ನಾಡಹಬ್ಬ ದಸರಾ ಮಹೋತ್ಸವದ ಮುಖ್ಯ ಆಕರ್ಷಣೆಯಾದ ಆಹಾರ ಮೇಳದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ದೋಸೆ ಹಾಕಿ, ಪಾನಿಪುರಿ ವಿತರಿಸಿ, ನೋಡುಗರನ್ನು ಚಕಿತಗೊಳಿಸಿದರು.
ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಮುಖ್ಯ ಆಕರ್ಷಣೆಯಾದ ಆಹಾರ ಮೇಳದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ದೋಸೆ ಹಾಕಿ, ಪಾನಿಪುರಿ ವಿತರಿಸಿ, ನೋಡುಗರನ್ನು ಚಕಿತಗೊಳಿಸಿದರು.
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳಕ್ಕೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಭಾನುವಾರ ಚಾಲನೆ ನೀಡಿದ ನಂತರ, ಆರೋಮ ಬೇಕರಿಯಲ್ಲಿ ಕೇಕ್ ಕತ್ತರಿಸಿ ಎಲ್ಲರಿಗೂ ನೀಡಿದರು. ನಂತರ ತಮ್ಮ ಕೋಲಾರ ಜಿಲ್ಲೆಗೆ ಹೆಸರುವಾಸಿಯಾದ ಮುಳುಬಾಗಿಲು ದೋಸೆ ಮಳಿಗೆಗೆ ಭೇಟಿ ನೀಡಿ ಅಲ್ಲಿ ಕಾವಲಿಯ ಮೇಲೆ ದೋಸೆಗಳು ಅವರೇ ಸ್ವತಃ ಹಾಕಿ ನಂತರ ಅಲ್ಲಿ ನೆರೆದಿದ್ದವರಿಗೆ ನೀಡಿದರು. ನಂತರ ಪಕ್ಕದ ಮಳಿಗೆಯಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಪ್ರಸಿದ್ಧ ಬಂಗಾರಪೇಟೆ ಪಾನಿಪುರಿಯನ್ನು ತಯಾರಿಸಿ ಅಲ್ಲಿ ನೆರೆದಿದ್ದವರಿಗೆ ವಿತರಿಸಿದರು.
undefined
ಇನ್ನು ಭರ್ತಿಯಾಗದ ಆಹಾರ ಮಳಿಗೆಗಳು
ಮೈಸೂರು : ಮೈಸೂರು ದಸರಾ ಮಹೋತ್ಸವದಲ್ಲಿ ಆಹಾರ ಪ್ರಿಯರಿಗೆ ಪ್ರಮುಖ ಆಕರ್ಷಣಿಯವಾದ ಆಹಾರ ಮೇಳವು ಇನ್ನೂ ಅರ್ಧದಷ್ಟು ಮಳಿಗೆಗಳು ಖಾಲಿಯಾಗಿದೆ.
ಆಹಾರ ಮೇಳದಲ್ಲಿ ಒಟ್ಟು 150 ಮಳಿಗೆಗಳಿದ್ದು, ಬೆರಳಿಣಿಕೆಯಷ್ಟು ಮಾತ್ರ ಭರ್ತಿಯಾಗಿದ್ದು, ಕೆಲವು ಮಳಿಗೆಗಳ ಮಾಲೀಕರು ಇನ್ನೂ ತಯಾರಿ ಮಾಡಿಕೊಳ್ಳುತ್ತಿದ್ದು, ಉಳಿದ ಮಳಿಗೆಗಳು ಖಾಲಿಯಾಗಿದ್ದವು.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಾನಿಪುರಿ, ಮುಳುಬಾಗಿಲು ದೋಸೆ, ದಾವಣಗೆರೆ ಬೆಣ್ಣೆ ದೋಸೆ, ಬಾಣಲಿ ರೊಟ್ಟಿ, ಮಶ್ರೂಮ್ಪಲಾವ್, ಬಾಂಬೆ ಪಾವ್ಬಾಜಿ, ಬಂಬೂ ಬಿರಿಯಾನಿ, ಹೊಸಕೋಟೆ ಧಮ್ ಬಿರಿಯಾನಿ, ಉತ್ತರ ಕರ್ನಾಟಕ ಶೈಲಿಯ ಅಮೀನಗಡದ ಕರದಂಟು, ಕುಂದಾ, ಪೇಡಾ ಈ ಮಳಿಗೆಗಳು ವ್ಯಾಪಾರಕ್ಕೆ ಸಿದ್ದತೆಯಾಗಿದ್ದವು. ಉಳಿದ ಮಳಿಗೆಗಳು ಇನ್ನೂ ಭರ್ತಿಯಾಗಬೇಕಿದೆ.
