ಇಡೀ ಕೇಸನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿರುವ ನ್ಯಾಯಪೀಠ, ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಆಧಾರದ ಮೇಲೆ ಹೊಸದಾಗಿ ಪ್ರಕರಣವನ್ನು ಪರಿಗಣಿಸಬೇಕು.
ಬೆಂಗಳೂರು (ಮಾ.26): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) 2005 ಮತ್ತು 2012ರ ಅವಧಿಯಲ್ಲಿ ನಡೆದ ಗುತ್ತಿಗೆ ಕಾಮಗಾರಿ ಅವ್ಯವಹಾರದಲ್ಲಿ ಪಾಲಿಕೆಯ ನಿವೃತ್ತ ಮುಖ್ಯ ಎಂಜಿನಿಯರ್ ಬಿ.ಟಿ.ರಮೇಶ್ ಸೇರಿ ಹಲವು ಹಾಲಿ, ನಿವೃತ್ತ ಎಂಜಿನಿಯರ್ ಮತ್ತು ಗುತ್ತಿಗೆದಾರರ ಮೇಲಿನ ಆರೋಪಗಳನ್ನು ಕೈಬಿಟ್ಟು ಅಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಹೊಸದಾಗಿ ವಿಚಾರಣೆ ನಡೆಸುವಂತೆ ಆದೇಶಿಸಿದೆ. ಈ ಕುರಿತು ನಗರದ 77ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 2023ರ ನ.8ರಂದು ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಇಡೀ ಕೇಸನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿರುವ ನ್ಯಾಯಪೀಠ, ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಆಧಾರದ ಮೇಲೆ ಹೊಸದಾಗಿ ಪ್ರಕರಣವನ್ನು ಪರಿಗಣಿಸಬೇಕು. ಆರೋಪಿಗಳ ವಿರುದ್ಧ ಪ್ರಾಸಿ ಕ್ಯೂಷನ್‌ಗೆ ಸರ್ಕಾರ ನೀಡಿರುವ ಪೂರ್ವಾನುಮತಿ ಆಧರಿಸಿ ಕಾಗ್ನಿ ಜೆನ್ಸ್ ಸ್ವೀಕರಿಸಿದ ಹಂತದಿಂದ ವಿಚಾರಣಾ ಪ್ರಕಿಯೆ ಮುಂದುವರಿಸಬೇಕು ಎಂದು ನಿರ್ದೇಶಿಸಿದೆ. ಯಾವ ಆರೋಪಿಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿಲ್ಲವೋ, ಅಂಥವರ ವಿರುದ್ಧ ವಿಚಾರಣೆ ನಡೆಸು ವಂತಿಲ್ಲ. ತಾಂತ್ರಿಕ ವಿಚಕ್ಷಣಾ ಸಮಿತಿಯ (ಟಿವಿಸಿಸಿ ) ವರದಿ ಇಲ್ಲದಿರುವುದರಿಂದ ಸೆಕೆಂಡರಿ ಸಾಕ್ಷ್ಯ ಗಳನ್ನು ತನಿಖಾಧಿಕಾರಿಗಳು ಒದಗಿಸಿದ ಸಂದರ್ಭದಲ್ಲಿ ಅದನ್ನು ಪರಿಗಣಿಸಬೇಕು.
ಹಕ್ಕಿಜ್ವರ ಆಯ್ತು ಇದೀಗ, ಬೆಕ್ಕಿಗೆ ಎಫ್‌ಪಿವಿ ಸೋಂಕಿನ ಆತಂಕ: 38 ಬೆಕ್ಕು ಸಾವು!
ಪ್ರಾಸಿಕ್ಯೂಷನ್‌ಗೆ ಪ್ರಕರಣ ಕುರಿತು ಎಲ್ಲ ದಾಖಲೆಗಳು ಮತ್ತು ಅನುಮತಿ ಸಾಕ್ಷ್ಯಗಳನ್ನು ಸಲ್ಲಿಸಲು ನೀಡಬೇಕು. ನಂತರ ಮೆರಿಟ್ ಆಧಾರದಲ್ಲಿ ಕಾನೂನು ಪ್ರಕಾರ ಪ್ರಕರಣವನ್ನು ವಿಲೇವಾರಿ ಮಾಡಬೇಕು ಎಂದು ಸೆಷನ್ಸ್ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ. ಬಿಎಂಟಿಎಫ್ ತಾಂತ್ರಿಕ ವಿಚಕ್ಷಣಾ ಸಮಿತಿ (ಟಿವಿಸಿಸಿ) ವರದಿ ಇಲ್ಲವೆಂದು ತಿಳಿಸಿ, ಪ್ರಾಸಿಕ್ಯೂಷನ್‌ಗೆ ಸರ್ಕಾರ ಅನುಮತಿ ನೀಡಿಲ್ಲ ಮತ್ತು ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತಿಳಿಸಿ ಸೆಷನ್ಸ್ ನ್ಯಾಯಾಲಯವು ಆರೋಪಗಳನ್ನು ಕೈ ಬಿಟ್ಟಿದೆ. ಆದರೆ, ಟಿವಿಸಿಸಿ ವರದಿ ಇಲ್ಲದ ಸಂದರ್ಭದಲ್ಲಿ ಸೆಕೆಂಡರಿ ಸಾಕ್ಷ್ಯಗಳನ್ನು ಒದಗಿಸಲು ಅವಕಾಶ ನೀಡಬೇಕಿತ್ತು. ಆದರೆ, ಆ ಸಾಕ್ಷ್ಯವನ್ನು ಒದಗಿಸಲು ಸರ್ಕಾರಕ್ಕೆ ಸೂಕ್ತ ಕಾಲಾವಕಾಶ ನೀಡದೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಆರೋಪಗಳನ್ನು ಕೈ ಬಿಡಲಾಗಿದೆ.
