ಹಾಡಹಗಲೇ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಆಪ್ತನನ್ನು ಅಟ್ಟಾಡಿಸಿ ಕೊಲೆಗೈದ ದುಷ್ಕರ್ಮಿಗಳು

By Sathish Kumar KH  |  First Published Oct 23, 2023, 3:45 PM IST

ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈಬಂಟನೂ ಆಗಿದ್ದ ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ಅವರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.


ಕೋಲಾರ (ಅ.23): ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈಬಂಟನೂ ಆಗಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಕಾಂಗ್ರೆಸ್‌ ಮುಖಂಡ ಎಂ. ಶ್ರೀನಿವಾಸ್‌ ಅವರನ್ನು ಹಾಡಹಗಲೇ ನಡು ರಸ್ತೆಯಲ್ಲಿ ಚಾಕು, ಚೂರಿ ಹಾಗೂ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡಿದ್ದ ಶ್ರೀನಿವಾಸ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 

ಕೋಲಾರದಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಬರ್ಬರ ಹಲ್ಲೆ ಪ್ರಕರಣ ನಡೆದಿದೆ. ಆದರೆ, ಇವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಮುಖಂಡ ಎಂ.ಶ್ರೀನಿವಾಸ್ ಆಲಿಯಾಸ್ ಕೌನ್ಸಲರ್ ಶ್ರೀನಿವಾಸ್ ಕೊಲೆಗೀಡಾದ ದುರ್ದೈವಿ ಆಗಿದ್ದಾರೆ. ಇನ್ನು ಕೊಲೆಗೀಡಾದ ಗೃಹಸಚಿವ ಜಿ.ಪರಮೇಶ್ವರ್ ಆಪ್ತ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈಬಂಟನೂ ಆಗಿದ್ದನು.

Latest Videos

undefined

ಕಾರ್ಕಳ ಪರುಶುರಾಮ ಮೂರ್ತಿ ರಿಯಾಲಿಟಿ ಚೆಕ್‌ಗೆ ಮುಂದಾದ ಬಿಜೆಪಿ, ಕಾಂಗ್ರೆಸ್‌ ನಾಯಕರಿಗೆ ಜೈಲು ಶಿಕ್ಷೆ ಭೀತಿ

ರೆಸ್ಟೋರೆಂಟ್‌ ನಿರ್ಮಾಣ ಕಾರ್ಯ ಪರಿಶೀಲನೆ ವೇಳೆ ಅಟ್ಯಾಕ್: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿರುವ ಮುಳಬಾಗಿಲು ರಸ್ತೆಯ ನಿರ್ಮಾಣ ಹಂತದ  ರೆಸ್ಟೋರೆಂಟ್ ಬಳಿ ಆರು ಜನ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ ಮಾಡಲಾಗಿದೆ. ಶ್ರೀನಿವಾಸ್‌ ಅವರ ಎದೆ, ತಲೆ ಸೇರಿದಂತೆ ದೇಹದ ಎಲ್ಲೆಡೆ ಚಾಕು ಹಾಘೂ ಇತರೆ ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಹಲ್ಲೆ ಮಾಡಲಾಗಿದೆ. ಇದರಿಂದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗಾಯಾಳು ಕೌನ್ಸಲರ್ ಸೀನಪ್ಪ ಅವರನ್ನು ಕೋಲಾರದ ಆರ್‌.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುಪಾರಿ ಪಡೆದು ಕೊಲೆಗೆ ಯತ್ನಿಸಿರೊ ಆರೋಪ ಕೇಳಿಬಂದಿದೆ. ಹೊಸದಾಗಿ ನಿರ್ಮಾಣ ಮಾಡ್ತಿದ್ದ ಬಾರ್ ರೆಸ್ಟೋರೆಂಟ್ ಬಳಿ ಇದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ.

ರಾತ್ರಿ ಬಂಧನವಾಗಿದೆ, ಗೊತ್ತಿಲ್ಲದೆ ಹುಡುಗ ಅರೆಸ್ಟ್ ಆದ್ನಲ್ಲ ಅಂತ ಬೇಜಾರಿದೆ: ವರ್ತೂರ್‌ ಸಂತೋಷ್‌ ದೊಡ್ಡಪ್ಪ

ಮಾರಕಾಸ್ತ್ರಗಳ ಚೀಲ ಪತ್ತೆ ಮಾಡಿದ ಶ್ವಾನ: ಶ್ರೀನಿವಾಸಪುರ ತಾಲೂಕಿನ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ್ ಭೇಟಿ ಮಾಡಿದ್ದಾರೆ. ಕೊಲೆಯ ಆರೋಪಿಗಳ ತನಿಖೆಗೆ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿಗಳಿಗಾಗಿ ಶೋಧಾ ಕಾರ್ಯ ಆರಂಭಿಸಲಾಗಿದೆ. ಶ್ರೀನಿವಾಸಪುರ ಪೋಲಿಸ್ ಠಾಣ ವ್ಯಾಪ್ತಿ ಘಟನೆ ನಡೆದಿದೆ. ಇನ್ನು ಘಟನಾ ಸ್ಥಳಕ್ಕೆ ಶ್ವಾನ ದಳ ಭೇಟಿ ಮಾಡಿದೆ. ಮಾರಕಾಸ್ತ್ರ ತುಂಬಿಕೊಂಡು ಬಂದಿದ್ದ ಚೀಲ ಪತ್ತೆಯಾಗಿದೆ. ಮುಖಕ್ಕೆ ಪೆಪ್ಪರ್‌ಸ್ಪ್ರೇ ಮಾಡಿ ಕೊಲೆ ಮಾಡಿರುವ ಅನುಮಾನ ಕಂಡುಬಂದಿದೆ. ಆರು ಜನ ಆರೋಪಿಗಳು ಎರಡು ದಿನಗಳಿಂದ ಫಾಲೋ ಮಾಡಿ ಹಲ್ಲೆಗೆ ಯತ್ನ ಮಾಡಿದ್ದಾರೆ. ಆದರೆ, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

click me!