ಚಿರತೆ ಸೆರೆಗೆ ಟಾಸ್‌್ಕ ಫೋರ್ಸ್‌ ರಚನೆ- ಎಸ್‌.ಟಿ. ಸೋಮಶೇಖರ್‌

By Kannadaprabha News  |  First Published Jan 28, 2023, 8:43 AM IST

ಟಿ. ನರಸೀಪುರ ತಾಲೂಕಿನಲ್ಲಿರುವ ಚಿರತೆ ಹಾವಳಿ ತಡೆಗೆ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.


 ಮೈಸೂರು :  ಟಿ. ನರಸೀಪುರ ತಾಲೂಕಿನಲ್ಲಿರುವ ಚಿರತೆ ಹಾವಳಿ ತಡೆಗೆ ಟಾಸ್ಕ್ ಫೋರ್ಸ್‌… ಫೋರ್ಸ್‌ ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಾನವ ಮತ್ತು ಸಂಘರ್ಷ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ಎಲ್ಲಾ ಮರಗಳ ಕೊಂಬೆಗಳ ಕಟಾವು ಆಗಬೇಕು. ಬೀದಿ ದೀಪಗಳು ರಾತ್ರಿ ವೇಳೆ ಕಡ್ಡಾಯವಾಗಿ ಆನ್‌ ಆಗಿರಬೇಕು. ಸದರಿ ಹಳ್ಳಿಗಳಿಗೆ ಕಡ್ಡಾಯವಾಗಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೆಚ್ಚಿನ ಬಸ್‌ ವ್ಯವಸ್ಥೆಯನ್ನೂ ಮಾಡಬೇಕು ಎಂದರು.

Latest Videos

undefined

ಚಿರತೆ ಸೆರೆಗೆ ಕ್ರಮ ಕೈಗೊಂಡು ಜನರಲ್ಲಿ ಭರವಸೆ ಮೂಡಿಸಬೇಕು. ಸರ್ಕಾರದಿಂದ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಟಿ. ನರಸಿಪುರ ಕ್ಷೇತ್ರದ ಶಾಸಕ ಎಂ. ಅಶ್ವಿನ್‌ಕುಮಾರ್‌ ಮಾತನಾಡಿ, ಚಿರತೆ ದಾಳಿಯಿಂದ ಜನರು ಭಯ ಬಿತರಾಗಿದ್ದಾರೆ. ಬೇಗ ಚಿರತೆ ಹಿಡಿಯಲು ಕ್ರಮವಹಿಸಿ. ತಾಲೂಕಿನಲ್ಲಿ ಹೆಚ್ಚಿನ ಚಿರತೆ ಹಾಗೂ ಮರಿಗಳು ಬೀಡು ಬಿಟ್ಟಿವೆ. ಸ್ಪೆಷಲ್‌ ಶೂಟರ್‌ ಬಳಸಿಕೊಂಡು ಚಿರತೆ ಹಾವಳಿ ತಪ್ಪಿಸುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 4 ಜನರು ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಚಿರತೆ ಟಾÓ್ಕ… ಫೋರ್ಸ್‌ ರಚಿಸಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಕೃಷಿ ಉದ್ದೇಶಕ್ಕೆ ಎಂದು ಜಾಗವನ್ನು ಖರೀದಿಸಿ ಬಹಳ ವರ್ಷಗಳಿಂದ ಬೀಳು ಬಿಟ್ಟಿದ್ದಾರೆ. ಮೂರು ವರ್ಷಗಳಿಗಿಂತ ಹೆಚ್ಚು ಬೀಳು ಬಿಟ್ಟಿದ್ದರೆ ಅಂಥವರಿಗೆ ನೊಟೀಸ್‌ ನೀಡಲಾಗುವುದು ಎಂದರು.

ಚಿಕನ್‌ ಸ್ಟಾಲ್‌ಗಳಿಂದ ವೇಸ್ವ್‌ಗಳನ್ನು ಹಳ್ಳಿಗಳಲ್ಲಿ ಹಾಕದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್‌ಕುಮಾರ್‌ ಮಾಹಿತಿ ನೀಡಿ, ಜನವರಿ ತಿಂಗಳಿನಲ್ಲಿ 3 ಚಿರತೆಗಳು ಹಾಗೂ 5 ಚಿರತೆ ಮರಿಗಳನ್ನು ಸೆರೆ ಹಿಡಿಯಲಾಗಿದೆ. ಚಿರತೆ ಸೆರೆಗೆ ಬೋನು ಇಡಲಾಗಿದೆ. 158 ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧ ತಂಡಗಳಲ್ಲಿ ನಿಯೋಜಿಸಲಾಗಿದೆ. ರಾತ್ರಿ ವೇಳೆ ತಂಡಗಳು ಗಸ್ತು ತಿರುಗುತ್ತಿದ್ದಾರೆ. ಕಬ್ಬು ಕಟಾವು ವೇಗ ಗತಿಯಲ್ಲಿ ನಡಿಯುತ್ತಿದೆ. ಇನ್ನೂ 800 ಎಕರೆ ಕಬ್ಬು ಕಟಾವು ಆಗಬೇಕಿದೆ. ಡ್ರೋನ್‌ ಬಳಕೆಯನ್ನು ಕೂಡ ಹೆಚ್ಚಿಸಲಾಗಿದೆ. ಏಪ್ರಿಲ್‌ 2022 ರಿಂದ ಇಲ್ಲಿಯವರೆಗೆ 73 ಚಿರತೆಗಳನ್ನು ಜಿಲ್ಲೆಯಲ್ಲಿ ಸೆರೆ ಹಿಡಿಯಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ವಿಧಾನ ಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ, ಎಸ್ಪಿ ಸೀಮಾ ಲಾಟ್ಕರ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪಶುವೈದ್ಯ ಸಹಾಯಕರ ಅಗತ್ಯವಿದೆ

