Mandya: ಮಗನ ನಿಧನದ ಸುದ್ದಿ ಕೇಳಿ ತಾಯಿ‌ಯೂ ಸಾವು: ಸಾವಿನಲ್ಲೂ ಒಂದಾದ‌ ಕರುಳಬಳ್ಳಿ..!

By Suvarna NewsFirst Published Jan 24, 2022, 12:17 PM IST
Highlights

*  ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದ ಘಟನೆ
*  ಲೋ ಬಿಪಿಯಿಂದ ಸಾವನ್ನಪ್ಪಿದ ಮಗ
*  ಹೃದಯಾಘಾತದಿಂದ ಇಲಲೋಕ ತ್ಯಜಿಸಿದ ತಾಯಿ

ಮಂಡ್ಯ(ಜ.24):  ಮಗನ ಸಾವಿನ ಸುದ್ದಿ ಕೇಳಿ ತಾಯಿ‌ಯೂ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಿನ್ನೆ(ಭಾನುವಾರ) ನಡೆದಿದೆ. ಈ ಮೂಲಕ ಸಾವಿನಲ್ಲೂ ಒಂದಾದಗಿದೆ ಕರುಳಬಳ್ಳಿ. ಪುತ್ರ ಕುಶಾಲ್ ಸಾವಿನ ಸುದ್ದಿ ಕೇಳಿ ತಾಯಿ ಲಕ್ಷ್ಮಮ್ಮ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಹೌದು, ಕುಶಾಲ್ (45) ಲೋ ಬಿಪಿಯಿಂದ ಸಾವನ್ನಪ್ಪಿದ ಮಗನಾಗಿದ್ದಾನೆ. ಲಕ್ಷ್ಮಮ್ಮ (69) ಮಗನ ಸಾವಿನ ಸುದ್ದಿ ಕೇಳಿ ತೀವ್ರ ಹೃದಯಾಘಾತದಿಂದ ಇಲಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ. 

ಪತಿ ಅಂತ್ಯಸಂಸ್ಕಾರ ಮಾಡಿ ಬಂದ ಬಳಿಕ ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ

ನಿನ್ನೆ(ಭಾನುವಾರ) ಮನೆಯಲ್ಲಿ ಟಿವಿ ನೋಡುವ ವೇಳೆ ಕುಶಾಲ್‌ ಲೋ ಬಿಪಿಯಿಂದ ಒದ್ದಾಡುತ್ತಿದ್ದರು. ತಕ್ಷಣ ಅವರನ್ನ ಸ್ಥಳೀಯರು ಮನೆ ಹೊರಗೆ ತಂದಿದ್ದರು. ಈ ವೇಳೆ ಮನೆ ಮುಂದೆಯೇ ಕುಶಾಲ್ ಪ್ರಾಣ ಬಿಟ್ಟಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಲಕ್ಷ್ಮಮ್ಮ ಅವರು ಹೆತ್ತ ಮಗನ ಸಾವು ನೋಡಿ ಲಕ್ಷ್ಮಮ್ಮಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಅಣ್ಣ-ತಮ್ಮ ಇಬ್ಬರೂ ಆತ್ಮಹತ್ಯೆಗೆ ಶರಣು: ಸಾವಲ್ಲೂ ಒಂದಾದ ಸಹೋದರರು

ಮೈಸೂರು: ಮನೆಯಲ್ಲಿ ಅಣ್ಣ ತಮ್ಮ ಇಬ್ಬರೂ ಆತ್ಮಹತ್ಯೆ (Suicide) ಶರಣಾಗಿ ಸಾವಿನಲ್ಲೂ ಸಹೋದರರು ಒಂದಾದ ಘಟನೆ ಮೈಸೂರಲ್ಲಿ (Mysuru) ಕಳೆದ ವರ್ಷ ಸೆ.25 ರಂದು ನಡೆದಿತ್ತು. 

ಹೆಚ್.ಡಿ.ಕೋಟೆ ತಾಲೂಕಿನ ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ಅಣ್ಣ ಸಿದ್ದರಾಜು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಸಾವಿನ ಸುದ್ದಿ ತಿಳಿದು ಕ್ರಿಮಿನಾಶಕ ಸೇವಿಸಿ ತಮ್ಮ‌ ನಾಗರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು. 

