ಕುಮಾರಸ್ವಾಮಿ ಹೇಳಿದಂತೆ ಎಸ್ಐಟಿ ರಚನೆ ಮಾಡಲಾಗಲ್ಲ: ಸಚಿವ ಕೆ.ಜೆ.ಜಾರ್ಜ್

By Govindaraj S  |  First Published Nov 16, 2024, 8:26 PM IST

ರಾಜ್ಯದಲ್ಲಿ ಆಪರೇಷನ್ ಕಮಲ ಆರಂಭಿಸಿದ್ದು ಯಾರು, ವಿಜಯೇಂದ್ರಗೆ ಆಪರೇಷನ್ ಕಮಲದ ವಿಚಾರ ಗೊತ್ತಿಲ್ಲವೆ.? ಆಪರೇಷನ್ ಕಮಲ ಆರಂಭವಾಗಿದ್ದು ಯಾವಾಗ.? ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೇ ಅದೆಲ್ಲವೂ ಶುರುವಾಯಿತು. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ನ.16): ರಾಜ್ಯದಲ್ಲಿ ಆಪರೇಷನ್ ಕಮಲ ಆರಂಭಿಸಿದ್ದು ಯಾರು, ವಿಜಯೇಂದ್ರಗೆ ಆಪರೇಷನ್ ಕಮಲದ ವಿಚಾರ ಗೊತ್ತಿಲ್ಲವೆ.? ಆಪರೇಷನ್ ಕಮಲ ಆರಂಭವಾಗಿದ್ದು ಯಾವಾಗ.? ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೇ ಅದೆಲ್ಲವೂ ಶುರುವಾಯಿತು. ಮತ್ತೆ ನಮ್ಮ ಶಾಸಕರನ್ನು ಕರೆದೊಯ್ದು ಅವರು ಸರ್ಕಾರ ಮಾಡಿದರು. ಇದೆಲ್ಲಾ ಹೊಸದೇನಲ್ಲ, ಇದೆಲ್ಲಾ ಇಲ್ಲದ ವಿಚಾರವೆ ಎಂದು ಸಚಿವ ಕೆ. ಜೆ ಜಾರ್ಜ್ ಪ್ರಶ್ನಿಸಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನ ಹಿರಿಯ ಮುಖಂಡರಿಂದಲೇ ಆಪರೇಷನ್ ನಡೆಯುತ್ತಿದೆ. 

Tap to resize

Latest Videos

undefined

ಸಿದ್ದರಾಮಯ್ಯನವರು ಸುಮ್ಮನೇ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆ ಕೆ.ಜೆ. ಜಾರ್ಜ್ ತಿರುಗೇಟು ನೀಡಿದರು. ಬಿಜೆಪಿಯವರು ಇಲ್ಲಿ ಮಾತ್ರ ಅಲ್ಲ, ಅರುಣಾಚಲ ಪ್ರದೇಶ, ಮಧ್ಯಪ್ರದೇಶ ಗೋವಾ ಎಲ್ಲೆಡೆ ಮಾಡಿದ್ದಾರೆ. ಅವರು ಅಧಿಕಾರಕ್ಕೆ ಬರುವುದೇ ಈ ರೀತಿ. ನೇರವಾಗಿ ಜನರಿಂದ ಆಯ್ಕೆಯಾಗಿ ಅವರು ಎಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕರೇ ಅಧಿಕಾರಕ್ಕಾಗಿ ಶಾಸಕರ ಖರೀದಿ ಮಾಡುತ್ತಿದ್ದಾರೆ ಎನ್ನುವ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಪಕ್ಷ ಏನು ಅಂತ ನಮಗೆ ಗೊತ್ತಿದೆ. ಎಲ್ಲಾ ಸಚಿವರು ಶಾಸಕರು ಒಗ್ಗಟ್ಟಾಗಿ ಇದ್ದೇವೆ. 

