Breaking: ಮತದಾನ ಮಾಡಿ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು: ಬೆಂಗಳೂರು ಮಹಿಳೆಗೆ ಹೃದಯ ಸ್ತಂಭನ

By Sathish Kumar KH  |  First Published Apr 26, 2024, 2:13 PM IST

ತುಮಕೂರಿನಲ್ಲಿ ಬೆಳಗ್ಗೆ ಪತ್ನಿಯೊಂದಿಗೆ ಬಂದು ಮತದಾನ ಮಾಡಿದ ವ್ಯಕ್ತಿ ಮನೆಗೆ ಬಂದ ಕೂಡಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.


ತುಮಕೂರು/ ಬೆಂಗಳೂರು (ಏ.26): ತುಮಕೂರಿನಲ್ಲಿ ಬೆಳಗ್ಗೆ ಪತ್ನಿಯೊಂದಿಗೆ ಬಂದು ಮತದಾನ ಮಾಡಿದ ವ್ಯಕ್ತಿ ಮನೆಗೆ ಬಂದ ಕೂಡಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಮತದಾನಕ್ಕೆಂದು ಕ್ಯೂ ನಿಂತಿದ್ದ ಮಹಿಳೆಗೆ ಹೃದಯ ಸ್ತಂಭನ ಉಂಟಾಗಿ ಕುಸಿದು ಬಿದ್ದಿದ್ದಾಳೆ.

ಮತ ಚಲಾಯಿಸಿ ಮನೆಗೆ ಬಂದವನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ತುಮಕೂರು ನಗರದ ಎಸ್.ಎಸ್.ಪುರಂನಲ್ಲಿ ನಡೆದಿದೆ. ಮೃತರನ್ನು ರಮೇಶ್ (54) ಎಂದು ಗುರುತಿಸಲಾಗಿದೆ. ರಮೇಶ್, ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದರು.  ಇಂದು ಬೆಳಿಗ್ಗೆ ನಗರದ ಎಸ್.ಎಸ್.ಪುರಂನಲ್ಲಿರುವ ಎಸ್.ವಿ.ಕೆ. ಸ್ಕೂಲ್ ನಲ್ಲಿರುವ ಮತಗಟ್ಟೆ ಸಂಖ್ಯೆ 149ರಲ್ಲಿ ಪತ್ನಿಯ ಜೊತೆ ಹೋಗಿ ಮತ ಚಲಾಯಿಸಿ ಬಂದಿದ್ದರು. ಆದರೆ, ಮನೆಗೆ ವಾಪಸಾಗುತ್ತಿದ್ದಂತೆ ರಮೇಶ್ ಗೆ ಹೃದಯಾಘಾತ ಆಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ರಮೇಶ್ ಬದುಕುಳಿಯಲಿಲ್ಲ.

Tap to resize

Latest Videos

Breaking: ಚಿತ್ರದುರ್ಗದ ಮತಗಟ್ಟೆಯಲ್ಲೇ ಸಾವನ್ನಪ್ಪಿದ ಚುನಾವಣಾ ಸಿಬ್ಬಂದಿ

ಬೆಂಗಳೂರಲ್ಲಿ ಮತದಾನಕ್ಕೆ ಬಂದ ಮಹಿಳೆಗೆ ಹೃದಯ ಸ್ಪಂಭನ:
ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನ ಆಗಿದೆ. ಅಲ್ಲೇ ಇದ್ದ ವೈದ್ಯರು ಮಹಿಳೆಯ ಪ್ರಾಣ ಉಳಿಸಿದ್ದಾರೆ. ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿಣ್ಣೆ ಬಳಿ ಘಟನೆ ನಡೆದಿದೆ. ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ಮಹಿಳೆಯ ಜೀವ ಉಳಿಸಿದ್ದಾರೆ. ಡಾ. ಗಣೇಶ್ ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮತದಾನ ಬಂದಿದ್ದರು.

ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆಂಟ್ರಲ್ ಕಡಿಮೆ ವೋಟಿಂಗ್ 

ಸುಮಾರು 50 ವರ್ಷ ಆಸುಪಾಸಿನ ಮಹಿಳೆ ನೀರು ಕುಡಿಯಲು ಹೋದಾಗ ಕುಸಿದಿದ್ದಾರೆ. ಸರತಿ ಸಾಲಿನಲ್ಲಿದ್ದ ಡಾಕ್ಟರ್ ಮತ್ತು ಇನ್ನೊಬ್ಬ ವ್ಯಕ್ತಿ ಮಹಿಳೆಯನ್ನ ಹಿಡಿದುಕೊಂಡು ನಾಡಿಮಿಡಿತವನ್ನು ಪರಿಶೀಲಿಸಿದಾಗ ನಾಡಿಮಿಡಿತ ತುಂಬಾ ಕಡಿಮೆಯಾಗಿತ್ತು. ದೇಹ ಕೂಡ ಯಾವುದೇ ಪ್ರತಿಕ್ರಿಯೆಯನ್ನು ತೋರಿಸುತ್ತಿರಲಿಲ್ಲ. ತಕ್ಷಣ ವೈದ್ಯರು ಸಿಪಿಆರ್ ಮಾಡಿದ್ದಾರೆ. ಆಗ ಮಹಿಳೆಯ ಪರಿಸ್ಥಿತಿ ಸುಧಾರಿಸಿದೆ. ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 5 ನಿಮಿಷದಲ್ಲಿ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
 

click me!