Big Breaking ಅಂತ್ಯವಾದ ಕ್ಯಾಬಿನೆಟ್ ಕ್ಲೈಮ್ಯಾಕ್ಸ್ ; ಫೈನಲ್ ಪಟ್ಟಿ ಪ್ರಕಟ

First Published May 28, 2018, 11:11 PM IST
Highlights

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ನಡೆಸಿದ ಅಂತಿಮ ಹಂತದ ಮಾತುಕತೆಯಲ್ಲಿ ಪ್ರಮುಖ ಖಾತೆಗಳಲ್ಲಿ ಒಂದೊಂದು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. 

ಬೆಂಗಳೂರು(ಮೇ.28): ಕಳೆದ ಒಂದು ವಾರದಿಂದ ಕಗ್ಗಂಟಾಗಿದ್ದ ಸಂಪುಟ ರಚನೆ ಇಂದು ಸಫಲವಾಗಿದೆ.  ಹಣಕಾಸು ಹಾಗೂ ಗೃಹ ಇಲಾಖೆಗೆ ಎರಡೂ ಪಕ್ಷಗಳು ಪಟ್ಟು ಹಿಡಿದಿದ್ದವು. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ನಡೆಸಿದ ಅಂತಿಮ ಹಂತದ ಮಾತುಕತೆಯಲ್ಲಿ ಪ್ರಮುಖ ಖಾತೆಗಳಲ್ಲಿ ಒಂದೊಂದು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಇದರಿಂದೊಂದಿಗೆ ಮೊದಲ ಹಂತದ ಸಂಪುಟ ರಚನೆಯ ಹಗ್ಗಾಜಗ್ಗಾಟಕ್ಕೆ ತೆರೆಬಿದ್ದಿದೆ.  ಮೇ. 30 ಅಥವಾ 31ರಂದು ಜೆಡಿಎಸ್'ನಿಂದ 8 ಹಾಗೂ ಕಾಂಗ್ರೆಸ್'ನಿಂದ 10 ಮಂದಿ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

ಜೆಡಿಎಸ್ ಪಕ್ಷಕ್ಕೆ ಸಿಗುವ ಸಂಭಾವ್ಯ ಖಾತೆಗಳು 

ಹಣಕಾಸು ಇಲಾಖೆ     :  ಸಿಎಂ ಎಚ್ ಡಿ ಕುಮಾರಸ್ವಾಮಿ,ಡಿಎಪಿಆರ್, ಗುಪ್ತಚರ

ಕಂದಾಯ ಇಲಾಖೆ     : ಎಚ್.ವಿಶ್ವನಾಥ್ 

ಲೋಕೋಪಯೋಗಿ ಇಲಾಖೆ : ಎಚ್ ಡಿ ರೇವಣ್ಣ

ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣ ಇಲಾಖೆ : ಬಸವರಾಜ್ ಹೊರಟ್ಟಿ

ವೈದ್ಯಕೀಯ ಶಿಕ್ಷಣ ಇಲಾಖೆ : ಡಾ.ಕೆ.ಶ್ರೀನಿವಾಸ್ ಮೂರ್ತಿ 

ಕೃಷಿ ಖಾತೆ :    ಬಂಡೆಪ್ಪ ಕಾಶೆಂಪೂರ್

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ : ಸಿ.ಎಸ್.ಪುಟ್ಟರಾಜು

ಸಹಕಾರ ಇಲಾಖೆ :ಜಿ.ಟಿ.ದೇವೇಗೌಡ

ಕಾಂಗ್ರೆಸ್ ಪಕ್ಷಕ್ಕೆ ಸಿಗುವ ಸಂಭಾವ್ಯ ಖಾತೆಗಳು 

ಗೃಹ ಇಲಾಖೆ : ಡಿಸಿಎಂ ಡಾ.ಜಿ.ಪರಮೇಶ್ವರ್

ಇಂಧನ ಇಲಾಖೆ: ಡಿ.ಕೆ.ಶಿವಕುಮಾರ್ 

ಬೃಹತ್ ಕೈಗಾರಿಕೆ ಇಲಾಖೆ: ಆರ್.ವಿ.ದೇಶಪಾಂಡೆ

ಜಲ ಸಂಪನ್ಮೂಲ ಇಲಾಖೆ    : ಎಂ.ಬಿ.ಪಾಟೀಲ್ ಅಥವಾ ಎಸ್.ಆರ್.ಪಾಟೀಲ್ 

ಬೆಂಗಳೂರು ಅಭಿವೃದ್ಧಿ ಹಾಗೂ ನಗರಾಭಿವೃದ್ಧಿ ಖಾತೆ:  ಕೆ.ಜೆ.ಜಾರ್ಜ್

ಉನ್ನತ ಶಿಕ್ಷಣ ಇಲಾಖೆ:  ಎಚ್.ಕೆ.ಪಾಟೀಲ್ ಅಥವಾ ಡಾ.ಕೆ.ಸುಧಾಕರ್ 

ಆರೋಗ್ಯ ಖಾತೆ: ಯು.ಟಿ.ಖಾದರ್ ಅಥವಾ ಡಾ.ಕೆ.ಸುಧಾಕರ್ 

ಸಮಾಜ ಕಲ್ಯಾಣ ಇಲಾಖೆ: ಟಿ.ರಘುಮೂರ್ತಿ

ವಸತಿ ಇಲಾಖೆ : ಎಂ.ಕೃಷ್ಣಪ್ಪ

ಅಬಕಾರಿ ಇಲಾಖೆ: ಸತೀಶ್ ಜಾರಕಿಹೊಳಿ

click me!