ಚನ್ನಪಟ್ಟಣದಲ್ಲಿ ಯಾರೇ ಗೆದ್ದರೂ ಕೂದಲೆಳೆ ಅಂತರದಿಂದ ಗೆಲುವು: ಸಿ.ಪಿ.ಯೋಗೇಶ್ವರ್

ಸಿಎಲ್ ಪಿ ಸಭೆಯಲ್ಲಿ ಎಲ್ಲಾ ಶಾಸಕರು ಸಿಎಂಗೆ ಬೆಂಬಲ ನೀಡಿದ್ದಾರೆ. ಡಿಸಿಎಂ ಡಿಕೆಶಿ ಅವರು ಇದ್ದಾರೆ, ನಾವೆಲ್ಲಾ ಒಗ್ಗಟ್ಟಾಗಿ ಇದ್ದೇವೆ, ಇದಕ್ಕಿಂತ ಇನ್ನೇನು ಬೇಕಾಗಿದೆ. ಆದರೆ ಕಾಂಗ್ರೆಸ್ ನವರು ಒಗ್ಗಟ್ಟಾಗಿ ಇದ್ದಾರೆ ಅಂತ ಬಿಜೆಪಿಯವರು ಹೇಳ್ತಾರಾ ಎಂದಿದ್ದಾರೆ.  ಇನ್ನು ಆಪರೇಷನ್ ಕಮಲಕ್ಕೆ ತಲಾ 50 ಕೋಟಿ ಕೊಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಅದಕ್ಕೂ ಒಂದು ಎಸ್ಐಟಿ ರಚಿಸಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಇಂಧನ ಸಚಿವ ಜಾರ್ಜ್ ಯಾವುದಕ್ಕೆ ಎಸ್ಐಟಿ ಮಾಡಬೇಕು, ಯಾವುದಕ್ಕೆ ಎಸ್ಐಟಿ ಮಾಡಬಾರದು ಎಂದು ಸರ್ಕಾರ ತೀರ್ಮಾನ ಮಾಡುತ್ತದೆ. 

ಆದರೆ ಕುಮಾರಸ್ವಾಮಿ ಅವರು ಹೇಳಿದಂತೆಲ್ಲಾ ಎಸ್ಐಟಿ ರಚನೆ ಮಾಡಲು ಆಗಲ್ಲ ಎಂದು ಸಚಿವ ಕೆ.ಜೆ. ಜಾರ್ಜ್ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ. ಕೆಲವೊಂದು ವಿಷಯದಲ್ಲಿ ಈಗಾಗಲೇ ಎಸ್ಐಟಿ ರಚನೆ ಮಾಡಲಾಗಿದೆ. ನಮ್ಮ ಸರ್ಕಾರ ಇರುವಾಗ ಎಷ್ಟೋ ಕೇಸುಗಳನ್ನು ಸಿಬಿಐಗೆ ಕೊಟ್ಟಿದ್ದೇವೆ. ಆದರೆ ಅವರ ಸರ್ಕಾರದ ಹಗರಣಗಳನ್ನು ಒಂದನ್ನಾದರೂ ಸಿಬಿಐಗೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು. ನಾವು ಕೊಟ್ಟ ಕೇಸುಗಳು ವಿಚಾರಣೆ ಆಗಿ ಬಂದಿವೆ ಅಲ್ವಾ, ಡಿವೈಎಸ್ಪಿ ಗಣಪತಿ ವಿಚಾರವನ್ನು ನಾವು ಸಿಬಿಐಗೆ ಕೊಟ್ಟಿದ್ದೆವು ಅಲ್ವಾ. 

2 ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ: ನಿಖಿಲ್ ಕುಮಾರಸ್ವಾಮಿ

ಬಿಜೆಪಿಯವರು ಎಷ್ಟು ಗಲಾಟೆ ಮಾಡಿದರು, ಅವರಿಗೆ ಎರಡೊತ್ಲೂ ಆರೋಪ ಮಾಡುವುದೇ ಕೆಲಸ ಎಂದು ತಿರುಗೇಟು ನೀಡಿದರು. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರು ಕ್ಯಾಬಿನೆಟ್ ನಲ್ಲಿ ಇದ್ದಾರೆ ಎಂಬ ಆರಗ ಜ್ಞಾನೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕೆ.ಜೆ. ಜಾರ್ಜ್ ಆರಗ ಜ್ಞಾನೇಂದ್ರ ಕೂಡ ಗೃಹ ಸಚಿವ ಆಗಿದ್ದರು ಅಲ್ಲವೇ. ಆಗ ಅವರು ಹುಚ್ಚಾಸ್ಪತ್ರೆಯಿಂದ ಬಂದಿದ್ರಾ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಒಬ್ಬ ಮಾಜಿ ಗೃಹ ಸಚಿವರಾಗಿ ಈ ರೀತಿ ಹೇಳಿಕೆ ಕೊಡುತ್ತಾರೆ ಎಂದರೆ ಮಾಧ್ಯಮಗಳು ಇದರ ಬಗ್ಗೆ ಅವರನ್ನು ಪ್ರಶ್ನೆ ಮಾಡಬೇಕು ಎಂದರು.

click me!