
ಕುವೈತ್ ಸಿಟಿ: 2004ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ 2005ರಲ್ಲಿ ಕುವೈತ್ ತೊರೆದ ಅರಬ್ ಭಾಷಾ ಶಿಕ್ಷಕಿಗೆ ಸಚಿವಾಲಯದ ತಪ್ಪಿನಿಂದ ಸುಮಾರು 20 ವರ್ಷಗಳ ಕಾಲ ಸಂಬಳ ನಿರಂತರವಾಗಿ ಜಮೆಯಾಗಿದೆ. ಒಟ್ಟು 1,05,331 ಕುವೈತ್ ದಿನಾರ್ ಶಿಕ್ಷಕಿಯ ಖಾತೆಗೆ ಜಮೆಯಾಗಿದೆ. 2004 ಆಗಸ್ಟ್ 24 ರಂದು ನೇಮಕಗೊಂಡ ಶಿಕ್ಷಕಿ 2004-05ರ ಶೈಕ್ಷಣಿಕ ವರ್ಷದಲ್ಲಿ ಕೆಲಸಕ್ಕೆ ಸೇರಬೇಕಿತ್ತು. ಆದರೆ 2005 ಜೂನ್ 14 ರಂದು ಶಿಕ್ಷಕಿ ಕುವೈತ್ ತೊರೆದರು ಮತ್ತು ಶಿಕ್ಷಣ ಸಚಿವಾಲಯದ ಸಂಯೋಜಿತ ವ್ಯವಸ್ಥೆಗಳಲ್ಲಿ ಅವರ ಹೆಸರು ಸಕ್ರಿಯವಾಗಿ ಉಳಿಯಿತು. ಇದರ ಪರಿಣಾಮವಾಗಿ 2024 ಮೇ 24 ರವರೆಗೆ ನಿರಂತರವಾಗಿ ಸಂಬಳ ಅವರ ಖಾತೆಗೆ ಪ್ರತಿ ತಿಂಗಳು ಜಮೆಯಾಗಿದೆ.
ಶಾಲಾ ಪ್ರಾಂಶುಪಾಲರು ಸಿಬ್ಬಂದಿ ವ್ಯವಹಾರಗಳ ಇಲಾಖೆ ಮತ್ತು ಪ್ರಾಥಮಿಕ ಶಾಲಾ ಮೇಲ್ವಿಚಾರಕರನ್ನು ಸಂಪರ್ಕಿಸಿ ಅವರ ಹೆಸರನ್ನು ತೆಗೆದುಹಾಕುವಂತೆ ಹಲವು ಬಾರಿ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೂ ಹಲವು ವರ್ಷಗಳಿಂದ ಸಮಸ್ಯೆ ಬಗೆಹರಿದಿಲ್ಲ. 2024 ಫೆಬ್ರವರಿ 11 ರಂದು ಫಿಂಗರ್‌ಪ್ರಿಂಟ್ ಹಾಜರಾತಿ ವ್ಯವಸ್ಥೆ ಜಾರಿಗೆ ಬಂದ ನಂತರ ಈ ತಪ್ಪು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಹಜ್ ಯಾತ್ರೆಗೆ ಮುಂದಾದ ಭಾರತೀಯ ಮುಸ್ಲಿಮರಿಗೆ ಶಾಕ್, ವೀಸಾ ನಿಷೇಧಿಸಿದ ಸೌದಿ ಅರೆಬಿಯಾ
ಶಿಕ್ಷಕಿ ಇನ್ನೂ ಅಧಿಕೃತವಾಗಿ ವೇತನ ಪಟ್ಟಿಯಲ್ಲಿದ್ದಾರೆ ಎಂದು ಹೊಸ ಫಿಂಗರ್ ಹಾಜರಾತಿ ವ್ಯವಸ್ಥೆಯಲ್ಲಿ ಕಂಡುಬಂದಿದೆ. ಇದೀಗ ಈ ಸಂಬಂಧ ಆಡಳಿತಾತ್ಮಕ ತನಿಖೆಗೆ ಆದೇಶಿಸಲಾಯಿತು. ನಂತರ ಶಿಕ್ಷಕಿಯ ಸಂಬಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು ಮತ್ತು ಅಧಿಕೃತವಾಗಿ ಸೇವೆಯಿಂದ ಶಿಕ್ಷಕಿಯ ಹೆಸರನ್ನು ತೆಗೆದು ಹಾಕಲಾಗಿದೆ.
ಬ್ಯಾಂಕಿನಲ್ಲಿ ಪರಿಶೀಲಿಸಿದಾಗ, ಶಿಕ್ಷಕಿಯ ಖಾತೆಯಲ್ಲಿ ಪೂರ್ಣ ಮೊತ್ತ ಇರುವುದು ಕಂಡುಬಂದಿದೆ. ಕುವೈತ್‌ನಿಂದ ಹೋದ ನಂತರ ಶಿಕ್ಷಕಿ ಯಾವುದೇ ಹಣವನ್ನು ಬಳಸಿಲ್ಲ ಅಥವಾ ಹಿಂಪಡೆದಿಲ್ಲ. ಇದರಿಂದ ಈ ಪ್ರಕರಣದಲ್ಲಿ ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲ ಎಂದು ಸಾಬೀತಾಯಿತು. ಸೆಂಟ್ರಲ್ ಬ್ಯಾಂಕ್ ನಂತರ ಸಂಪೂರ್ಣ ಮೊತ್ತವನ್ನು ಮರಳಿ ಪಡೆದು ಶಿಕ್ಷಣ ಸಚಿವಾಲಯಕ್ಕೆ ಹಿಂದಿರುಗಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೂತ್ ಫೋರಂ ಶೃಂಗಸಭೆಗೆ ಮಡಿಕೇರಿಯ ಯದೀಶ್ ಆಯ್ಕೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