ಇಲ್ಲೂ ನಡೆಯುತ್ತೆ ದಸರಾ
ಬೆಂಗಳೂರು: ಮೈಸೂರಲ್ಲಿ ಮಾತ್ರವಲ್ಲ ಕರುನಾಡಿನ ಹಲವೆಡೆ ದಸರಾವನ್ನು ವಿಶಿಷ್ಚವಾಗಿ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕೆಲ ಆಚರಣೆಗಳಿಗೆ ನೂರಾರು ವರ್ಷಗಳ ಇತಿಹಾಸ ಇದ್ದರೆ, ಇನ್ನು ಕೆಲವೆಡೆ ಕಳೆದ ಹತ್ತೈವತ್ತು ವರ್ಷಗಳಿಂದ ಚಾಲ್ತಿಗೆ ಬಂದಂಥವು. ಅಂಥ ಒಂದಷ್ಟು ದಸರಾ ಮೆರುಗು ಕುರಿತು ಇಲ್ಲಿದೆ ಕಿರು ಮಾಹಿತಿ.
250ಕ್ಕೂ ಅಧಿಕ ವರ್ಷದ ಇತಿಹಾಸ ಹೊಂದಿರುವ ಮಡಿಕೇರಿ ದಸರಾ
‘ಇರುಳನ್ನೇ ಬೆಳಕಾಗಿಸುವ ದಸರೆ’ ಎಂದೇ ಮಡಿಕೇರಿ ದಸರಾ ಖ್ಯಾತಿ ಗಳಿಸಿದೆ. ಈ ಐತಿಹಾಸಿಕ ದಸರಾ ಉತ್ಸವಕ್ಕೆ ಭಾನುವಾರ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರ ಆರಂಭಿಸುವ ಮೂಲಕ ವೈಭವದ ಚಾಲನೆ ಸಿಗಲಿದೆ.
ಪ್ರಾಯೋಜಕತ್ವ ಮೂಲಕ ಈ ಬಾರಿ ಸಾಂಪ್ರದಾಯಿಕ ದಸರಾ
ಮಡಿಕೇರಿಯ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ ಹಾಗೂ ಕೋಟೆ ಮಾರಿಯಮ್ಮ ದೇವತೆಗಳ ಕರಗವು ನಗರದ ಪಂಪಿನ ಕೆರೆಯಿಂದ ಸಂಜೆ 5ಕ್ಕೆ ಹೊರಡಲಿದ್ದು, 9 ದಿನಗಳ ಕಾಲ ನಗರ ಪ್ರದಕ್ಷಿಣೆ ನಡೆಸಲಿದೆ. ಮಡಿಕೇರಿ ದಸರಾ ಉತ್ಸವಕ್ಕೆ ಸುಮಾರು ಇನ್ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಕೊಡಗಿನಲ್ಲಿ ರಾಜರ ಆಳ್ವಿಕೆ ಕಾಲದಲ್ಲಿ ಮಡಿಕೇರಿ ಜನರನ್ನು ಸಾಂಕ್ರಾಮಿಕ ರೋಗವೊಂದು ಕಾಡಿತ್ತು. ಇದರಿಂದ ಅಪಾರ ಸಾವು-ನೋವು ಉಂಟಾಗಿತ್ತು. ಈ ಸಂದರ್ಭದಲ್ಲಿ ರಾಜರು ನಗರದಲ್ಲಿ 4 ಶಕ್ತಿ ದೇವತೆಗಳನ್ನು ಪ್ರತಿಷ್ಠಾಪಿಸಿ ಕರಗ ಹೊರಡಿಸಿ ಪೂಜಿಸುತ್ತಿದ್ದರು. ಈ ದೇವತೆಗಳ ಕರಗಗಳು ನಗರ ಪ್ರದಕ್ಷಿಣೆ ನಡೆಸಿದ ನಂತರ ಸಾಂಕ್ರಾಮಿಕ ರೋಗ ದೂರವಾಯಿತು ಎಂಬ ಐತಿಹ್ಯವಿದೆ.