ಮೈಸೂರು (ನ.25): ಮೈಸೂರು (Mysuru), ಚಾಮರಾಜನಗರ (chamarajanagar) ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿ.10 ರಂದು ಮೇಲ್ಮನೆಗೆ ನಡೆಯುವ ಚುನಾವಣೆಯ (Election) ಸಂಬಂಧ ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಅಭ್ಯರ್ಥಿಗಳ ನಾಮ ಪತ್ರಗಳಿಗೆ ಬಿಜೆಪಿ (BJP) ಆಕ್ಷೇಪ ತೆಗೆದಿದೆ. ನಾಮಪತ್ರ (Nomination) ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿತ್ತು. ಬುಧವಾರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ (Bagadi Goutham) ಅವರು ಪರಿಶೀಲನಾ ಕಾರ್ಯ ಕೈಗೆತ್ತಿಕೊಂಡರು. ಬಿಜೆಪಿಯ (BJP) ಆರ್. ರಘು, ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ (Vatal Nagaraj), ಪಕ್ಷೇತರರಾದ ಪಿ.ಎಸ್. ಯಡಿಯೂರಪ್ಪ, ಕೆ.ಸಿ. ಬಸವರಾಜಸ್ವಾಮಿ, ಗುರುಲಿಂಗಯ್ಯ, ಆರ್. ಮಂಜುನಾಥ್ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದರು.
ಆದರೆ ಕಾಂಗ್ರೆಸ್ (Congress) ಅಭ್ಯರ್ಥಿ ಡಾ.ಡಿ. ತಿಮ್ಮಯ್ಯ (Thimmaiah), ಜೆಡಿಎಸ್ (JDS) ಅಭ್ಯರ್ಥಿ ಸಿ.ಎನ್. ಮಂಜೇಗೌಡ ಅವರು ನಾಮಪತ್ರ ಸಲ್ಲಿಕೆ ಕಾಲಕ್ಕೆ ಆಸ್ತಿಯ ಸಂಪೂರ್ಣ ವಿವರ ನೀಡಿಲ್ಲ. ಕೆಲವೊಂದು ಕಾಲಂಗಳನ್ನು ಭರ್ತಿ ಮಾಡಿಲ್ಲ ಎಂದು ಬಿಜೆಪಿಯವರು (BJP) ಆಕ್ಷೇಪ ವ್ಯಕ್ತರಡಿಸಿ, ಚುನಾವಣಾಧಿಕಾರಿಗೆ ತಕರಾರು ಸಲ್ಲಿಸಿದರು. ಅವರಿಬ್ಬರ ನಾಮಪತ್ರಗಳನ್ನು ತಿರಸ್ಕರಿಸುವಂತೆ ವಾದಿಸಿದರು.
undefined
ಹೀಗಾಗಿ ಆ ಇಬ್ಬರಿಗೆ ತಕರಾರಿಗೆ ಉತ್ತರ ನೀಡಲು ಕಾಲಾವಕಾಶ ನೀಡಲಾಗಿದೆ. ಸಂಜೆ 5 ಗಂಟೆ ವೇಳೆಗೆ ನಿರ್ಧಾರಕ್ಕೆ ಬರುವುದಾಗಿ ಜಿಲ್ಲಾಧಿಕಾರಿ (DC) ಹೇಳಿದ್ದರು. ಆದರೆ ಇದು ಗುರುವಾರಕ್ಕೆ ಮುಂದೂಡಿಕೆಯಾಗಿದೆ.
ನ್ಯಾಯಾಲಯಕ್ಕೆ ಹೋಗಬೇಕು : ನಾಮ ಪತ್ರದಲ್ಲಿ ವಿವರಗಳು ಸರಿಯಿಲ್ಲ ಎಂದ ಮಾತ್ರಕ್ಕೆ ತಿರಸ್ಕರಿಸಲು ಅವಕಾಶವಿಲ್ಲ. ಸಣ್ಣ ಪುಟ್ಟ ತಿದ್ದುಪಡಿ ಇದ್ದರೆ ಅದಕ್ಕೂ ಅವಕಾಶವಿದೆ. ವಿವರಗಳು ಸರಿಯಿಲ್ಲ ಎಂದಾದರೆ ಪ್ರತಿವಾದಿ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗುತ್ತದೆ. ಹೀಗಾಗಿ ಚುನಾವಣಾಧಿಕಾರಿಗಳು ನಾಮಪತ್ರ ಕ್ರಮಬದ್ಧ ಎಂದು ಘೋಷಿಸಬೇಕಾಗುತ್ತದೆ ಎಂದು ಕಾನೂನು ತಜ್ಞರು (Experts) ಹೇಳಿದ್ದಾರೆ.
