ಎತ್ತಿನಹೊಳೆ: ಭೂ ಸ್ವಾಧೀನಕ್ಕೆ ರಾಷ್ಟ್ರಪತಿ ಅಂಕಿತ

By Kannadaprabha NewsFirst Published Jul 26, 2019, 2:00 PM IST
Highlights

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ರೂಪಿಸಿದ ಎತ್ತಿನ ಹೊಳೆ ಯೋಜನೆಯ ಭೂ ಸ್ವಾಧೀನ ಕಾಯ್ದೆಗೆ ಮಾಡಲಾಗಿರುವ ತಿದ್ದುಪಡಿಗೆ ರಾಜ್ಯಪಾಲರ ಅಂಗೀಕಾರ ದೊರೆತ ನಂತರ ಇದೀಗ ರಾಷ್ಟ್ರಪತಿಗಳ ಅಂಕಿತವೂ ದೊರೆತಿದೆ. ಈ ಎರಡೂ ಜಿಲ್ಲೆಯ ಸಾರ್ವಜನಿಕರಿಗೆ ಎತ್ತಿನ ಹೊಳೆ ನೀರು ಅತಿ ಶೀಘ್ರದಲ್ಲಿ ಲಭಿಸುವ ಅವಕಾಶ ಹೆಚ್ಚಾಗಿದೆ ಎಂದು ವಿಧಾನಸಭೆಯ ಸಭಾಪತಿ ರಮೇಶ್‌ ಕುಮಾರ್‌ ತಿಳಿಸಿದ್ದಾರೆ.

ಕೋಲಾರ(ಜು.26): ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ರೂಪಿಸಿದ ಎತ್ತಿನ ಹೊಳೆ ಯೋಜನೆಯ ಭೂ ಸ್ವಾಧೀನ ಕಾಯ್ದೆಗೆ ಮಾಡಲಾಗಿರುವ ತಿದ್ದುಪಡಿಗೆ ರಾಜ್ಯಪಾಲರ ಅಂಗೀಕಾರ ದೊರೆತ ನಂತರ ಇದೀಗ ರಾಷ್ಟ್ರಪತಿಗಳ ಅಂಕಿತವೂ ದೊರೆತಿದೆ.

ಇದರಿಂದಾಗಿ ಈ ಎರಡೂ ಜಿಲ್ಲೆಯ ಸಾರ್ವಜನಿಕರಿಗೆ ಎತ್ತಿನ ಹೊಳೆ ನೀರು ಅತಿ ಶೀಘ್ರದಲ್ಲಿ ಲಭಿಸುವ ಅವಕಾಶ ಹೆಚ್ಚಾಗಿದೆ ಎಂದು ವಿಧಾನಸಭೆಯ ಸಭಾಪತಿ ರಮೇಶ್‌ ಕುಮಾರ್‌ ತಿಳಿಸಿದ್ದಾರೆ.

ರೈತರಿಗೆ ಭೂ ಪರಿಹಾರ ನಿಗದಿ:

ಎತ್ತಿನ ಹೊಳೆ ಯೋಜನೆಯು ಕುಡಿಯುವ ನೀರಿನ ಯೋಜನೆ ಆಗಿರುವ ಕಾರಣ ಭೂ ಸ್ವಾಧೀನ ಕಾಯ್ದೆ ಕಲಂ 23 ಮತ್ತು 24ನ್ನು ತಿದ್ದುಪಡಿ ಮಾಡಿ ಜಿಲ್ಲಾಧಿಕಾರಿಗಳು, ಭೂ ಒಡೆಯರು ಮತ್ತು ಸರ್ಕಾರದ ಮಧ್ಯೆ ನೇರ ಮಾತುಕತೆ ನಡೆಸಿ ಸಮಾಧಾನಕರವಾಗಿರುವ ಬೆಲೆಯನ್ನು ನಿಗಧಿ ಪಡಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಇತ್ಯರ್ಥಗೊಳಿಸಲು ರಾಜ್ಯ ವಿಧಾನಸಭೆಯು ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತ್ತು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2500 ಎಕರೆ ಭೂಸ್ವಾಧೀನ ತ್ವರಿತ:

ಇದು ರಾಜ್ಯಪಾಲರಿಂದ ಅಂಕಿತವಾಗಿ, ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಲಾಗಿತ್ತು. ರಾಷ್ಟ್ರಪತಿಗಳಿಂದಲೂ ಅಂಗೀಕಾರ ಪಡೆದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಇದರಿಂದಾಗಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ವಿತರಿಸುವ ನೀರಿನ ಸಂಗ್ರಹಕ್ಕೆ ನಿರ್ಮಾಣವಾಗಿರುವ ಬೈಲಗೊಂಡ್ಲು ಜಲಾಶಯಕ್ಕೆ ಅಗತ್ಯವಿರುವ ಸುಮಾರು 2,500 ಎಕರೆ ಭೂಮಿಯ ಸ್ವಾಧೀನ ಕಾರ್ಯ ಯಾವುದೇ ವಿಳಂಬವಿಲ್ಲದೇ ತ್ವರಿತಗತಿಯಲ್ಲಿ ಸಾಗಲಿದೆ ಎಂದು ಅವರು ತಿಳಿಸಿದ್ದಾರೆ.

65 ತಾಲೂಕು ಬರಪೀಡಿತ ಎಂದು ಘೋಷಿಸಲು ತಾಕೀತು

3 ಮಾರ್ಗದಲ್ಲಿ ಕೆ.ಸಿ.ವ್ಯಾಲಿ ನೀರು:

ಕೆ. ಸಿ ವ್ಯಾಲಿ ಯೋಜನೆಯಡಿ ಮಾಲೂರು- ಶಿವಾರಪಟ್ಟಣ ಮಾರ್ಗ, ಕೋಲಾರ-ಹೊಳಲಿ ಮಾರ್ಗ ಮತ್ತು ನರಸಾಪುರ, ಈ ಮೂರೂ ಮಾರ್ಗಗಳಲ್ಲಿ ಏಕಕಾಲದಲ್ಲಿ ನೀರು ಹರಿಬಿಡುತ್ತಿರುವುದರಿಂದ ರೈತರು ತಾಳ್ಮೆಯಿಂದ ಸಹಕರಿಸಬೇಕಾಗುತ್ತದೆ. ಎಸ್‌.ಅಗ್ರಹಾರ ಕೆರೆಯ ನೀರಿನ ಸಂಗ್ರಹಾ ಸಾಮರ್ಥ್ಯ 390 ಎಂಸಿಎಫ್‌ಟಿ ಇರುತ್ತದೆ. ಈ ಹಿಂದೆ ಮರಳು ತೆಗೆಯುವುದು ಹಾಗೂ ಮಣ್ಣು ತೆಗೆಯುವ ಕಾರಣಗಳಿಂದ ಕೆರೆಯಲ್ಲಿ ಅನೇಕ ಕಡೆ ಬಹಳ ಆಳದ ಕುಣಿಗಳು ಬಿದ್ದಿತ್ತು. ಈಗ ಕಳೆದ 20 ದಿನಗಳಿಂದ ಎಲ್ಲ ಹೀರಿಕೆಯು ಮುಗಿದು ಸೂಮಾರು 100 ಎಂಸಿಎಫ್‌ಟಿ ನೀರು ಈಗ ಅಗ್ರಹಾರ ಕೆರೆಯಲ್ಲಿ ಲಭ್ಯವಿದೆ ಎಂದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನೂ 200 ಎಂಸಿಎಫ್‌ಟಿ ನೀರು ಬರಬೇಕಿರುವ ಕಾರಣ ಸುಮಾರು ಒಂದೂವರೆ ತಿಂಗಳಿಗೂ ಮೇಲ್ಪಟ್ಟಸಮಯ ಬೇಕಾಗುತ್ತದೆ. ಕೆಳ ಭಾಗದ ಪ್ರದೇಶದ ರೈತರು ಅಂದರೆ ಮುದುವಾಡಿ, ಜನ್ನಘಟ್ಟ, ಶಿಲ್ಲಪ್ಪನಹಳ್ಳಿ ಮತ್ತು ಆಲವಟ್ಟಮಾರ್ಗದ ರೈತರು ತಾಳ್ಮೆಯಿಂದ ಸಹಕರಿಸುವಂತೆ ಮನವಿ ಮಾಡಿದ್ದಾರೆ.

click me!