ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಅವರ ಪತ್ನಿ ಚನ್ನಮ್ಮ ಮತದಾನ ಮಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಹಾಸನ (ಏ.26): ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಅವರ ಪತ್ನಿ ಚನ್ನಮ್ಮ ಮತದಾನ ಮಾಡಿದರು.
ನಾನು ಮತ್ತು ಚನ್ನಮ್ಮ ಮತ ಹಾಕಿದ್ದೇವೆ. ಮತ ಹಾಕೋ ಹಕ್ಕು ಎಲ್ಲರಿಗೂ ಇದೆ. ಯಾರಿಗೆ ಹಾಕಿದ್ದೇವೆ ಎಂದು ಹೇಳೊ ಹಾಗಿಲ್ಲ. 1962 ರಿಂದ ಇಲ್ಲಿಗೆ ಬಂದು ವಾಸವಾಗಿದ್ದೇನೆ. ಇಲ್ಲಿನ ಜಮೀನಿನಲ್ಲಿ ಇರೋ ತೆಂಗು ಬೆಳೆ ನೋಡಲು ಬರ್ತೇವೆ. ಮತ ಹಾಕಲು ಕೂಡ ಇಲ್ಲಿಗೆ ಬರ್ತೇವೆ. ಈ ರಾಜ್ಯದ ಮಹಾ ಜನತೆ ಮುಂದೆ ಒಂದು ವಿಚಾರ ಪ್ರಸ್ತಾಪ ಮಾಡ್ತೇನೆ ಎಂದು ಕಾಂಗ್ರೆಸ್ ಗ್ಯಾರಂಟಿ ಪತ್ರ ಪ್ರದರ್ಶನ ಮಾಡಿದ ದೇವೇಗೌಡ ಅವರು ಒಂದು ಲಕ್ಷ ವೇತನ ಎಂದು ಖರ್ಗೆ ರಾಹುಲ್ ಹೇಳ್ತಾರೆ ಇವರು ಸಿಎಂ ಅಥವಾ ಪ್ರದಾನಿನಾ? ನಿನ್ನೆಯಿಂದ ಇಂತಹ ಕಾರ್ಡ್ ಅನ್ನ ಕೆಲವು ಮನೆಗಳಿಗೆ ಹಂಚಿದ್ದಾರೆ. ಸಾಲಾ ಮನ್ನಾ ಜಾತಿ ಗಣತಿ ಅಂತಾ ಹೇಳಿದ್ದಾರೆ. ಇವರು ಯಾರು, ಮುಖ್ಯ ಮಂತ್ರಿಯಾ ಅಥವಾ ಪ್ರದಾನಿ ನಾ?
ಕರ್ನಾಟಕ ಚುನಾವಣಾ ಮತದಾನ ಲೈಬ್ ಅಪ್ಡೇಟ್ ಇಲ್ಲಿದೆ
ಹಿಂದೆ ಇವರು ಕೂಡ ಇದೇ ರೀತಿ ಕಾರ್ಡ್ ಮಾಡಿ ಹಂಚಿದ್ದರು. ಇವರು ಈ ರೀತಿ ಕೆಲವು ಕಡೆ ನಮ್ಮ ರಾಜ್ಯದಲ್ಲಿ ಹಂಚಿದ್ದಾರೆ. ನಾನು ಕೇರಳದಲ್ಲಿ ಕೇಳಿದೆ, ತಮಿಳುನಾಡಿನ ನಲ್ಲಿ ಕೇಳಿದೆ. ಅಲ್ಲಿ ಎಲ್ಲಿಯೂ ಹಂಚಿಲ್ಲ ಅದರೆ ಇಲ್ಲಿ ಮಾತ್ರ ಹಂಚಿದ್ದಾರೆ. ಮೊನ್ನೆ ಖರ್ಗೆ ನಾನು ಸತ್ತರೆ ಮಣ್ಣಾದ್ರು ಹಾಕಿ ಎಂದು ಗುಲ್ಬರ್ಗ ದಲ್ಲಿ ಹೇಳ್ತಾರೆ. ಅಷ್ಟು ಆವೇಶದಲ್ಲಿ ಮಾತಾಡ್ತಾರೆ. ಆ ಮಹಾನುಭಾವ ಉತ್ತರ ಪ್ರದೇಶ ದಲ್ಲಿ ನಿಲ್ಲಲು ಆಗದೆ ಕೇರಳದಲ್ಲಿ ಹೋಗಿ ನಿಂತಿದ್ದಾರೆ. ಸಿಎಂ ಅಥವಾ ಡಿಸಿಎಂ ಸಹಿ ಮಾಡಿದರೆ ಒಪ್ಪಿ ಕೊಳ್ಳಬಹುದು. ಇದಕ್ಕಿಂದ ಹೇಯವಾದ ಜನರಿಗೆ ವಂಚನೆ ಮೋಸ ಮಾಡುವ ದುಷ್ಕೃತ್ಯ ಈ ರಾಜ್ಯದಲ್ಲಿ ನಡೆದಿದೆ ಎಂದು ಕಾಂಗ್ರೆಸ್ ವಿರುದ್ದ ದೇವೇಗೌಡ ವಾಗ್ದಾಳಿ ನಡೆಸಿದರು.