ಈ ಹಿಂದೆ ಕೂಡ ಈ ರೀತಿ ನಾಮಪತ್ರ ತಿರಸ್ಕರಿಸುವಂತೆ ತಕರಾರು ತೆಗೆದಿರುವ ಸಂದರ್ಭದಲ್ಲೂ ಕ್ರಮ ಬದ್ಧವಾಗಿದೆ ಎಂದು ಘೋಷಿಸಲು ವಿಳಂಬವಾಗಿದೆಯೇ ಹೊರತು ಯಾವುದನ್ನು ತಿರಸ್ಕರಿಸಿಲ್ಲ. ಈ ರೀತಿಯ ನಿದರ್ಶನಗಳು ಪ್ರತಿ ಚುನಾವಣೆಯ (Election) ಸಂದರ್ಭದಲ್ಲೂ ಕೂಡ ಕಂಡು ಬರುತ್ತವೆ.
ಅನಗತ್ಯ ಒತ್ತಡ : ನಾಮಪತ್ರ ಸಲ್ಲಿಕೆಯ ನಂತರ ಅವು ಕ್ರಮ ಬದ್ಧವಾಗಿಯೇ ಎಂದು ಚುನಾವಣಾಧಿಕಾರಿಗಳು ಪ್ರಕಟಿಸಿದರೆ ಅಭ್ಯರ್ಥಿಗಳು ನೆಮ್ಮದಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಆದರೆ ತಕರಾರು ಮಾಡಿದ್ದರಿಂದ ಅವುಗಳಿಗೆ ಉತ್ತರ ಒದಗಿಸುವುದರಲ್ಲೇ ಕಾಂಗ್ರೆಸ್ (Congress) ಅಭ್ಯರ್ಥಿ ಡಾ.ಡಿ. ತಿಮ್ಮಯ್ಯ ಹಾಗೂ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಹೈರಾಣರಾದರು.
ನಾಮಪತ್ರ ವಾಪಸ್‌ಗೆ ನ.26 (ಶುಕ್ರವಾರ) ಕೊನೆಯ ದಿನ. ಶನಿವಾರದಿಂದ ಉಭಯ ಜಿಲ್ಲೆಗಳಲ್ಲೂ ಪ್ರಚಾರದ ಭರಾಟೆ ಜೋರಾಗಲಿದೆ.
ನಾಮಪತ್ರ ಸಲ್ಲಿಕೆ :
ಮೈಸೂರು (ನ.24): ಮೈಸೂರು (Mysuru), ಚಾಮರಾಜನಗರ (Chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ನಿರೀಕ್ಷೆಯಂತೆಯೇ ಬಿಜೆಪಿಯ (BJP) ಆರ್. ರಘು, ಕಾಂಗ್ರೆಸ್‌ನ (Congress) ಡಾ.ಡಿ. ತಿಮ್ಮಯ್ಯ ಹಾಗೂ ಜೆಡಿಎಸ್‌ನ ಸಿ.ಎನ್. ಮಂಜೇಗೌಡ ಅವರ ನಡುವೆ ತ್ರಿಕೋನ ಹೋರಾಟಕ್ಕೆ ಕಣ ಸಜ್ಜಾಗಿದೆ. ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಮಂಗಳವಾರ ಈ ಮೂವರು ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷದ ನಾಯಕರೊಂದಿಗೆ ಜಿಲ್ಲಾಧಿಕಾರಿ (DC) ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಸಿದ್ದಾರೆ. ನ.24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸಾತಿಗೆ ನ.26 ಕೊನೆಯ ದಿನ. ಮಾಜಿ ಶಾಸಕ ವಾಟಾಳ್ ನಾಗರಾಜ್ Vatal nagarj) ಸೇರಿದಂತೆ ಇನ್ನೂ ಕೆಲವರು ನಾಮಪತ್ರ ಸಲ್ಲಿಸಿದ್ದರೂ ಗೆಲುವಿಗಾಗಿ ಹೋರಾಟ ನಡೆಯುವುದು ಈ ಮೂರು ಪಕ್ಷಗಳ ನಡುವೆಯೇ. ಏಕೆಂದರೆ ಇವರನ್ನು ಚುನಾಯಿತ ಪ್ರತಿನಿಧಿಗಳು ಆಯ್ಕೆ ಮಾಡುತ್ತಾರೆ.
ಬಿಜೆಪಿಯು (BJP) ರಘು ಕೌಟಿಲ್ಯ ಅವರ ಹೆಸರನ್ನು ನ.20 ರಂದೇ ಪ್ರಕಟಿಸಿತ್ತು. ಕಾಂಗ್ರೆಸ್ ಡಾ.ಡಿ. ತಿಮ್ಮಯ್ಯ ಅವರ ಹೆಸರನ್ನು ನ.22 ರಂದು ಪ್ರಕಟಿಸಿತು. ಜೆಡಿಎಸ್ (JDS) ಅಧಿಕೃತವಾಗಿ ಇವತ್ತು ಪ್ರಕಟಿಸಿತು.