ಜಿಲ್ಲೆಯಲ್ಲಿ ಚಿರತೆ ದಾಳಿ ನಿಯಂತ್ರಿಸಲು ರಚಿಸಿರುವ ಟಾಸ್‌್ಕಫೋರ್ಸ್‌ಗೆ ಪಶುವೈದ್ಯ ಸಹಾಯಕರು ಮತ್ತು ವಿಧಿ ವಿಜ್ಞಾನ ತಜ್ಞರ ಅಗತ್ಯವಿದೆ ಎಂದು ಡಿಸಿಎಫ್‌ ಮಹೇಶ್‌ಕುಮಾರ್‌ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಉಸ್ತುವಾರಿ ಸಚಿವರ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಟಾಸ್‌್ಕ ಫೋರ್ಸ್‌ನಲ್ಲಿ ಅರ​ಣ್ಯಾ​ಧಿ​ಕಾ​ರಿ​ಗಳು ಮತ್ತು ಸಿಬ್ಬಂದಿ ಜತೆಗೆ ಪಶು​ವೈದ್ಯ ಸಹಾ​ಯ​ಕರು ಮತ್ತು ವಿಧಿವಿ​ಜ್ಞಾ​ನ ತಜ್ಞರು ಅಗ​ತ್ಯ​ವಿದೆ. ಇದ​ರಿಂದ ಚಿರತೆ ಸೆರೆಗೆ ಅನು​ಕೂ​ಲ​ವಾ​ಗ​ಲಿದೆ. ಸೆರೆ ಹಿಡಿದ ಚಿರತೆ ಪೈಕಿ ಆರೋಗ್ಯಕರ ಚಿರತೆಯನ್ನು ಮಾತ್ರ ಕಾಡಿಗೆ ಬಿಡಲಾಗುತ್ತಿದೆ. ಗಾಯಗೊಂಡ ಮತ್ತು ವಯಸ್ಸಾದ ಚಿರತೆಗಳನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದರು.

ತಲ​ಕಾಡು, ಮಲ್ಲಿ​ಕಾ​ರ್ಜುನ ಬೆಟ್ಟ​ದಲ್ಲಿ ಸ್ವಲ್ಪ​ಮ​ಟ್ಟಿಗೆ ಅರಣ್ಯ ಇರು​ವುದು ಬಿಟ್ಟರೆ ದೊಡ್ಡ ಕಾಡು​ಗ​ಳಿಲ್ಲ. ಬದ​ಲಿಗೆ ಕಬ್ಬಿನ ಗದ್ದೆ, ಪಾಳು​ಬಿದ್ದ ಜಮೀನು ಹೆಚ್ಚಿ​ರು​ವು​ದ​ರಿಂದ ಚಿರ​ತೆ​ಗಳ ಸಂಖ್ಯೆ ಏರಿ​ಕೆ​ಯಾ​ಗಿದೆ. ಸದ್ಯಕ್ಕೆ ಟಿ. ನರ​ಸೀ​ಪುರ ತಾಲೂ​ಕಿನ ಸೋಸಲೆ ಹೋಬಳಿ ವ್ಯಾಪ್ತಿಯ 21 ಗ್ರಾಮ​ಗ​ಳಲ್ಲಿ ಚಿರತೆ ಮಾನವ ಸಂಘರ್ಷ ಏರ್ಪ​ಟ್ಟಿದ್ದು, ಚಿರತೆ ಸೆರೆಗೆ ಅಧಿಕಾ​ರಿ, ಸಿಬ್ಬಂದಿ ಸೇರಿ 158 ಮಂದಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ದ್ದಾರೆ. 19 ಕಡೆ ಬೋನ್‌ ಇರಿ​ಸಿದ್ದು, 69 ಕ್ಯಾಮೆರಾ ಅಳ​ವ​ಡಿ​ಸ​ಲಾ​ಗಿದೆ. ಜತೆಗೆ 2 ಥರ್ಮಲ್‌ ಡ್ರೋಣ್‌ ಬಳಕೆ ಮಾಡ​ಲಾ​ಗು​ತ್ತಿದ್ದು, ಜನ​ರಲ್ಲಿ ಸಂಜೆ 6 ಗಂಟೆಯ ಮೇಲೆ ಮನೆ​ಯಿಂದ ಆಚೆ ಬರ​ದಂತೆ ಜಾಗೃತಿ ಮೂಡಿ​ಸ​ಲಾ​ಗು​ತ್ತಿದೆ ಎಂದು ಅವರು ಹೇಳಿ​ದರು.

ಈಗಾ​ಗಲೇ ಒಬ್ಬರು ಸಿಎಫ್‌, ನಾಲ್ವರು ಡಿಸಿ​ಎಫ್‌, ಎಸಿ​ಎಫ್‌, ಆರ್‌​ಎ​ಫ್‌​ಗಳು ಕಾರ್ಯಾ​ಚರ​ಣೆಗೆ ಇಳಿ​ದಿದ್ದು, ಇದ​ರ ಜತೆಗೆ ಕೊಡಗು ಮತ್ತು ಮೈಸೂರು ಆನೆ ಸೆರೆ ಕಾರ್ಯ​ಪಡೆ ತಂಡ​ವನ್ನು ಬಳಕೆ ಮಾಡಿಕೊ​ಳ್ಳ​ಲಾ​ಗಿದೆ. ಹಾಗೆಯೇ ರಾತ್ರಿ ವೇಳೆ ಗಸ್ತು ವ್ಯವ​ಸ್ಥೆ​ಯನ್ನು ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದರು.

click me!