ಭಾರತದ 20 ಸೈನಿಕರನ್ನು ಕುತಂತ್ರದಿಂದ ಹತ್ಯೆ ಮಾಡಿದ ಚೀನಾದ 2000 ಸೈನಿಕರನ್ನು ಕೊಲ್ಲುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಬೇಕು. ಈ ಮೂಲಕ ಚೀನಾಕ್ಕೆ ಭಾರತದ ಸಾಮರ್ಥ್ಯದ ಸ್ಪಷ್ಟಸಂದೇಶ ನೀಡಬೇಕು ಎಂದು ರಾಜ್ಯ ಯುವ ಕಾಗ್ರೆಸ್ ಉಪಾಧ್ಯಕ್ಷ ಕೆಂಪರಾಜ್ ಆಗ್ರಹಿಸಿದ್ದಾರೆ.
ಉಡುಪಿ(ಜೂ.21): ಭಾರತದ 20 ಸೈನಿಕರನ್ನು ಕುತಂತ್ರದಿಂದ ಹತ್ಯೆ ಮಾಡಿದ ಚೀನಾದ 2000 ಸೈನಿಕರನ್ನು ಕೊಲ್ಲುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಬೇಕು. ಈ ಮೂಲಕ ಚೀನಾಕ್ಕೆ ಭಾರತದ ಸಾಮರ್ಥ್ಯದ ಸ್ಪಷ್ಟಸಂದೇಶ ನೀಡಬೇಕು ಎಂದು ರಾಜ್ಯ ಯುವ ಕಾಗ್ರೆಸ್ ಉಪಾಧ್ಯಕ್ಷ ಕೆಂಪರಾಜ್ ಆಗ್ರಹಿಸಿದ್ದಾರೆ.
ಉಡುಪಿಯ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಶನಿನಾರ ಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ಲಡಾಖ್‌ನ ಗಲ್ವಾನ್‌ನಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ಗೌರವ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
undefined
ಕೊರೋನಾ ಮಧ್ಯೆ ‘ಸಪ್ತಪದಿ’ಗೆ ಹೊಸ ಮುಹೂರ್ತ!
ಉಡುಪಿ ಬ್ಲಾಕ್ ಸಂಯೋಜಕ ವಿನಯ್‌ರಾಜ್ ಮಾತನಾಡಿ, ಗಲ್ವಾನ್‌ನಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ರಕ್ಷಣಾ ಸಚಿವಾಲಯ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಹಾಗೆಯೇ ಈ ಕೃತ್ಯದ ಬಗ್ಗೆ ತನಿಖೆಯಾಗಿ, ಘಟನೆಯ ಸತ್ಯಾಂಶವನ್ನು ಜನರಿಗೆ ತಿಳಿಸಬೇಕು ಎಂದರು.
ನಗರಸಭಾ ಸದಸ್ಯ ರಮೇಶ್ ಕಾಂಚನ್, ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೆ ಕೃಷ್ಣಮೂರ್ತಿ ಆಚಾರ್ಯ, ಜನಾರ್ದನ ಭಂಡಾರ್‌ಕರ್, ಬಿ.ನರಸಿಂಹ ಮೂರ್ತಿ, ಅಲೆವೂರು ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಸತೀಶ್ ಅಮೀನ್ ಪಡುಕರೆ, ದಿನೇಶ್ ಪುತ್ರನ್, ಗೀತಾ ವಾಗ್ಲೆ, ರೋಶನಿ ಒಲಿವೆರಾ, ಚಂದ್ರಿಕಾ ಶೆಟ್ಟಿ, ಸೆಲಿನಾ ಕರ್ಕಡ ಮುಂತಾದವರಿದ್ದರು.