ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ; ತನಿಖೆಗೆ ಯಾರೂ ಅಡ್ಡಿಪಡಿಸಿಲ್ಲ ಸರ್ಕಾರ ಮೊದಲು ಕೆಲಸ ಮಾಡಿ ತೋರಿಸಲಿ; ಅಣ್ಣಾಮಲೈ ಚಾಟಿ

By Ravi JanekalFirst Published May 2, 2024, 1:01 PM IST
Highlights

ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಗೃಹ ಸಚಿವ ಅಮಿತ್ ಶಾ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಇಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಎಸ್‌ಐಟಿ ರಾಜ್ಯ ಸರ್ಕಾರದ ಹಿಡಿತದಲ್ಲಿದೆ ಎಂದು ಅಣ್ಣಾಮಲೈ ನುಡಿದರು.


ಬಾಗಲಕೋಟೆ (ಮೇ.2): ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಗೃಹ ಸಚಿವ ಅಮಿತ್ ಶಾ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಇಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಎಸ್‌ಐಟಿ ರಾಜ್ಯ ಸರ್ಕಾರದ ಹಿಡಿತದಲ್ಲಿದೆ ಎಂದು ಅಣ್ಣಾಮಲೈ ನುಡಿದರು.

ಪ್ರಜ್ವಲ್ ರೇವಣ್ಣ ಪ್ರಕರಣ ಇಟ್ಕೊಂಡು ಬಿಜೆಪಿಗರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡ್ತಿದೆ ಎಂಬ ಪ್ರಶ್ನೆಗೆ ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಏನು ಕ್ರಮ ತಗೊಬೇಕು ಅದನ್ನ ರಾಜ್ಯ ಸರ್ಕಾರ ತಗೊಳ್ಳಬೇಕಿದೆ. ಇಲ್ಲಿ ಯಾರಾದರೂ ಅಡ್ಡಿಪಡಿಸಿದ್ದಾರಾ? ಕ್ರಮ ತಗೊಳ್ಳಬೇಡಿ ಎಂದು ಒತ್ತಡ ಹಾಕಿದ್ದಾರಾ? ಅಥವಾ ಯಾರಾದರೂ ತೊಂದರೆ ಕೊಡ್ತಿದ್ದಾರಾ? ಎಲ್ಲಿಯೂ ಕೂಡ ನಾವು ಬರೊಲ್ಲ. ಸರ್ಕಾರ ನಿಮ್ಮದೇ ಇದೆ, ಪೊಲೀಸರು ನಿಮ್ಮವರೇ ಇದ್ದಾರೆ. ನಿಮಗೇನು ಕಂಪ್ಲೆಂಟ್‌ ಬಂದಿತ್ತು ಆ ಕ್ರಮ‌ ತಗೊಳ್ಳಿ ಎಂದರು.

ಪ್ರಜ್ವಲ್ ಮೇಲೆ ಎಫ್‌ಐಆರ್ ದಾಖಲಿಸಲು ಸಿಎಂ ವಿಳಂಬ ಮಾಡಿದ್ದು ಏಕೆ? ಪ್ರಲ್ಹಾದ್ ಜೋಶಿ ಕಿಡಿ

ಈ ಪ್ರಕರಣ ಬಿಜೆಪಿ ಪಕ್ಷಕ್ಕೆ ಮುಜುಗರ ತಂದೊಡ್ಡಲ್ವ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅಣ್ಣಾಮಲೈ, ಚುನಾವಣಾ ಸಮಯದಲ್ಲಿ ಬೇರೆ ರೂಪದಲ್ಲಿ ಜನರಿಗೆ ತೊಂದರೆ ಇದೆ. ಕಂಪ್ಲೆಂಟ್ ಕೊಟ್ಟೆ ಕೊಡ್ತಾರೆ. ಅಂತಹ ಕಂಪ್ಲೆಂಟ್ ತನಿಖೆ ಮಾಡಲು ಪೊಲೀಸ್ ಇಲಾಖೆ ಇದೆ ಅವ್ರು ಮಾಡ್ತಾರೆ ಕ್ರಮ ತಗೋಬೇಕಾ, ತಗೋಬಾರದಾ ಪೊಲೀಸರು ನಿರ್ಧಾರ ಮಾಡ್ತಾರೆ. ಈ ತನಿಖೆ ತಡೆ ಮಾಡಲು, ಮುಚ್ಚಿಹಾಕಲು ಬಿಜೆಪಿ ಏನಾದ್ರು ಮಾಡ್ತಿದಿಯಾ ಇಲ್ವಲ್ಲ. ಜೆಡಿಎಸ್ ಪಕ್ಷದಿಂದ ಈಗಾಗಲೇ ಅಮಾನತ್ತು ಮಾಡಲಾಗಿದೆ. ಎಸ್ಐಟಿಗೆ ಸಂಪೂರ್ಣ ಬೆಂಬಲ ಕೊಡ್ತೀವಿ ಅಂದಿದ್ದಾರೆ ಇನ್ನೇನು ಆ ಪ್ರಕಾರ ಕೆಲಸ ಮಾಡಲಿ. ಮೊದಲು ಇವರು(ರಾಜ್ಯ ಸರ್ಕಾರ) ಕೆಲಸ ಮಾಡಿ ತೋರಿಸಬೇಕು. ತನಿಖೆ ಸಂಪೂರ್ಣ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

click me!