IST
Highlights

ನಟ ದರ್ಶನ್ ನಂಬಿ ಇದೀಗ ಎ5 ಆರೋಪಿಯಾಗಿ ಜೈಲು ಸೇರಿರುವ ನಂದೀಶ್ ಆತನ ಕುಟುಂಬಕ್ಕೆ ಆಸರೆಯಾಗಿದ್ದವನು. ಈಗ ಜೈಲು ಸೇರಿರುವ ಆತನನ್ನು ನೋಡಿಕೊಂಡು ಬರಲೂ ಕುಟುಂಬದ ಬಳಿ ಹಣ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ತಮ್ಮನನ್ನು ನೆನೆದು ಆತನ ಸಹೋದರಿ ನಂದಿನಿ ಇದೀಗ ಕಣ್ಣೀರಿಡುತ್ತಿದ್ದಾರೆ. 

ಮಂಡ್ಯ(ಜೂ.23):  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ಆಪ್ತ ನಂದೀಶ್ ನನ್ನು ಬೆಂಗಳೂರಿಗೆ ಹೋಗಿ ನೋಡಿಕೊಂಡು ಬರಲೂ ಹಣವಿಲ್ಲದೆ ಕುಟುಂಬ ಸದಸ್ಯರು ಪರದಾಡುತ್ತಿದ್ದಾರೆ. 

ನಟ ದರ್ಶನ್ ನಂಬಿ ಇದೀಗ ಎ5 ಆರೋಪಿಯಾಗಿ ಜೈಲು ಸೇರಿರುವ ನಂದೀಶ್ ಆತನ ಕುಟುಂಬಕ್ಕೆ ಆಸರೆಯಾಗಿದ್ದವನು. ಈಗ ಜೈಲು ಸೇರಿರುವ ಆತನನ್ನು ನೋಡಿಕೊಂಡು ಬರಲೂ ಕುಟುಂಬದ ಬಳಿ ಹಣ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ತಮ್ಮನನ್ನು ನೆನೆದು ಆತನ ಸಹೋದರಿ ನಂದಿನಿ ಇದೀಗ ಕಣ್ಣೀರಿಡುತ್ತಿದ್ದಾರೆ. 

ಹಲ್ಲೆಯಾಗುವ ಭೀತಿ: ತುಮಕೂರಿಗೆ ದರ್ಶನ್ ಸಹಚರರ ಶಿಫ್ಟ್‌ಗೆ ಪೊಲೀಸರ ಮನವಿ

ಅಸ್ತಮ ಕಾಯಿಲೆಯಿಂದ ತೀವ್ರ ಬಳಲುತ್ತಿರುವ ತಾಯಿ ಭಾಗ್ಯಮ್ಮ ಕೂಡ ಮಗನನ್ನು ಕಾಣಲು ಹಾತೊರೆಯುತ್ತಿದ್ದಾರೆ. ನಂದೀಶನೇ ಮನೆಗೆ ಆಧಾರವಾಗಿದ್ದ. ಆತನ ದುಡಿಮೆಯಿಂದಲೇ ಕುಟುಂಬ ನಡೆಯುತ್ತಿತ್ತು. ಇದೀಗ ಆತ ಜೈಲು ಸೇರಿರುವ ಹಿನ್ನೆಲೆಯಲ್ಲಿ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಮದುವೆ ಆಗಬೇಕಿದ್ದವನು ಜೈಲಿಗೆ ಹೋದ ಎಂದು ನೋವು ತೋಡಿಕೊಳ್ಳುತ್ತಿದೆ.

click me!