ಮೈಸೂರು- ಚಾಮರಾಜನಗರ (Chamarajanagar) ದ್ವಿಸದಸ್ಯ ಕ್ಷೇತ್ರದಿಂದ ಇಬ್ಬರು ಹಾಲಿ ಸದಸ್ಯರು ಸ್ಪರ್ಧಿಸುತ್ತಿಲ್ಲ. ಜೆಡಿಎಸ್‌ನ ಸಂದೇಶ್ ನಾಗರಾಜ್ (Sandesh Nagaraj) ಹಾಗೂ ಕಾಂಗ್ರೆಸ್‌ನ ಆರ್. ಧರ್ಮಸೇನ ಅವರಿಗೆ ಆಯಾ ಪಕ್ಷಗಳು ಟಿಕೆಟ್ (Ticket) ನೀಡಿಲ್ಲ. ಸಂದೇಶ್ ನಾಗರಾಜ್ ಕಳೆದೆರಡು ಬಾರಿಯಿಂದ ಅಂದರೆ 12 ವರ್ಷಗಳಿಂದ ಸದಸ್ಯರಾಗಿದ್ದರು. ಧರ್ಮಸೇನ ಒಂದು ಉಪ ಚುನಾವಣೆ (By Election) ಮತ್ತು ಒಂದು ಸಾರ್ವತ್ರಿಕ ಚುನಾವಣೆ ಸೇರಿ ಎಂಟೂವರೆ ವರ್ಷ ಸದಸ್ಯರಾಗಿದ್ದರು.
ಈ ಕ್ಷೇತದಲ್ಲಿ ಎನ್. ಮಂಜುನಾಥ್ (N Manjunath) ಅವರಿಗೆ ಮೊದಲ ಬಾರಿಗೆ ಸತತ ಎರಡನೇ ಅವಧಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ಸೋತಿದ್ದರು. ಹೀಗಾಗಿ ಈ ಕ್ಷೇತ್ರದಲ್ಲಿ ಸತತ ಎರಡು ಅವಧಿಗೆ ಗೆದ್ದ ಹೆಗ್ಗಳಿಕೆ ಸಂದೇಶ್ ನಾಗರಾಜ್ ಹಾಗೂ ಧರ್ಮಸೇನ ಅವರದಾಗಿತ್ತು.
ಈ ಬಾರಿ ಕೂಡ ಇಬ್ಬರೂ ಟಿಕೆಟ್ (Ticket) ಆಕಾಂಕ್ಷಿಗಳಾಗಿದ್ದರು. ಧರ್ಮಸೇನ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಿದ್ದರು. ಆದರೆ ಕಳೆದ 33 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷ ದಲಿತದಲ್ಲಿ ಎಡಗೈನ ಸಮೂದಾಯದ ಟಿ.ಎನ್. ನರಸಿಂಹಮೂರ್ತಿ, ಸಿ. ರಮೇಶ್, ಎನ್. ಮಂಜುನಾಥ್ ಹಾಗೂ ಆರ್. ಧರ್ಮಸೇನ ಅವರಿಗೆ ಟಿಕೆಟ್ ನೀಡಿತ್ತು. ಇವರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು. ಪದೇ ಪದೇ ಒಂದೇ ಕುಟುಂಬಕ್ಕೆ ಟಿಕೆಟ್ ಏಕೆ? ಎಂಬ ಅಪಸ್ಪರ ಕೇಳಿ ಬಂದಿದ್ದರಿಂದ ಈ ಬಾರಿ ಕಾಂಗ್ರೆಸ್ ತನ್ನ ಸಂಪ್ರದಾಯದಂತೆ ಎಡಗೈ ಸಮೂದಾಯದ ಡಾ.ಡಿ. ತಿಮ್ಮಯ್ಯ ಅವರಿಗೆ ಮಣೆ ಹಾಕಿದೆ. ಅವರು ಆರೋಗ್ಯ ಇಲಾಖೆಯ ನಿವೃತ್ತ ಯೋಜನಾ ನಿರ್ದೇಶಕರು. ದಾಸ್ತಿ ನರ್ಸಿಂಗ್ ಕಾಲೇಜು ನಡೆಸುತ್ತಾರೆ. ಹರಳಯ್ಯ ಟ್ರಸ್ಟ್ ಮತ್ತಿತರವುಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಕೆಪಿಸಿಸಿ ರಾಜ್ಯ ಕಾರ್ಯದರ್ಶಿಯೂ ಆಗಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಕೂಡ ಇದ್ದರು.