AAI ನೇಮಕಾತಿ 2025: ಬೆಂಗಳೂರು ಏರ್ಪೋರ್ಟ್‌ನಲ್ಲಿ 309 ಜೂ. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Published : Apr 08, 2025, 06:31 PM ISTUpdated : Apr 08, 2025, 07:00 PM IST
AAI ನೇಮಕಾತಿ 2025: ಬೆಂಗಳೂರು  ಏರ್ಪೋರ್ಟ್‌ನಲ್ಲಿ 309 ಜೂ. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾರಾಂಶ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 309 ಹುದ್ದೆಗಳು ಬೆಂಗಳೂರಿನಲ್ಲಿ ಲಭ್ಯವಿದೆ. ಪದವಿ, ಬಿಎಸ್ಸಿ, ಬಿಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರುವ 27 ವರ್ಷದೊಳಗಿನ ಅಭ್ಯರ್ಥಿಗಳು ಏಪ್ರಿಲ್ 25, 2025 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ AAI ಅಧಿಕೃತ ವೆಬ್‌ಸೈಟ್ ತಪಾಸಣೆ ಮಾಡಿ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ನಲ್ಲಿ ಖಾಲಿ ಇರುವ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ನೇಮಕಾತಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು: ಜೂನಿಯರ್ ಎಕ್ಸಿಕ್ಯೂಟಿವ್
ಒಟ್ಟು ಹುದ್ದೆಗಳು: 309
ಉದ್ಯೋಗ ಸ್ಥಳ: ಬೆಂಗಳೂರು-ಕರ್ನಾಟಕ

ಐಡಿಬಿಐ ಬ್ಯಾಂಕ್‌ ನಲ್ಲಿ ಖಾಲಿ ಇರುವ 119 ಕೇಡರ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 2ಲಕ್ಷದವರೆಗೆ ವೇತನ!

ವಿದ್ಯಾರ್ಹತೆ:
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ ಪದವಿ, ಬಿಎಸ್ಸಿ, ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ ವಯಸ್ಸು ಮೆ.24,2025 ರಂತೆ 27 ವರ್ಷ ಹೊಂದಿರಬೇಕು. 

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಭರ್ಜರಿ ಅವಕಾಶ, ಸೆಂಟ್ರಲ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗೆ ನೇಮಕಾತಿ

ವಯೋಮಿತಿ ಸಡಿಲಿಕೆ: 
ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳಿಗೆ: 3 ವರ್ಷ
ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು: 5 ವರ್ಷ
ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿಶುಲ್ಕ:
ಮಹಿಳಾ ಅಭ್ಯರ್ಥಿಗಳಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಅಪ್ರೆಂಟಿಸ್‌ಗಳಿಗೆ ಶುಲ್ಕ ವಿನಾಯಿತಿ.

ಇತರ ಎಲ್ಲಾ ಅಭ್ಯರ್ಥಿಗಳಿಗೆ: 1000 ರು. 
ಪಾವತಿ ವಿಧಾನ: ಆನ್‌ಲೈನ್ ಮೂಲಕ

ಹೈ ಸ್ಪೀಡ್ ರೈಲು ಕಾರ್ಪೊರೇಷನ್‌ನಲ್ಲಿ ಭರ್ಜರಿ ಉದ್ಯೋಗವಕಾಶ, ಆಯ್ಕೆಯಾದವರಿಗೆ 2.40 ಲಕ್ಷ ವೇತನ!

ವೇತನ ಶ್ರೇಣಿ:
ಮಾಸಿಕ 40,000 ದಿಂದ 1,40,000 ವೇತನವನ್ನು ನಿಗದಿಪಡಿಸಲಾಗಿದೆ.\B

ಆಯ್ಕೆ ವಿಧಾನ:
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. 

ಅರ್ಜಿಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ ಅಧಿಕೃತ ವೆಬ್‌ಸೈಟ್ https://aai.aero ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: ಏ 25, 2025

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?