ತಮ್ಮ ನಾಗರಾಜು ವಿಷ ಸೇವನೆ ಮಾಡಿದ್ದು ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ (hospital) ದಾಖಲಿಸಲಾಗಿತ್ತು. ಅದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದರು. 

ಸಾವಿನಲ್ಲೂ ಒಂದಾದ ಅವಳಿ ಸಹೋದರಿಯರು!

ಮಂಡ್ಯ: ಅವಳಿ ಮಕ್ಕಳೆಂದರೆ ಸಾಮಾನ್ಯವಾಗಿ ಎಲ್ಲಾ ಸಂದರ್ಭದಲ್ಲೂ ಒಟ್ಟಾಗಿರುತ್ತಾರೆ. ಬಹುತೇಕ ಅವಳಿ ಮಕ್ಕಳ ಒಟನಾಟ ಚೆನ್ನಾಗಿರುತ್ತದೆ ಹಾಗೂ ಇಷ್ಟಗಳೂ ಒಂದೇ ತೆರನಾಗಿರುತ್ತವೆ. ಆದರೀಗ ಮಂಡ್ಯ ಜಿಲ್ಲೆಯ ಅವಳಿ ಸಹೋದರಿಯರು ಒಟ್ಟಾಗಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕಳೆದ ವರ್ಷ ಜು.05 ರಂದು ನಡೆದಿತ್ತು.

ಸಾವಿನಲ್ಲೂ ಒಂದಾದ ವೃದ್ಧ ದಂಪತಿ, ಜೋಡಿಯಾಗಿ ಕೂಡಿಸಿ ಅಂತ್ಯ ಕ್ರಿಯೆ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದ ದೀಪಿಕಾ (19) ಮತ್ತು ದಿವ್ಯ(19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಅಂತಿಮ‌ ವರ್ಷದ ಡಿಪ್ಲೊಮಾ‌ ಓದುತ್ತಿದ್ದ ಸಹೋದರಿಯರು ಚಿಕ್ಕಂದಿನಿಂದ ಅನ್ಯೋನ್ಯತೆಯಿಂದ ಇದ್ದರು. ಆದರೀಗ ಮನೆಯ ಬೇರೆ ಬೇರೆ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದರು.

ರಾಣೆಬೆನ್ನೂರು: ಪತಿ ಮೃತಪಟ್ಟ ಸುದ್ದಿ ಕೇಳಿ ಪತ್ನಿಯೂ ಸಾವು

ರಾಣೆಬೆನ್ನೂರು(Ranebennur): ಪತಿ ಹಾಗೂ ಪತ್ನಿ ಸಾವಿನಲ್ಲೂ ಒಂದಾದ ಘಟನೆ ಹಾವೇರಿ(Haveri) ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೈ.ಟಿ.ಹೊನ್ನತ್ತಿ ಗ್ರಾಮದಲ್ಲಿ ಕಳೆದ ವರ್ಷ ಜೂ.14 ರಂದು ನಡೆದಿತ್ತು.  ಗ್ರಾಮದ ಚನ್ನಬಸಪ್ಪ ಯಲಿಗಾರ (64) ಹಾಗೂ ಪತ್ನಿ ಗಂಗಮ್ಮ ಯಲಿಗಾರ (58) ಸಾವಿನಲ್ಲೂ ಒಂದಾದ ದಂಪತಿ. ಪತಿ ಚೆನ್ನಬಸಪ್ಪ ಯಲಿಗಾರ ಬೆಳಗ್ಗೆ ಹೃದಯಾಘಾತದಿಂದ(Heart Attack) ಮೃತಪಟ್ಟರೆ, ಪತಿಯ ಸಾವಿನ ವಿಷಯ ತಿಳಿದ ಪತ್ನಿ ಗಂಗಮ್ಮ ಯಲಿಗಾರ ಅವರು ಸಹ ಎರಡು ಗಂಟೆಯ ನಂತರ ಹೃದಯಾಘಾತದಿಂದ ಮೃತಪಟ್ಟಿದ್ದರು. 
 

click me!