ಮಣ್ಣಿನ ಫಲವತ್ತತೆಯನ್ನು ನಿರ್ಧರಿಸುವ ಸಾವಯವ ಇಂಗಾಲದ ಮಟ್ಟವನ್ನು ಮಣ್ಣಿನಲ್ಲಿ ನಿರ್ವಹಿಸುವುದು ಮಣ್ಣಿನ ಆರೋಗ್ಯ ವೃದ್ಧಿಗೆ ಬಹಳ ಮುಖ್ಯ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಜಿ.ಎಚ್. ಯೋಗೇಶ್ ತಿಳಿಸಿದರು.
ಮೈಸೂರು: ಮಣ್ಣಿನ ಫಲವತ್ತತೆಯನ್ನು ನಿರ್ಧರಿಸುವ ಸಾವಯವ ಇಂಗಾಲದ ಮಟ್ಟವನ್ನು ಮಣ್ಣಿನಲ್ಲಿ ನಿರ್ವಹಿಸುವುದು ಮಣ್ಣಿನ ಆರೋಗ್ಯ ವೃದ್ಧಿಗೆ ಬಹಳ ಮುಖ್ಯ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಜಿ.ಎಚ್. ಯೋಗೇಶ್ ತಿಳಿಸಿದರು.
ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಹುಣಸೂರು ತಾಲೂಕಿನ ಕರುಣಕುಪ್ಪೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ- ತುಂತುರು ಹಾಗೂ ರಸಾವರಿ ಪದ್ಧತಿಗಳ ಅಳವಡಿಕೆ ಕುರಿತು ರೈತ, ರೈತ ಮಹಿಳೆಯರ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
undefined
ನಾವು ಸತ್ತರೆ ಮಣ್ಣಿಗೆ, ಮಣ್ಣೇಸತ್ತರೆ- ಮಣ್ಣಿನ ಜೀವಂತಿಕೆಯನ್ನು ನಿರ್ಧರಿಸುವ ಗಳ ಸಂಖ್ಯೆ ಮತ್ತು ಅವುಗಳ ಚಟುವಟಿಕೆಯನ್ನು ಹೆಚ್ಚಿಸುವುದರಿಂದ ಮಣ್ಣು ಸಾಯದಂತೆ ನೋಡಿಕೊಳ್ಳಬಹುದು ಎಂದರು.
ತೋಟಗಾರಿಕೆ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಪ್ಪ ಅವರು, ವೈಜ್ಞಾನಿಕ ಪದ್ಧತಿಗಳಿಂದ ಶುಂಠಿ ಬೇಸಾಯ ಕ್ರಮಗಳ ಕುರಿತು ತಿಳಿಸಿದರು.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಸಹಾಯಕ ತೋಟಗಾರಿಕಾ ಅಧಿಕಾರಿ ಚೈತ್ರಾ ಮಾತನಾಡಿ, ತಂಬಾಕು ಬೆಳೆಗೆ ಪರ್ಯಾಯ ಬೆಳೆಯಾಗಿ ತೆಂಗು, ಅಡಿಕೆ, ಬಾಳೆ ಮತ್ತು ಹಣ್ಣಿನ ಗಿಡಗಳನ್ನು ಬೆಳೆಯಬಹುದಾಗಿದೆ ಎಂದು ಸಲಹೆ ನೀಡಿದರು.
ಹನಗೋಡು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿನಯ್ ಕುಮಾರ್ಮಾತನಾಡಿ, ಕೃಷಿ ಸವಲತ್ತುಗಳು ಹಾಗೂ ಅವುಗಳನ್ನು ಪಡೆಯಲು ಇರುವ ಅವಕಾಶಗಳು ಮತ್ತು ರೈತರು ಅನುಸರಿಸಬೇಕಾದ ನಿಯಮಗಳನ್ನು ತಿಳಿಸುವುದರ ಜೊತೆಗೆ ಪಿಎಂ ಕಿಸಾನ್ ಇಕೆವೈಸಿ ನೋಂದಣಿ, ಬೆಳೆ ಸಮೀಕ್ಷೆ ಕುರಿತು ಮಾಹಿತಿ ನೀಡಿದರು.
ಜೈನ್ಇರಿಗೇಷನ್ಸಿಸ್ಟಮ್ ಬೇಸಾಯಶಾಸ್ತ್ರಜ್ಞ ನಿರಂಜನ್ ಅವರು, ಬಾಳೆ, ತೆಂಗು ಮತ್ತು ಇತರೆ ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ ಪದ್ಧತಿಗಳ ಅಳವಡಿಕೆ, ನಿರ್ವಹಣೆ ಹನಿ ನೀರಾವರಿ ಹಾಗೂ ರಸಾವರಿ ಪದ್ಧತಿಗಳ ಅಳವಡಿಕೆ ಬಗ್ಗೆ, ಫಲಿತಾಂಶ ನಿರ್ವಹಣೆ, ಎಚ್ಚರಿಕೆ, ಸಮಸ್ಯೆ ಮತ್ತು ಪರಿಹಾರಗಳ ಕುರಿತು ವಿವರಿಸಿದರು.
ಈ ತರಬೇತಿಯಲ್ಲಿ 50 ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದರು. ಕರಣಕುಪ್ಪೆ ಗ್ರಾಪಂ ಅಧ್ಯಕ್ಷ ಹರೀಶ್ಮಾವೂರು ಹಾಗೂ ಸದಸ್ಯರು ಇದ್ದರು. ಕೃಷಿ ಅಧಿಕಾರಿ ಎಲ್. ಮಾಲತಿ ನಿರೂಪಿಸಿದರು.