ರಾಜ್ಯದಲ್ಲಿ ‌ಮತ್ತೆ ಗೋ ಹತ್ಯೆ ನಿಷೇಧದ ಕೂಗು

By Web DeskFirst Published Sep 3, 2019, 11:20 AM IST
Highlights

ರಾಜ್ಯದಲ್ಲಿ ಮತ್ತೆ ಗೋ ಹತ್ಯೆ ನಿಷೇಧದ ಕೂಗು ಕೇಳಿ ಬಂದಿದೆ. ಗೋಹತ್ಯೆ ನಿಷೇಧಿಸಬೇಕೆಂದು ಮಂಗಳೂರು ಬಿಜೆಪಿ ಘಟಕ ಆಗ್ರಹಿಸಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಈ ಬೆನ್ನಲ್ಲೇ ಮತ್ತೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧದ ಕೂಗು ಕೇಳಿ ಬಂದಿದೆ. 

ಮಂಗಳೂರು(ಸೆ.03): ರಾಜ್ಯದಲ್ಲಿ ಮತ್ತೆ ಗೋ ಹತ್ಯೆ ನಿಷೇಧದ ಕೂಗು ಕೇಳಿ ಬಂದಿದೆ. ಗೋಹತ್ಯೆ ನಿಷೇಧಿಸಬೇಕೆಂದು ಮಂಗಳೂರು ಬಿಜೆಪಿ ಘಟಕ ಆಗ್ರಹಿಸಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಈ ಬೆನ್ನಲ್ಲೇ ಮತ್ತೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧದ ಕೂಗು ಕೇಳಿ ಬಂದಿದೆ.

ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದಿಂದ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದ್ದು 2010ರಲ್ಲಿ ಅಂಗೀಕಾರವಾಗಿದ್ದ ಗೋಹತ್ಯೆ ನಿಷೇಧ ಮಸೂದೆ‌ಯನ್ನು ಮತ್ತೊಮ್ಮೆ ಮಂಡಿಸಲು ಒತ್ತಾಯಿಸಲಾಗಿದೆ. ಗೋ ವಂಶ ಹತ್ಯೆ ನಿಷೇಧ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕದ ನೂತನ ಕರಡು ಪ್ರತಿ ರಚಿಸಿದ ಬಿಜೆಪಿ ಘಟಕ 2019ರ ನೂತನ ಕರಡು ಪ್ರತಿಯ ಸಹಿತ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮುಂದಿನ ಅಧಿವೇಶನದಲ್ಲಿ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿದೆ.

ಚಿಕ್ಕಮಗಳೂರು: ಅಕ್ರಮ ಗೋಸಾಗಣೆ, ಇಬ್ಬರ ಬಂಧನ

ಅಕ್ರಮ ಗೋ ಸಾಗಣೆ ತಡೆಯಲು ಸಾಕಷ್ಟು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿ ಮಾಡಿದರೂ, ಅಕ್ರಮ ಸಾಗಣೆ ನಡೆಯುತ್ತಲೇ ಇರುತ್ತದೆ. ಪರವಾನಗಿ ಇಲ್ಲದೆ ಅಕ್ರಮವಾಗಿ ಗೋಸಾಗಣೆ ಮಾಡಿ ಸಿಕ್ಕಿಬೀಳುವ ಘಟನೆಗಳೂ ವರದಿಯಾಗುತ್ತಲೇ ಇರುತ್ತದೆ. ಇದೀಗ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿದ್ದು, ಗೋ ಹತ್ಯೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠ ಒತ್ತಾಯಿಸಿದೆ.

ಜಾನುವಾರು ಸಾಗಾಟ ಸುರಕ್ಷೆಗೆ ಹೊಸ ಆ್ಯಪ್‌

click me!