ಸರಣಿ ಹಂತಕ ಸೈನೈಡ್ ಮೋಹನ್ ಕೇರಳದ ಕಾಸರಗೋಡಿನ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಮೈಸೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸೈನೇಡ್ ಮಾತ್ರೆ ನೀಡಿ ಕೊಲೆ ಮಾಡಿದ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣದ ಬಗ್ಗೆ ವಿಚಾರಣೆ ಫೆ. 15 ರಂದು ನಡೆಯಲಿದೆ.
ಮಂಗಳೂರು(ಫೆ.13): ಸರಣಿ ಹಂತಕ ಸೈನೈಡ್ ಮೋಹನ್ ಕೇರಳದ ಕಾಸರಗೋಡಿನ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಮೈಸೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸೈನೇಡ್ ಮಾತ್ರೆ ನೀಡಿ ಕೊಲೆ ಮಾಡಿದ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣದ ಬಗ್ಗೆ ವಿಚಾರಣೆ ಫೆ. 15 ರಂದು ನಡೆಯಲಿದೆ.
ಸೈನೈಡ್ ಮೋಹನ್‌ಗೆ 18ನೇ ಕೊಲೆ ಪ್ರಕರಣದಲ್ಲಿ ಮರಣ ದಂಡನೆ ತೀರ್ಪು..!
undefined
ಆರೋಪಿಯ ವಿರುದ್ಧ ಪೊಲೀಸರು ದಾಖಲಿಸಿದ್ದ ಕೊಲೆ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಧೀಶ ಸಯೀದುನ್ನಿಸಾ ತೀರ್ಮಾನಕ್ಕೆ ಬಂದಿದ್ದಾರೆ. ಇದು ಸಯನೈಡ್ ಮೋಹನ್‌ನ ಅಪರಾಧ ಕೃತ್ಯಗಳ ಪೈಕಿ 19 ನೇ ಪ್ರಕರಣವಾಗಿದ್ದು, ಇನ್ನು 1 ಪ್ರಕರಣ ವಿಚಾರಣೆಗೆ ಬಾಕಿ ಇದೆ.
ಪ್ರಕರಣದ ಹಿನ್ನೆಲೆ:
ಕಾಸರಗೋಡಿನ 23 ವರ್ಷ ಪ್ರಾಯದ ಬೀಡಿ ಕಟ್ಟುತ್ತಿದ್ದ ಯುವತಿ ತನ್ನ ಸಂಬಂಧಿಕರ ಮದುವೆಗೆ 2006 ರಲ್ಲಿ ಹೋಗಿದ್ದಾಗ ಅಲ್ಲಿ ಮೋಹನನ ಪರಿಚಯ ಆಗಿತ್ತು. ಆತ ತನ್ನನ್ನು ಶಿಕ್ಷಕ ಹಾಗೂ ಆಕೆಯದ್ದೇ ಜಾತಿಯವನು ಎಂದು ಪರಿಚಯಿಸಿದ್ದನು. ಮದುವೆಯ ಬಗೆ ಮಾತುಕತೆ ನಡೆದು ಆತ ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿ ಒಂದು ವಾರದೊಳಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದನು.
ಬಳಿಕ 2006 ಜೂ.3ರಂದು ಯುವತಿ ತಾನು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದಳು. ಮೋಹನ ಆಕೆಯನ್ನು ಮೈಸೂರಿನ ಲಾಡ್ಜ್‌ಗೆ ಕರೆದೊಯ್ದು ಅಲ್ಲಿ ಒಂದು ರಾತ್ರಿ ನಿಂತು ಮರುದಿನ ಪೂಜೆಗೆಂದು ಹೇಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು ಸೈನೈಡ್ ನೀಡಿದ್ದ. ಆಕೆ ಟಾಯ್ಲೆಟ್‌ಗೆ ಹೋಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಲಷ್ಕರ್ ಪೊಲೀಸ್ ಠಾಣೆಯ ಸಿಬಂದಿ ಬಸವರಾಜ್ ಕುಸಿದು ಬಿದಿದ್ದ ಯುವತಿಯನ್ನು ಆಸ್ಪತ್ರೆಗೆ ಒಯ್ದು, ವೈದ್ಯರು ಪರಿಶೀಲಿಸಿದಾಗ ಸಾವನ್ನಪ್ಪಿರುವುದು ಗೊತ್ತಾಗಿತ್ತು.
17ನೇ ಪ್ರಕರಣದಲ್ಲೂ ಸೈನೈಡ್ ಮೋಹನ್ ಆರೋಪ ಸಾಬೀತು..!
ಯುವತಿಯ ಮನೆ ಮಂದಿ ತಮ್ಮ ಪುತ್ರಿ ನಾಪತ್ತೆ ಆದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2009ರಲ್ಲಿ ಮೋಹನ್ ಬಂಧನದ ಬಳಿಕ ಈ ಯುವತಿಯ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಅವರು ಈ ಮೊದಲು ಹಾಗೂ ಪ್ರಸ್ತುತ ಜಯರಾಮ ಶೆಟ್ಟಿಅವರು ವಾದಿಸಿದ್ದರು.Mangalore Cyanide mohan 19th case Proven