ಕನ್ಹಯ್ಯ ಹತ್ಯೆ ಖಂಡಿಸಿ ಪ್ರತಿಭಟನೆ: ಟೈರ್‌ ಸುಡುವ ವೇಳೆ ಹಿಂದೂ ಕಾರ್ಯಕರ್ತರಿಗೆ ತಗುಲಿದ ಬೆಂಕಿ..!

By Suvarna News  |  First Published Jul 1, 2022, 6:54 PM IST

ಪೊಲೀಸರ ವಿರೋಧದ ನಡುವೆ ಹಿಂದೂ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿದ್ದು, ಅದರ ಕಿಡಿ ಮೂವರ ಪ್ಯಾಂಟಿಗೆ ತಗುಲಿದ ಪ್ರಸಂಗ ನಡೆದಿದೆ.


ಹಾವೇರಿ, (ಜುಲೈ.01): ರಾಜಸ್ಥಾನದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಭಜರಂಗದಳ, ಶ್ರೀರಾಮಸೇನೆ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು  ಹಾವೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಇಂದು(ಶುಕ್ರವಾರ) ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುವ ವೇಳೆ ಮೂವರು ಹಿಂದೂ ಕಾರ್ಯಕರ್ತರ ಪ್ಯಾಂಟಿಗೆ ಬೆಂಕಿ ಕಿಡಿ ತಗುಲಿದೆ. 

Latest Videos

undefined

ಹೌದು...ರಾಜಸ್ಥಾನದ ಉದಯಪುರದಲ್ಲಿ ಮಂಗಳವಾರ ಹಾಡಹಗಲೇ ನಡೆದ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಹಾವೇರಿಯಲ್ಲಿ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಟೈರ್ ಸುಡಲು ಅವಕಾಶ ನೀಡದ್ದಕ್ಕೆ ಪೊಲೀಸರ ಜೊತೆ ಕಾರ್ಯಕರ್ತರು ವಾಗ್ವಾದ ನಡೆಸಿದರು. ಕಾರ್ಯಕರ್ತರು ತಂದಿಟ್ಟ ಟೈರ್‌ಗಳನ್ನು ಪೊಲೀಸರು ವಾಪಸ್ ಕಳಿಸಿದರು. ಪೊಲೀಸರ ವಿರೋಧದ ನಡುವೆಯೂ ಟೈರ್‌ಗೆ ಬೆಂಕಿ ಹಚ್ಚಿದ ನಂತರ ಮೂವರು ಕಾರ್ಯಕರ್ತರ ಪ್ಯಾಂಟಿಗೆ ಬೆಂಕಿಯ ಕಿಡಿ ಹತ್ತಿಕೊಂಡಿದೆ. ಪ್ಯಾಂಟ್‍ಗಳಿಗೆ ಬೆಂಕಿ ಹತ್ತಿದ್ದನ್ನು ಗಮನಿಸಿ ತಕ್ಷಣವೇ ಬೆಂಕಿಯನ್ನು ಕಾರ್ಯಕರ್ತರು ಆರಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾರೀ ಅನಾಹುತ ತಪ್ಪಿದೆ.

ಕನ್ಹಯ್ಯ ಕೊಲೆ ವಿರೋಧಿಸಿ ಮೂಡಿಗೆರೆ ಬಂದ್, ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ ಮಾಡದಂತೆ ಕರೆ

ಕಲ್ಲು ಕ್ವಾರಿಯಲ್ಲಿ ಪತ್ತೆಯಾಯ್ತು ಅಪರೀಚಿತ ಶವ
ಹಾವೇರಿ ( ಜುಲೈ1): ಛಿದ್ರ ಛಿದ್ರವಾಗಿ ಬಿದ್ದಿರುವ  ವ್ಯಕ್ತಿಯ ಮೃತ ದೇಹ ಹಾವೇರಿಯ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿಯ ಕಲ್ಲಿನ ಕ್ವಾರಿ ಪತ್ತೆಯಾಗಿದೆ.

ಗುಂಡೂರು ಗ್ರಾಮದ ಬಳಿಯ ಕಲ್ಲಿನ ಕ್ವಾರಿ ಗುಂಡಿ ಮುಚ್ಚುವ ವೇಳೆ ಮೃತ ವ್ಯಕ್ತಿಯ ದೇಹದ ಅಂಗಾಂಗಳು ಛಿದ್ರ ಛಿದ್ರವಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ . ಕೊಳೆತು ಗಬ್ಬು ನಾರುತ್ತಿದ್ದ ದೇಹದ ಭಾಗಗಳನ್ನ ಕಂಡು ಗುಂಡಿ ಮುಚ್ಚುತ್ತಿದ್ದ ಕೂಲಿ ಕಾರ್ಮಿಕರು ಒಂದು ಕ್ಷಣ ಭಯಭೀತರಾಗಿದ್ದಾರೆ.

ಕಲ್ಲು ಬ್ಲಾಸ್ ಮಾಡುವ ವೇಳೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಸಹ ಬ್ಲಾಸ್ಟ್ ಆಗಿ ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ . ಕ್ವಾರಿಯಲ್ಲಿ ಕೆಲಸ ಮಾಡ್ತಿದ್ದ ಕೂಲಿ ಕಾರ್ಮಿಕ ನಾಪತ್ತೆಯಾಗಿ ತಿಂಗಳುಗಳೇ ಕಳೆದಿದೆ . ಆದ್ರೆ , ಇದುವರೆಗೂ ನಾಪತ್ತೆಯಾಗಿರುವ ಕೂಲಿ ಕಾರ್ಮಿಕನ ಸುಳಿವು ಪತ್ತೆಯಾಗಿಲ್ಲ. 

ಹೊಸಪೇಟೆ ಮೂಲದ ವೆಂಕಟೇಶ ಮೇ . 7 ರಂದು ಈ ಕಲ್ಲಿನ ಕ್ವಾರಿಯಲ್ಲಿ ಕೆಲಸಕ್ಕೆ ಬಂದಿದ್ದ . ಮೇ . 17 ರಂದು ವೆಂಕಟೇಶ ನಾಪತ್ತೆಯಾಗಿದ್ರು , ಮೇ . 26 ರಂದು ಹಾನಗಲ್ ಠಾಣೆಯಲ್ಲಿ ಕಾಣೆಯಾಗಿದ್ದಾನೆಂದು ದೂರು ದಾಖಲಾಗಿತ್ತು . ಆದ್ರೆ . ಈಗ ಸಿಕ್ಕಿ ಮೃತದೇಹದ ಭಾಗಗಳು ಹಾಗೂ ಬಟ್ಟೆ ವೆಂಕಟೇಶನದ್ದೇ ಇರಬಹುದಾ ? ಎಂಬ ಅನುಮಾನ‌ ಕಾಡ್ತಿದೆ.  ಹಾನಗಲ್ ಪೊಲೀಸ್ ಠಾಣೆ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ..

click me!