ಕಲಬುರ್ಗಿ ಹತ್ಯೆ ಸುಳಿವು ಗೌರಿ ಹಂತಕರಿಂದ ಸಿಐಡಿಗೆ ಸಿಕ್ಕಿತೆ?

By Web DeskFirst Published Sep 28, 2018, 7:58 PM IST
Highlights

ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಸಂಬಂಧ ಸಿಐಡಿ ಪೊಲೀಸರು 14 ದಿನಗಳ ಕಾಲ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ವಿಚಾರಣೆ ನಡೆಸಿದ್ದರು.

ಧಾರವಾಡ(ಸೆ.28] ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಕೈಗೊಳ್ಳಲು 14 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದ ಗೌರಿ ಲಂಕೇಶ ಹತ್ಯೆ ಆರೋಪಿಗಳನ್ನು ಸಿಐಡಿ ಪೊಲೀಸರು ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸೆ.15 ರಂದು ಧಾರವಾಡದ ನ್ಯಾಯಾಲಯಕ್ಕೆ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ಪ್ರಕರಣಕ್ಕೆ ಸಂಬಂಸಿದಂತೆ ಎಸ್‌ಐಟಿ ಪೊಲೀಸರಿಂದ ಬಂಧಿಲ್ಪಟ್ಟಿರುವ ಗಣೇಶ ಮಿಸ್ಕಿನ್ ಹಾಗೂ ಅಮಿತ್ ಬದ್ಧಿ ಅವರನ್ನು ಹಾಜರುಪಡಿಸಲಾಗಿತ್ತು.

ಈ ವೇಳೆ ಸಿಐಡಿ ಅವರ ಅರ್ಜಿ ಪುರಸ್ಕರಿಸಿ, ಈ ಆರೋಪಿಗಳನ್ನು 14 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಲಾಗಿತ್ತು. ಅದರಂತೆ 14 ದಿನಗಳ ಕಾಲಾವಧಿ ಮುಗಿದ ಕಾರಣ ಶುಕ್ರವಾರ ಈ ಆರೋಪಿಗಳನ್ನು ಸಿಐಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿತು. ಈ ವೇಳೆ ಕಲಬುರ್ಗಿ ಪ್ರಕರಣ ವಿಚಾರಣೆ ಸಾಕೆಂಬುದಾಗಿ ಹೇಳಿರುವ ಸಿಐಡಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

click me!