ಅಂಬಿ ಇಂದು ನಾಮಪತ್ರ ಹಾಕ್ತಾರಾ, ಇಲ್ವಾ?

First Published Apr 24, 2018, 10:58 AM IST
Highlights

ಕಳೆದ 3 ದಿನಗಳಂತೆ ಸೋಮವಾರ ಕೂಡ ಅಂಬರೀಶ್, ನಾಯಕರು ಹಾಗೂ ಕಾರ್ಯಕರ್ತರ ಕೈಗೆ ಸಿಗಲಿಲ್ಲ. ಅಂಬರೀಶ್ ಅವರನ್ನು ಭೇಟಿ ಮಾಡಲು ಕ್ಷೇತ್ರದ ಕಾರ್ಯಕರ್ತರು ಬೆಂಗಳೂರಿನವರೆಗೆ ಬಂದರೂ ಪ್ರಯೋಜನವಾಗಲಿಲ್ಲ. ಈ ಕಾರ್ಯಕರ್ತರಿಗೆ ಇಂದು ತಮ್ಮ ನಿಲುವು ತಿಳಿಸುವುದಾಗಿ ಅಂಬರೀಶ್ ಸಂದೇಶ ತಲುಪಿಸಿ ಕಳುಹಿಸಿದರು ಎನ್ನಲಾಗಿದೆ. ಅಂಬರೀಶ್ ಅವರ ಈ ವರ್ತನೆಯಿಂದಾಗಿ ರಾಜ್ಯ ನಾಯಕತ್ವ ಪರ್ಯಾಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಅದು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ, ಟಿಕೆಟ್ ಆಕಾಂಕ್ಷಿಗಳಾಗ ರವಿ ಗಣಿಗ, ಎಚ್.ಬಿ. ರಾಮು ಹಾಗೂ ಆತ್ಮಾನಂದ ಅವರಿಗೆ ಸರ್ವ ಸನ್ನದ್ಧರಾಗಿರುವಂತೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು(ಏ.24): ತಮ್ಮ ಸ್ಪರ್ಧೆ ಕುರಿತ ಕುತೂಹಲವನ್ನು ನಾಮಪತ್ರ ಸಲ್ಲಿಸುವ ಕಡೆ ಕ್ಷಣದವರೆಗೂ ಕಾಯ್ದುಕೊಳ್ಳಲು ಮುಂದಾಗಿರುವ ನಟ ಹಾಗೂ ಮಾಜಿ ಸಚಿವ ಅಂಬರೀಶ್, ಇಂದು ತಮ್ಮ ನಿಲುವು ಸ್ಪಷ್ಟಪಡಿಸುವುದಾಗಿ ತಿಳಿಸಿದ್ದಾರೆ. ಆದರೆ, ಅಂಬರೀಶ್ ಕಡೆ ಕ್ಷಣದಲ್ಲಿ ಹಿಂಜರಿಯುವ ಸೂಚನೆಯಿರುವ ಕಾರಣ ಮೂರು ಜನ ಆಕಾಂಕ್ಷಿಗಳಿಗೆ ನಾಮಪತ್ರ ಸಲ್ಲಿಸಲು ಸರ್ವ ಸನ್ನದ್ಧರಾಗಿರುವಂತೆ ಪಕ್ಷ ಸೂಚನೆ ನೀಡಿದ್ದು, ಈ ಮೂವರ ಪೈಕಿ ಒಬ್ಬರಿಗೆ ಟಿಕೆಟ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ 3 ದಿನಗಳಂತೆ ಸೋಮವಾರ ಕೂಡ ಅಂಬರೀಶ್, ನಾಯಕರು ಹಾಗೂ ಕಾರ್ಯಕರ್ತರ ಕೈಗೆ ಸಿಗಲಿಲ್ಲ. ಅಂಬರೀಶ್ ಅವರನ್ನು ಭೇಟಿ ಮಾಡಲು ಕ್ಷೇತ್ರದ ಕಾರ್ಯಕರ್ತರು ಬೆಂಗಳೂರಿನವರೆಗೆ ಬಂದರೂ ಪ್ರಯೋಜನವಾಗಲಿಲ್ಲ. ಈ ಕಾರ್ಯಕರ್ತರಿಗೆ ಇಂದು ತಮ್ಮ ನಿಲುವು ತಿಳಿಸುವುದಾಗಿ ಅಂಬರೀಶ್ ಸಂದೇಶ ತಲುಪಿಸಿ ಕಳುಹಿಸಿದರು ಎನ್ನಲಾಗಿದೆ. ಅಂಬರೀಶ್ ಅವರ ಈ ವರ್ತನೆಯಿಂದಾಗಿ ರಾಜ್ಯ ನಾಯಕತ್ವ ಪರ್ಯಾಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಅದು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ, ಟಿಕೆಟ್ ಆಕಾಂಕ್ಷಿಗಳಾಗ ರವಿ ಗಣಿಗ, ಎಚ್.ಬಿ. ರಾಮು ಹಾಗೂ ಆತ್ಮಾನಂದ ಅವರಿಗೆ ಸರ್ವ ಸನ್ನದ್ಧರಾಗಿರುವಂತೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಅಂಬರೀಶ್ ಮಂಗಳವಾರ ತಮ್ಮ ಸ್ಪರ್ಧೆ ಬಗ್ಗೆ ಖಚಿತಪಡಿಸಿದರೆ ಅಥವಾ ಬೇರೆ ಯಾರನ್ನಾದರೂ ಸೂಚಿಸಿದರೆ ಅದನ್ನು ಪರಿಗಣಿಸಬಹುದು. ಇಲ್ಲವೇ ರವಿ ಗಣಿಗ, ರಾಮು ಹಾಗೂ ಆತ್ಮಾನಂದ ಈ ಮೂವರ ಪೈಕಿ ಒಬ್ಬರಿಗೆ ನಾಮಪತ್ರ ಸಲ್ಲಿಸುವಂತೆ ಸೂಚಿಸಬಹುದು ಎಂದು ಮೂಲಗಳು ಹೇಳುತ್ತವೆ. ಈ ನಡುವೆ ಅಂಬರೀಶ್ ಅವರ ಹಿಂಬಾಲಕ ಅಮರಾವತಿ ಚಂದ್ರಶೇಖರ್ ಸಹ ಎಡಬಿಡದೇ ಪ್ರಯತ್ನ ನಡೆಸುತ್ತಿದ್ದು, ಅಂಬರೀಶ್ ಸೂಚಿಸಿದರೆ ಮಾತ್ರ ಅಮರಾವತಿ ಚಂದ್ರಶೇಖರ್‌'ಗೆ ಅವಕಾಶ ದೊರೆಯಬಹುದು ಎಂದು ಮೂಲಗಳು ತಿಳಿಸಿವೆ.

click me!