ಇದು ಇಷ್ಟೊಂದು ಕೀಳುಮಟ್ಟದ ರಾಜಕಾರಣ. ಬಹುಶಃ ಹಿಂದೆಂದು ಇಂತಹ ರಾಜಕಾರಣ ನಡೆದಿಲ್ಲ. ಇದೊಂದು ರಾಜ್ಯದಲ್ಲಿ ಸೋಲುತ್ತೇವೆ ಎಂದು ಜನರಿಗೆ ಮೋಸ ಮಾಡಿ ಇಂತಹ ಕಾರ್ಡ್ ಹಂಚಿದ್ದಾರೆ. ನಾನು ಜವಾಬ್ದಾರಿಯಿಂದ ಮಾಜಿ ಪ್ರಧಾನಿಯಾಗಿ ಈ ಆರೋಪವನ್ನು ಮಾಡುತ್ತಿದ್ದೇನೆ. ನಾನೇನಾದ್ರು ತಪ್ಪಿತಸ್ಥ ಎಂದರೆ ನಾನು ಈ ರಾಜ್ಯದ ಸಿಎಂ ಡಿಸಿಎಂ ನನ್ನ ಮೇಲೆ ಯಾವ ಕೇಸನ್ನು ಬೇಕಾದರೂ ಹಾಕಬಹುದು.
ದೇವೇಗೌಡರ ಹೇಳಿಕೆಯಿಂದ ಬೇಸರವಾಗಿದೆ, ಕುಮಾರಸ್ವಾಮಿ ಒಂದೇ ಒಂದು ಕರೆ ಮಾಡಿಲ್ಲ: ಸುಮಲತಾ ಅಸಮಾಧಾನ
ಕುಮಾರಸ್ವಾಮಿ ಸೋಲಿಸಲು, ಪ್ರಜ್ವಲ್ ಸೋಲಿಸಲು, ಬಿಜೆಪಿ ಅಭ್ಯರ್ಥಿ ಇರೋ ಕಡೆಯಲ್ಲೂ ಹಂಚಿದ್ದಾರೆ. ಈ ರಾಜ್ಯದಲ್ಲಿ ಎನ್ ಡಿಎ ಅಭ್ಯರ್ಥಿ ಗಳಿರುವ ಕಡೆ ಹಂಚಿದ್ದಾರೆ. ಇದನ್ನು ಯಾರೂ ಅಲ್ಲಗಳೆಯಲು ಆಗಲ್ಲ. ಇದಕ್ಕೆ ಬೆಲೆ ಏನು, ಇಷ್ಟೊಂದು ಜನಕ್ಕೆ ಮೋಸ ಮಾಡಬೇಕಾ? ಇದನ್ನು ಕಾಂಗ್ರೆಸ್ ಅಂತಾ ಕರೀತೀರಾ ಎಂದು ದೇವೇಗೌಡ ಹರಿಹಾಯ್ದರು.