ವಿಜಯೇಂದ್ರ vs ಯತೀಂದ್ರ ಕುಸ್ತಿ ಪಂದ್ಯ ರದ್ದು !

First Published Apr 23, 2018, 2:26 PM IST
Highlights

ಇಲ್ಲಿನ ವರುಣಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಿರಿಯ ಮಗ ಬಿ ವೈ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬ ಎಲ್ಲಾ ಊಹಾಪೋಹಗಳಿಗೆ ತೆರೆಬೀಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ವಿಜಯೇಂದ್ರರ ಬದಲು ಮೈಸೂರು ಜಿಲ್ಲಾ ಪಂಚಾಯತ್ ಸದಸ್ಯ ಸದಾನಂದ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂಬ ಸುದ್ದಿಗೆ ರೆಕ್ಕೆಪುಕ್ಕ ಬಂದಿದೆ.

ಮೈಸೂರು, ಏ 23 : ಇಲ್ಲಿನ ವರುಣಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಿರಿಯ ಮಗ ಬಿ ವೈ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬ ಎಲ್ಲಾ ಊಹಾಪೋಹಗಳಿಗೆ ತೆರೆಬೀಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ವಿಜಯೇಂದ್ರರ ಬದಲು ಮೈಸೂರು ಜಿಲ್ಲಾ ಪಂಚಾಯತ್ ಸದಸ್ಯ ಸದಾನಂದ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂಬ ಸುದ್ದಿಗೆ ರೆಕ್ಕೆಪುಕ್ಕ ಬಂದಿದೆ.

ವರುಣಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಕಳೆದ 10 ದಿನಗಳಿಂದ ಠಿಕಾಣಿ ಹೂಡಿದ್ದರು. ಆದರೆ, ಈ ಮಧ್ಯೆ ಏನಾಯಿತೋ ಏನೋೆ, ತಮ್ಮ ಮಗ ಇಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಯಡಿಯೂರಪ್ಪ ಹೇಳಿಬಿಟ್ಟಿದ್ದಾರೆ. ಈ ಹೇಳಿಕೆಯನ್ನು ಅವರು ಕೊಟ್ಟದ್ದು ನಂಜನಗೂಡಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ. 

ಇನ್ನು ಇಲ್ಲಿಂದ, ಅಂದರೆ, ವರುಣಾ ವಿಧಾನಸಭಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಕಾಂಗ್ರೆಸ್  ಅಭ್ಯರ್ಥಿಯಾಗಿದ್ದಾರೆ.  ಹಾಲಿ ಮುಖ್ಯಮಂತ್ರಿ ಮಗ ಹಾಗೂ  ಮಾಜಿ ಮುಖ್ಯಮಂತ್ರಿಯ ಮಗನ ನಡುವೆ ರೋಚಕ ಕುಸ್ತಿ ಪಂದ್ಯ ನಡೆಯುತ್ತಿದೆ ಎಂದು ನಿರೀಕ್ಷಿಸಿದ್ದ ರಾಜ್ಯದ ಜನತೆಯ ಕುತೂಹಲಕ್ಕೆ ತಣ್ಣೀರು ಎರಚಿದಂತಾಗಿದೆ. ಹಾಗಾಗಿ, ಡಾ. ಯತೀಂದ್ರ vs ಸದಾನಂದ ಎಂದು ನೀವು ಭಾವಿಸಿಕೊಳ್ಳುವುದಕ್ಕೆ ಅಡ್ಡಿಯಿಲ್ಲ ! 

15 ನೇ ವಿಧಾನಸಭಾ ಚುನಾವಣೆಗೆ ಇದೇ  ಮೇ 12ರ ಶನಿವಾರ ಒಂದೇ ಹಂತದ ಮತದಾನ ನಡೆಯುತ್ತದೆ. ನಾಮಪತ್ರ ಹಿಂಪಡೆಯಲು ಕಡೇದಿನಾಂಕ ಶುಕ್ರವಾರ 27 ಏಪ್ರಿಲ್.  ಮೇ 15 ಮಂಗಳವಾರ  ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆ. ನೀವು ತಪ್ಪದೆ ಮತ ಚಲಾಯಿಸಿರಿ. ಸಿರಿಗನ್ನಡಂ ಗೆಲ್ಗೆ - ಪ್ರಜಾಪ್ರಭುತ್ವಂ ಗೆಲ್ಗೆ !

click me!