ಇನ್ನೂ ಸಾಕ್ಷಿಗಳನ್ನು ಪರೀಕ್ಷೆಗೆ ಒಳಪಡಿಸಲು ಪ್ರಾಸಿಕ್ಯೂಷನ್‌ಗೆ ಅವಕಾಶ ಕಲ್ಪಿಸಿಲ್ಲ. ಇದು ದೋಷಪೂರಿತ ಕ್ರಮವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ. ಪ್ರಕರಣದಲ್ಲಿಎಫ್‌ಐಆರ್ ದಾಖಲಾಗಿದ್ದು, ಪ್ರತಿ ಪ್ರಕರಣಕ್ಕೂ ಸಂಬಂಧಿಸಿದಂತೆ ಸಿಐಡಿ ದೋಷಾರೋಪಪಟ್ಟಿಸಲ್ಲಿಸಿದೆ.ಗುತ್ತಿಗೆದಾರರಿಗೆ ಕಾಮಗಾರಿಗುತ್ತಿಗೆ ನೀಡಿ, ನಂತರ ಅವ್ಯವಹಾರ ನಡೆಸಿ ಹಣವನ್ನು ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದಕ್ಕೆ ಸಂಬಂಧಿ ಸಿದಂತೆಯೇ ಎಲ್ಲ ಆರೋಪಗಳಿವೆ. ಇಂತಹ ಸಂದರ್ಭದಲ್ಲಿ ಆರೋಪಿಗಳನ್ನು ಖುಲಾಸೆಗೊ ಳಿಸಲುಸಾಧ್ಯವಿಲ್ಲ.ತನಿಖಾಧಿಕಾರಿ ಸಂಗ್ರಹಿಸಿದ ದಾಖಲೆಗಳನ್ನು ನ್ಯಾಯಾಲಯವು ಪರಿಗಣಿಸ ಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಸಚಿವ ಬೈರತಿ ಸುರೇಶ್ ಫೇಸ್‌ಬುಕ್ ಖಾತೆ ಹ್ಯಾಕ್: ಎಫ್‌ಐಆರ್ ದಾಖಲು
ನಕಲಿ ಬಿಲ್ ಸೃಷ್ಟಿಸಿ ಬಹುಕೋಟಿ ಹಗರಣ: ಬಿಬಿಎಂಪಿಯಲ್ಲಿ 2005 ರಿಂದ 2011-12ನೇ ಸಾಲಿನಲ್ಲಿ ನಡೆದ ಕಾಮಗಾರಿಗಳ ಸಂಬಂಧ ನಕಲಿ ಬಿಲ್ ಸೃಷ್ಟಿಸಿ ಬಹುಕೋಟಿ ಹಣ ಪಡೆದ ಪ್ರಕರಣ ಬಯಲಾಗಿತ್ತು. ಈ ಪ್ರಕರಣದಲ್ಲಿ ಬಿಬಿಎಂಪಿಯ ಹಾಲಿ ಹಾಗೂ ನಿವೃತ್ತ ಎಂಜಿನಿಯರುಗಳು, ಗುತ್ತಿಗೆದಾರರು ಭಾಗಿಯಾಗಿ ರುವುದು ಕಂಡುಬಂದಿತ್ತು. ಈ ಕುರಿತು ಸಿಐಡಿ ತನಿಖೆ ನಡೆಸಿ ಒಟ್ಟು 115 ಪ್ರಕರಣಗಳ ಸಂಬಂಧ ಬಿಬಿಎಂಪಿ ನಿವೃತ್ತ ಮುಖ್ಯ ಎಂಜಿನಿಯರ್ ಬಿ.ಟಿ. ರಮೇಶ್ ಸೇರಿದಂತೆ ಹಲವು ಎಂಜಿನಿಯರ್, ಸಹಾಯಕ ಮತ್ತು ಕಾರ್ಯಕಾರಿ ಎಂಜಿನಿಯರ್, ಗುತ್ತಿಗೆದಾರರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿತ್ತು. ಆದರೆ, ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸಲು ತನಿಖಾಧಿಕಾರಿಗಳೂ ವಿಫಲವಾಗಿದ್ದಾರೆ ಎಂದು ತೀರ್ಮಾನಿಸಿದ್ದ ಸೆಷನ್ಸ್ ನ್ಯಾಯಾಲಯ, ಎಲ್ಲ ಆರೋಪಿಗಳ ವಿರುದ್ಧದ ಆರೋಪ ಕೈ ಬಿಟ್ಟು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.