ದೇಶದ ವಿಶ್ವವಿದ್ಯಾನಿಲಯಗಳು ವಿದೇಶಿ ವಿವಿಗಳೊಂದಿಗೆ ಪೈಪೋಟಿ ನೀಡಲು ಮೂಲಸೌಕರ್ಯ, ನುರಿತ ಸಿಬ್ಬಂದಿಯನ್ನು ಹೊಂದುವುದು ಇಂದಿನ ತುರ್ತಾಗಿದೆ ಎಂದು ಪಂಜಾಬ್ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎಸ್. ಚಾಹಲ್ ತಿಳಿಸಿದರು.
ಮೈಸೂರು : ದೇಶದ ವಿಶ್ವವಿದ್ಯಾನಿಲಯಗಳು ವಿದೇಶಿ ವಿವಿಗಳೊಂದಿಗೆ ಪೈಪೋಟಿ ನೀಡಲು ಮೂಲಸೌಕರ್ಯ, ನುರಿತ ಸಿಬ್ಬಂದಿಯನ್ನು ಹೊಂದುವುದು ಇಂದಿನ ತುರ್ತಾಗಿದೆ ಎಂದು ಪಂಜಾಬ್ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎಸ್. ಚಾಹಲ್ ತಿಳಿಸಿದರು.
ಮೈಸೂರು ವಿವಿ ಮಾನಸಗಂಗೋತ್ರಿಯ ಭವನದಲ್ಲಿ ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ, ಮೈಸೂರು ವಿವಿ ಹಳೆಯ ವಿದ್ಯಾರ್ಥಿಗಳ ಸಂಘ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ವಿದೇಶಿ ವಿಶ್ವವಿದ್ಯಾನಿಲಯಗಳು ಹಾಗೂ ಭಾರತದ ಉನ್ನತ ಶಿಕ್ಷಣದ ಭವಿಷ್ಯ ಕುರಿತ ವಿಚಾರಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
undefined
ಸಿಬ್ಬಂದಿಗೆ ವೇತನ ವಿಳಂಬ, ಖಾಲಿ ಹುದ್ದೆಗಳು, ಕೊರತೆ ಹಾಗೂ ಅನುದಾನ ಅಭಾವವನ್ನು ದೇಶದ ವಿವಿಗಳು ಎದುರಿಸುತ್ತಿವೆ. ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಈ ಎಲ್ಲಾ ಅಂಶಗಳು ಪ್ರಭಾವ ಬೀರುತ್ತಿವೆ. ವಿದೇಶಿ ವಿವಿಗಳೊಂದಿಗೆ ಪೈಪೋಟಿ ನೀಡುವಂತೆ ಅನುದಾನವನ್ನು ಸರ್ಕಾರಗಳು ಬಿಡುಗಡೆ ಮಾಡಬೇಕು ಎಂದು ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿರುವ ಶಿಕ್ಷಣದ ಅಸಮಾನತೆ ಹೆಚ್ಚಾದರೆ ವಿದೇಶಿ ವಿವಿಗಳ ಸ್ಥಾಪನೆಯ ಆಶಯ ಈಡೇರುವುದಿಲ್ಲ. ವಿದೇಶಿ ವಿವಿಗಳ ಸ್ಥಾಪನೆಯಿಂದ ದೇಶದಲ್ಲಿ ಸ್ಪರ್ಧಾತ್ಮಕ ಪೈಪೋಟಿಯ ಜೊತೆಗೆ ಉನ್ನತ ಶಿಕ್ಷಣದ ಗುಣಮಟ್ಟವೂ ಹೆಚ್ಚಾಗಲಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ವಿವಿಗಳು ಸ್ಥಾಪನೆಯಿಂದ ಹೊಸ ಕೋರ್ಸ್, ಪದವಿ ಆರಂಭಕ್ಕೆ ಪ್ರೋತ್ಸಾಹ ಸಿಗಲಿದೆ ಎಂದು ಅವರು ತಿಳಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗ್ಡೆ ಮಾತನಾಡಿ, ಇದೀಗ ಜಿಲ್ಲೆಗೊಂದರಂತೆ ವಿಶ್ವವಿದ್ಯಾನಿಲಯ ತೆರೆಯಲಾಗುತ್ತಿದೆ. ವಿವಿಗಳು ಪ್ರಾದೇಶಿಕ ಅಥವಾ ಸ್ಥಳೀಯ ಸಂಸ್ಥೆಯಲ್ಲ. ಜಾಗತಿಕ ದೃಷ್ಟಿಕೋನವನ್ನು ವಿದ್ಯಾರ್ಥಿಗಳಲ್ಲಿ ರೂಪಿಸುವ ಅಂತಾರಾಷ್ಟ್ರೀಯ ಸಂಸ್ಥೆಯೆಂದು ಸರ್ಕಾರ ಪರಿಗಣಿಸಬೇಕಿದೆ. ವಿದೇಶಿಯರು ಭಾರತಕಕ್ಕೆ ಬರುತ್ತಿದ್ದು, ಇಂದು ಭಾರತೀಯರು ಪಾಶ್ವಾತ್ಯ ವಿವಿಗಳಲ್ಲಿ ಅಧ್ಯಯನ ಹೋಗುತ್ತಿದ್ದಾರೆ. ಇದು ಬದಲಾಗಬೇಕು ಎಂದು ಆಶಿಸಿದರು.
ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗಿ ನಂತರ ವಾಪಸಾಗಿ ದೇಶ ಸೇವೆ ಮಾಡಿದ್ದರು. ನಾವೂ ಅಂಥ ಮನಸ್ಥಿತಿ ಬೆಳೆಸಿಕೊಳ್ಳಬೇಕು. ವಿದೇಶಿ ವಿವಿಗಳು ದೇಶದಲ್ಲಿ ಸ್ಥಾಪನೆಯಾಗುವುದನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಎಚ್. ರಾಜಶೇಖರ್, ವೇದಿಕೆ ಕಾರ್ಯದರ್ಶಿ ಪ್ರೊ. ಸುರೇಶ್ ಎಸ್. ಹೊನ್ನಪ್ಪಗೋಳ್, ಪ್ರೊ.ಎಸ್. ಶ್ರೀಕಂಠಸ್ವಾಮಿ ಇದ್ದರು.
ಅಂಗವಸ್ತ್ರ ಧರಿಸಲು ಆದೇಶ
ನವದೆಹಲಿ (ಫೆ.5): ವಸಹಾತುಶಾಹಿಗಳ ಅಧಿಕಾರವನ್ನು ಬಿಂಬಿಸುವಂಥ ಹಳೆಯ ಕಾಲದ ಗೌನ್‌ಗಳ ಬದಲಿಗೆ ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಘಟಿಕೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಲಿರುವ ವಿದ್ಯಾರ್ಥಿಗಳು ಭಾರತೀಯ ಉಡುಗೆಯೊಂದಿಗೆ ಅಂಗವಸ್ತ್ರ ಧರಿಸಿ ಬರಬೇಕು, ಮಹಿಳೆಯರು ಸೀರೆಯುಟ್ಟು ಬರಬೇಕು ಎಂದು ದೆಹಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ದೆಹಲಿ ವಿಶ್ವವಿದ್ಯಾಲಯ ತನ್ನ 99ನೇ ವರ್ಷದ ಘಟಿಕೋತ್ಸವ ಸಮಾರಂಭವನ್ನು ಆಚರಿಸಿಕೊಳ್ಳಲಿದೆ. ದೆಹಲಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ವಿಕಾಸ್ ಗುಪ್ತಾ ಈ ಕುರಿತಾಗಿ ಮಾಹಿತಿ ನೀಡಿದ್ದು, ಘಟಿಕೋತ್ಸವದ ಡ್ರೆಸ್ ಕೋಡ್‌ಅನ್ನು ಬದಲಿಸಲು ನಾವು ನಿರ್ಧಾರ ಮಾಡಿದ್ದೇವೆ. ಭಾರತೀಯ ಸಂಸ್ಕೃತಿಗೆ ಹೊಂದುವಂತೆ ಉಡುಗೆಯನ್ನು ಧರಿಸಿ ಬರುವಂತೆ ಸೂಚಿಸಲಾಗಿದೆ ಎಂದಿದ್ದಾರೆ. ಇಂಗ್ಲೀಷ್ ಸ್ಟೈಲ್‌ನ ನಿಲುವಂಗಿ ಹಾಗೂ ಅದರ ಮೇಲೆ ಗೌನ್ ಧರಿಸುವ ಸಂಪ್ರದಾಯ ಬಹಳ ಕಾಲದಿಂದಲೂ ಇತ್ತು. ಈಗ ಅದನ್ನು ಬದಲಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ಭಾರತೀಯ ಉಡುಗೆಯೊಂದಿಗೆ ಅಂಗವಸ್ತ್ರಗಳನ್ನು ಧರಿಸುವಂತೆ ಹೇಳಲಾಗಿದೆ. ಇನ್ನು ಅಧಿಕಾರಿಗಳಿಗೆ ಖಾದಿ ರೇಷ್ಮೆಯಿಂದ ತಯಾರಿಸಲಾದ ಉಡುಗೆಗಳನ್ನು ಧರಿಸುವಂತೆ ಹೇಳಲಾಗಿದೆ. ನಮ್ಮ ಮೂಲದ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಇದು ಅಗತ್ಯ ಎಂದು ದೆಹಲಿ ವಿವಿ ಉಪಕುಲಪದಿ ಯೋಗೇಶ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
99ನೇ ಘಟಿಕೋತ್ಸವ (Convocation) ಕಾರ್ಯಕ್ರಮ ದೆಹಲಿ ವಿವಿಯಲ್ಲಿ (Delhi University) ಫೆ.25 ರಂದು ನಡೆಯಲಿದೆ. ಸ್ಪೋರ್ಟ್ಸ್ ಸ್ಟೇಡಿಯಂ ಸಂಕೀರ್ಣದ ಮಲ್ಟಿಪರ್ಪಸ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.ಇದು ಕಡ್ಡಾಯವಲ್ಲದಿದ್ದರೂ, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳಾದ ಕುರ್ತಾ (Kurta) ಮತ್ತು ಸೀರೆಗಳನ್ನು (Saree) ಆಯ್ಕೆ ಮಾಡಲು ಪ್ರೋತ್ಸಾಹಿಸಲಾಗುತ್ತದೆ ಎಂದು ಡಿಯು ಅಧಿಕಾರಿಗಳು ತಿಳಿಸಿದ್ದಾರೆ. ಅಂಗವಸ್ತ್ರಗಳನ್ನು ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳಿಗೆ ಕಲರ್ ಕೋಡೆಡ್ ಮಾಡಲಾಗುತ್ತದೆ.
ಮುಖ್ಯ ಅತಿಥಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಖಾದಿ ರೇಷ್ಮೆಯಿಂದ ಮಾಡಿದ ಉಡುಪನ್ನು ನೀಡಲು ವಿಶ್ವವಿದ್ಯಾಲಯದ ಅಧಿಕಾರಿಗಳು ಯೋಜಿಸಿದ್ದಾರೆ. ವರದಿಗಳ ಪ್ರಕಾರ, ಡಿಸೆಂಬರ್ 2022 ರಲ್ಲಿ ನಡೆದ ಕಾರ್ಯಕಾರಿ ಮಂಡಳಿಯು ಈ ಬದಲಾವಣೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಅಂಗವಸ್ತ್ರವು ಭುಜದ ಮೇಲೆ ಇರಿಸಿಕೊಳ್ಳುವಂತ ಬಟ್ಟೆಯಾಗಿದೆ. ಇದರ ಅಂಚುಗಳನ್ನು ವಿಶೇಷವಾಗಿ ಅಲಂಕರಿಸಲಾಗಿರುತ್ತದೆ. ಇದನ್ನು ಮುಖ್ಯವಾಗಿ ಧೋತಿ ಮತ್ತು ಕುರ್ತಾದೊಂದಿಗೆ ಪುರುಷರು ಬಳಸುತ್ತಾರೆಯಾದರೂ, ಇದನ್ನು ಗೌರವದ ಸಂಕೇತವಾಗಿಯೂ ನೀಡಲಾಗುತ್ತದೆ.